ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಹಾಗಿದ್ದರೆ ಮಾತ್ರ ಹಿಂದೂಗಳಲ್ಲಿ ಅಭಿಮಾನ ಜಾಗೃತವಾಗಬಹುದು

ಭಾರತವು ೯೦೦ ವರ್ಷಗಳ ಕಾಲ ಪಾರತಂತ್ರ್ಯದಲ್ಲಿ ಇದ್ದುದರಿಂದ ಹಿಂದೂಗಳ ಎಷ್ಟೋ ಪೀಳಿಗೆಯು ಗುಲಾಮಗಿರಿಯಲ್ಲಿ ಜೀವಿಸಿತು ಈಗ ಮನಸ್ಸಿನ ಗುಲಾಮಗಿರಿಯ ವಿಷ ನಾಶಗೊಳಿಸಲು ಹಿಂದೂ ರಾಷ್ಟ್ರದ (ಈಶ್ವರೀ ರಾಜ್ಯದ) ಸ್ಥಾಪನೆ ಆಗಬೇಕೆಂದು ಹಗಲಿರುಳು ಪ್ರಯತ್ನಿಸುವುದು ಆವಶ್ಯಕವಾಗಿದೆ ಹಾಗೆ ಮಾಡಿದರೆ ೪-೫ ಪೀಳಿಗೆಯಲ್ಲಿ ರಾಷ್ಟ್ರ ಹಾಗೂ ಧರ್ಮದ ವಿಷಯದಲ್ಲಿ ಹಿಂದೂಗಳಲ್ಲಿ ಅಭಿಮಾನ ಜಾಗೃತವಾಗಬಹುದು.

ಅಹಂ ಇಟ್ಟುಕೊಳ್ಳದೇ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಯಾಗಿ

ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡುವಾಗ ನಾನು ಮಾಡುತ್ತೇನೆ, ಎಂಬ ಅಹಂ ಇಟ್ಟುಕೊಳ್ಳುವ ಆವಶ್ಯಕತೆಯಿಲ್ಲ. ಏಕೆಂದರೆ ಕಾಲಮಹಿಮೆಗನುಸಾರ ಆ ಕಾರ್ಯವು ಖಂಡಿತವಾಗಿ ಆಗಲಿದೆ. ಆದರೆ ಈ ಕಾರ್ಯದಲ್ಲಿ ಯಾರು ನಿಃಸ್ವಾರ್ಥವಾಗಿ ತನು-ಮನ-ಧನಗಳ ತ್ಯಾಗ ಮಾಡಿ ಸಹಭಾಗಿ ಆಗುವರೋ, ಅವರ ಸಾಧನೆಯಾಗಿ ಅವರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು.

ವಿಜ್ಞಾನದ ಅಹಂಕಾರವಿರುವರೇ, ಅಧ್ಯಾತ್ಮದ ತುಲನೆಯಲ್ಲಿ ವಿಜ್ಞಾನವು ಎಷ್ಟು ತುಚ್ಛವಿದೆ ಎಂಬುದನ್ನು ತಿಳಿದುಕೊಳ್ಳಿ

ಭೌತವಿಜ್ಞಾನ, ರಸಾಯನ ಶಾಸ್ತ್ರ, ಗಣಿತ, ಇತಿಹಾಸ, ಭೂಗೋಳ ಮುಂತಾದ ಎಲ್ಲ ವಿಷಯಗಳು ಆಯಾ ವಿಷಯದ ಮಾಹಿತಿಯನ್ನು ಹೇಳಬಲ್ಲದು. ಆದರೆ ಅಧ್ಯಾತ್ಮ ಈ ವಿಷಯವು ಜಗತ್ತಿನ ಎಲ್ಲ ವಿಷಯಗಳ ಮಾಹಿತಿಯನ್ನು ಹೇಳಬಲ್ಲದು.

ಜಗತ್ತಿನ ಬೇರೆಲ್ಲ ವಿಷಯಗಳ ಜ್ಞಾನವು ಅಹಂಕಾರವನ್ನು ಹೆಚ್ಚಿಸುತ್ತದೆ. ಆದರೆ ಅಧ್ಯಾತ್ಮ ಈ ಒಂದೇ ವಿಷಯವು ಅಹಂಕಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

– ಪರಾತ್ಪರ ಗುರು ಡಾ. ಆಠವಲೆ