ಗುಜರಾತ ಉಚ್ಚ ನ್ಯಾಯಾಲಯದಿಂದ `ಟೈಮ್ಸ್ ಆಫ್ ಇಂಡಿಯಾ’, ‘ಇಂಡಿಯನ್ ಎಕ್ಸ್‌ಪ್ರೆಸ್’ ಮತ್ತು ‘ದಿವ್ಯ ಭಾಸ್ಕರ’ ದಿನಪತ್ರಿಕೆಗಳಿಗೆ ಆದೇಶ

ಕರ್ಣಾವತಿ (ಗುಜರಾತ) – ಗುಜರಾತ ಉಚ್ಚ ನ್ಯಾಯಾಲಯವು ‘ಟೈಮ್ಸ್ ಆಫ್ ಇಂಡಿಯಾ’, ‘ಇಂಡಿಯನ್ ಎಕ್ಸ್‌ಪ್ರೆಸ್’ ಮತ್ತು ‘ದಿವ್ಯ ಭಾಸ್ಕರ’ ಈ ದಿನಪತ್ರಿಕೆಗಳಿಗೆ ನ್ಯಾಯಾಲಯದ ಕಲಾಪಗಳ ತಪ್ಪಾದ ಸುದ್ದಿಯನ್ನು ಪ್ರಸಾರ ಮಾಡಿರುವ ಬಗ್ಗೆ ತಮ್ಮ ದಿನಪತ್ರಿಕೆಯಲ್ಲಿ ಕ್ಷಮೆಯಾಚಿಸುವಂತೆ ಆದೇಶಿಸಿತ್ತು. ಅದಕ್ಕನುಗುಣವಾಗಿ ಈ ದಿನಪತ್ರಿಕೆಗಳು ಕ್ಷಮಾಯಾಚನೆಯನ್ನು ಪ್ರಸಾರ ಮಾಡಿದ್ದವು; ಆದರೆ ಈ ಕ್ಷಮಾಯಾಚನೆಯನ್ನು ಎದ್ದು ಕಾಣಿಸುವಂತೆ ಪ್ರಸಾರ ಮಾಡಿಲ್ಲವೆಂದು ಉಚ್ಚನ್ಯಾಯಾಲಯ ಹೇಳುತ್ತಾ, ಮತ್ತೊಮ್ಮೆ ಕ್ಷಮಾಯಾಚನೆ ಪ್ರಸಾರ ಮಾಡುವಂತೆ ಆದೇಶಿಸಿದೆ.

1. ಮುಖ್ಯ ನ್ಯಾಯಮೂರ್ತಿ ಸುನೀತಾ ಅಗ್ರವಾಲ್ ಮತ್ತು ನ್ಯಾಯಮೂರ್ತಿ ಪ್ರಣಬ ತ್ರಿವೇದಿಯ ವಿಭಾಗೀಯ ಪೀಠವು, ಆಗಸ್ಟ್ 23, 2024 ರಂದು ಈ ಮೂರು ದಿನಪತ್ರಿಕೆಗಳು ಯಾವ ರೀತಿ ಪ್ರಕಾಶಿಸಲು ಹೇಳಲಾಗಿತ್ತೋ ಆ ರೀತಿ ಕ್ಷಮೆಯಾಚನೆಯು ದೊಡ್ಡ ಅಕ್ಷಗಳಲ್ಲಿ ಕಣ್ಣಿಗೆ ಕಾಣಿಸುವಂತೆ ಪ್ರಕಟಿಸಿರಲಿಲ್ಲ.

2. ಇದಕ್ಕೆ ನ್ಯಾಯವಾದಿಗಳು ‘ಕ್ಷಮಾಯಾಚನೆಯನ್ನು ಕಪ್ಪು ಬಣ್ಣದಲ್ಲಿ ದೊಡ್ಡ ಅಕ್ಷರಗಳಲ್ಲಿ ಪ್ರಸಾರ ಮಾಡಲಾಗಿದೆ’ ಎಂದು ಹೇಳಿದರು.

3. ಮುಖ್ಯ ನ್ಯಾಯಮೂರ್ತಿ ಅಗ್ರವಾಲ ಮಾತನಾಡಿ, ಅದನ್ನು ಯಾರೂ ಓದಲು ಸಾಧ್ಯವಿಲ್ಲ. ಯಾವ ಕಾರಣಕ್ಕೆ ಕ್ಷಮಾಯಾಚನೆ ಕೇಳಲಾಗುತ್ತಿದೆ ಎನ್ನುವುದನ್ನು ನೀವು ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗಿತ್ತು. ಕ್ಷಮಾಯಾಚನೆ ಏತಕ್ಕೆ ಎಂದು ಯಾರಿಗೆ ಅರ್ಥವಾಗುತ್ತದೆ ? ತಪ್ಪು ಸುದ್ದಿಯನ್ನು ಪ್ರಸಾರ ಮಾಡಿರುವುದಕ್ಕಾಗಿ ಕ್ಷಮೆ ಕೋರಿದ್ದೇವೆ ಎಂದು ನೀವು ತಿಳಿಸಬೇಕಿತ್ತು. ಹಾಗೆ ಕ್ಷಮಾಯಾಚನೆಯನ್ನು ಮಾಡಿದ ಬಳಿಕವೇ ನಮ್ಮೆದುರಿಗೆ ಬರಬೇಕಾಗಿತ್ತು ಎಂದು ಹೇಳಿದರು.

ಏನಿದು ಪ್ರಕರಣ ?

ಆಗಸ್ಟ್ 13 ರಂದು ನ್ಯಾಯಾಲಯವು ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ದಿವ್ಯ ಭಾಸ್ಕರ ಈ ದಿನಪತ್ರಿಕೆಗಳ ಸಂಪಾದಕರಿಗೆ ನೋಟಿಸ್ ನೀಡಿತ್ತು. ನ್ಯಾಯಾಲಯವು ಅವರಿಗೆ ಅನುದಾನಿತ ಅಲ್ಪಸಂಖ್ಯಾತ ಸಂಸ್ಥೆಗಳ ಅಧಿಕಾರಗಳಿಗೆ ಸಂಬಂಧಿಸಿದ ಪ್ರಕರಣದ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ಪ್ರಸಾರ ಮಾಡುವಾಗ `ತಪ್ಪು ಮತ್ತು ವಿಕೃತ ವರ್ಣನೆ’ ಮಾಡಿರುವ ಬಗ್ಗೆ ಸ್ಪಷ್ಟೀಕರಣವನ್ನು ಕೇಳಿತ್ತು. ಸುದ್ದಿಪತ್ರಿಕೆಗಳು ತದನಂತರ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಪ್ರಮಾಣ ಪತ್ರದಲ್ಲಿ ಕ್ಷಮಾಯಾಚಿಸಿದ್ದರು; ಆದರೆ ನ್ಯಾಯಾಲಯಕ್ಕೆ ಸಮಾಧಾನವಾಗಲಿಲ್ಲ. ತದನಂತರ ಅಗಸ್ಟ 22 ರಂದು ನ್ಯಾಯಾಲಯವು ಸಂಬಂಧಿಸಿದ ದಿನಪತ್ರಿಕೆಗಳಿಗೆ, ನ್ಯಾಯಾಲಯದ ಕಲಾಪಗಳ ವರದಿಯನ್ನು ನೊಂದಾಯಿಸುವಲ್ಲಿ ಪತ್ರಕರ್ತರು ಮತ್ತು ಸಂಪಾದಕರಿಂದ ತಪ್ಪಾಗಿದೆಯೆಂದು ಸ್ಪಷ್ಟವಾಗುವಂತೆ ಕ್ಷಮಾಯಾಚನೆ ಮಾಡುವಂತೆ ಆದೇಶಿಸಿತ್ತು. ಆದರೆ ಕ್ಷಮಾಪಣೆಯನ್ನು ದಿನಪತ್ರಿಕೆಗಳು ಆ ರೀತಿಯಲ್ಲಿ ಪ್ರಕಟಿಸದ ಕಾರಣ ನ್ಯಾಯಾಲಯ ಅವರಿಗೆ ಛೀಮಾರಿ ಹಾಕಿ ಮತ್ತೊಮ್ಮೆ ದೊಡ್ಡ ಅಕ್ಷರಗಳಲ್ಲಿ ಕ್ಷಮಾಪಣೆ ಪ್ರಕಟಿಸುವಂತೆ ಆದೇಶಿಸಿದೆ.

ಸಂಪಾದಕೀಯ ನಿಲುವು

ತಪ್ಪಾದ ಸುದ್ದಿಯನ್ನು ಪ್ರಸಾರ ಮಾಡಿರುವ ಬಗ್ಗೆ ಕ್ಷಮೆಯಾಚನೆಯನ್ನು ಎದ್ದು ಕಾಣುವಂತೆ ಪ್ರಸಾರ ಮಾಡದೇ ಇರುವುದರಿಂದ ಮತ್ತೊಮ್ಮೆ ಪ್ರಕಟಿಸಿರಿ !