ವಾರಣಾಸಿಯಲ್ಲಿ ಗಂಗಾ ನದಿಯ ನೀರಿನ ಬಣ್ಣ ಹಸಿರಾಗಿದೆ ಎಂಬ ಬಗ್ಗೆ ವಿಚಾರಣೆಗೆ ಆದೇಶ

ಮಾಲಿನ್ಯದಿಂದ ಈ ರೀತಿಯ ಬದಲಾವಣೆ ಆಗಿದೆ, ಪ್ರತ್ಯೇಕವಾಗಿ ಹೇಳುವ ಆವಶ್ಯಕತೆ ಇಲ್ಲ ! ಮಾಲಿನ್ಯದಿಂದ ಪಂಚಮಹಾಭೂತಗಳಲ್ಲಿ ಆಗುತ್ತಿರುವ ಅನಿಷ್ಟ ಬದಲಾವಣೆಯನ್ನು ತಡೆಗಟ್ಟಲು ಪಂಚಮಹಾಭೂತಗಳು ತಮ್ಮ ರೌದ್ರ ಸ್ವರೂಪವನ್ನು ತೋರಿಸಲು ಪ್ರಾರಂಭಿಸಿದರೆ ಜಗತ್ತಿನಲ್ಲಿ ಏನಾಗಬಹುದು ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ! ಅದಕ್ಕೂ ಮೊದಲು ಮನುಷ್ಯ ಬುದ್ಧಿವಂತಿಕೆಯನ್ನು ತೋರಿಸಬೇಕು ಮತ್ತು ಮಾಲಿನ್ಯವನ್ನು ತಡೆಯಬೇಕು !

ವಾರಣಾಸಿ (ಉತ್ತರಪ್ರದೇಶ) – ಗಂಗಾ ನದಿಯಲ್ಲಿ ಹಠಾತ್ತನೆ ನೀರು ಹಸಿರಾಗಿ ಕಾಣಿಸಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ಆಡಳಿತವು ಆದೇಶಿಸಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಅವರ ನೇತೃತ್ವದಲ್ಲಿ ೫ ಜನರ ತಂಡ ರಚಿಸಲಾಗಿದೆ. ಮುಂದಿನ ೩ ದಿನಗಳಲ್ಲಿ ಈ ತಂಡವು ಜಿಲ್ಲಾಧಿಕಾರಿಗೆ ತನಿಖಾ ವರದಿಯನ್ನು ಸಲ್ಲಿಸಲಿದೆ.