Pawan Kalyan Greets Hindus Abroad : ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂಗಳಿಗೆ ದೀಪಾವಳಿಯ ಶುಭಾಶಯ ಕೋರಿದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ !

ಅಮರಾವತಿ (ಆಂಧ್ರಪ್ರದೇಶ) – ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ವಾಸಿಸುವ ಹಿಂದೂಗಳಿಗೆ ನನ್ನಿಂದ ದೀಪಾವಳಿಯ ಶುಭಾಶಯಗಳು. ಈ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ನೆಲೆಸಿರುವ ಹಿಂದೂಗಳಿಗೆ ವಿಶೇಷ ಅಭಿನಂದನೆಗಳು! ಈ ಪರಿಸ್ಥಿತಿಯಲ್ಲಿ ಭಗವಾನ್ ಶ್ರೀರಾಮ ನಿಮಗೆ ಶಕ್ತಿ ಮತ್ತು ಧೈರ್ಯವನ್ನು ನೀಡಲಿ. ನಾವೆಲ್ಲರೂ ನಿಮಗೆ ಸುರಕ್ಷತೆಯನ್ನು ಬಯಸುತ್ತೇವೆ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ವಾಸಿಸುವ ಹಿಂದೂಗಳಿಗೆ ದೀಪಾವಳಿಯಂದು ಶುಭ ಹಾರೈಸಿದ್ದಾರೆ.

ಪವನ್ ಕಲ್ಯಾಣ್ ಇವರು ಜಾಗತಿಕ ಸಮುದಾಯ ಮತ್ತು ವಿಶ್ವ ನಾಯಕರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆ ಮತ್ತು ಮೂಲಭೂತ ಹಕ್ಕುಗಳಿಗಾಗಿ ಅವರನ್ನು ಸಂಪರ್ಕಿಸುತ್ತಾರೆ ಎಂದು ಆಶಿಸಿದರು. ಅವರು ತಮ್ಮ ಮಾತು ಮುಂದುವರೆಸುತ್ತಾ, ಇಂದು ದೀಪಾವಳಿಯ ದಿನದಂದು ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಹಿಂದೂಗಳ ಸುರಕ್ಷತೆಗಾಗಿ ನಾವೆಲ್ಲರೂ ಪ್ರಾರ್ಥಿಸಬೇಕು. ಅವರ ನಾಡಿನಲ್ಲಿ ಧರ್ಮವನ್ನು ಮರುಸ್ಥಾಪಿಸೋಣ ಎಂದು ಅವರು ಹೇಳಿದರು.

ಹಿಂದೂ ಹುಡುಗನ ಹಾಡನ್ನು ಪೋಸ್ಟ್ ಮಾಡಿದ ಉಪಮುಖ್ಯಮಂತ್ರಿ, “ಪಾಕಿಸ್ತಾನದ ಹಿಂದೂ ಹುಡುಗನ ಈ ಹಾಡು ವಿಭಜನೆಯ ಆಳವಾದ ನೋವನ್ನು ಮತ್ತು ಭಾರತದ ಆತ್ಮದೊಂದಿಗೆ ಮರುಸಂಪರ್ಕಿಸುವ ಹಂಬಲವನ್ನು ವ್ಯಕ್ತಪಡಿಸುತ್ತದೆ” ಎಂದು ಬರೆದಿದ್ದಾರೆ. ಪಾಕಿಸ್ತಾನದ ಈ ಹಿಂದೂ ಹುಡುಗ ಸಿಂಧಿ ಗೀತೆಯಾದ ‘ಅಲ್ಬೆಲೋ ಇಂಡಿಯಾ’ ಹಾಡಿದ್ದಾನೆ. ಇದರ ಅರ್ಥ – ‘ನನ್ನ ಹಿಂದೂ ನೆರೆಯ ಅಲ್ಬೆಲೋ ಭಾರತಕ್ಕೆ ಹೋಗುತ್ತಿದ್ದಾನೆ. ಅವರು ಈ ಶುಕ್ರವಾರ ರೈಲು ಹತ್ತುತ್ತಾರೆ ಮತ್ತು ಪಾಕಿಸ್ತಾನಕ್ಕೆ ಎಂದಿಗೂ ಹಿಂತಿರುಗುವುದಿಲ್ಲ.

ಸಂಪಾದಕೀಯ ನಿಲುವು

ಭಾರತದ ಒಬ್ಬ ಹಿಂದೂ ನಾಯಕ ಮಾತ್ರ ಈ ಹಿಂದೂಗಳಿಗೆ ಹಾರೈಸಿದ್ದು ಇತರ ಹಿಂದೂ ನಾಯಕರಿಗೆ ನಾಚಿಕೆಗೇಡಿನ ಸಂಗತಿ ! ಈ ದೇಶಗಳ ಹಿಂದೂಗಳನ್ನು ಹಾರೈಸುವುದರ ಜೊತೆಗೆ ಅವರನ್ನು ರಕ್ಷಿಸುವ ಪ್ರಯತ್ನವನ್ನು ಹಿಂದೂ ನಾಯಕರು ಮಾಡುವುದು ಅನಿವಾರ್ಯವಾಗಿದೆ !