ಶಾಂತಿಯುತ ಚುನಾವಣೆ ನಡೆಸಲು ನಾವು ಭಾರತವನ್ನೇ ಪಾಕಿಸ್ತಾನ್ ಆಕ್ರಮಿತ ಕಾಶ್ಮೀರಕ್ಕೆ ಆಹ್ವಾನಿಸುತ್ತೇವೆ ! – ಪ್ರತಿಪಕ್ಷಗಳಿಂದ ಇಮ್ರಾನ್ ಖಾನ್ ಸರಕಾರಕ್ಕೆ ಟೀಕೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಚುನಾವಣೆಯ ಸಮಯದಲ್ಲಿ ಹಿಂಸಾಚಾರ !

* ‘ಹಿಂಸಾಚಾರವಿಲ್ಲದೆ ಭಾರತದಲ್ಲಿ ಚುನಾವಣೆಗಳು ನಡೆಯುತ್ತವೆಯೇನು ?’ ಎಂಬ ಪ್ರಶ್ನೆಯು ಭಾರತೀಯರ ಮನಸ್ಸಿನಲ್ಲಿ ಬರುತ್ತದೆ !

* ಶಾಂತಿಯುತ ಚುನಾವಣೆ ನಡೆಸಲು ಅಲ್ಲ, ಸಂಪೂರ್ಣ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಭಾರತವು ಅಲ್ಲಿಗೆ ಹೋಗಬೇಕು !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜುಲೈ ೨೫ ರಂದು ಪಾಕಿಸ್ತಾನದ ವತಿಯಿಂದ ಚುನಾವಣೆಯನ್ನು ನಡೆಸಲಾಯಿತು. ಆ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಇಬ್ಬರು ಕಾರ್ಯಕರ್ತರು ಸಾವನ್ನಪ್ಪಿದ್ದರೆ, ಮತ್ತೊಂದು ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಜಮಾತ-ಇ-ಇಸ್ಲಾಮಿ ಈ ರಾಜಕೀಯ ಪಕ್ಷದ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ. ಈ ಹಿಂಸಾಚಾರದ ನಂತರ ಪ್ರತಿಪಕ್ಷದ ಅಭ್ಯರ್ಥಿಗಳು ಇಮ್ರಾನ್ ಖಾನ್ ಅವರನ್ನು ಟೀಕಿಸುತ್ತಾ ‘ಭಾರತವು ನಿಮಗಿಂತ ಉತ್ತಮವಾಗಿದೆ ಮತ್ತು ಮತದಾನದ ಸಮಯದಲ್ಲಿ ಕನಿಷ್ಠಪಕ್ಷ ಹಿಂಸಾಚಾರವಾದರೂ ಆಗುವುದಿಲ್ಲ. ಇಲ್ಲಿ ಚುನಾವಣೆ ನಡೆಸಲು ನಾವು ಅವರನ್ನು ಆಹ್ವಾನಿಸುತ್ತೇವೆ’, ಎಂದು ಅವರು ಹೇಳಿದರು. ಚುನಾವಣಾ ಅಧಿಕಾರಿ ರಶೀದ್ ಸುಲೇಹರಿಯಾ ಹಿಂಸಾಚಾರವನ್ನು ಖಂಡಿಸಿದರು. ಈ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಕ್ಷಕ್ಕೆ ಭರ್ಜರಿ ಜಯ ಸಿಕ್ಕಿದೆ.