ಓಣಂ ಹಬ್ಬದ ಸಮಯದಲ್ಲಿ ಜನದಟ್ಟಣೆ ಮಾಡಬೇಡಿ.

* ಕೇರಳದ ಆರೋಗ್ಯ ಮಂತ್ರಿ ವೀಣಾ ಚಾರ್ಜ್ ಇವರಿಂದ ಕೊರೊನಾದ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯ ಹಿನ್ನೆಲೆಯಲ್ಲಿ ರಾಜ್ಯದ ಹಿಂದೂಗಳಿಗೆ ಪುಕ್ಕಟೆ ಸಲಹೆ!

* ಕೇರಳದಲ್ಲಿ ಮುಸಲ್ಮಾನರನ್ನು ಸಂತುಷ್ಟಗೊಳಿಸಲು ಇಲ್ಲಿಯ ಸಾಮ್ಯವಾದಿ ಸರಕಾರವು ಬಕ್ರೀದ್ ನ ಸಮಯದಲ್ಲಿ ಕೊರೊನಾ ನಿಯಮಗಳಲ್ಲಿ ಸವಲತ್ತನ್ನು ಕೊಟ್ಟಿತು. ಅದರಿಂದ ಹೆಚ್ಚು ಪ್ರಮಾಣದಲ್ಲಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಈಗ ಹಿಂದೂಗಳ ಹಬ್ಬದ ಸಮಯದಲ್ಲಿ ರಾಜ್ಯದ ಆರೋಗ್ಯ ಮಂತ್ರಿ ಈ ಸಲಹೆ ಕೊಡುವುದು ಎಂದರೆ ಇದನ್ನು ಸರಕಾರದ ಜಾಣತನ ಎನ್ನಬೇಕೋ ಅಥವಾ ಹಿಂದೂ ದ್ವೇಷ ಎನ್ನಬೇಕು?

ಕೇರಳದ ಆರೋಗ್ಯ ಮಂತ್ರಿ ವೀಣಾ ಚಾರ್ಜ್

ತಿರುವನಂತಪುರಂ (ಕೇರಳ) – ಓಣಂ ಹಬ್ಬದಂದು ಜನದಟ್ಟಣೆ ಮಾಡಬೇಡಿ, ಕಾರ್ಯಕ್ರಮದ ಆಯೋಜನೆ ಮಾಡಬೇಡಿ, ಸಾಧ್ಯವಾದರೆ ಬಂಧು-ಬಳಗದವರನ್ನು ಭೇಟಿ ಆಗಬೇಡಿ, ವಿಶೇಷವಾಗಿ ಮಕ್ಕಳನ್ನು ಭೇಟಿಯಾಗುವುದನ್ನು ತಡೆಗಟ್ಟಿ, ಎಂದು ಪುಕ್ಕಟೆ ಸಲಹೆಯನ್ನು ಕೇರಳದ ಆರೋಗ್ಯ ಮಂತ್ರಿ ವೀಣಾ ಚಾರ್ಜ್ ಇವರು ರಾಜ್ಯದ ಹಿಂದೂಗಳಿಗೆ ಕೊರೊನಾದ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯ ಹಿನ್ನೆಯಲ್ಲಿ ನೀಡಿದ್ದಾರೆ.

ವೀಣಾ ಜಾರ್ಜ್‍ರು, ಕೇರಳ ರಾಜ್ಯ ಇದುವರೆಗೂ ಕೊರೊನಾದ ಎರಡನೇ ಅಲೆಯಿಂದ ಮುಕ್ತವಾಗಿಲ್ಲ. ಈ ಸಮಯದಲ್ಲಿ ಜನರಿಗೆ ರೋಗದ ಸೋಂಕು ತಗಲದಂತೆ ಮತ್ತು ಮೂರನೆಯ ಅಲೆಯಿಂದ ರಕ್ಷಣೆಯಾಗಲು ಜಾಗರೂಕರಾಗಿ ಇರುವುದು ಅವಶ್ಯಕವಾಗಿದೆ ಎಂದು ಹೇಳಿದ್ದಾರೆ. (ಕೇರಳ ರಾಜ್ಯ ಕೊರೊನಾದ ಎರಡನೇ ಅಲೆಯಿಂದ ಮುಕ್ತವಾಗಿಲ್ಲ ಎಂದು ವೀಣಾ ಚಾರ್ಜ್ ಇವರಿಗೆ ಈದ್ ನ ಸಮಯದಲ್ಲಿ ನೆನಪಾಗಲಿಲ್ಲವೇ?-ಸಂಪಾದಕರು)