ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಯಾವ ಭಾವವನ್ನಿಡಬೇಕು ?

(ಪೂ.) ಶ್ರೀ. ಸಂದೀಪ ಆಳಶಿ,

‘ರಾಷ್ಟ್ರಭಕ್ತರು ಮತ್ತು ಕ್ರಾಂತಿಕಾರರು ರಾಷ್ಟ್ರದಲ್ಲಿಯೇ ದೇವರನ್ನು ಕಾಣುತ್ತಾರೆ; ಆದುದರಿಂದ ಅವರು ರಾಷ್ಟ್ರವನ್ನು ನಿರಪೇಕ್ಷವಾಗಿ ಪ್ರೀತಿಸುತ್ತಾರೆ ಮತ್ತು ರಾಷ್ಟ್ರಕ್ಕಾಗಿ ಪ್ರಾಣದ ಬಲಿದಾನವನ್ನು ಮಾಡುತ್ತಾರೆ. ವಿವಿಧ ಸಂಪ್ರದಾಯಗಳು ಮತ್ತು ಸಾಧನಾ ಮಾರ್ಗಕ್ಕನುಸಾರ ಸಾಧನೆ ಮಾಡುವ ಹೆಚ್ಚಿನ ಸಾಧಕರು ಹಿಂದಿನ ಜನ್ಮದಲ್ಲಿ ವ್ಯಷ್ಟಿ ಸಾಧನೆಯನ್ನು ಮಾಡಿರುವುದರಿಂದ ಅವರು ಈಗಿನ ಜನ್ಮದಲ್ಲಿಯೂ ಗುರುಗಳನ್ನು ಅಥವಾ ದೇವರನ್ನು ನಿರಪೇಕ್ಷವಾಗಿ ಪ್ರೀತಿಸುತ್ತಾರೆ ಮತ್ತು ವ್ಯಷ್ಟಿ ಸಾಧನೆಗಾಗಿ ಜೀವನವನ್ನು ಸಮರ್ಪಿಸುತ್ತಾರೆ. ಈಗ ಕಾಲಾನುಸಾರ ಸಮಷ್ಟಿ ಸಾಧನೆಯನ್ನು, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡುವುದು ಅನಿವಾರ್ಯವಾಗಿದೆ. ಸಾಧಕರು, ಹಾಗೆಯೇ ಧರ್ಮಪ್ರೇಮಿ ಮತ್ತು ರಾಷ್ಟ್ರ ಪ್ರೇಮಿಗಳು ಹಿಂದೂ ರಾಷ್ಟ್ರದಲ್ಲಿಯೇ ಗುರುಗಳನ್ನು ಅಥವಾ ದೇವರನ್ನು ನೋಡಲು ಪ್ರಯತ್ನಿಸಿದರೆ ‘ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯವು ಗುರುಗಳ ಸೇವೆಯಾಗಿದ್ದೂ ಅದು ಈಶ್ವರಪ್ರಾಪ್ತಿಯ ಸಾಧನವಾಗಿದೆ’, ಎಂಬ ಭಾವವನ್ನು ಇಟ್ಟರೆ, ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯದ ಬಗ್ಗೆ ಪ್ರೀತಿಯೆನಿಸಿ ಅದಕ್ಕಾಗಿ ಜೀವನವನ್ನು ಸಮರ್ಪಿಸುವ ಸಿದ್ಧತೆಯಾಗುವುದು.’ – (ಪೂ.) ಶ್ರೀ. ಸಂದೀಪ ಆಳಶಿ (೧೯.೨.೨೦೨೦)