ಅಲೋಪತಿ ಜೊತೆಗೆ ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳುವ ರೋಗಿಗಳು ಕೇವಲ ಅಲೋಪತಿ ಔಷಧಿಯನ್ನು ಮಾತ್ರ ತೆಗೆದುಕೊಳ್ಳುವ ರೋಗಿಗಳ ತುಲನೆಯಲ್ಲಿ ಬೇಗ ಕೊರೊನಾಮುಕ್ತರಾದರು !

ಕರ್ಣಾವತಿ (ಗುಜರಾತ್) ನ ಕೋವಿಡ್ ಆಸ್ಪತ್ರೆಯಲ್ಲಿ ಸಂಶೋಧನೆ !

ಇಡೀ ದೇಶದಲ್ಲಿ ಕೊರೋನಾ ಚಿಕಿತ್ಸೆಯಲ್ಲಿ ಆಯುರ್ವೇದದ ಸಹಭಾಗಿತ್ವವನ್ನು ಪಡೆದುಕೊಳ್ಳಬೇಕು ಎಂದು ಜನರಿಗೆ ಅನಿಸುತ್ತದೆ ! ಈ ಬಗ್ಗೆ ಕೇಂದ್ರ ಸರಕಾರವು ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕ !

ಕರ್ಣಾವತಿ (ಗುಜರಾತ) – ಇಲ್ಲಿಯ ಏಷ್ಯಾದ ಅತಿದೊಡ್ಡ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಲಾದ ೧೨೦೦ ಹಾಸಿಗೆಗಳ ಕೋವಿಡ್ ಆಸ್ಪತ್ರೆಯಲ್ಲಿ ನಡೆಸಿದ ಒಂದು ಸಂಶೋಧನೆಯಲ್ಲಿ ‘ಕೊರೊನಾ ರೋಗಿಗಳ ಮೇಲೆ ಅಲೋಪತಿಯೊಂದಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡುವುದು ಸಂಜೀವಿನಿಯಾಗುತ್ತಿದೆ’ ಎಂದು ಗಮನಕ್ಕೆ ಬಂದಿದೆ. ರೋಗಿಗಳ ಒಪ್ಪಿಗೆಯೊಂದಿಗೆ ನೀಡಲಾಗುವ ಚಿಕಿತ್ಸೆಯಿಂದ ರೋಗಿಗಳು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಚಿಕಿತ್ಸೆಗಳಲ್ಲಿ ಭಾಗಿಯಾಗಿರುವ ಯಾವುದೇ ರೋಗಿಗಳು ಸಾಯಲಿಲ್ಲ. ಕೆಲವು ರೋಗಿಗಳ ಸ್ಥಿತಿ ಗಂಭೀರವಾಗಿತ್ತು. ಈ ಚಿಕಿತ್ಸೆಯನ್ನು ರಾಜ್ಯ ಸರಕಾರದ ಮಾರ್ಗದರ್ಶನದಲ್ಲಿ ಮಾಡಲಾಯಿತು. ಈ ಆಸ್ಪತ್ರೆಯಲ್ಲಿ ೨೬ ಕೊರೊನಾ ರೋಗಿಗಳ ಮೇಲೆ ಸಂಶೋಧನೆ ನಡೆಸಲಾಯಿತು.

‘ಸ್ಟ್ಯಾಂಡರ್ಡ್ ಟ್ರೀಟ್‍ಮೆಂಟ್ ಗ್ರೂಪ್’ (ಎಸ್‍ಟಿಜಿ) ಮತ್ತು ಆಯುರ್ವೇದ ಟ್ರೀಟ್‍ಮೆಂಟ್ ಗ್ರೂಪ್ (ಎಟಿಜಿ) ಎಂದು ವಿಭಾಗ ಮಾಡಿ ಚಿಕಿತ್ಸೆಯನ್ನು ನೀಡಲಾಯಿತು. ಎಟಿಜಿ ಗುಂಪಿನ ರೋಗಿಗಳಿಗೆ ಅಲೋಪತಿ ಮತ್ತು ಆಯುರ್ವೇದ ಹೀಗೆ ಎರಡೂ ಔಷಧಿಗಳನ್ನು ನೀಡಲಾಗಿದ್ದರೆ, ಎಸ್‍ಟಿಜಿ ಗುಂಪಿನ ರೋಗಿಗಳಿಗೆ ಆಯುರ್ವೇದ ಔಷಧಿಗಳನ್ನು ನೀಡಲಾಗಿಲ್ಲ. ಎಟಿಜಿ ಗುಂಪಿನಲ್ಲಿನ ರೋಗಿಗಳು ಎಸ್‍ಟಿಜಿಯಲ್ಲಿನ ರೋಗಿಗಳಿಗಿಂತ ಮೊದಲೇ ಚೇತರಿಸಿಕೊಂಡರು. ತೀವ್ರ ನಿಗಾ ಘಟಕದಲ್ಲಿ ಯಾರನ್ನೂ ಇರಿಸಬೇಕಾಗಿ ಬರಲಿಲ್ಲ ಮತ್ತು ಯಾರೂ ಸಾಯಲಿಲ್ಲ. ಶೇ. ೩೩, ಅಂದರೆ ೮ ರೋಗಿಗಳನ್ನು ೩ ದಿನಗಳಲ್ಲಿ ಮನೆಗೆ ಕಳುಹಿಸಲಾಯಿತು. ತದ್ವಿರುದ್ಧವಾಗಿ, ಎಸ್‍ಟಿಜಿ ರೋಗಿಗಳು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡರು. ೩ ದಿನಗಳಲ್ಲಿ ಯಾವುದೇ ರೋಗಿಯನ್ನು ಮನೆಗೆ ಕಳುಹಿಸಲೂ ಆಗಲಿಲ್ಲ.