ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾದ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವವು ಭಾವಪೂರ್ಣ ವಾತಾವರಣದಲ್ಲಿ ಆಚರಣೆ !

ಮಂಗಳೂರು – ಶ್ರೀ ಗುರುಗಳು ಭಕ್ತರು, ಶಿಷ್ಯರು ಹಾಗೂ ಸಾಧಕರನ್ನು ಜನ್ಮ ಜನ್ಮಾಂತರದಿಂದ ತತ್ತ್ವರೂಪದಲ್ಲಿ ಸಂಭಾಳಿಸಿದ್ದಾರೆ. ಇಂತಹ ಪ್ರೀತಿಸ್ವರೂಪಿ ಮತ್ತು ಭಕ್ತವತ್ಸಲ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೆಂದರೆ ಗುರುಪೂರ್ಣಿಮೆ. ಈ ದಿನದಂದು ಒಂದು ಸಾವಿರ ಪಟ್ಟು ಕಾರ್ಯನಿರತವಾಗಿರುವ ಗುರುತತ್ತ್ವದ ಲಾಭ ಎಲ್ಲರಿಗೆ ಆಗಬೇಕೆಂದು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಈ ಸಲ ೧೧ ಭಾಷೆಗಳಲ್ಲಿ ‘ಆನ್‌ಲೈನ್ ಗುರು ಪೂರ್ಣಿಮಾ ಮಹೋತ್ಸವವು ಸಂಪನ್ನವಾಯಿತು. ಈ ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಹಾಗೂ ಶ್ರೀ ಗುರುಪೂಜೆಯನ್ನು ಮಾಡಲಾಯಿತು. ಈ ಸಮಯದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು (ಡಾ.) ಜಯಂತ ಆಠವಲೆ ಇವರು ಗುರು ಪೂರ್ಣಿಮೆಯ ನಿಮಿತ್ತ ನೀಡಿದ ಸಂದೇಶವನ್ನು ಓದಲಾಯಿತು.

ಈ ಶುಭ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ‘ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆ ಈ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು. ಅವರು ಮಾರ್ಗದರ್ಶನದಲ್ಲಿ ‘ಅಡಚಣೆಯ ಸಮಯದಲ್ಲಿ ನಮಗೆ ಸಹಾಯವಾಗಬೇಕು; ಅದಕ್ಕಾಗಿ ನಾವು ಬ್ಯಾಂಕಿನಲ್ಲಿ ಹಣ ಇಡುತ್ತೇವೆ. ಅದರಂತೆ ಆಪತ್ಕಾಲದ ಸಮಯದಲ್ಲಿ ಸಹಾಯವಾಗಬೇಕೆಂದು ಸಾಧನೆಯ ಸಂಗ್ರಹವು ನಮ್ಮ ಸಂಗ್ರಹದಲ್ಲಿರುವುದು ಅಗತ್ಯವಿದೆ. ಇದರಿಂದಲೇ ಆಪತ್ಕಾಲದ ಸಮಯದಲ್ಲಿ ನಮಗೆ ಸಹಾಯ ವಾಗುತ್ತದೆ. ಭಗವಾನ ಶ್ರೀಕೃಷ್ಣನು ‘ನ ಮೆ ಭಕ್ತಃ ಪ್ರಣಶ್ಯತಿ, ಅಂದರೆ ‘ನನ್ನ ಭಕ್ತರ ನಾಶ ಎಂದಿಗೂ ಆಗುವುದಿಲ್ಲ, ಎಂಬ ವಚನವನ್ನು ಭಕ್ತರಿಗೆ ನೀಡಿದ್ದಾರೆ. ಆದ್ದರಿಂದ ನಾವು ಸಾಧನೆಯನ್ನು ಹೆಚ್ಚಿಸಿ ದೇವರ ಭಕ್ತರಾಗಬೇಕು. ಈ ಹಿಂದೆ ಆನಂದಪ್ರಾಪ್ತಿಗಾಗಿ ಸಾಧನೆಯನ್ನು ಮಾಡಿ, ಎಂದು ನಾವು ಹೇಳುತ್ತಿದ್ದೆವು; ಆದರೆ ಬರುವ ಆಪತ್ಕಾಲವು ಇಷ್ಟು ಭೀಕರವಾಗಿದೆ ಎಂದರೆ, ಈಗ ಜೀವಂತವಾಗಿರಲು ಸಾಧನೆಯನ್ನು ಮಾಡಿ, ಎಂಬ ಕಾಲ ಬಂದಿದೆ, ಎಂದು ಸನಾನನ ಸಂಸ್ಥೆಯ ಧರ್ಮಪ್ರಸಾರಕ ಪೂ. ರಮಾನಂದ ಗೌಡ ಇವರು ಪ್ರತಿಪಾದಿಸಿದರು. ಅವರು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ಜಂಟಿಯಾಗಿ ಆಯೋಜಿಸಿದ್ದ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾರ್ಗ ದರ್ಶನ ಮಾಡುತ್ತಿದ್ದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಸಾಧನೆಯ ಬಗ್ಗೆ ಸನಾತನ ಸಂಸ್ಥೆಯವತಿಯಿಂದ ಸಾಪ್ತಾಹಿಕ ‘ಆನ್‌ಲೈನ್ ಸಾಧನಾ ಸತ್ಸಂಗ ತೆಗೆದುಕೊಳ್ಳಲಾಗುತ್ತದೆ. ಜಿಜ್ಞಾಸುಗಳು ಈ ಸತ್ಸಂಗದ ಲಾಭವನ್ನು ಅಗತ್ಯವಾಗಿ ಪಡೆದುಕೊಳ್ಳಿರಿ.  ಈ ಮಹೋತ್ಸವಗಳಲ್ಲಿ ಪರಾತ್ಪರ ಗುರು (ಡಾ.) ಆಠವಲೆ ಇವರು ಈ ಹಿಂದೆ ಮಾಡಿದ್ದ ಮಾರ್ಗದರ್ಶನಗಳ ಸಂಗ್ರಹ ಧ್ವನಿಚಿತ್ರಮುದ್ರಿಕೆ ಹಾಗೂ ‘ಆಪತ್ಕಾಲದ ದೃಷ್ಟಿಯಿಂದ ಮಾಡಬೇಕಾದ ಸಿದ್ಧತೆ ಈ ವಿಷಯದ ಬಗ್ಗೆ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಲಾಯಿತು. ಸ್ವಸಂರಕ್ಷಣೆ ಪ್ರಶಿಕ್ಷಣದ ಅವಶ್ಯಕತೆಯನ್ನು ತಿಳಿಸುವ ಪ್ರಾತ್ಯಕ್ಷಿಕೆ (ರಕ್ಷಣೆ ಮತ್ತು ಆಕ್ರಮಣ) ಇದು ಈ ಮಹೋತ್ಸವದ ಆಕರ್ಷಣೆಯ ಕೇಂದ್ರವಾಗಿತ್ತು. ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ, ಅದೇ ರೀತಿ ಅವುಗಳ ‘ಯು-ಟ್ಯೂಬ್ ಚಾನೆಲ್ ಮೂಲಕ ೯೦ ಸಾವಿರ ಜಿಜ್ಞಾಸು ಹಾಗೂ ಸಾಧಕರು ಈ ಕಾರ್ಯಕ್ರಮದ ಲಾಭವನ್ನು ಪಡೆದರು. ಈ ಸಲ ೧೧ ಭಾಷೆಗಳಲ್ಲಿ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವದ ಆಯೋಜನೆ ಮಾಡಲಾಗಿತ್ತು.

ಆಪತ್ಕಾಲದಿಂದ ರಕ್ಷಣೆಯಾಗಲು ಅಗತ್ಯವಿರುವ ಪ್ರಶಿಕ್ಷಣ ಪಡೆಯಿರಿ ! – ಪೂ. ರಮಾನಂದ ಗೌಡ 

ಪೂ. ರಮಾನಂದ ಗೌಡ

ಸದ್ಯ ಭಾರತ ಸಹಿತ ಸಂಪೂರ್ಣ ಪೃಥ್ವಿಯು ಬಿಕ್ಕಟ್ಟಿನಲ್ಲಿದೆ. ಈ ವರ್ಷ ವಿಡಿ ಪ್ರವಾಹ ಪರಿಸ್ಥಿತಿ, ಗಲಭೆ, ಮಹಾ ಮಾರಿ, ಆರ್ಥಿಕ ಮುಗ್ಗಟ್ಟು ಇತ್ಯಾದಿ ಸಂಕಟಗಳ ಪರಿಣಾಮವನ್ನು ದೇಶವು ಎದುರಿಸಬೇಕಾಯಿತು. ೨೦೨೦ ರಿಂದ ೨೦೨೩ ಈ ಕಾಲವು ಭಾರತಕ್ಕೆ ಮಾತ್ರವಲ್ಲ, ಸಂಪೂರ್ಣ ಜಗತ್ತಿಗಾಗಿ ಬಿಕ್ಕಟ್ಟಿನ ಕಾಲವಾಗಿರಲಿದೆ. ಈ ಕಾಲದಲ್ಲಿ ಆರ್ಥಿಕ ಮುಗ್ಗಟ್ಟು, ಗೃಹಯುದ್ಧ, ಗಡಿಯುದ್ಧ, ಮೂರನೇ ಮಹಾಯುದ್ಧ ಹಾಗೂ ನೈಸರ್ಗಿಕ ವಿಪತ್ತು ಇವುಗಳನ್ನು ಜನಸಾಮಾನ್ಯರು ಎದುರಿಸಬೇಕಾಗುತ್ತದೆ. ಇಂತಹ ಆಪತ್ಕಾಲದಲ್ಲಿ ಬದುಕಲು ಹಾಗೂ ಸುಸಹ್ಯವಾಗಿ ಜೀವನವನ್ನು ಸಾಗಿಸಲು, ಇದೊಂದು ಸವಾಲಾಗಲಿದೆ. ಆಪತ್ಕಾಲದ ದೃಷ್ಟಿಯಲ್ಲಿ ಸ್ವಸಂರಕ್ಷಣೆ, ಪ್ರಥಮೋಪಚಾರ, ಆಗ್ನಿಶಾಮಕ ಪ್ರಶಿಕ್ಷಣ, ಈಜುವುದು, ವಾಹನ ಓಡಿಸುವುದು ಇತ್ಯಾದಿ ವಿವಿಧ ವಿದ್ಯೆಗಳನ್ನು ಕಲಿಯಲು ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು.