ಆಪತ್ಕಾಲದ ಸಂಜೀವಿನಿ ಔಷಧೀಯ ಸಸ್ಯಗಳು
ಸಂತ ಮಹಾತ್ಮರು ಹೇಳಿದಂತೆ ಭೀಕರ ಆಪತ್ಕಾಲ ಆರಂಭವಾಗಿದೆ. ಈ ಕಾಲದಲ್ಲಿ ಡಾಕ್ಟರರು, ಆರ್ಯುವೇದಿಕ್ ವೈದ್ಯರು, ಮಾರುಕಟ್ಟೆಯಲ್ಲಿನ ಔಷಧಿಗಳು ಇತ್ಯಾದಿ ದೊರೆಯಲಾರದು. ಆಪತ್ಕಾಲದಲ್ಲಿ ತನ್ನೊಂದಿಗೆ ಕುಟುಂಬದವರ ಆರೋಗ್ಯದ ರಕ್ಷಣೆಯನ್ನು ಮಾಡುವುದೂ ದೊಡ್ಡ ಸವಾಲಾಗಿದೆ. ಇಂತಹ ಸಮಯದಲ್ಲಿ ನಾವು ಬೆಳೆಸಿದ ಔಷಧಿ ಸಸ್ಯಗಳು ಉಪಯೋಗಕ್ಕೆ ಬರುತ್ತವೆ. ಹಾಗಾಗಿ ಇಂದಿನಿಂದಲೇ ನಾವು ಅವುಗಳ ಕೃಷಿ ಮಾಡಲು ಗಮನ ನೀಡಬೇಕು. ಈ ಲೇಖನದಲ್ಲಿ ಔಷಧಿ ಸಸ್ಯಗಳ ಕೃಷಿಯ ಮಹತ್ವ, ಅದರ ಕೃಷಿಯಿಂದಾಗುವ ಲಾಭ ಹಾಗೂ ಕಡಿಮೆ ಪರಿಶ್ರಮದಿಂದ ನೆಡಬಹುದಾದ ಮತ್ತು ಈಗಿರುವ ಔಷಧಿ ಸಸ್ಯಗಳ ಬಗ್ಗೆ ಈ ಲೇಖನದ ಮೂಲಕ ಮಾಹಿತಿ ನೀಡುತ್ತಿದ್ದೇವೆ.
ಗ್ರಂಥದ ಮುಖ ಪುಟ
ಔಷಧಿ ಸಸ್ಯಗಳನ್ನು ಬೆಳೆಯಿರಿ !ಅ. ‘ನಮ್ಮ ಪೂರ್ವಪುಣ್ಯದಿಂದಲೇ ನಾವು ಭಾರತದಲ್ಲಿದ್ದೇವೆ. ವಿದೇಶದ ಸಾಧಕರಿಗೆ ಸಾಧ್ಯವಿಲ್ಲದಿದ್ದರೂ, ನಮಗೆ ದೈವೀ ಔಷಧಿ ವೃಕ್ಷಗಳನ್ನು ಬೆಳೆಸುವುದು ಸಹಜವಾಗಿ ಸಾಧ್ಯವಿದೆ. ಆ. ಮುಂಬರುವ ಆಪತ್ಕಾಲದಲ್ಲಿ ನಮಗೆ ಔಷಧಿಗಳು ದೊರೆಯುವುದು ಅಸಾಧ್ಯವಾಗಬಹುದು. ಆಗ ನಮಗೆ ಈ ದೈವೀ ವೃಕ್ಷಗಳೇ ಆಧಾರವಾಗುವವು. ಇ. ದೈವೀ ಸಸ್ಯಗಳನ್ನು ‘ಸೊಪ್ಪು ಎಲೆ ಎಂದು ಹೀಯಾಳಿಸುವವರಿಗೆ ಮುಂದೆ ದೈವೀ ಸಸ್ಯಗಳಿಗೇ ಶರಣಾಗಬೇಕಾಗಲಿದೆ. ಈ. ಯಾವುದಾದರೊಂದು ದೇವತೆಯ ಉಪಾಸನೆಯನ್ನು ಮಾಡುತ್ತಿದ್ದೇವೆ ಎಂಬ ಭಾವದಿಂದ ದೈವೀ ವೃಕ್ಷಗಳ ಉಪಾಸನೆ ಅಂದರೆ ಸಂರಕ್ಷಣೆ ಮಾಡಿ ! ನಿಮ್ಮಲ್ಲಿರುವ ಭಾವದಿಂದ ವೃಕ್ಷಗಳಲ್ಲಿನ ದೈವೀ ತತ್ತ್ವದ ಪ್ರಮಾಣ ವೃದ್ಧಿಯಾಗಲು ಸಹಾಯವಾಗುವುದು. ಉ. ವೃಕ್ಷಗಳಿಗೆ ಬೆಳೆಯಲು ಸಮಯ ತಗಲುತ್ತದೆ, ಇದನ್ನು ಗಮನದಲ್ಲಿ ಇಟ್ಟುಕೊಂಡು ಸಾಧಕರು ಈಗಿನಿಂದಲೇ ಹೆಚ್ಚೆಚ್ಚು ಪ್ರಮಾಣದಲ್ಲಿ ವೃಕ್ಷಗಳನ್ನು ಬೆಳೆಸಬೇಕು, ಅಂದರೆ ನಾವು ಇದರಿಂದ ನಗರಗಳಲ್ಲಿರುವ ಮತ್ತು ವೃಕ್ಷಗಳನ್ನು ಬೆಳೆಯಲು ಜಾಗವಿಲ್ಲದಿರುವ ಸಾಧಕರಿಗೆ ಮುಂದೆ ಸಹಾಯ ಮಾಡಬಹುದು. – (ಪರಾತ್ಪರ ಗುರು) ಡಾ. ಆಠವಲೆ (ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಔಷಧಿ ಸಸ್ಯಗಳನ್ನು ಬೆಳೆಯುವ ಆವಶ್ಯಕತೆಯ ಬಗೆಗಿನ ೨೦೦೬ ರಲ್ಲಿನ ಲೇಖನವು ಅವರ ದಾರ್ಶನಿಕತೆ ಯನ್ನು ತೋರಿಸ್ತುದೆ. – ಸಂಕಲನಕಾರರು) |
೧. ಔಷಧಿ ಸಸ್ಯಗಳನ್ನು ಬೆಳೆಸುವುದರ ಆವಶ್ಯಕತೆ
೧ ಅ. ಔಷಧಿ ಸಸ್ಯಗಳನ್ನು ಬೆಳೆಸುವುದು ಮತ್ತು ಉಳಿಸುವುದು ಸಾಧನೆಯೇ ಆಗಿದೆ : ಆಯುರ್ವೇದವು ‘ಐದನೇ ವೇದವಾಗಿದೆ; ಆದರೆ ಭಾರತದಲ್ಲಿಯೇ ಈ ಶಾಸ್ತ್ರವನ್ನು ಉಪೇಕ್ಷಿಸಿರುವುದರಿಂದ ಇಂದು ಇದರಲ್ಲಿನ ಒಂದು ಮಹತ್ವದ ಘಟಕವಾದ ಔಷಧಿ ಸಸ್ಯಗಳು ವಿರಳವಾಗುತ್ತಾ ಹೋಗುತ್ತಿವೆ. ಅವುಗಳನ್ನು ಬೆಳೆಸುವುದು ಮತ್ತು ಉಳಿಸುವುದು ಸಾಧನೆಯೇ ಆಗಿದೆ.
೧ ಆ. ಮುಂಬರುವ ಭೀಕರ ಆಪತ್ಕಾಲದಲ್ಲಿ ಔಷಧಿ ಸಸ್ಯಗಳು ಸಹಜವಾಗಿ ಸಿಗಲು ಈಗಿನಿಂದಲೇ ಅವುಗಳನ್ನು ಬೆಳೆಸುವುದು ಮತ್ತು ಉಳಿಸುವುದು ಆವಶ್ಯಕವಾಗಿದೆ : ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ನಮಗೆ ಆಲೋಪಥಿ ಔಷಧಿಗಳಲ್ಲ, ಆಯುರ್ವೇದೀಯ ಔಷಧಿ ಸಸ್ಯಗಳು ಆಧಾರವಾಗಲಿವೆ. ‘ಬಾಯಾರಿದಾಗ ಬಾವಿ ತೋಡಿದ ಹಾಗೆ ! ಎಂಬ ಗಾದೆ ಮಾತಿದೆ. ಹೀಗಾಗದಿರಲು ಮುಂಬರುವ ಭೀಕರ ಆಪತ್ಕಾಲದಲ್ಲಿ ಕಡಿಮೆ ಬೆಲೆಯ ಮತ್ತು ಬಹುಗುಣಿಯಾಗಿರುವ ವಿವಿಧ ಆಯುರ್ವೇದೀಯ ಸಸ್ಯಗಳು ಸಹಜವಾಗಿ ದೊರೆಯಲು ಈಗಿನಿಂದಲೇ ಅವುಗಳನ್ನು ಮನೆಯ ಸುತ್ತಲೂ, ಮನೆಯ ಪರಿಸರದಲ್ಲಿ ಮತ್ತು ಗದ್ದೆಗಳಲ್ಲಿ ಬೆಳೆಸುವುದು ಆವಶ್ಯಕವಾಗಿದೆ.
೧ ಇ. ಔಷಧಿ ಸಸ್ಯಗಳು ನಾಮಾವಶೇಷವಾಗುವುದನ್ನು ತಡೆಯುವುದು ಅತಿ ಆವಶ್ಯಕವಾಗಿದೆ : ಜಗತ್ತಿನಾದ್ಯಂತ ಔಷಧಿ ಸಸ್ಯಗಳಿಗೆ ಹೆಚ್ಚುತ್ತಿರುವ ಬೇಡಿಕೆ, ಅವುಗಳ ಕಳ್ಳಸಾಗಾಣಿಕೆ, ಹಾಗೆಯೇ ಆಧುನೀಕರಣದ ಹೆಸರಿನಲ್ಲಿ ನಡೆಯುತ್ತಿರುವ ನಿರ್ಬಂಧರಹಿತ ಮರಕಡಿತ ಇವೇ ಮುಂತಾದ ಕುಕೃತ್ಯಗಳಿಂದ ಅನೇಕ ಔಷಧಿ ಸಸ್ಯಗಳು ನಾಮಾವಶೇಷವಾಗುವ ಮಾರ್ಗದಲ್ಲಿವೆ. ಇಂತಹ ಸಸ್ಯಗಳನ್ನು ಬೆಳೆಸುವುದು ಮತ್ತು ಉಳಿಸುವುದು ಅತಿ ಆವಶ್ಯಕವಾಗಿದೆ.
೧ ಈ. ‘ಔಷಧಿ ಸಸ್ಯಗಳನ್ನು ಬೆಳೆಸುವುದು, ಆಯುರ್ವೇದವನ್ನು ಮುಖ್ಯ ಉಪಚಾರ ಪದ್ಧತಿಯನ್ನಾಗಿಸುವ ಒಂದು ಪ್ರಯತ್ನ : ಮುಂಬರುವ ಹಿಂದೂ ರಾಷ್ಟ್ರದಲ್ಲಿ ಆಯುರ್ವೇದವೇ ಮುಖ್ಯ ಉಪಚಾರ ಪದ್ಧತಿಯಾಗಲಿದೆ. ಆಯುರ್ವೇದವನ್ನು ಮುಖ್ಯ ಉಪಚಾರ ಪದ್ಧತಿಯನ್ನಾಗಿಸಲು ಪ್ರತಿಯೊಬ್ಬರೂ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ. ಔಷಧಿ ಸಸ್ಯಗಳನ್ನು ಬೆಳೆಸುವುದು ಇದರ ಮೊದಲನೇ ಹಂತವಾಗಿದೆ.
ಆಪತ್ಕಾಲದ ದೃಷ್ಟಿಯಿಂದ ಸಸ್ಯಗಳನ್ನು ಬೆಳೆಸುವುದರ ಮಹತ್ವವನ್ನು ತೋರಿಸುವ ಈ ಲೇಖನಮಾಲೆಯನ್ನು ಸಾಧಕರು ಮತ್ತು ವಾಚಕರು ಸಂಗ್ರಹಿಸಿಡಬೇಕು.
ಸನಾತನದ ಗ್ರಂಥಗಳನ್ನು ‘ಆನ್‌ಲೈನ್ ಮೂಲಕ ಖರೀದಿಸಲು ಭೇಟಿ ನೀಡಿ : Sanatanshop.com
ಸಂಪರ್ಕ : 9322315317