ಜೈಪುರ (ರಾಜಸ್ಥಾನ)ದಲ್ಲಿ ಮತಾಂಧನಿಂದ ಹಿಂದೂ ವಿವಾಹಿತೆಯ ಮೇಲೆ ಅತ್ಯಾಚಾರ ಮಾಡಿ ಮತಾಂತರ

ದೂರನ್ನು ನೋದಾಯಿಸಲು ಪೊಲೀಸರಿಂದ ನಿರಾಕರಣೆ !

ಇಂತಹ ಕಾಮಾಂಧರಿಗೆ ಶರಿಯತ್ ಕಾನೂನಿನ ಪ್ರಕಾರ ಶಿಕ್ಷೆ ನೀಡುವಂತೆ ಮುಸಲ್ಮಾನರು ಎಂದಿಗೂ ಒತ್ತಾಯಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ದೂರನ್ನು ನೊಂದಾಯಿಸಲು ನಿರಾಕರಿಸುವ ಪೊಲೀಸರ ಮೇಲೆಯೂ ಅಪರಾಧವನ್ನು ದಾಖಲಿಸಿ ಅವರನ್ನು ಸೆರೆಮನೆಗೆ ಅಟ್ಟಿ !

ಜೈಪುರ (ರಾಜಸ್ಥಾನ) – ಇಲ್ಲಿಯ ಪ್ರತಾಪನಗರದಲ್ಲಿ ವಾಸಿಸುವ ೨೫ ವರ್ಷದ ವಿವಾಹಿತೆ ಹಿಂದೂ ಮಹಿಳೆಯ ಮೇಲೆ ಶಾಹಿದ್ ಎಂಬ ಮತಾಂಧನು ಅತ್ಯಾಚಾರ ಮಾಡಿ ಆಕೆಯನ್ನು ಬಲವಂತವಾಗಿ ಮತಾಂತರಿಸಿದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ನಂತರ ದೂರನ್ನು ದಾಖಲಿಸಲಾಯಿತು.

ಈ ಮಹಿಳೆಯ ಪತಿಯು ಶರಾಬು ಕುಡಿದು ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದನು. ಆದ್ದರಿಂದ ಅವರ ನೆರೆಯಲ್ಲಿ ವಾಸಿಸುತ್ತಿದ್ದ ಶಾಹಿದನು ೨೦೧೬ ರಲ್ಲಿ ಆಕೆಗೆ ಒಳ್ಳೆಯ ಉದ್ಯೋಗ ಕೊಡಿಸುತ್ತೇನೆಂಬ ಆಮಿಷವೊಡ್ಡಿ ಆಕೆಯನ್ನು ಮತ್ತು ಆಕೆಯ ಮಗನನ್ನು ಕಾಶ್ಮೀರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಆಕೆಯ ಮಗನನ್ನು ಕೊಲ್ಲುವ ಬೆದರಿಕೆಯನ್ನು ನೀಡಿ ಆಕೆಯ ಮೇಲೆ ಅತ್ಯಾಚಾರ ಮಾಡಿದನು ಹಾಗೂ ಆಕೆಯನ್ನು ಮತಾಂತರಿಸಿದನು. ಮತಾಂತರದ ನಂತರ ಆಕೆಯ ಹೆಸರನ್ನು ಸೊನಮ ಮತ್ತು ಮಗನ ಹೆಸರು ಸರಫರಾಜ್ ಎಂದು ಇಡಲಾಯಿತು. ೪ ವರ್ಷಗಳ ನಂತ ಈ ಮಹಿಳೆಯು ಶಾಹಿದ್‌ನಿಂದ ತಪ್ಪಿಸಿಕೊಂಡು ಪೊಲೀಸರಲ್ಲಿ ಆತನ ವಿರುದ್ಧ ದೂರನ್ನು ನೊಂದಾಯಿಸಲು ಪ್ರಯತ್ನಿಸಿದಳು; ಆದರೆ ಪೊಲೀಸರು ದೂರನ್ನು ನೊಂದಾಯಿಸಲು ನಿರಾಕರಿಸಿದರು ನಂತರ ಮಹಿಳೆಯು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದಳು. ನಂತರ ನ್ಯಾಯಾಲಯವು ಶಾಹಿದ, ಅಮೀರ ಹುಸೈನ್, ಫಿರದೌಸ್, ಬಿಸ್ಮಿಲ್ಲಾಹ ಹಾಗೂ ಕಾಜಿ ಈ ೫ ಆರೋಪಿಗಳ ವಿರುದ್ಧ ಅಪರಾಧವನ್ನು ದಾಖಲಿಸುವಂತೆ ಆದೇಶ ನೀಡಿತು. ಮಹಿಳೆಯ ದೂರನ್ನು ನೊಂದಾಯಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ಅಧಿಕಾರಿ ಶ್ರೀಮೋಹನ ಮೀಣಾರವರ ತನಿಖೆ ನಡೆಸುವಂತೆ ಆದೇಶವನ್ನು ನೀಡಲಾಗಿದೆ. ಪೊಲೀಸರು, ಈ ಮಹಿಳೆಯು ಒಂದುವರೆ ವರ್ಷದ ಹಿಂದೆ ಪೊಲೀಸ್ ಠಾಣೆಗೆ ಬಂದಿದ್ದಳು. ಆ ಸಮಯದಲ್ಲಿ ಶಾಹಿದ ಆಕೆಗೆ ತಿಳುವಳಿಕೆಯನ್ನು ನೀಡಿದ ನಂತರ ಆಕೆ ಮತ್ತೆ ಮರಳಿದ್ದಳು ಎಂದು ಹೇಳಿದರು.