ಅಫ್ಘಾನಿಸ್ತಾನದಲ್ಲಿನ ಸಿಕ್ಖ ಹಾಗೂ ಹಿಂದೂಗಳಿಗೆ ನಾಗರಿಕತ್ವ ನೀಡಲು ಕೆನಡಾ ಸರಕಾರವು ಯೋಜನೆ ರೂಪಿಸಬೇಕು ! – ಕೆನಡಾದ ಸಿಕ್ಖರ ಸಂಘಟನೆಗಳಿಂದ ಬೇಡಿಕೆ

* ಭಾರತವು ಈ ಮೊದಲೇ ಇಂತಹವರಿಗೆ ನಾಗರಿಕತ್ವ ನೀಡುವ ಬಗ್ಗೆ ಘೋಷಣೆ ಮಾಡಿದೆ; ಹಾಗೂ ಭಾರತವು ಈ ನಾಗರಿಕರಿಗಾಗಿ ಹತ್ತಿರದ ದೇಶ ಇರುವಾಗ ತಮಗೆ ಮಹತ್ವ ಸಿಗಲು ಈ ಸಂಘಟನೆಯು ಈ ರೀತಿಯ ಬೇಡಿಕೆಗಾಗಿ ಪ್ರಯತ್ನಿಸುತ್ತಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

* ಕೆನಡಾದಲ್ಲಿನ ಸಿಕ್ಖ ಸಂಘಟನೆಯು ಖಲಿಸ್ತಾನಿ ಬೆಂಬಲಿಗರಾಗಿದ್ದು ಅವರು ಈ ಹಿಂದೆ ಭಾರತದ ನಾಗರಿಕತ್ವ ತಿದ್ದುಪಡಿ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ್ದರು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಓಟಾವಾ (ಕೆನಡಾ) – ಕೆನಡಾದ ಸಿಖ್ಖ ಸಂಘಟನೆಯು ಕೆನಡಾ ಸರಕಾರಕ್ಕೆ ಅಫ್ಘಾನಿಸ್ತಾನದಲ್ಲಿನ ಸಿಕ್ಖ ಹಾಗೂ ಹಿಂದೂಗಳಿಗೆ ನಾಗರಿಕತ್ವ ನೀಡಲು ಒಂದು ವಿಶೇಷ ಯೋಜನೆಯನ್ನು ರೂಪಿಸುವಂತೆ ಬೇಡಿಕೆ ಸಲ್ಲಿಸಿದೆ. ‘ಮನಮಿತ ಸಿಂಹ ಭುಲ್ಲರ ಫೌಂಡೆಶನ್’, ‘ಖಾಲಸಾ ಆಂಡ್ ಕೆನಡಾ’ ಹಾಗೂ ‘ಜಾಗತಿಕ ಸಿಕ್ಖ ಸಂಘಟನೆ’ ಇವು ಜಂಟಿಯಾಗಿ ಈ ಬಗ್ಗೆ ಒತ್ತಾಯಿಸಿವೆ. ಭಾರತ ಸರಕಾರವು ಈಗಾಗಲೇ ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಬರುವ ಮುಸಲ್ಮಾನೇತರ ನಿರಾಶ್ರಿತರಿಗೆ ನಾಗರಿಕತ್ವ ನೀಡುವುದಾಗಿ ಘೋಷಿಸಿದೆ.

ಈ ಸಂಘಟನೆಯು, ಅಫ್ಘಾನಿಸ್ತಾನದಲ್ಲಿ ಪ್ರತಿದಿನ ಸ್ಥಿತಿಯು ಹದಗೆಡುತ್ತಿದ್ದರಿಂದ ಅಲ್ಲಿಯ ಅಲ್ಪಸಂಖ್ಯಾತ ಸಿಕ್ಖ ಹಾಗೂ ಹಿಂದೂಗಳ ಮೇಲೆ ದಾಳಿಗಳಾಗಬಹುದು. ಆದ್ದರಿಂದ ಕೆನಡಾ ಸರಕಾರವು ಅಫ್ಘಾನಿಸ್ತಾನ ಸರಕಾರದ ಬಳಿ ಅವರ ಭದ್ರತೆಗಾಗಿ ಪ್ರಯತ್ನಿಸಲು ಹೇಳಬೇಕು. ಮಾರ್ಚ್ ೨೦೨೦ ರಲ್ಲಿ ಕಾಬುಲ್‍ನಲ್ಲಿ ಗುರುದ್ವಾರ ‘ಶ್ರೀ ಗುರು ಹರ ರಾಯ ಸಾಹಿಬ್’ ಮೇಲೆ ದಾಳಿ ಮಾಡಿದ ನಂತರ ಅನೇಕ ಸಿಕ್ಖರು ಹಾಗೂ ಹಿಂದೂಗಳು ಭಾರತಕ್ಕೆ ಬಂದಿದ್ದರು. ಈಗಲೂ ಸಹ ಇಂತಹ ಸ್ಥಿತಿ ನಿರ್ಮಾಣವಾಗಬಹುದು ಆದ್ದರಿಂದ ಶೀಘ್ರದಲ್ಲೇ ಭದ್ರತೆಯನ್ನು ನೀಡಲು ಪ್ರಯತ್ನಿಸಬೇಕು ಎಂದು ಹೇಳಿದೆ.