ಇಂತಹ ಹೆಸರುಗಳನ್ನು ಬದಲಾಯಿಸಲು ಏಕೆ ಒತ್ತಾಯಿಸಬೇಕಾಗುತ್ತದೆ ? ಮೊಘಲರು ನೀಡಿದ ಹೆಸರನ್ನು ಸರಕಾರವು ತಾನಾಗಿ ಸ್ವಃತ ಬದಲಾಯಿಸಬೇಕು ಎಂದು ಹಿಂದುಗಳಿಗೆ ಅನಿಸುತ್ತದೆ !
ಭೋಪಾಲ್ (ಮಧ್ಯಪ್ರದೇಶ) – ಇಲ್ಲಿಯ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ನಗರದ ಎರಡು ಬಸ್ ನಿಲ್ದಾಣಗಳಾದ ಲಾಲಘಾಟಿ ಮತ್ತು ಹಲಾಲಪುರಗಳ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ ಮತ್ತು ಪುರಸಭಾ ಆಯುಕ್ತರಿಗೆ ಪತ್ರ ಬರೆದು ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಈ ಎರಡೂ ಹೆಸರುಗಳ ಹಿಂದೆ ಕೆಟ್ಟ ಇತಿಹಾಸಗಳು ಇರುವುದರಿಂದ ಆ ಹೆಸರುಗಳು ಯೋಗ್ಯವಿಲ್ಲ. ಆದ್ದರಿಂದ ಆ ಹೆಸರನ್ನು ಬದಲಾಯಿಸಬೇಕು ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದಾರೆ.
ಈ ಹಿಂದೆ ರಾಜ್ಯದ ಮಿಂಟೋ ಹಾಲ್, ಈದ್ಗಾ ಹಿಲ್ಸ್, ರೈಸನ್ ಜಿಲ್ಲೆಯ ಅಬ್ದುಲ್ಲಾಗಂಜ, ಗೈರತ್‍ಗಂಜ, ಬೇಗಮ್‍ಗಂಜ, ಹೋಶಂಗಾಬಾದ್‍ನಂತಹ ಹೆಸರುಗಳನ್ನು ಬದಲಾಯಿಸುವಂತೆ ಒತ್ತಾಯಿಸಲಾಗಿದೆ. ಈ ಎಲ್ಲಾ ಹೆಸರುಗಳು ಮೊಘಲ್ ಕಾಲದವುಗಳಾಗಿವೆ.