ಮತಾಂತರಗೊಂಡ ಹಿಂದೂಗಳನ್ನು ಮರಳಿ ಹಿಂದೂ ಧರ್ಮಕ್ಕೆ ಕರೆ ತನ್ನಿ !

ಹಿಂದೂಗಳು ಕಳೆದ ೧ ಸಾವಿರದ ೨೦೦ ವರ್ಷಗಳಿಂದ ಭಾರತದಲ್ಲಿ ಮತಾಂತರಗೊಳ್ಳುತ್ತಿದ್ದಾರೆ. ಮೊಹಮ್ಮದ್ ಬಿನ್ ಖಾಸಿಮ್‌ನು ಭಾರತದ ಮೇಲೆ ಮೊದಲ ಬಾರಿ ಆಕ್ರಮಣ ಮಾಡಿದಾಗಿನಿಂದ ಹಿಂದೂಗಳ ಬಲವಂತದ ಮತಾಂತರವು ಪ್ರಾರಂಭವಾಗಿದೆ. ಈ ಹಿಂದೆ ಹಿಂದೂಗಳೇ ಸ್ವೇಚ್ಛೆಯಿಂದ ಬೌದ್ಧಧರ್ಮ ಮತ್ತು ಜೈನ ಧರ್ಮಕ್ಕೆ ಮತಾಂತರಗೊಂಡಿದ್ದರು. ಇಸ್ಲಾಂ ಧರ್ಮದ ನಂತರ ಸ್ಥಾಪನೆಯಾದ ಸಿಕ್ಖ್ ಧರ್ಮವನ್ನು ಹಿಂದೂಗಳು ಸ್ವೇಚ್ಛೆಯಿಂದ ಸ್ವೀಕರಿಸಿದರು; ಆದರೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದು ಸ್ವೇಚ್ಛೆಯಿಂದ ಅಲ್ಲ, ಆದರೆ ಬಲಪ್ರಯೋಗ ದಿಂದ, ಇದು ಇತಿಹಾಸವಾಗಿದೆ. ಹಿಂದೂ ರಾಜರ ಸೋಲಿನ ನಂತರ, ಮುಸಲ್ಮಾನ ಆಕ್ರಮಣಕಾರರ ಏಕೈಕ ಕಾರ್ಯವೆಂದರೆ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸುವುದು ! ಟಿಪ್ಪು ಸುಲ್ತಾನ್ ಒಂದೇ ದಿನದಲ್ಲಿ ೧ ಲಕ್ಷ ಹಿಂದೂಗಳನ್ನು ಮತಾಂತರಿಸಿದ ದಾಖಲೆ ನಿರ್ಮಿಸಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ. ಅಂತಹ ಪರಿಸ್ಥಿತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಹೊರಹೊಮ್ಮಿದಾಗ, ಅವರು ೫ ಬಾದಶಾಹರನ್ನು ಸೋಲಿಸಿ ತಮ್ಮದೇ ರಾಜ್ಯವನ್ನು ಸ್ಥಾಪಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ಮೊಘಲರನ್ನು ಸೋಲಿಸಬಹುದು ಎಂದು ಹಿಂದೂಗಳಲ್ಲಿ ಆತ್ಮವಿಶ್ವಾಸ ಮೂಡಿಸಿದರು. ನಂತರ, ಇದು ಸ್ವಲ್ಪಸಮಯದವರೆಗೆ ಹಿಂದವೀ ಸ್ವರಾಜ್ಯ ದೇಶವಾಗಿತ್ತು; ಆದರೆ, ಛತ್ರಪತಿ ಶಿವಾಜಿ ಮಹಾರಾಜರು ಮಾತ್ರ ಮೊಘಲರು ಮತ್ತು ಇತರ ಮುಸ್ಲಿಂ ಬಾದಶಾಹರಿಂದ ಮತಾಂತರಗೊಂಡ ಹಿಂದೂಗಳನ್ನು ಶುದ್ಧೀಕರಿಸಿ ಅವರನ್ನು ಹಿಂದೂ ಧರ್ಮಕ್ಕೆ ಮತಾಂತರ ಗೊಳಿಸಿದ್ದನ್ನು ಗಮನಿಸಬೇಕು. ಅಷ್ಟೇ ಅಲ್ಲ, ಬಜಾಜಿ ನಿಂಬಾಳ್ಕರ್ ಎಂಬವರನ್ನು ಶುದ್ಧೀಕರಿಸಲಾಯಿತು. ಅನಂತರ ಮಹಾರಾಜರು ತಮ್ಮ ಕುಟುಂಬದ ಹೆಣ್ಣುಮಗಳನ್ನು ಬಜಾಜಿ ನಿಂಬಾಳ್ಕರ್‌ರೊಂದಿಗೆ ಮದುವೆ ಮಾಡಿಸುವ ಮೂಲಕ ಶುದ್ಧೀಕರಣಗೊಂಡ ಸಹೋದರನನ್ನು ಹೇಗೆ ನೋಡಿಕೊಳ್ಳಬೇಕು ಎಂಬುದಕ್ಕೆ ಒಂದು ಉದಾಹರಣೆಯನ್ನು ಮಾಡಿ ತೋರಿಸಿದರು. ದುರದೃಷ್ಟವಶಾತ್ ಅಂತಹ ಶುದ್ಧೀಕರಣವನ್ನು ನಂತರದ ದಿನಗಳಲ್ಲಿ ಮರಾಠರು ಮತ್ತು ಪೇಶ್ವೆಗಳು ಮಾಡಲಿಲ್ಲ. ದೆಹಲಿಯ ಮೇಲೆ ಮರಾಠರ ಆಡಳಿತ ಇದ್ದಾಗಲೂ ಇದನ್ನು (ಶುದ್ಧೀಕರಣ) ಮಾಡಲಾಗಿಲ್ಲ ಮತ್ತು ಅದು ಅಕ್ಷಮ್ಯ ತಪ್ಪಾಗಿತ್ತು ಎಂದು ಸ್ವಾತಂತ್ರ್ಯವೀರ ಸಾವರಕರರು ಹೇಳಿದ್ದಾರೆ. ರಾಜ್ಯವನ್ನು ಗೆದ್ದ ನಂತರ ಮುಸಲ್ಮಾನರು ಹಿಂದೂಗಳನ್ನು ಮತಾಂತರಿಸುತ್ತಿದ್ದರೆ, ಸೋಲಿನ ನಂತರ ಮತಾಂತರವಾಗಿದ್ದ ಹಿಂದೂಗಳನ್ನು ಪುನಃ ಹಿಂದೂ ಧರ್ಮಕ್ಕೆ ಕರೆತರುವುದು ಅವರ ಕರ್ತವ್ಯವಾಗಿತ್ತು. ಮತಾಂತರವಾದ ಹಿಂದೂಗಳು ಸಹ ತಮ್ಮ ಧರ್ಮಕ್ಕೆ ಮರಳಲು ಬಯಸಿದ್ದರು; ಆದರೆ ಅವರು ನಿರಾಶರಾದರು. ಅವರು ಪುನಃ ಧರ್ಮಕ್ಕೆ ಮರಳದ ಕಾರಣ, ಅವರಲ್ಲಿ ಹೆಚ್ಚಿನವರು ಹಿಂದೂ ರಾಷ್ಟ್ರ ಮತ್ತು ಹಿಂದೂ ಧರ್ಮದ ಶತ್ರುಗಳಾಗಿದ್ದಾರೆ. ಇದರ ಭಾರಿ ಹಾನಿಯನ್ನು ದೇಶ ಭರಿಸಬೇಕಾಗಿದೆ. ಈ ತಪ್ಪಿನಿಂದ ದೇಶದ ವಿಭಜನೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದು ಪುನಃ ಸಂಭವಿಸದಂತೆ ಹಿಂದೂಗಳು ಪ್ರಯತ್ನಿಸಬೇಕಾಗಿದೆ.

ಮತಾಂತರ ಎಂದರೆ ರಾಷ್ಟ್ರಾಂತರ !

ಮೊಘಲರು ಹಿಂದೂಗಳನ್ನು ಮತಾಂತರಿಸುತ್ತಿದ್ದರೆ, ಬ್ರಿಟಿಷರು ಈ ದೇಶಕ್ಕೆ ಬಂದಾಗ, ಹಿಂದೂಗಳನ್ನು ಕ್ರೈಸ್ತರು ಮತಾಂತರಗೊಳಿಸುತ್ತಿದ್ದರು. ಅವರು ಬಲಪ್ರಯೋಗದಿಂದ ಅಥವಾ ಕತ್ತಿ ಯಿಂದಲ್ಲದಿದ್ದರೂ ಸೌಮ್ಯವಾಗಿ ಮುಂದುವರಿದರು. ಇವೆರಡು ಧರ್ಮಗಳಿಂದ ಆಗುತ್ತಿದ್ದ ಹಿಂದೂಗಳ ಮತಾಂತರವು ಸ್ವಾತಂತ್ರ್ಯದ ನಂತರ ನಿಲ್ಲುವುದು ಎಂದು ಭಾವಿಸುವಾಗಲೇ ಈಶಾನ್ಯ ಭಾರತದ ಕೆಲವು ರಾಜ್ಯಗಳು ಇಂದು ಕ್ರೈಸ್ತೀಕರಣಗೊಂಡಿವೆ. ಇಂದು ದೇಶದ ೮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿರುವುದು ಹಿಂದೂಗಳಿಗೆ ಆತಂಕದ ವಿಷಯವಾಗಿದೆ ! ಇದನ್ನು ತಡೆಯಲು ಹಿಂದೂ ಸಂಘಟನೆಗಳು ಪ್ರಯತ್ನಿಸು ತ್ತಿದ್ದರೂ ಅವು ಯಶಸ್ವಿಯಾಗಿಲ್ಲ. ಇಂದು, ಕೇಂದ್ರದಲ್ಲಿ ಭಾಜಪದ ಸರಕಾರ ಇದ್ದರೂ ದೇಶದಲ್ಲಿ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ. ಈ ಮತಾಂತರವನ್ನು ಕ್ರೈಸ್ತ ಮಿಷನರಿಗಳು ಮತ್ತು ಮುಸಲ್ಮಾನ ಧರ್ಮಗುರುಗಳು ನಡೆಸುತ್ತಿದ್ದಾರೆ. ಸಮಾನ ನಾಗರಿಕ ಕಾನೂನು, ಮತಾಂತರ ನಿಷೇಧ ಕಾನೂನು, ಜನಸಂಖ್ಯಾ ನಿಯಂತ್ರಣ ಇತ್ಯಾದಿ ಕಾನೂನುಗಳಿಗೆ ಬೇಡಿಕೆ ಇದೆ ಮತ್ತು ಹಿಂದೂಗಳು ಅದನ್ನು ಈಡೇರಿಸಬೇಕೆಂದು ನಿರೀಕ್ಷಿಸುತ್ತಾರೆ. ಉತ್ತರಪ್ರದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ಬಂದ ನಂತರದ ಮೊದಲ ಕಾರ್ಯಾಚರಣೆಯಲ್ಲಿ ೧ ಸಾವಿರ ಹಿಂದೂಗಳನ್ನು ಮತಾಂತರಿಸಿದ್ದ ಇಬ್ಬರು ಮತಾಂಧರನ್ನು ಬಂಧಿಸಲಾಗಿದೆ. ಅವರು ಪಾಕಿಸ್ತಾನದ ಐಎಸ್‌ಐನಿಂದ ಸಹಾಯ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಉತ್ತರಪ್ರದೇಶ ಸರಕಾರ ಈ ಕಾನೂನನ್ನು ಜಾರಿಗೆ ತಂದಿದ್ದು ಶ್ಲಾಘನೀಯ. ಕೇಂದ್ರ ಸರಕಾರ ಮತ್ತು ಇತರ ಭಾಜಪ ಆಡಳಿತದ ರಾಜ್ಯಗಳು ಇಂತಹ ಕಾನೂನನ್ನು ಏಕೆ ಅಂಗೀಕರಿಸಲಿಲ್ಲ ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತಿರಬಹುದು ಇದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗಿದ್ದರೂ ೧ ಸಾವಿರ ಹಿಂದೂಗಳು ಮತಾಂತರಗೊಳ್ಳುವಾಗ ಪೊಲೀಸರು, ಆಡಳಿತ ಮತ್ತು ಗುಪ್ತಚರ ಸಂಸ್ಥೆಗಳು ಏನು ಮಾಡುತ್ತಿದ್ದವು ? ಅಂತಹ ಪ್ರಶ್ನೆ ಯಾವಾಗಲೂ ಇರುತ್ತದೆ. ಉತ್ತರಪ್ರದೇಶದಲ್ಲಿ ೧ ಸಾವಿರ ಹಿಂದೂಗಳು ಮತಾಂತರಗೊಂಡರೆ, ಇತರ ರಾಜ್ಯಗಳ ಪರಿಸ್ಥಿತಿ ಹೇಗಿರುತ್ತದೆ? ಅಂತಹ ಪ್ರಶ್ನೆಯೂ ಉದ್ಭವಿಸುತ್ತದೆ. ಶೇ. ೨೫ ರಷ್ಟು ಆಂಧ್ರಪ್ರದೇಶದ ಜನರು ಕ್ರೈಸ್ತರಾಗಿದ್ದಾರೆ; ಆದರೆ, ಅವರು ತಮ್ಮ ಹೆಸರನ್ನು ಬದಲಾಯಿಸದ ಕಾರಣ ಅದು ಗಮನಕ್ಕೆ ಬರುತ್ತಿಲ್ಲ. ಸ್ವಾತಂತ್ರ್ಯದ ನಂತರವೂ ಹಿಂದೂಗಳು ಮತಾಂತರಗೊಳ್ಳುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಸಂಸದ ರಾಜು ಹೇಳಿದ್ದಾರೆ.

ಹಿಂದೂಗಳ ಮತಾಂತರವನ್ನು ನಿಲ್ಲಿಸಿ !

ಹಿಂದೂ ಸಂಘಟನೆಗಳು, ಸಂಪ್ರದಾಯಗಳು, ಶಂಕರಾಚಾರ್ಯರು ಮತ್ತು ಧರ್ಮಚಾರ್ಯರು ಹಿಂದೂಗಳನ್ನು ಹಿಂದೂ ಧರ್ಮಕ್ಕೆ ಮರಳಿ ತರಲು ಪ್ರಯತ್ನಿಸಬೇಕು. ಮತಾಂತರಗೊಂಡ ಹಿಂದೂಗಳನ್ನು ಪುನಃ ಧರ್ಮಕ್ಕೆ ಕರೆತರುವ ಯೋಜನೆಯನ್ನೂ ಸರಕಾರ ಜಾರಿಗೆ ತರಬೇಕು. ಹಿಂದೂಗಳು ಇದನ್ನು ಸರಕಾರಕ್ಕೆ ಒತ್ತಾಯಿಸಬೇಕು, ಆಗ ಮಾತ್ರ ಹಿಂದೂಗಳಿಗಾದ ಹಾನಿಯನ್ನು ಸರಿದೂಗಿಸಬಹುದು. ಇಲ್ಲದಿದ್ದರೆ, ಒಬ್ಬ ಹಿಂದೂ ಮತಾಂತರ ಎಂದರೆ ಒಬ್ಬ ಹಿಂದೂ ಕಡಿಮೆಯಾದನು, ಹೀಗಿಲ್ಲದೇ ಒಬ್ಬ ಶತ್ರು ಹೆಚ್ಚಾದನು ಎಂದು ಸ್ವಾತಂತ್ರ್ಯವೀರ ಸಾವರಕರ್ ಮತ್ತು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಎಂಬುದನ್ನು ಹಿಂದೂಗಳು ಮರೆಯಬಾರದು. ಆದ್ದರಿಂದ ಹಿಂದೂಗಳು ಈಗ ಸಕ್ರಿಯರಾಗಿರಬೇಕು. ಇದಕ್ಕಾಗಿ ಎಲ್ಲಾ ಹಂತಗಳಲ್ಲಿಯೂ ಪ್ರಯತ್ನಿಸಬೇಕು. ಪಿತೂರಿಯನ್ನು ಬಹಿರಂಗಪಡಿಸುವುದು, ಮತಾಂಧರನ್ನು ಬಂಧಿಸುವುದು ಮತ್ತು ಅವರಿಗೆ ಶಿಕ್ಷೆ ನೀಡಿದರೆ ಮಾತ್ರ ಸಾಕಾಗುವುದಿಲ್ಲ, ಆದರೆ ಹಿಂದೂಗಳನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವುದು ಹೆಚ್ಚು ಮುಖ್ಯ. ಮತಾಂತರದ ಮೂಲಕ ಮುಸಲ್ಮಾನರ ಜನಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡುವುದು ಒಂದು ಜನಸಂಖ್ಯಾ ಜಿಹಾದ್, ಇದನ್ನು ಕ್ರೈಸ್ತರು ಈಶಾನ್ಯ ಭಾರತದಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಇದರ ವಿರುದ್ಧ ಪ್ರಯತ್ನಗಳು ನಡೆಯಬೇಕು ಎಂಬುದನ್ನು ಗಮನಿಸಬೇಕು. ಇದರೊಂದಿಗೆ ಹಿಂದೂಗಳು ಮತಾಂತರ ಗೊಳ್ಳಬಾರದೆಂದು ಹಿಂದೂಗಳಿಗೆ ಧರ್ಮ ಶಿಕ್ಷಣವನ್ನು ನೀಡಲು ಪ್ರಾರಂಭಿಸಬೇಕು. ಹಿಂದೂ ಸಂಘಟನೆಗಳು ಇದಕ್ಕಾಗಿ ಈಗ ಸಮರೋಪಾದಿಯಲ್ಲಿ ಪ್ರಯತ್ನಿಸಬೇಕು ಮತ್ತು ಹಿಂದೂಗಳ ಮತಾಂತರವನ್ನು ನಿಲ್ಲಿಸಿ !