‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಮನಃಶಾಂತಿ’ಯ ಕುರಿತಾದ ಸಂಶೋಧನೆಯನ್ನು ಪೊರ್ತುಗಾಲ್‌ನಲ್ಲಿನ ಅಂತರ್‌ರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡನೆ !

ನಾಮಜಪ ಮತ್ತು ಸ್ವಭಾವದೋಷ ನಿರ್ಮೂಲನೆ ಇವುಗಳಿಂದ ಆನಂದಪ್ರಾಪ್ತಿಯಾಗುತ್ತದೆ !

ಶ್ರೀ. ಮಿಲುಟಿನ್ ಪ್ಯನ್‌ಕ್ರ್ಯಟ್ಸ್

ಪ್ರತಿಯೊಬ್ಬ ವ್ಯಕ್ತಿಯು ಆನಂದ ಮತ್ತು ಮನಃಶಾಂತಿಯನ್ನು ಹುಡುಕುತ್ತಿರುತ್ತಾನೆ; ಆದರೆ ಜೀವನದ ವಿವಿಧ ಸಮಸ್ಯೆಗಳನ್ನು ಎದುರಿಸುವಾಗ ಆ ಅನಂದ ಮತ್ತು ಮನಃಶಾಂತಿಯನ್ನು ಕಳೆದುಕೊಳ್ಳುತ್ತಾನೆ. ಇಳಿವಯಸ್ಸಿನಲ್ಲಿ ಶಾರೀರಿಕ ವೇದನೆಗಳೊಂದಿಗೆ ವ್ಯಕ್ತಿಗೆ ವಿವಿಧ ರೀತಿಯ ಭಯದ ಪ್ರಸಂಗಗಳನ್ನೂ ಎದುರಿಸಬೇಕಾಗುತ್ತದೆ. ನಾಮಜಪ ಮತ್ತು ಸ್ವಭಾವದೋಷ-ಅಹಂನ ನಿರ್ಮೂಲನೆ ಇವುಗಳನ್ನು ಅಂಗೀಕರಿಸಿದರೆ ಸರ್ವೋಚ್ಚ ಮತ್ತು ಶಾಶ್ವತವಾಗಿ ಉಳಿಯುವ ಸುಖ, ಅಂದರೆ ಆನಂದ, ಹಾಗೆಯೇ ಮನಃಶಾಂತಿ ಇವುಗಳ ಪ್ರಾಪ್ತಿಯಾಗುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಮಿಲುಟಿನ್ ಪ್ಯನ್‌ಕ್ರ್ಯಟ್ಸ್ ಇವರು ಹೇಳಿದರು. ಅವರು ಮೇ ೨೮ ರಂದು ಲಿಸ್ಬನ್, ಪೊರ್ತುಗಲ್‌ನಲ್ಲಿ ೭ ನೇ ಯುರೋಪಿಯನ್ ಕಾನ್ಫರನ್ಸ್ ಆನ್ ರಿಲಿಜನ್, ಸ್ಪಿರಿಚ್ಯುವ್ಯಾಲಿಟಿ ಆಂಡ್ ಹೆಲ್ಥ್ ಎಜಿಂಗ್, ಸ್ಪಿರಿಚ್ಯುವ್ಯಾಲಿಟಿ ಆಂಡ್ ಹೆಲ್ಥ್’ ಈ ಅಂತರ್‌ರಾಷ್ಟ್ರೀಯ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ತಿನ ಆಯೋಜನೆಯನ್ನು ‘ಯುರೋಪಿಯನ್ ಇನಿಶಿಯೆಟಿವ್ ಆನ್ ರಿಲಿಜನ್, ಸ್ಪಿರಿಚ್ಯುವ್ಯಾಲಿಟಿ ಆಂಡ್ ಹೆಲ್ಥ್ ಆಂಡ್ ದಿ ಕ್ಯಾಥೊಲಿಕ್ ಯುನಿವರ್ಸಿಟಿ ಆಫ್ ಪೊರ್ತುಗಲ್’ ವತಿಯಿಂದ ಮಾಡಲಾಗಿತ್ತು. ಶ್ರೀ. ಮಿಲೂಟಿನ್ ಪ್ಯನ್‌ಕ್ರ್ಯಟ್ಸ್ ಇವರು ಈ ಪರಿಷತ್ತಿನಲ್ಲಿ ‘ಇಳಿವಯಸ್ಸಿನ ವ್ಯಕ್ತಿಗಳಿಗೆ ಮನಃಶಾಂತಿಯನ್ನು ಪ್ರಾಪ್ತಮಾಡಿಕೊಳ್ಳಲು ಸಹಾಯ’, ಈ ಸಂಶೋಧನಾ ಪ್ರಬಂಧವನ್ನು ಪ್ರಸ್ತುತಪಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು, ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ.

ಇದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮೂಲಕ ವೈಜ್ಞಾನಿಕ ಪರಿಷತ್ತುಗಳಲ್ಲಿ ಮಂಡಿಸಲಾದ ೭೧ ನೇ ಸಂಶೋಧನಾ ನಿಬಂಧವಾಗಿತ್ತು. ಈ ಮೊದಲು ೧೫ ರಾಷ್ಟ್ರೀಯ ಮತ್ತು ೫೪ ಅಂತರ್‌ರಾಷ್ಟ್ರೀಯ ವೈಜ್ಞಾನಿಕ ಪರಿಷತ್ತುಗಳಲ್ಲಿ ವಿವಿಧ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗಿದೆ. ಇವುಗಳ ಪೈಕಿ ೪ ಅಂತರ್‌ರಾಷ್ಟ್ರೀಯ ಪರಿಷತ್ತುಗಳಲ್ಲಿನ ಸಂಶೋಧನೆಯ ಪ್ರಬಂಧಗಳಿಗೆ ಸರ್ವೋತ್ಕೃಷ್ಟ ಸಂಶೋಧನಾ ಪ್ರಬಂಧ ಪ್ರಶಸ್ತಿಯು ಪ್ರಾಪ್ತವಾಗಿದೆ.

ಶ್ರೀ. ಮಿಲೂಟಿನ್ ಪ್ಯನ್‌ಕ್ರ್ಯಟ್ಸ್ ಇವರು ಮಾತನಾಡುತ್ತಾ, ‘ಜೀವನದಲ್ಲಿನ ಸಮಸ್ಯೆಗಳಿಂದಾಗಿ ನಾವು ದುಃಖಿಯಾಗುತ್ತೇವೆ. ಅದರಿಂದ ನಮ್ಮ ಮನಃಶಾಂತಿ ಮತ್ತು ಸುಖ ಇವುಗಳ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ನಮ್ಮ ಜೀವನದಲ್ಲಿನ ಸಮಸ್ಯೆಗಳಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಹೀಗೆ ೩ ಮೂಲಭೂತ ಕಾರಣಗಳಿರುತ್ತವೆ. ಜೀವನದಲ್ಲಿನ ಶೇ. ೫೦ ಕ್ಕಿಂತ ಹೆಚ್ಚು ಸಮಸ್ಯೆಗಳು ಆಧ್ಯಾತ್ಮಿಕ ಕಾರಣಗಳಿಂದ ಬರುತ್ತವೆ; ಆದರೆ ಅವು ಶಾರೀರಿಕ ಅಥವಾ ಮಾನಸಿಕ ಸಮಸ್ಯೆಗಳ ಸ್ವರೂಪದಲ್ಲಿ ಪ್ರಕಟವಾಗಬಹುದು. ಈ ಅಂಕಿಅಂಶಗಳು ಆಧ್ಯಾತ್ಮಿಕ ಸಂಶೋಧನೆಯಿಂದ ಪ್ರಾಪ್ತವಾಗಿವೆ. ಪ್ರಾರಬ್ಧ, ಪೂರ್ವಜರ ಅತೃಪ್ತ ಲಿಂಗದೇಹ ಮತ್ತು ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿ, ಇವು ೩ ಪ್ರಮುಖ ಆಧ್ಯಾತ್ಮಿಕ ಕಾರಣಗಳಾಗಿವೆ. ಸಮಸ್ಯೆಗಳ ನಿವಾರಣೆಗಾಗಿ ಸಮಸ್ಯೆಗಳ ಕಾರಣಗಳ ಸ್ತರದಲ್ಲಿ ಪರಿಹಾರವನ್ನು ಕಂಡು ಹಿಡಿಯಬೇಕಾಗುತ್ತದೆ. ಯಾವಾಗ ಯಾವುದಾದರೊಂದು ಸಮಸ್ಯೆಯ ಮೂಲಭೂತ ಕಾರಣ ಆಧ್ಯಾತ್ಮಿಕವಿದ್ದಾಗ, ಪರಿಹಾರೋಪಾಯವೂ ಆಧ್ಯಾತ್ಮಿಕವೇ ಇರುವುದು ಆವಶ್ಯಕವಾಗಿದೆ. ವಿಶೇಷವಾಗಿ ಯಾವಾಗ ಈ ಸಮಸ್ಯೆಗಳ ಮೂಲಭೂತಕಾರಣ ಆಧ್ಯಾತ್ಮಿಕವಿದ್ದಾಗ, ಆಧ್ಯಾತ್ಮಿಕ ಉಪಾಯಗಳಿಂದ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಲ್ಲಿಯೂ ಸಹಾಯವಾಗುತ್ತದೆ’, ಎಂದು ಹೇಳಿದರು.

ಈ ಸಮಯದಲ್ಲಿ ಶ್ರೀ. ಮಿಲೂಟಿನ್ ಪ್ಯನ್‌ಕ್ರ್ಯಟ್ಸ್ ಇವರು ಆನಂದಪ್ರಾಪ್ತಿ ಮತ್ತು ಮನಃಶಾಂತಿಯನ್ನು ಪಡೆಯಲು ಮೂರು ಮುಖ್ಯ ಪ್ರಯತ್ನಗಳ ಬಗ್ಗೆ ಹೇಳಿದರು.

೧. ನಾಮಜಪ: ಪ್ರತಿಯೊಬ್ಬ ವ್ಯಕ್ತಿಯು ತಮ್ಮ ತಮ್ಮ ಧರ್ಮಕ್ಕನುಸಾರ ನಾಮಜಪವನ್ನು ಮಾಡಬಹುದು. ಇಂದಿನ ಕಾಲಕ್ಕಾಗಿ ‘ಓಂ ನಮೋ ಭಗವತೇ ವಾಸುದೇವಾಯ |’, ಇದು ಒಂದು ಅತ್ಯಂತ ಉಪಯುಕ್ತವಾದ ನಾಮಜಪವಾಗಿದೆ.

೨. ಸಂರಕ್ಷಕ ನಾಮಜಪ : ‘ಶ್ರೀ ಗುರುದೇವ ದತ್ತ’ ಈ ಜಪವು ಪೂರ್ವಜರ ತೊಂದರೆಗಳಿಂದ ರಕ್ಷಣೆ ಮಾಡುತ್ತದೆ. ಇಳಿವಯಸ್ಸಿನ ವ್ಯಕ್ತಿಗಳಿಗೆ ಪ್ರತ್ಯಕ್ಷ ಜಪ ಮಾಡುವುದು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಅವರ ಬಳಿ ಆಡಿಯೋ ಹಚ್ಚಿ ಇಡಬಹುದು.

೩. ಸ್ವಭಾವದೋಷ ನಿರ್ಮೂಲನೆಯ ಪ್ರಕ್ರಿಯೆ : ಈ ಮೂಲಕ ಮನಸ್ಸಿನಲ್ಲಿನ ಸ್ವಭಾವದೋಷಗಳ ಸಂಸ್ಕಾರಗಳು ನಾಶವಾಗುತ್ತವೆ.

ಇದರಂತೆ ವ್ಯಕ್ತಿಯು ಪ್ರಾಮಾಣಿಕವಾಗಿ ಸಾಧನೆಯ ಪ್ರಯತ್ನವನ್ನು ಮಾಡಿದರೆ ಅವನಿಗೆ ಬಹಳಷ್ಟು ಲಾಭವಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಮನಃಶಾಂತಿಯು ಲಭಿಸುತ್ತದೆ. ಇಳಿವಯಸ್ಸಿನಲ್ಲಿ ಮನಃಶಾಂತಿ ಲಭಿಸಬೇಕೆಂದರೆ ಜೀವನದಲ್ಲಿ ಆದಷ್ಟು ಬೇಗನೆ ಸಾಧನೆಯನ್ನು ಆರಂಭಿಸಬೇಕು, ಎಂದು ಸಹ ಶ್ರೀ. ಮಿಲೂಟಿನ್ ಪ್ಯನ್‌ಕ್ರ್ಯಟ್ಸ್ ಇವರು ಈ ಸಮಯದಲ್ಲಿ ಹೇಳಿದರು.