ಕೃತಜ್ಞರು ನಾವೆಲ್ಲರೂ ಮಹರ್ಷಿಗಳ ಚರಣದಲಿ | ಧನ್ಯರಾದೆವು ಗುರುದೇವ ನಿಮ್ಮ ದರ್ಶನದಿಂದಲಿ

ಶ್ರೀವಿಷ್ಣುವಿನ ಡೋಲೋತ್ಸವ

ಉಯ್ಯಾಲೆಯಲ್ಲಿ ಕುಳಿತ ಶ್ರೀವಿಷ್ಣುರೂಪದಲ್ಲಿನ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಿಗೆ ವಂದಿಸುತ್ತಿರುವ ಅವರ ಬಲಬದಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಎಡಬಡೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಪಾಪಮುಕ್ತಗೊಳಿಸುವ ಡೋಲೋತ್ಸವ

ಶ್ರೀವಿಷ್ಣುವನ್ನು ಜೋಕಾಲಿಯಲ್ಲಿ ಕೂರಿಸಿ ಅವನನ್ನು ಸ್ತುತಿಸುತ್ತಾ ನಿಧಾನವಾಗಿ ಜೋಕಾಲಿಯನ್ನು ತೂಗುವುದು, ಇದನ್ನು ಡೋಲೋತ್ಸವ (ಉಯ್ಯಾಲೆ ಉತ್ಸವ) ಎನ್ನುತ್ತಾರೆ. ಪದ್ಮ ಪುರಾಣದಲ್ಲಿ ಭಗವಾನ ವಿಷ್ಣುವಿನ ಡೋಲೋತ್ಸವದ ಉಲ್ಲೇಖವಿದೆ. ‘ಜೋಕಾಲಿಯಲ್ಲಿ ತೂಗುವ ಶ್ರೀಕೃಷ್ಣನ ದರ್ಶನ ದಕ್ಷಿಣಾಭಿ ಮುಖವಾಗಿ ಪಡೆಯುವವನು ಪಾಪಭಾರದಿಂದ ಮುಕ್ತನಾಗುತ್ತಾನೆ, ಎಂದು ಹೇಳುತ್ತಾರೆ.

ಮಥುರಾ, ವೃಂದಾವನ, ಅಯೋಧ್ಯೆ, ದ್ವಾರಕಾ, ಡಾಕೋರ (ಗುಜರಾತ) ಇತ್ಯಾದಿ ಶ್ರೀಕೃಷ್ಣನ ದೇವಸ್ಥಾನಗಳಲ್ಲಿ ಹಾಗೂ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿಯೂ  ಸಹ ನಿಯಮಿತವಾಗಿ ಶ್ರೀಗಳ  ಡೋಲೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ

ವಿಷ್ಣುತತ್ತ್ವವನ್ನು ಜಾಗೃತ ಮಾಡುವ ಡೊಲೋತ್ಸವ

ಶ್ರೀವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಡೋಲೋತ್ಸವವನ್ನು ಆಚರಿಸುವ ಕುರಿತು ಮಹರ್ಷಿಗಳು, ‘ಸಾಧಕರು ಮಾಡಿದ ಸ್ತುತಿಯಿಂದಾಗಿ ಮತ್ತು ಗುರುಗಳ ಉಯ್ಯಾಲೆಯನ್ನು ಭಾವಪೂರ್ಣವಾಗಿ ತೂಗಿದರೆ ಶ್ರೀಮನ್ನಾರಾಯಣ ಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಇವರಲ್ಲಿನ ಶ್ರೀವಿಷ್ಣುತತ್ತ್ವವು ಕ್ರಮೇಣ ಜಾಗೃತವಾಗಿ ವಿಶ್ವದಲ್ಲಿನ ಎಲ್ಲ ಸಾಧಕರಿಗೆ ಅವರ ಚೈತನ್ಯದ ಲಾಭವಾಗುತ್ತದೆ’, ಎಂದು ಹೇಳಿದರು.

ಪ್ರತ್ಯಕ್ಷದಲ್ಲಿಯೂ ಉಯ್ಯಾಲೆಯ ಮೇಲೆ ಕುಳಿತ ಪರಾತ್ಪರ ಗುರು ದೇವರ ದರ್ಶನದಿಂದ ಸಾಧಕರಿಗೆ ಸುಂದರ ಅನುಭೂತಿಗಳು ಬಂದವು ಮತ್ತು ಶ್ರೀವಿಷ್ಣುವಿನ ಕುರಿತಾದ ಭಕ್ತಿಭಾವವು ಜಾಗೃತವಾಯಿತು.

ಭಕ್ತವತ್ಸಲ ಶ್ರೀಕೃಷ್ಣರೂಪ

ಹೇ ಶ್ರೀಕೃಷ್ಣಾ, ಅರ್ಜುನನಂತೆ ನಮ್ಮ ಭಕ್ತಿಯೂ ಹೆಚ್ಚಾಗಲಿ ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ !


ಜಗತ್ಪಾಲಕ ಶ್ರೀ ಮಹಾವಿಷ್ಣುರೂಪ

ಹೇ ಜಗತ್ಪಾಲಕ ಮಹಾವಿಷ್ಣುವೇ, ಕಾಲವು ಎಷ್ಟೇ ಕಠಿಣ ಬಂದರೂ ನಮ್ಮಲ್ಲಿ ಶ್ರೀಗುರುಗಳ ಮೇಲಿನ ಶ್ರದ್ಧೆಯು ದೃಢವಾಗಿರಲಿ


ಕೃಪಾಳು ಶ್ರೀ ಸತ್ಯನಾರಾಯಣರೂಪ

ಹೇ ಶ್ರೀ ಸತ್ಯನಾರಾಯಣ ತಮ್ಮ ಕೃಪಾದೃಷ್ಟಿಯು ನಮ್ಮ ಮೇಲೆ ಸದಾ ಇರಲಿ, ಇದೇ ಪ್ರಾರ್ಥನೆ !