ಹಿಂದೂ ಮಹಾಸಾಗರದಲ್ಲಿನ ವ್ಯಾಪಾರ ಮತ್ತು ಹಡಗುಗಳ ಸುರಕ್ಷತೆ !

೧. ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೪ ವರ್ಷಗಳಾದರೂ ವ್ಯಾಪಾರಕ್ಕೆ ವಿದೇಶಿ ಹಡಗುಗಳನ್ನು ಅವಲಂಬಿಸಿರುವುದು ಎಲ್ಲ ಪಕ್ಷಗಳ ರಾಜಕಾರಣಿಗಳಿಗೆ ನಾಚಿಕೆಯ ವಿಷಯವಾಗಿದೆ !

‘ಭಾರತ ಒಂದು ದೊಡ್ಡ ದೇಶವಾಗಿದೆ. ಭಾರತದ ಮುರೂ ದಿಕ್ಕುಗಳಲ್ಲಿ ಸಮುದ್ರವಿದ್ದು, ಹಿಂದೂ ಮಹಾಸಾಗರವು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಭಾರತದ ಶೇ. ೯೫ ರಷ್ಟು ವ್ಯಾಪಾರವು ಸಮುದ್ರದ ಮಾರ್ಗದಿಂದ ನಡೆಯುತ್ತದೆ. ಭಾರತದ ಶೇ. ೧೦ ರಿಂದ ೧೨ ರಷ್ಟು ವ್ಯಾಪಾರವು ಸ್ವಂತದ, ಅಂದರೆ ಭಾರತೀಯ ಹಡಗುಗಳ ಮುಖಾಂತರ ಹಾಗೂ ಶೇ. ೯೦ ರಷ್ಟು ವ್ಯಾಪಾರ ಇತರ ದೇಶಗಳ ಹಡಗುಗಳ ಮೂಲಕ ನಡೆಯುತ್ತದೆ. ಅದರಲ್ಲಿ ಚೀನಿ ಹಡಗುಗಳೂ ಸೇರಿವೆ. ಈ ರೀತಿ ಭಾರತವು ವ್ಯಾಪಾರಕ್ಕೆ ವಿದೇಶಿ ಹಡಗುಗಳನ್ನು ಅವಲಂಬಿಸಿರುವುದು, ಸರಿಯಲ್ಲ. ಈ ಕ್ಷೇತ್ರದಲ್ಲಿ ಭಾರತವು ಸ್ವಾವಲಂಬಿಯಾಗುವುದು ಆವಶ್ಯಕವಾಗಿದೆ. ಅದಕ್ಕಾಗಿ ಭಾರತವು ಹಡಗು ನಿರ್ಮಾಣ ಉದ್ಯೋಗವನ್ನು ಅಭಿವೃದ್ಧಿ ಪಡಿಸುವುದು ಆವಶ್ಯಕವಾಗಿದೆ.

ಭಾರತದ ಬಳಿ ಸ್ವಂತದ ೧ ಸಾವಿರ ೪೦೦ ಹಡಗುಗಳಿವೆ. ಈ ಹಡಗುಗಳು ೧೭ ರಿಂದ ೧೮ ಮಿಲಿಯನ್ ಟನ್‌ಗಳಷ್ಟು ಸಾಮಗ್ರಿಗಳನ್ನು ಸಾಗಿಸಬಲ್ಲವು. ಆದರೆ ಭಾರತದ ವ್ಯಾಪಾರವು ಅದಕ್ಕಿಂತ ೧೦ ಪಟ್ಟುಗಳಷ್ಟು ಹೆಚ್ಚಿದೆ. ಆದುದರಿಂದ ಭಾರತಕ್ಕೆ ಈ ವ್ಯಾಪಾರವನ್ನು ವಿದೇಶಿ ಹಡಗುಗಳ ಮೂಲಕ ಮಾಡಬೇಕಾಗುತ್ತದೆ. ಈ ೧ ಸಾವಿರ ೪೦೦ ಹಡಗುಗಳಲ್ಲಿ ೧ ಸಾವಿರಕ್ಕಿಂತ ಹೆಚ್ಚಿನ ಹಡಗುಗಳು ಗುಜರಾತ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕಡಲತೀರದಲ್ಲಿರುವ ರಾಜ್ಯಗಳ ವ್ಯಾಪಾರದಲ್ಲಿ ತೊಡಗಿರುತ್ತವೆ. ಕೇಂದ್ರ ಸರಕಾರವು ಹಡಗುಗಳನ್ನು ಅಭಿವೃದ್ಧಿಗಾಗಿ ಸಾಗರಮಾಲಾ ಆಯೋಜನೆ ಹಮ್ಮಿಕೊಂಡಿದೆ. ಇದು ಯಶಸ್ವಿಯಾಗುತ್ತಿದ್ದರೂ, ಯೋಜನೆಯ ವೇಗ ಹೆಚ್ಚಿಸುವುದು ಆವಶ್ಯಕವಾಗಿದೆ.

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೨. ಅಪಾಯವನ್ನು ಸ್ವೀಕರಿಸಿ ದೇಶದ ವ್ಯಾಪಾರದಲ್ಲಿ ಕೈಜೋಡಿಸುವ ಭಾರತೀಯ ಮರ್ಚಂಟ ನೇವಿ !

ಸಮುದ್ರ ಮಾರ್ಗದಿಂದ ದೇಶದಲ್ಲಿ ಅಥವಾ ವಿದೇಶಗಳಲ್ಲಿ ನಡೆಯುವ ಸಾಮಗ್ರಿಗಳ ಸಾಗಾಟ ಮತ್ತು ಪ್ರವಾಸಿ ಹಡಗುಗಳು ‘ಮರ್ಚಂಟ್ ನೇವಿಯ (ವ್ಯಾಪಾರಿ ನಾವಿಕ ದಳ) ಅಧಿಕಾರವ್ಯಾಪ್ತಿಯಲ್ಲಿ ಬರುತ್ತವೆ. ಭಾರತದಲ್ಲಿ ೧ ಲಕ್ಷಕ್ಕಿಂತ ಹೆಚ್ಚು ಜನರು ಮರ್ಚಂಟ್ ನೇವಿಯಲ್ಲಿ ಕೆಲಸವನ್ನು ಮಾಡುತ್ತಾರೆ. ಇದರಲ್ಲಿ ಅರ್ಧದಷ್ಟು ಅಧಿಕಾರಿಗಳಿದ್ದು, ಇನ್ನುಳಿದವರು ಹಡಗುಗಳಲ್ಲಿನ ಕಾರ್ಮಿಕರಾಗಿದ್ದಾರೆ. ಅನೇಕ ಭಾರತೀಯರು ವಿದೇಶಗಳಲ್ಲಿನ ಮರ್ಚಂಟ್ ನೇವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಬಹಳಷ್ಟು ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ. ಕೆಲವರನ್ನು ಕಡಲ್ಗಳ್ಳರು ಬಂಧಿಸುತ್ತಾರೆ. ಇಂದಿಗೂ ಭಾರತದ ಕೆಲವು ಕಾರ್ಮಿಕರು ಅಥವಾ ಮರ್ಚಂಟ್ ನೇವಿಯ ನೌಕರರು ಸೋಮಾಲಿಯಾದ ಕಡಲ್ಗಳ್ಳರ ವಶದಲ್ಲಿದ್ದಾರೆ. ಪ್ರತಿವರ್ಷ ೫೦ ರಿಂದ ೬೦ ಕಾರ್ಮಿಕರು ವಿವಿಧ ಕಾರಣಗಳಿಂದ ಮರಣ ಹೊಂದುತ್ತಾರೆ. ಇನ್ನು ಕೆಲವರು ಗಂಭೀರವಾಗಿ ಗಾಯಗೊಳ್ಳುತ್ತಾರೆ. ‘ಸೆಕ್ಯುರಿಟಿ ಆಫ್ ಸಿ  ಫೈಯರಿಂಗ್ ಕಮ್ಯುನಿಟಿ ಸಂಸ್ಥೆಯು ಗಾಯಾಳು ಅಥವಾ ಮರಣ ಹೊಂದಿದ ಕಾರ್ಮಿಕರ ಕುಟುಂಬದವರ ಕಾಳಜಿ ವಹಿಸುತ್ತದೆ. ಈ ಕ್ಷೇತ್ರದಲ್ಲಿ ಸುರಕ್ಷಾ ದಳ, ಹಡಗು ನಿರ್ಮಾಣ ಮಾಡುವವರು, ಬಂದರನಲ್ಲಿ ಕೆಲಸ ಮಾಡುವವರು, ಮೀನುಗಾರರು, ಸಮುದ್ರಶಾಸ್ತ್ರಜ್ಞರು, ಸಮೀಕ್ಷೆಯನ್ನು ಮಾಡುವವರು, ಸಾಗರ ಮಾರ್ಗದಿಂದ ವ್ಯಾಪಾರ ಮಾಡುವವರು ಇತ್ಯಾದಿ ಅನೇಕ ಜನರು ಕಾರ್ಯನಿರತರಾಗಿದ್ದಾರೆ. ಇವರು ಕೆಲಸವನ್ನು ಮಾಡುವುದರಿಂದ ದೇಶದ ಅರ್ಥವ್ಯವಸ್ಥೆ ಸರಿಯಾಗಿ ನಡೆದಿದೆ. ಸದ್ಯ ಕೊರೊನಾ, ಅಂದರೆ ಚೀನಿ ವಿಷಾಣುವಿನಿಂದ ಸಮುದ್ರದ ವ್ಯಾಪಾರದ ಮೇಲೆಯೂ ಪರಿಣಾಮವಾಗಿದೆ.

೩. ಭಾರತೀಯ ನೌಕಾದಳದ ‘ಐಮ್ಯಾಕ್ ಸಂಸ್ಥೆ

ದೆಹಲಿಯ ಗುಡಗಾಂವನಲ್ಲಿ ಭಾರತೀಯ ನೌಕಾದಳದ ‘ಐಮ್ಯಾಕ್ (ಇನ್‌ಫಾರ್ಮೆಶನ್ ಮ್ಯಾನೇಂಜಮೆಂಟ್ ಎಂಡ್ ಎನಾಲಿಸಿಸ್ ಸೆಂಟರ್) ಈ ಕೇಂದ್ರವಿದೆ. ಈ ಸಂಸ್ಥೆಯು ೨೦೧೪ ನೇ ಇಸವಿಯಲ್ಲಿ ಪ್ರಾರಂಭವಾಯಿತು. ೨೦೧೮ ಮೊದಲು ಈ ‘ಐಮ್ಯಾಕ್ ಸಂಸ್ಥೆಯ ಒಂದು ಹೊಸ ವಿಭಾಗ ‘ಇನ್‌ಫಾರ್ಮೇಶನ್ ಫ್ಯೂಜನ್ ಸೆಂಟರ್ ಪ್ರಾರಂಭವಾಗಿದೆ. ಈ ವಿಭಾಗವು ಭಾರತೀಯ ನೌಕಾದಳದ ಹಡಗುಗಳನ್ನು ಹೊರತುಪಡಿಸಿ, ಹಿಂದೂ ಮಹಾಸಾಗರದಲ್ಲಿನ ಎಲ್ಲ ಹಡಗುಗಳ ಮೇಲೆ ನಿಗಾ ಇಡುವ ಕೆಲಸವನ್ನು ಮಾಡುತ್ತದೆ. ಸಮುದ್ರದಲ್ಲಿ ಸಂಚರಿಸುವ ಹಡಗುಗಳ ಮೇಲೆ ನಿಗಾ ಇಡಲು ಇವುಗಳ ಮೇಲೆ ‘ಜಿ.ಪಿ.ಎಸ್ ಅಥವಾ ‘ಎ.ಐ.ಎಸ್ ತಂತ್ರಾಶವನ್ನು (ಸಿಸ್ಟಮ್) ಅಳವಡಿಸಲಾಗಿದೆ. ಈ ಹಡಗುಗಳಿಗೆ ಇಲೆಕ್ಟ್ರಾನಿಕ್ ಗುರುತುಗಳಿವೆ, ಈ ಮೂಲಕ ಹಡಗುಗಳ ಮೇಲೆ ನಿಗಾ ಇಡಲಾಗುತ್ತದೆ.

೪. ಸಮುದ್ರದಲ್ಲಿ  ಕಡಲ್ಗಳ್ಳರಿಂದ ರಕ್ಷಣೆ ಪಡೆಯಲು ಜಗತ್ತಿನ ಎಲ್ಲ ದೇಶಗಳು  ಸಮುದ್ರದಲ್ಲಿ ಗಸ್ತು ಹಾಕುವುದು

ಅ. ಭಾರತದಲ್ಲಿ ‘ನ್ಯಾಶನಲ್ ಮ್ಯಾರಿಟಾಯಿಮ್ ಡೊಮೆನ ಅವೇರನೆಸ್ ಸೆಂಟರ್ ಇದೆ. ‘ಜಿ.ಓ.ಸಿ (ಜಾಯಿಂಟ್ ಆಪರೇಶನ್ ಸೆಂಟರ್)ಯು ಅದರ ಉಪಕೇಂದ್ರವಾಗಿದೆ. ಅದು ಮುಂಬಯಿ, ಕೊಚ್ಚಿ, ವಿಶಾಖಪಟ್ಟಣಮ್ ಮತ್ತು ಅಂಡಮಾನ ನಿಕೋಬಾರನಲ್ಲಿ ಕಾರ್ಯನಿರತವಾಗಿದೆ. ಈ ಕೇಂದ್ರದ ಮೂಲಕ ಅಲ್ಲಿಯ ಹಡಗುಗಳ ಮೇಲೆ ನಿಗಾ ಇಡಲಾಗುತ್ತದೆ. ಈ ಕೇಂದ್ರವು ಇತ್ತೀಚೆಗೆ ೨೦೨೦ ನೇ ಇಸವಿಯ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಅದಕ್ಕನುಸಾರ ೨೦೨೦ ರಲ್ಲಿ ಕಡಲ್ಗಳ್ಳರಿಂದ ಹಡಗುಗಳ ಮೇಲೆ ೨೬೭ ಆಕ್ರಮಣಗಳಾದವು. ಈ ಕಡಲ್ಗಳ್ಳರು ಆಫ್ರಿಕಾ ದೇಶದ ಪೂರ್ವದ ಕಡೆಯ ಸೊಮಾಲಿಯನ್ ಕಡಲುತೀರದಲ್ಲಿ ಅಥವಾ ಗಲ್ಫ್ ಆಫ್ ಗಿನಿಯಲ್ಲಿ ಇರುತ್ತಾರೆ. ಇದರಿಂದ ಗಲ್ಫ ಆಫ್ ಗಿನಿಯ ಭಾಗದಲ್ಲಿ ಹಡಗುಗಳನ್ನು ನಡೆಸುವುದು ಅತ್ಯಂತ ಅಪಾಯಕಾರಿಯಾಗಿದೆ. ೨೬೭ ಪ್ರಕರಣಗಳಲ್ಲಿನ ೧೮೮ ಪ್ರಕರಣಗಳನ್ನು ತಡೆಯಲು ಸಾಧ್ಯವಾಯಿತು; ಆದರೆ ೭೯ ಪ್ರಕರಣಗಳಲ್ಲಿ ಸಾಧ್ಯವಾಗಲಿಲ್ಲ.

ಆ. ಯಾವಾಗ ವ್ಯಾಪಾರಿ ಹಡಗುಗಳ ಮೇಲೆ ಚಿಕ್ಕ-ದೊಡ್ಡ ಆಕ್ರಮಣಗಳಾಗುತ್ತವೆಯೋ, ಆಗ ಆ ವಿಷಯದ ಮಾಹಿತಿಯನ್ನು ಮುಂದೆ ನೀಡುವುದನ್ನು ನಿರ್ಲಕ್ಷಿಸಲಾಗುತ್ತದೆ. ಹೀಗೆ ಮಾಡಿದರೆ ತನಿಖೆ ನಡೆಸಲು ಬಹಳ ಸಮಯ ತಗಲುತ್ತದೆ. ತದನಂತರವೂ ತನಿಖೆಯಿಂದ ಯಾವ ಪ್ರಯೋಜನ ಆಗಬಹುದೆಂದು ಹೇಳಲು ಬರುವುದಿಲ್ಲ. ಹಡಗು ನಿಗದಿ ಪಡಿಸಿದ ಸ್ಥಳವನ್ನು ತಲುಪಲು ವಿಳಂಬವಾಗುತ್ತದೆ. ಇದರಿಂದ ಅದರ ವೆಚ್ಚದಲ್ಲಿ ಹೆಚ್ಚಳವಾಗುತ್ತದೆ. ಈ ಕಡಲ್ಗಳ್ಳರಿಂದ ರಕ್ಷಣೆ ಪಡೆಯಲು ಜಗತ್ತಿನಲ್ಲಿನ ಎಲ್ಲ ಹಡಗುಗಳು ಇಲ್ಲಿ ಗಸ್ತು ಹಾಕುತ್ತವೆ.

. ೨೦೨೦ ರಲ್ಲಿ ಜಗತ್ತಿನಾದ್ಯಂತದ ೧೪೦ ಕಾರ್ಮಿಕರನ್ನು ಅಪಹರಿಸಲಾಯಿತು. ಹಡಗುಗಳ ಸಿಬ್ಬಂದಿಗಳ ಬಳಿ ಶಸ್ತ್ರಾಸ್ತ್ರಗಳು ಇರುವುದಿಲ್ಲ. ಅವರಲ್ಲಿ ಹೋರಾಡುವ ಕ್ಷಮತೆಯೂ ಕಡಿಮೆ ಯಿರುತ್ತದೆ. ೨೦೧೫ ರಲ್ಲಿ  ಅಪಹರಣಗೊಂಡ ಭಾರತದ ೧೦೦ ಕ್ಕಿಂತ ಅಧಿಕ ಕಾರ್ಮಿಕರಲ್ಲಿ ಅನೇಕ ಜನರು ಇನ್ನೂ ಕಡಲ್ಗಳ್ಳರ ವಶದಲ್ಲಿದ್ದಾರೆ. ಅವರಲ್ಲಿ ೧೮ ಜನ ಭಾರತೀಯರನ್ನು ಮರಳಿ ಕರೆತರುವಲ್ಲಿ ಯಶಸ್ಸು ದೊರಕಿದೆ. ಆದರೆ ಇನ್ನೂ ಅನೇಕ ಜನರು ಅವರ ಬಳಿಯಿದ್ದಾರೆ. ಈ ವಿಷಯದಲ್ಲಿ ನಿಯಮಿತವಾಗಿ ಮಾಹಿತಿ ಸಿಗುವುದಿಲ್ಲ. ಅವರನ್ನು  ಬಿಡಿಸಿಕೊಳ್ಳಲು ಭಾರತೀಯ ಜನಪ್ರತಿನಿಧಿಗಳೂ ಸರಕಾರದ ಮೇಲೆ ಒತ್ತಡವನ್ನು ಹೇರಬೇಕು. ಯಾವುದೇ ಭಾರತೀಯ ನಾಗರಿಕರು ಯಾವುದೇ ಕಾರಣದಿಂದ ವಿದೇಶಗಳಲ್ಲಿ ಸಿಲುಕಿದ್ದರೆ, ಅವರನ್ನು ಆದಷ್ಟು ಬೇಗನೇ ಬಿಡುಗಡೆಗೊಳಿಸುವುದು ನಮ್ಮ ದೇಶದ ಕರ್ತವ್ಯವಾಗಿದೆ.

೫. ಅಮಲು ಪದಾರ್ಥಗಳ ಕಳ್ಳಸಾಗಾಣಿಕೆಯು ಶಸ್ತಾಸ್ತ್ರಗಳ ಕಳ್ಳಸಾಗಾಣಿಕೆಗಿಂತ ಹೆಚ್ಚು ಅಪಾಯಕಾರಿಯಾಗಿದೆ!

ದಕ್ಷಿಣ-ಪೂರ್ವ ಏಶಿಯಾದಲ್ಲಿನ ದೇಶಗಳಿಗೆ ಕಳ್ಳ ಸಾಗಾಣಿಕೆಯು ದೊಡ್ಡ ಸಮಸ್ಯೆಯಾಗಿದೆ. ಈ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಮಲು ಪದಾರ್ಥಗಳ ಸಾಗಾಟವನ್ನು ಮಾಡಲಾಗುತ್ತದೆ. ಸಾವಿರಾರು ಕೋಟಿ ರೂಪಾಯಿಗಳ ಅಮಲು ಪದಾರ್ಥಗಳನ್ನು ಭಾರತೀಯ ಸಮುದ್ರ ದಡದಲ್ಲಿ ಸೆರೆಹಿಡಿಯಲಾಗುತ್ತದೆ. ಈ ಕಳ್ಳಸಾಗಾಣಿಕೆಯನ್ನು ತಡೆಗಟ್ಟುವುದು ಆವಶ್ಯಕವಾಗಿದೆ. ಅಮಲು ಪದಾರ್ಥಗಳ ಕಳ್ಳಸಾಗಾಣಿಕೆಯು ಮದ್ದು-ಗುಂಡುಗಳ, ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಭಾರತೀಯ ಚಲನಚಿತ್ರಗಳಲ್ಲಿನ ಅನೇಕ ಪ್ರತಿಷ್ಠಿತ ಜನರು ಈ ಅಮಲು ಪದಾರ್ಥಗಳ ಹಿಡಿತದಲ್ಲಿ ಸಿಕ್ಕಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಬಂದಿರುವ ಒಂದು ಸುದ್ದಿಗನುಸಾರ ತೆಲಂಗಾಣದಲ್ಲಿ ೫ ಜನ  ಶಾಸಕರು ಅಮಲು ಪದಾರ್ಥಗಳ ಔತಣಕೂಟದಲ್ಲಿ ಭಾಗವಹಿಸಿದ್ದರು ಮತ್ತು ಪೊಲೀಸರು ಅವರನ್ನು ಬಂಧಿಸಿದ್ದರು. ಸಮಾಜದಲ್ಲಿನ ಶ್ರೀಮಂತ ಜನರು ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿದ್ದರಿಂದ ದೇಶಕ್ಕೆ ಬಹುದೊಡ್ಡ ಹಾನಿಯಾಗುತ್ತಿದೆ.

೬. ಕಡಲತೀರಗಳನ್ನು ಸರಿಯಾಗಿ ರಕ್ಷಣೆ ಮಾಡಿದರೆ ಮಾತ್ರ ಭಾರತಕ್ಕೆ ಅದರ ಭೌಗೋಳಿಕ ಸ್ಥಿತಿಯ ಲಾಭ ಸಿಗುವುದು !

‘ಇನ್ಫಾರಮೇಶನ್ ಫ್ಯೂಜನ್ ಸೆಂಟರ್ಗೆ ಹಡಗುಗಳ ಅನಧಿಕೃತ ಓಡಾಟದ ೫೯೦ ಪ್ರಕರಣಗಳು ಗಮನಕ್ಕೆ ಬಂದವು. ಅವರು ಈ ಅನಧಿಕೃತ ಓಡಾಟಗಳನ್ನು ಭೂಮಧ್ಯ ಸಮುದ್ರದಲ್ಲಿ ಗುರುತಿಸಿದರು. ಈ ಸಮುದ್ರವು ಯುರೋಪಿನ ದಿಕ್ಕಿಗೆ ಹೋಗುತ್ತದೆ. ಈ ಪ್ರಕರಣದಲ್ಲಿ ಕೆಲವು ಜನರನ್ನು ಬಂಧಿಸಲಾಯಿತು. ಈ ಕೇಂದ್ರವು ಭೂಮಧ್ಯ ಸಮುದ್ರದ ಕಡೆಗೆ ಏಕೆ ಗಮನ ಹರಿಸುತ್ತದೆ ? ಎಂಬ ಪ್ರಶ್ನೆ ಉದ್ಭವಿಸುತ್ತದೆ; ಏಕೆಂದರೆ ಭಾರತದ ಕಡಲತೀರವು ಬಹಳ ದೊಡ್ಡದಾಗಿದೆ. ಇಲ್ಲಿಯ ಸುಂದರಬನದಿಂದ ಸಮುದ್ರದ ದಿಕ್ಕಿನಲ್ಲಿ ಬಂಗಾಳದಲ್ಲಿ ಮತ್ತು ಓಡಿಶಾದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಅನಧಿಕೃತ ಓಡಾಟಗಳಾಗುತ್ತವೆ. ಬಂಗಾಳ, ಓಡಿಶಾ ಮತ್ತು ತಮಿಳುನಾಡಿನ ಪತ್ರಿಕೆಗಳ ಸುದ್ದಿಗಳನ್ನು ಓದಿದರೆ, ಅಲ್ಲಿನ ಕಡಲತೀರವು ಈ ಅನಧಿಕೃತ ಬಾಂಗ್ಲಾದೇಶಿ ಸ್ಥಳಾಂತರಿತ ಗೊಂಡವರಿಂದ ತುಂಬಿ ತುಳುಕುತ್ತಿದೆ. ಅವರ ಮೇಲೆ ಕಣ್ಗಾವಲವನ್ನು ಇಡದೇ ನಾವು ಭೂಮಧ್ಯ ಸಮುದ್ರದ ಮೇಲೆ ನಿಗಾ ಇಡುವುದು ತಪ್ಪೆನಿಸುತ್ತದೆ. ಯಾರು ಭಾರತದಲ್ಲಿ ನುಸುಳುತ್ತಾರೆಯೋ, ಅವರನ್ನು ಹಿಡಿಯುವುದಕ್ಕಿಂತ ನಾವು ಅಮೇರಿಕಾದ ಕಡಲತೀರ ಅಥವಾ ಭೂಮಧ್ಯ ಸಮುದ್ರದ ಚಿಂತೆಯನ್ನು ಮಾಡುತ್ತೇವೆ. ಫ್ಯೂಜನ್ ಸೆಂಟರ್‌ನ ಕಾರ್ಯವು ಚೆನ್ನಾಗಿದೆ; ಆದರೆ ಅವರು ಬಹಳ ದೂರದವರೆಗೆ ಗಮನ ವಿಡುವುದರ ಅವಶ್ಯಕತೆಯಿಲ್ಲ. ಯುರೋಪಿನ ಚಿಂತೆಯನ್ನು ಯುರೋಪಕ್ಕೆ, ಅಮೇರಿಕೆಯ ಚಿಂತೆಯನ್ನು ಅಮೇರಿಕೆಗೆ ಮಾಡಲು ಬಿಡಬೇಕು. ಹಾಗೆಯೇ ಜಪಾನ್ ದೇಶವು ತನ್ನ ದೇಶದ ಕಾಳಜಿಯನ್ನು ಮಾಡಲು ಸಮರ್ಥವಾಗಿದೆ. ಆದುದರಿಂದ ನಾವು ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ ಇವುಗಳ ಕಡಲತೀರದ ಕಡೆಗೆ ಗಮನವಿಡಬೇಕು. ಅಲ್ಲಿಂದ ಮೀನುಗಾರಿಕೆಯ ದೋಣಿಗಳ ಮೂಲಕ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಅನಧಿಕೃತ ವ್ಯಾಪಾರ ಮತ್ತು ಅಮಲು ಪದಾರ್ಥಗಳ ಕಳ್ಳಸಾಗಾಣಿಕೆಯಾಗುತ್ತದೆ. ಅಲ್ಲದೇ ಭಯೋತ್ಪಾದಕರೂ ಭಾರತದೊಳಗೆ ಬರುತ್ತಾರೆ. ಪ್ರತಿದಿನ ೧೩ ರಿಂದ ೧೫ ಸಾವಿರ ಹಡಗುಗಳು ಹಿಂದೂ ಮಹಾಸಾಗರದಲ್ಲಿ ಓಡಾಡುತ್ತವೆ. ಭಾರತದ ಭೌಗೋಳಿಕ ಸ್ಥಾನವು ಬಹಳ ಒಳ್ಳೆಯದಿದೆ. ಭಾರತವು ಸಮುದ್ರ ಕಡಲತೀರವನ್ನು ಸರಿಯಾದ ರೀತಿಯಲ್ಲಿ ರಕ್ಷಣೆ ಮಾಡಿದರೆ ಮಾತ್ರ ನಮಗೆ ಭೌಗೋಳಿಕ ಸ್ಥಿತಿಯ ಲಾಭ ಸಿಗುವುದು. ಅದಕ್ಕಾಗಿ ಸಮುದ್ರ ಸುರಕ್ಷೆ ಹೆಚ್ಚಿಸುವುದು ಆವಶ್ಯಕವಾಗಿದೆ.

– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.