‘೩ ಕೋಟಿ ೩೦ ಲಕ್ಷ ದೇವತೆಗಳು; ಆದರೆ ಆಮ್ಲಜನಕವನ್ನು ಉತ್ಪಾದಿಸುವ ಕ್ಷಮತೆಯಿಲ್ಲ ! (ಅಂತೆ)

ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ಮುದ್ರಿಸಿದ ಶಾರ್ಲಿ ಹೆಬ್ದೋ ನಿಯತಕಾಲಿಕದಿಂದ ಆಮ್ಲಜನಕದ ಕೊರತೆಯ ವಿಷಯದಲ್ಲಿ ಹಿಂದೂ ದೇವತೆಗಳ ಅವಮಾನ !

* ಹಿಂದೂ ದೇವತೆಗಳ ಸಂಖ್ಯೆಯೇ ಸರಿಯಾಗಿ ತಿಳಿದಿಲ್ಲದಿದ್ದರೂ ಅವರು ದೇವರನ್ನು ಟೀಕಿಸುತ್ತಾರೆ, ಇದರಿಂದ ಅವರು ಎಷ್ಟು ಅಜ್ಞಾನಿಗಳು ಎಂಬುದು ಸ್ಪಷ್ಟವಾಗುತ್ತದೆ !

* ಸೃಷ್ಟಿಯನ್ನು ಭಗವಂತನೇ ಉತ್ಪತ್ತಿ ಮಾಡಿರುವುದರಿಂದ ಇದರಲ್ಲಿ ಆಮ್ಲಜನಕವೂ ಸಹ ಇದೆ; ಆದರೆ ಪ್ರಸ್ತುತ ಪರಿಸ್ಥಿತಿಯು ದೇವರಿಂದ ಅಲ್ಲ, ಬದಲಾಗಿ ಆಡಳಿತ ಮತ್ತು ಇತರ ಸಂಸ್ಥೆಗಳ ತಪ್ಪುಗಳಿಂದ ಉದ್ಭವಿಸಿದೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲ ಜನರು ಸಾಧನೆಯನ್ನು ಮಾಡುವವರಾಗಿದ್ದಲ್ಲಿ, ಕೊರೊನಾದಂತಹ ಬಿಕ್ಕಟ್ಟು ಬರುತ್ತಿರಲಿಲ್ಲ ಅಥವಾ ಬರುತ್ತಿದ್ದರೆ, ಅದು ಅಷ್ಟೊಂದು ಭಯಾನಕವಾಗುತ್ತಿರಲಿಲ್ಲ, ಇದು ಅಷ್ಟೇ ಸತ್ಯವಾಗಿದೆ !

* ‘ಆಕಾಶದಲ್ಲಿರುವ ತಂದೆಯು ನಿಮಗೆ ಸಹಾಯ ಮಾಡುತ್ತಾರೆ, ಎಂದು ಚರ್ಚ್‌ಗಳಲ್ಲಿ ಹೇಳಲಾಗುತ್ತದೆ, ‘ಶಾರ್ಲಿ ಹೆಬ್ದೋ ಅವರು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಏಕೆ ಪ್ರಶ್ನೆಗಳನ್ನು ಕೇಳುವುದಿಲ್ಲ ?, ಎಂದು ಯಾರಾದರೂ ಪ್ರಶ್ನೆಯನ್ನು ಎತ್ತಿದರೆ, ಶಾರ್ಲಿ ಹೆಬ್ದೋ ಏನೆಂದು ಉತ್ತರಿಸುವುದು ?  

ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಜಿಹಾದಿ ಉಗ್ರರಿಂದ ಹಲ್ಲೆಗೊಳಗಾದ ಫ್ರಾನ್ಸ್‌ನ ‘ಶಾರ್ಲಿ ಹೆಬ್ದೊ ನಿಯತಕಾಲಿಕೆಯು ಈಗ ಭಾರತದಲ್ಲಿ ಆಮ್ಲಜನಕದ ಕೊರತೆಯಾಗಿ ಕೊರೊನಾ ಪೀಡಿತರು ಸಾವಿಗೀಡಾಗಲು ಹಿಂದೂ ದೇವತೆಗಳು ಕಾರಣರು ಎಂದು ತೋರಿಸಲು ಪ್ರಯತ್ನಿಸಿದೆ. ಈ ನಿಯತಕಾಲಿಕೆಯ ಸಂಚಿಕೆಯಲ್ಲಿ, ಭಾರತದಲ್ಲಿ ಆಮ್ಲಜನಕದ ಕೊರತೆ ಮತ್ತು ಹೆಚ್ಚುತ್ತಿರುವ ಕೊರೊನಾದ ಸಾಂಕ್ರಾಮಿಕತೆಯ ಬಗ್ಗೆ ಮುದ್ರಿಸಿದ ಚಿತ್ರದಲ್ಲಿ ಅನೇಕ ಭಾರತೀಯರು ನೆಲದ ಮೇಲೆ ಮಲಗಿದ್ದು ಆಮ್ಲಜನಕಕ್ಕಾಗಿ ಹೆಣಗಾಡುತ್ತಿದ್ದಾರೆ, ಎಂದು ತೋರಿಸುತ್ತದೆ. ಈ ಚಿತ್ರದ ಕೆಳಗೆ, ‘೩ ಕೋಟಿ ೩೦ ಲಕ್ಷ ದೇವತೆಗಳು; ಆದರೆ ಆಮ್ಲಜನಕ ಉತ್ಪಾದಿಸಲು ಯಾರೂ ಸಕ್ಷಮರಿಲ್ಲ. ಎಂದು ಬರೆದಿದೆ.

. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ವಿರೋಧಿಸಲಾಗುತ್ತಿದೆ. ಶಾರ್ಲಿ ಹೆಬ್ದೊ ಅನ್ನು ಬಹಿಷ್ಕರಿಸಲು ಕರೆ ನೀಡಲಾಗುತ್ತಿದೆ. ಮತ್ತೊಂದೆಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕೆಲವು ಜನರು ಇದನ್ನು ಬೆಂಬಲಿಸುತ್ತಿದ್ದಾರೆ.

. ಓರ್ವ ಟ್ವಿಟ್ಟರ್ ಬಳಕೆದಾರನು ಶಾರ್ಲಿ ಹೆಬ್ದೊಗೆ ಪತ್ರ ಬರೆದಿದ್ದು, ನಮ್ಮಲ್ಲಿ ೩ ಕೋಟಿ ೩೦ ಲಕ್ಷ ಅಲ್ಲ, ೩೩ ಕೋಟಿ ದೇವತೆಗಳಿದ್ದಾರೆ. ಅವರು ನಮಗೆ ಎಂದಿಗೂ ಕಳೆದು ಹೋಗದಂತಹ ಜ್ಞಾನವನ್ನು ನಮಗೆ ಕೊಟ್ಟಿದ್ದಾನೆ. ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತು ಫ್ರಾನ್ಸ್‌ನ ನಾಗರಿಕರನ್ನೂ ಗೌರವಿಸುತ್ತೇವೆ. ಆದ್ದರಿಂದ ಚಿಂತಿಸಬೇಕಾಗಿಲ್ಲ. ನಿಮ್ಮ ಕಚೇರಿ ಅಥವಾ ನೌಕರರ ಮೇಲೆ ದಾಳಿ ಮಾಡುವುದಿಲ್ಲ ಎಂದು ಬರೆದಿದ್ದಾರೆ.

. ಇನ್ನೊಬ್ಬ ಬಳಕೆದಾರರು ೩೩ ಕೋಟಿ ದೇವತೆಗಳು ಪ್ರಕೃತಿಯಲ್ಲಿ ನೆಲೆಸಿದ್ದಾರೆ. ಭಾರತದೇಶ ದಂತಹ ದೇಶವು ನಿಮ್ಮಂತಹ ದೇಶಗಳನ್ನು ಅನುಕರಿಸಿ ಮರಗಳನ್ನು ಕಡಿಯುತ್ತಿವೆ. ನಾವು ಮರಗಳನ್ನು ದೇವತೆಗಳೆಂದು ನಂಬುತ್ತೇವೆ ಎಂದು ಬರೆದಿದ್ದಾರೆ.

. ಲೇಖಕ ದೇವದತ್ತ ಪಟ್ನಾಯಕ್ ಅವರು, ಶಾರ್ಲಿ ಹೆಬ್ದೊ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯ ಚಿತ್ರವನ್ನು ಬಿಡಿಸಿದಾಗ, ಅವರಿಗೆ ಹಿಂದುತ್ವನಿಷ್ಠ ರಿಂದ ಬೆಂಬಲ ಸಿಕ್ಕಿತ್ತು; ಆದರೆ ಈಗ ದೇವರ ವ್ಯಂಗ್ಯ ಚಿತ್ರದಿಂದ ನೋಯಿಸಲಾಗಿದೆ. ಈಗ ಅವರು ಏನು ಹೇಳಲಿದ್ದಾರೆ ? (ಶಾರ್ಲಿ ಹೆಬ್ದೊವು ದೇವತೆಗಳ ಅವಮಾನಿಸಿದ ಬಗ್ಗೆ ಬೇಸರ ಪಡುವುದಕ್ಕಿಂತ ಹಿಂದುತ್ವನಿಷ್ಠರಿಗೆ ನೋವಾಗಿರುವ ಬಗ್ಗೆ ಪಟ್ನಾಯಕ ಇವರಿಗೆ ಆನಂದವು ಆಗಿದೆ ಎಂಬುದು ಇದರಿಂದ ಕಂಡು ಬರುತ್ತದೆ. ಇಂತಹ ವರಿಂದಲೇ ಹಿಂದೂದ್ವೇಷವು ಹರಡುತ್ತಿದೆ, ಎಂಬುದನ್ನು ಗಮನದಲ್ಲಿಡಿ  ! – ಸಂಪಾದಕರು) ನಾವು ಯಾರ ರುಂಡವನ್ನು ಕತ್ತರಿಸುವುದಿಲ್ಲ; ಆದರೆ ಜನರ  ಸಂಕಟ ಮತ್ತು ನಾಯಕರ ನಿಷ್ಕ್ರಿಯತೆಯನ್ನು ನೋಡಲು ಆಗುವುದಿಲ್ಲ ಎಂದು ಹೇಳಿದರು.