ಕೆಟ್ಟ ‘ಟೈಮ್

ಕಳೆದ ೨ ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯ ವಿವಿಧ ಫೇಸಬುಕ್ ಪುಟಗಳನ್ನು ನಿರ್ಬಂಧಿಸುವ ಸರಣಿ ಮುಂದುವರಿದಿದೆ. ಜಗತ್ಪ್ರಸಿದ್ಧ (ಅಥವಾ ಕುಪ್ರಸಿದ್ಧ) ‘ಟೈಮ್ ದಿನಪತ್ರಿಕೆ ಈ ವಿಷಯದ ಕುರಿತು ತನ್ನ ವಿವರಣೆಯನ್ನು ನೀಡಿದೆ. ಇದರಿಂದ ಈ ನಿರ್ಬಂಧದ ಹಿಂದೆ ‘ಟೈಮ್ನ ಕೈವಾಡ ಇದೆಯೆನ್ನುವುದು ಈಗ ಬಹಿರಂಗಗೊಳ್ಳುತ್ತಿದೆ. ‘ಟೈಮ್ನ ಹೇಳಿಕೆಗನುಸಾರ ಈ ವರ್ಷ ಫೇಸಬುಕ್ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಅನೇಕ ಪುಟಗಳನ್ನು ನಿರ್ಬಂಧಿಸಿದೆ. ಈ ಹಿಂದೆಯೂ ಸನಾತನ ಸಂಸ್ಥೆಯ ಮತ್ತು ಸಮಿತಿಯ ಪುಟಗಳನ್ನು ನಿರ್ಬಂಧಿಸುವ ಹಿಂದೆ ‘ಟೈಮ್ ಕೈವಾಡ ಇದ್ದಿರಬಹುದು ಅಥವಾ ಅವರಂತಹ ವಿಚಾರ ಸರಣಿ ಹೊಂದಿರುವ ಅಥವಾ ಎಡಪಂಥೀಯರ ಕೈವಾಡವಿದ್ದಿರಬಹುದು. ಒಂದು ರಾಷ್ಟ್ರ ಮತ್ತು ಧರ್ಮ ಪ್ರೇಮಿ ಸಂಘಟನೆಯ ಸಾಮಾಜಿಕ ಜಾಲತಾಣದ ಪುಟಗಳನ್ನು ನಿರ್ಬಂಧಿಸುವಂತೆ ಹೇಳುವ ‘ಟೈಮ್ನ ಕೃತ್ಯವು ಹುಂಬತನವೆನ್ನದೇ ಇನ್ನೇನು ಹೇಳಬಹುದು ? ಸನಾತನ ಸಂಸ್ಥೆ ಅಥವಾ ಹಿಂದೂ ಜನಜಾಗೃತಿ ಸಮಿತಿಯು  ಮಾಡುತ್ತಿರುವ ಕಾರ್ಯಗಳು ‘ಟೈಮ್ನವರಿಗೆ ತಿಳಿದಿದೆಯೇ ? ಅನೇಕ ಸಂತರು ಗೌರವಿಸಿರುವ ಈ ಸಂಸ್ಥೆ ಮತ್ತು ಸಂಘಟನೆಯ ಕಾರ್ಯಗಳಿಗೆ ಮತ್ತು ‘ಟೈಮ್ನ ಕಾರ್ಯಕ್ಕೆ ಅಜಗಜಾಂತರ ವ್ಯತ್ಯಾಸವಿದೆ.

ರಾಷ್ಟ್ರಪ್ರೇಮಿಗಳ ಅಗೌರವ

‘ಟೈಮ್ ಮಾಡುವ ದುಷ್ಕೃತ್ಯಗಳು ನಮಗೆ ತಿಳಿದಿವೆ. ಈ ಹಿಂದೆ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಲೇಖನಗಳನ್ನು ಪ್ರಕಟಿಸುತ್ತದೆಯೆಂದು ಈ ದಿನಪತ್ರಿಕೆಯು ಹೆಸರುವಾಸಿಯಾಗಿತ್ತು. ಇದರಲ್ಲಿ ಕೆಲವು ಲೇಖನಗಳನ್ನು ಆಳವಾದ ಅಧ್ಯಯನದೊಂದಿಗೆ ಪ್ರಕಟಿಸಲಾಗುತ್ತಿತ್ತು. ಆದರೆ ಈಗ ಹಾಗೆ ಉಳಿದಿಲ್ಲ. ಈ ದಿನಪತ್ರಿಕೆಯ ಲೇಖನಗಳಲ್ಲಿ ಹಿಂದೂದ್ವೇಷವು ತೀವ್ರವಿರುವುದು ಕಂಡು ಬರುತ್ತಿದೆ. ಜಗತ್ತಿನ ಮೊದಲ ಕ್ರಮಾಂಕದ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಕೋಟ್ಯವಧಿ ಜನರು ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯೆಂದು ಆಯ್ಕೆ ಮಾಡಿದಾಗ, ಅವರ ಬಗ್ಗೆ ಜಗತ್ತಿನಾದ್ಯಂತ ಆಶ್ಚರ್ಯವ್ಯಕ್ತವಾಗಿತ್ತು. ನರೇಂದ್ರ ಮೋದಿಯವರ ಪ್ರಧಾನಮಂತ್ರಿಯ ಒಂದು ಕಾಲಾವಧಿ ಮುಗಿಯುತ್ತಿದ್ದಾಗ ಚುನಾವಣೆಯ ಪೂರ್ವದಲ್ಲಿ ಪತ್ರಕರ್ತ ಆತಿಶ ತಾಸಿರ ಪ್ರಧಾನಮಂತ್ರಿಯವರನ್ನು ‘ಭಾರತವನ್ನು ವಿಭಜಿಸುವ ಮುಖಂಡ ಎಂದು ವಿಕೃತವಾಗಿ ಬಣ್ಣಿಸಿದ್ದನು. ಪ್ರಧಾನಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿಯ ಮೇಲೆ ಒಬ್ಬ ಪತ್ರಕರ್ತನು ಹದ್ದುಮೀರಿ ಮಾತನಾಡುವುದು, ಅದಕ್ಕಾಗಿ ಸುಳ್ಳು ಸಂದರ್ಭವನ್ನು ನೀಡುವುದು ಮತ್ತು ತನ್ನ ಅಭಿಪ್ರಾಯವನ್ನು ಮಂಡಿಸುವುದು ಇವುಗಳಿಂದ ಅವರ ವ್ಯಕ್ತಿದ್ವೇಷ ಕಂಡು ಬರುತ್ತದೆ. ಪತ್ರಕರ್ತ ತಾಸಿರನ ತಂದೆ ಪಾಕಿಸ್ತಾನಿ ಮೂಲದವರಾಗಿದ್ದಾರೆ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. ತದನಂತರ ಭಾರತವು ತಾಸಿರನ ಪಾಸಪೋರ್ಟ ರದ್ದುಗೊಳಿಸಿ ಬಿಸಿ ಮುಟ್ಟಿಸಿತು. ಆದರೆ ಈ ಪತ್ರಕರ್ತನ ಉದ್ಧಟತನ ಎಷ್ಟು ಎನ್ನುವುದು ಇದರಿಂದ ಕಂಡು ಬರುತ್ತದೆ. ‘ಟೈಮ್ ಮೇಲೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ಬಳಿಕ ನರೇಂದ್ರ ಮೋದಿಯವರನ್ನು ಹೊಗಳುವ ಲೇಖನಗಳನ್ನು ಪ್ರಕಟಿಸಲಾಯಿತು.

ಭಾರತದ್ವೇಷಕ್ಕೆ ಬೆಂಬಲ ?

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ರೈತರ ಹಿತಕ್ಕಾಗಿ ರಚಿಸಿರುವ ೨ ಕಾನೂನುಗಳ ವಿರುದ್ಧ ಕೆಲವು ಜನರು ರೈತರನ್ನು ಪ್ರಚೋದಿಸಿ, ನಡೆಸಿದ ಆಂದೋಲನದಲ್ಲಿ ಖಲಿಸ್ತಾನಿಗಳು ನುಸುಳಿದ್ದರು. ಈ ಆಂದೋಲನದಲ್ಲಿ ಅನೇಕ ಕಾನೂನುಬಾಹಿರ ಕೃತ್ಯಗಳು ಜರುಗಿದವು. ಈ ಆಂದೋಲನವೆಂದರೆ ಸರಕಾರವನ್ನು ಅಸ್ಥಿರಗೊಳಿಸುವ ನಿಯೋಜಿತ ಷಡ್ಯಂತ್ರವಾಗಿತ್ತು ಎನ್ನುವುದು ‘ಟೂಲಕಿಟ್ ಪ್ರಕರಣದಿಂದ ಗಮನಕ್ಕೆ ಬಂದಿತು. ಆದರೂ ‘ಟೈಮ್ ಒಬ್ಬ ರೈತ ಮಹಿಳಾ ಆಂದೋಲನಕಾರಳ ಛಾಯಾಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿ ‘ಈ ಕಾನೂನುಬಾಹಿರ ಕಾರ್ಯಗಳಿಗೆ ತಮ್ಮ ಬೆಂಬಲವಿದೆ ಎನ್ನುವುದನ್ನು ತೋರಿಸಿಕೊಟ್ಟಿತ್ತು. ‘ಟೈಮ್ನ ಈ ಕೃತ್ಯದಿಂದ ಅದರ ಮೇಲೆ ಟೀಕೆಗಳ ಸುರಿಮಳೆಯಾಯಿತು. ‘ಟೈಮ್ ಅಮೇರಿಕಾದ ದಿನಪತ್ರಿಕೆಯಾಗಿದೆ. ಅಲ್ಲಿನ ಲೇಖಕ ಮತ್ತು ಪತ್ರಕರ್ತರಿಗೆ ಇಲ್ಲಿಯ ಹಿಂದೂ ಸಂಸ್ಕೃತಿ ಮತ್ತು ಸಂಘಟನೆಯ ವಿಷಯದಲ್ಲಿ ಯಾವುದೇ ಮಾಹಿತಿಯಿಲ್ಲ. ಅವರು ವಿಕೃತವಾಗಿ ಮಂಡಿಸಲು (ಅಥವಾ ಉದ್ದೇಶಪೂರ್ವಕವಾಗಿ ಹಾಗೆ ಮಾಡಲು) ಪ್ರಯತ್ನಿಸುತ್ತಿದ್ದಾರೆ. ‘ಟೈಮ್ ತನ್ನ ಪ್ರತಿಷ್ಠೆಯನ್ನು ಹಿಂದುತ್ವ ನಿಷ್ಠರನ್ನು ಅಗೌರವಿಸಲು ಮತ್ತು ಅವರ ಕುರಿತು ಅಸತ್ಯವನ್ನು ಬರೆಯಲು ಉಪಯೋಗಿಸುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಇನ್ನೊಂದು ವಿಷಯವಾಗಿದೆ; ಅದರ ದುರುಪಯೋಗವನ್ನು ಪಡೆದುಕೊಂಡು ಇತರರ ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುವುದನ್ನು ಏನೆನ್ನಬೇಕು ? ಸನಾತನ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಗಳಿಂದ ಎಷ್ಟೋ ಜನರ ಜೀವನದಲ್ಲಿ ಆನಂದ ನಿರ್ಮಾಣವಾಗಿದೆ. ಎಷ್ಟೋ ಕುಟುಂಬಗಳು ಸರಿಯಾದ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಎಷ್ಟೋ ಜನರು ವ್ಯಸನ ಮುಕ್ತರಾಗಿದ್ದಾರೆ. ಈ ವಿಷಯ ‘ಟೈಮ್ಗೆ ತಿಳಿದಿದೆಯೇ? ಇಂತಹ ಯಾವುದೇ ವಿಚಾರವನ್ನು ಮಾಡದೇ ‘ಟೈಮ್ನಿಂದ ಆಗಿರುವ ಈ ವಿಕೃತ ಪ್ರಯತ್ನ ಖಂಡಿತವಾಗಿಯೂ ಖಂಡನೀಯವಾಗಿದೆ. ‘ಟೈಮ್ನ ಕೆಟ್ಟ ‘ಟೈಮ್(ಕಾಲ) ಪ್ರಾರಂಭವಾಗಿದೆಯೇ? ಎನ್ನುವ ಸಂಶಯ ಮೂಡುತ್ತಿದೆ. ಹೀಗೆಯೇ ಮುಂದುವರಿದರೆ ಅವರ ಓದುಗರ ಸಂಖ್ಯೆ ಕ್ಷೀಣಿಸುವುದರೊಂದಿಗೆ ಭಾರತದಲ್ಲಿ ‘ಟೈಮ್ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡುವುದರಲ್ಲಿ ಯಾವುದೇ ಸಂದೇಹವೇ ಇಲ್ಲ.