ಕೊರೊನಾ ರೂಪದ ಆಪತ್ಕಾಲಕ್ಕಾಗಿ ಮಾರ್ಗದರ್ಶನಾತ್ಮಕ ಲೇಖನ !
ಪೂ. ವೈದ್ಯ ವಿನಯ ನೀಳಕಂಠ ಭಾವೆ ಇವರ ಪರಿಚಯಪೂಜ್ಯ ವಿನಯ ಭಾವೆ ಇವರು ‘ವರಸಯೀಕರ್ ವೈದ್ಯ ಭಾವೆ ಎಂದು ಮಹಾರಾಷ್ಟ್ರ ಮತ್ತು ಗೋವಾದ ವೈದ್ಯರಲ್ಲಿ ಖ್ಯಾತಿ ಹೊಂದಿದ್ದಾರೆ. ಅವರು ತಮ್ಮ ಮಾಲಕತ್ವದ ‘ಶ್ರೀ ಅನಂತಾನಂದ ಔಷಧಾಲಯ ಎಂಬ ಆಯುರ್ವೇದ ಔಷಧಾಲಯದ ಮೂಲಕ ಉತ್ಕೃಷ್ಟ ಔಷಧಗಳನ್ನು ತಯಾರಿಸಿ ಅನೇಕ ವರ್ಷಗಳಿಂದ ಆಯುರ್ವೇದದ ಸೇವೆ ಮಾಡಿದ್ದಾರೆ. ಪೂ. ಭಾವೆ ಇವರು ಸನಾತನದ ಸಂತರಾಗಿದ್ದಾರೆ. ಈ ಔಷಧಗಳ ಜೊತೆಗೆ ಸರಕಾರ ಪುರಸ್ಕೃತ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು. ಇತರ ಎಲ್ಲ ಪರಿಹಾರೋಪಾಯಗಳನ್ನು ಪಾಲಿಸಬೇಕು ಹಾಗೂ ಸ್ಥಳ, ಕಾಲ ಮತ್ತು ಪ್ರಕೃತಿಗನುಸಾರ ಚಿಕಿತ್ಸೆಯಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ವೈದ್ಯರಿಂದ ಯೋಗ್ಯವಾದ ಸಲಹೆಯನ್ನೂ ಪಡೆಯಬೇಕು. |
೧. ನಿರ್ಬಂಧಾತ್ಮಕ ಉಪಾಯವೆಂದು ಉಪಯೋಗಿಸುವಂತಹ ಔಷಧಗಳು
೧ ಅ. ಸಂಶಮನೀ ವಟಿ : ‘ಇದರಲ್ಲಿ ಅಮೃತಬಳ್ಳಿ, ಲೋಹ ಭಸ್ಮ, ಅಭ್ರಕ ಭಸ್ಮ ಮತ್ತು ಸುವರ್ಣ ಮಾಕ್ಷಿಕ ಭಸ್ಮ ಈ ಘಟಕಗಳಿವೆ. ಇಡೀ ಶರೀರಕ್ಕೆ ರೋಗದ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುವ ಈ ಔಷಧವನ್ನು ಕೊರೊನಾದ ಕಾಲದಲ್ಲಿ ಎಲ್ಲೆಡೆ ಉಪಯೋಗಿಸಲಾಗುತ್ತದೆ. ಜ್ವರ ಬರಬಾರದೆಂದು, ಜ್ವರ ಬರುತ್ತಿರುವಾಗ ಹಾಗೂ ಜ್ವರದ ನಂತರ ಬರುವ ನಿತ್ರಾಣವನ್ನು ಹೋಗಲಾಡಿಸಲು ಈ ಔಷಧ ಉಪಯುಕ್ತವಾಗಿದೆ. ಕಾಮಾಲೆಯಿಂದ ಬರುವ ನಿಃಶಕ್ತಿಗೂ ಇದು ಉಪಯುಕ್ತ. ಈ ಔಷಧವು ಮಲೇರಿಯಾದ ಜ್ವರಕ್ಕೂ ಲಾಭದಾಯಕವಾಗುತ್ತದೆ. ಕೆಲವರು ನಿರ್ಬಂಧಾತ್ಮಕ ಉಪಾಯವೆಂದು ಅಮೃತಬಳ್ಳಿಯ ಘನವಟಿಯನ್ನು (ಗಿಲೋಯ ಘನವಟಿ) ತೆಗೆದುಕೊಳ್ಳುತ್ತಾರೆ. ಸಂಶಮನಿ ವಟಿ ತೆಗೆದುಕೊಂಡರೆ ಗಿಲೋಯ ಘನವಟಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಸಂಶಮನಿ ವಟಿಯು ಗಿಲೋಯ ಘನವಟಿಗಿಂಲೂ ಹೆಚ್ಚು ಪರಿಣಾಮಕಾರಿಯಾಗಿದೆ.
ಮಾತ್ರೆಯ ತೂಕ : ೨೫೦ ಮಿಲಿಗ್ರಾಮ್
ಪ್ರಮಾಣ : ೧ ರಿಂದ ೨ ಮಾತ್ರೆಗಳು ದಿನದಲ್ಲಿ ೨ ಅಥವಾ ೩ ಸಲ (ಸೋಂಕಿನ ತೀವ್ರತೆಗನುಸಾರ) (೧೫ ದಿನಗಳಿಗೆ ೩೦ ರಿಂದ ೯೦ ಮಾತ್ರೆಗಳು)
ತಮ್ಮ ಪರಿಸರದಲ್ಲಿ ಸೋಂಕಿನ ಜ್ವರವಿರುವ ರೋಗಿಗಳಿದ್ದರೆ ನಿರ್ಬಂಧಾತ್ಮಕ ಉಪಾಯವೆಂದು ಸೋಂಕು ಇರುವವರೆಗೆ ನಿಯಮಿತವಾಗಿ ಈ ಔಷಧವನ್ನು ತೆಗೆದುಕೊಳ್ಳಬಹುದು. ಇದು ಶಕ್ತಿವರ್ಧಕ ಔಷಧವಾಗಿರುವುದರಿಂದ ಇದನ್ನು ನಿಯಮಿತವಾಗಿ ಉಪಯೋಗಿಸಿದರೆ ಏನೂ ಹಾನಿಯಾಗುವುದಿಲ್ಲ.
೧ ಆ. ಮಹಾಸುದರ್ಶನ ವಟಿ
ಮಾತ್ರೆಯ ತೂಕ : ೩೦೦ ಮಿಲಿಗ್ರಾಮ್
ಪ್ರಮಾಣ : ೧-೧ ಮಾತ್ರೆ ದಿನದಲ್ಲಿ ೨ ಸಲ
೧ ಇ. ಶೃಂಗಾರಾಭ್ರ ರಸ : ಈ ಔಷಧವು ಫುಪ್ಪುಸ ಮತ್ತು ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ. ಈ ಅವಯವಗಳ ಕಾರ್ಯಕ್ಷಮತೆ ಹಾಗೂ ರೋಗ ನಿರೋಧಕ ಕ್ಷಮತೆಯನ್ನು ಹೆಚ್ಚಿಸಲು ಈ ಔಷಧ ಉಪಯುಕ್ತವಾಗಿದೆ.
ಮಾತ್ರೆಯ ತೂಕ : ೨೫೦ ಮಿಲಿಗ್ರಾಮ್
ಪ್ರಮಾಣ : ೧-೧ ಮಾತ್ರೆ ದಿನದಲ್ಲಿ ೨ ಸಲ (೧೫ ದಿನಗಳಿಗೆ ೩೦ ಮಾತ್ರೆಗಳು) ಈ ಔಷಧವನ್ನು ೧೫ ದಿನಗಳವರೆಗೆ ತೆಗೆದುಕೊಂಡು ನಂತರ ನಿಲ್ಲಿಸಬಹುದು.
೧ ಈ. ಗಂಧರ್ವ ಹರೀತಕಿ ವಟಿ : ಈ ಔಷಧದಿಂದ ಹೊಟ್ಟೆ ಸ್ವಚ್ಛವಾಗುತ್ತದೆ ಹಾಗೂ ಶರೀರದಲ್ಲಿರುವ ಆಮ (ಜೀರ್ಣವಾಗದ ಆಹಾರ) ಹೊರಗೆ ಹೋಗಲು ಸಹಾಯವಾಗುತ್ತದೆ.
ಮಾತ್ರೆಯ ತೂಕ : ೩೦೦ ಮಿಲಿಗ್ರಾಮ್
ಪ್ರಮಾಣ : ೨ ರಿಂದ ೩ ಮಾತ್ರೆಗಳು ರಾತ್ರಿ ಮಲಗುವಾಗ ವಾರದಲ್ಲಿ ೨ ಸಲ (೧೫ ದಿನಗಳಿಗೆ ೪ ರಿಂದ ೧೨ ಮಾತ್ರೆಗಳು)
೨. ಕೊರೊನಾದ ವಿವಿಧ
ಲಕ್ಷಣಗಳಿಗೆ ಉಪಯುಕ್ತ ಔಷಧಗಳು ಈ ಔಷಧಗಳನ್ನು ಆಯಾ ವಿಶಿಷ್ಟ ಲಕ್ಷಣಗಳಿರುವಾಗ ಉಪಯೋಗಿಸಬೇಕು.
೨ ಅ. ತಾಲೀಸಾದಿ ಚೂರ್ಣ : ಕೆಮ್ಮು, ಗಂಟಲಲ್ಲಿ ಕಫ ಬರುವುದು, ಗಂಟಲು ಕೆರೆಯುವುದು, ಗಂಟಲಲ್ಲಿ ಚುಚ್ಚಿದ ಹಾಗಾಗುವುದು ಇತ್ಯಾದಿ ಲಕ್ಷಣಗಳಲ್ಲಿ ಈ ಚೂರ್ಣವನ್ನು ಉಪಯೋಗಿಸಬಹುದು. ಈ ಔಷಧದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚು ಇರುವುದರಿಂದ ಮಧುಮೇಹ ಇರುವವರು ಇದನ್ನು ತೆಗೆದುಕೊಳ್ಳದೆ ಪರ್ಯಾಯ ಔಷಧವನ್ನು ತೆಗೆದುಕೊಳ್ಳಬೇಕು.
ಪ್ರಮಾಣ : ದಿನದಲ್ಲಿ ೨-೩ ಸಲ ೧ ಚಹಾದ ಚಮಚ (೩ ಗ್ರಾಮ್) ದಷ್ಟು ಚೂರ್ಣವನ್ನು ಅಗಿದು ತಿನ್ನಬೇಕು ಅಥವಾ ೧ ಚಮಚ ಚೂರ್ಣವನ್ನು ೨ ಚಮಚ ಜೇನುತುಪ್ಪದಲ್ಲಿ ಬೆರೆಸಿ ಅದರಲ್ಲಿನ ಸ್ವಲ್ಪ ಸ್ವಲ್ಪ ಮಿಶ್ರಣವನ್ನು ಆಗಾಗ ಸೇವಿಸಬೇಕು. (೧೫ ದಿನಗಳಿಗಾಗಿ ೯೦ ರಿಂದ ೧೩೫ ಗ್ರಾಮ್)
೨ ಆ. ಚಂದ್ರಾಮೃತ ರಸ : ಈ ಔಷಧದಲ್ಲಿ ಅಭ್ರಕ ಭಸ್ಮದಂತಹ ಶ್ವಾಸಾಂಗಕ್ಕೆ ಶಕ್ತಿಯನ್ನು ನೀಡುವ ಘಟಕಗಳಿವೆ. ಈ ಔಷಧವು ಕೆಮ್ಮು ಮತ್ತು ಉಸಿರಾಡಲು ತೊಂದರೆಯಾಗುವ ಲಕ್ಷಣಗಳಿಗೆ ಉಪಯುಕ್ತವಾಗಿದೆ.
ಮಾತ್ರೆಯ ತೂಕ : ೨೫೦ ಮಿಲಿಗ್ರಾಮ್
ಪ್ರಮಾಣ : ೨-೨ ಮಾತ್ರೆ ದಿನದಲ್ಲಿ ೨-೩ ಸಲ ಜಗಿದು ಸೇವಿಸಬೇಕು. (೧೫ ದಿನಗಳಿಗೆ ೬೦ ರಿಂದ ೯೦ ಮಾತ್ರೆಗಳು)
೨ ಇ. ಶೃಂಗಾರಾಭ್ರ ರಸ : ಉಬ್ಬಸ, ಫುಪ್ಪುಸದ ಕ್ಷಮತೆ ಕಡಿಮೆಯಾಗಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದು, ಕೆಮ್ಮು ಇತ್ಯಾದಿ ಲಕ್ಷಣಗಳಲ್ಲಿ ಹಾಗೂ ಫುಪ್ಪುಸ ಮತ್ತು ಹೃದಯಕ್ಕೆ ಶಕ್ತಿ ನೀಡಲು ಈ ಔಷಧ ಉಪಯುಕ್ತವಾಗಿದೆ. ಇದು ಕಾಯಿಲೆಯ ಮಧ್ಯಮ ಅಥವಾ ತೀವ್ರ ಅವಸ್ಥೆಯಲ್ಲಿ ಉಪಯೋಗಿಸುವಂತಹ ಔಷಧವಾಗಿದೆ.
ಮಾತ್ರೆಯ ತೂಕ : ೨೫೦ ಮಿಲಿಗ್ರಾಮ್
ಪ್ರಮಾಣ : ೨-೨ ಮಾತ್ರೆ ದಿನದಲ್ಲಿ ೩ ಸಲ (೧೫ ದಿನಗಳಿಗೆ ೯೦ ಮಾತ್ರೆಗಳು)
೨ ಈ. ಸುವರ್ಣ ಮಾಲಿನಿ ವಸಂತ : ಈ ಔಷಧದಲ್ಲಿ ಸುವರ್ಣಭಸ್ಮ ಇರುತ್ತದೆ. ಆಯುರ್ವೇದಕ್ಕನುಸಾರ ಸುವರ್ಣವು ಉತ್ತಮವಾದ ವಿಷ ನಿವಾರಕ (ಅಂದರೆ ಶರೀರದಲ್ಲಿ ಜಂತುಗಳಿಂದ ಉತ್ಪನ್ನವಾಗುವ ವಿಷವನ್ನು ನಾಶಗೊಳಿಸುವ)ವಾಗಿದೆ. ಸುವರ್ಣ ಮಾಲಿನಿ ವಸಂತ ಔಷಧವನ್ನು ಸೇವಿಸುವುದರಿಂದ ಶ್ವಾಸಾಂಗವ್ಯೂಹ ಮತ್ತು ಕರುಳು ಹಾಗೂ ಸೊಂಟದ ಭಾಗದ ಅವಯವಗಳಿಗೆ ಶಕ್ತಿ ಸಿಗುತ್ತದೆ. ಸೋಂಕು ರೋಗದ ತೀವ್ರ ಅವಸ್ಥೆಯಲ್ಲಿ ವೈರಾಣುಗಳ ಪ್ರಭಾವ ತುಂಬಾ ಹೆಚ್ಚಾದಾಗ ಈ ಔಷಧದಿಂದ ಒಳ್ಳೆಯ ಪರಿಣಾಮವಾಗಿರುವ ಉದಾಹರಣೆಗಳಿವೆ. ಈ ಔಷಧದಿಂದ ಕೊನೆಯ ಹಂತದಲ್ಲಿದ್ದ ರೋಗಿಯೂ ಗುಣಮುಖನಾಗಿರುವ ಉದಾಹರಣೆಗಳಿವೆ. ಹಾಗಾಗಿ ಇದು ಆಯುರ್ವೇದದಲ್ಲಿ ಒಂದು ‘ಜೀವರಕ್ಷಕ (ಲೈಫ್ ಸೇವಿಂಗ್) ಔಷಧವಾಗಿದ್ದು ಇದರಿಂದ ಆಮ್ಲಜನಕದ ಪ್ರಮಾಣ ಹೆಚ್ಚಾಗಲು ಸಹಾಯವಾಗುತ್ತದೆ.
ಮಾತ್ರೆಯ ತೂಕ : ಅಂದಾಜು ೧೦೦ ಮಿಲಿಗ್ರಾಮ್
ಪ್ರಮಾಣ : ರೋಗದ ತೀವ್ರತೆಗನುಸಾರ ೧-೧ ಮಾತ್ರೆ ದಿನದಲ್ಲಿ ೧ ರಿಂದ ೩ ಸಲ. ಮಾತ್ರೆಯನ್ನು ಪುಡಿ ಮಾಡಿ ಅದನ್ನು ಜೇನುತುಪ್ಪದಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಬೇಕು. ಪ್ರಜ್ಞೆ ಇಲ್ಲದ ರೋಗಿಗಳ ತುಟಿಯ ಒಳಭಾಗದಲ್ಲಿ ಮತ್ತು ಒಸಡಿಗೆ ಹಚ್ಚಬೇಕು. ಅನೇಕ ವೈದ್ಯರು ಈ ಔಷಧವನ್ನು ಕೊರೊನಾದ ಆರಂಭದಲ್ಲಿ ದಿನದಲ್ಲಿ ೧ ಮಾತ್ರೆಯನ್ನು ೨ ರಿಂದ ೩ ಸಲ ತೆಗೆದುಕೊಳ್ಳಲು ಹೇಳುತ್ತಾರೆ. ರೋಗದ ತೀವ್ರತೆ ಕಡಿಮೆಯಾದಾಗ ಪ್ರಮಾಣವನ್ನು ಕಡಿಮೆ ಮಾಡಿ ದಿನಕ್ಕೊಂದರಂತೆ ತೆಗೆದುಕೊಳ್ಳಬೇಕು. ಸಂಪೂರ್ಣ ಗುಣಮುಖರಾದ ನಂತರ ೫ ರಿಂದ ೧೫ ದಿನ ದಿನಕ್ಕೊಂದು ಮಾತ್ರೆಯನ್ನು ತೆಗೆದುಕೊಳ್ಳಬೇಕು. ಈ ಔಷಧವನ್ನು ಕೊರೊನಾ ಬಂದಿರುವುದು ತಿಳಿದ ಕೂಡಲೇ ಆರಂಭಿಸಿದರೆ, ಸಂಭವಿಸಲಿರುವ ಅಪಾಯವನ್ನು ತಪ್ಪಿಸಬಹುದು. (೧೫ ದಿನಗಳಿಗಾಗಿ ೩೦ ರಿಂದ ೪೫ ಮಾತ್ರೆಗಳು)
೨ ಉ. ಮಹಾಲಕ್ಷ್ಮಿ ವಿಲಾಸ ರಸ : ಇದು ಕೂಡ ಒಂದು ಸುವರ್ಣಯುಕ್ತ ಔಷಧವಾಗಿದೆ. ಈ ಔಷಧವು ಹೃದಯ ಮತ್ತು ಫುಪ್ಪುಸಕ್ಕೆ ಶಕ್ತಿಯನ್ನು ನೀಡುವ ಮತ್ತು ಶರೀರದಲ್ಲಿ ಓಜಸ್ಸನ್ನು (ತೇಜ) ಹೆಚ್ಚಿಸುವಂತಹದ್ದಾಗಿದೆ. ಇದು ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ. ರೋಗದ ಮಧ್ಯಮ ಮತ್ತು ತೀವ್ರ ಅವಸ್ಥೆಯಲ್ಲಿ ಇದನ್ನು ಉಪಯೋಗಿಸಬೇಕು.
ಮಾತ್ರೆಯ ತೂಕ : ಅಂದಾಜು ೧೦೦ ಮಿಲಿಗ್ರಾಮ್
ಪ್ರಮಾಣ : ಸುವರ್ಣಮಾಲಿನಿ ಔಷಧದ ಪ್ರಮಾಣದಂತೆಯೆ (೧೫ ದಿನಗಳಿಗೆ ೩೦ ರಿಂದ ೪೫ ಮಾತ್ರೆಗಳು)
೨ ಊ. ತ್ರಿಭುವನಕೀರ್ತಿ ರಸ : ಈ ಔಷಧವು ಕಫನಾಶಕ ಮತ್ತು ಜ್ವರ ನಾಶಕವಾಗಿದೆ.
ಮಾತ್ರೆಯ ತೂಕ : ೨೫೦ ಮಿಲಿಗ್ರಾಮ್
ಪ್ರಮಾಣ : ೧-೧ ಮಾತ್ರೆ ದಿನದಲ್ಲಿ ೩ ಸಲ ಜೇನು ಅಥವಾ ಶುಂಠಿಯ ರಸದಲ್ಲಿ ತೆಗೆದುಕೊಳ್ಳಬೇಕು. ಜ್ವರ ಕಡಿಮೆಯಾಗದಿದ್ದರೆ, ಪ್ರತಿ ೩ ಗಂಟೆಗೊಮ್ಮೆ ೧ ಮಾತ್ರೆಯನ್ನು ತೆಗೆದುಕೊಳ್ಳಬೇಕು. (ಒಟ್ಟು ೬೦ ರಿಂದ ೮೦ ಮಾತ್ರೆಗಳು)
೨ ಎ. ರಸಪಾಚಕ ವಟಿ : ಈ ಔಷಧವು ಶರೀರದಲ್ಲಿನ ರಸ ಧಾತುವನ್ನು ಶುದ್ಧಿ ಮಾಡುವಂತಹದ್ದಾಗಿದೆ. ಸತತವಾಗಿ ಬರುವ ಜ್ವರ ಮತ್ತು ಕಡಿಮೆಯಾಗದ ಜ್ವರವು ಕೆಲವೊಮ್ಮೆ ರಸಧಾತು ಮಲಿನವಾಗಿರುವುದರಿಂದ ಬರುತ್ತದೆ. ಕೊರೊನಾದ ಲಕ್ಷಣದಲ್ಲಿ ಕೆಲವೊಮ್ಮೆ ರಕ್ತ ಹೆಪ್ಪುಗಟ್ಟುವ ಲಕ್ಷಣ ಕಾಣಿಸುತ್ತದೆ. ಈ ಔಷಧವು ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಮಾತ್ರೆಯ ತೂಕ : ೩೦೦ ಮಿಲಿಗ್ರಾಮ್
ಪ್ರಮಾಣ : ೧-೧ ಮಾತ್ರೆ ದಿನದಲ್ಲಿ ೩ ಸಲ (೧೫ ದಿನಗಳಿಗೆ ೪೫ ಮಾತ್ರೆಗಳು)
ಈ ಔಷಧ ಪೇಟೆಯಲ್ಲಿ ಸಿಗದಿದ್ದರೆ ಇದರ ಘಟಕದ್ರವ್ಯಗಳು ಆಯುರ್ವೇದದ ಚೂರ್ಣ ಸಿಗುವಲ್ಲಿ ಸಿಗಬಹುದು.ಈ ಘಟಕದ್ರವ್ಯಗಳು (ಚೂರ್ಣ) ಹೀಗಿವೆ – ಇಂದ್ರಯವ (ಕೊಡಸಿಗೆ), ಕಾಡು ಪಡವಲ ಮತ್ತು ಸಾಮೆ. ಈ ಪ್ರತಿಯೊಂದು ಚೂರ್ಣಗಳಿಂದ ೨೦ ಗ್ರಾಮ್ ತೆಗೆದುಕೊಂಡು ಮಿಶ್ರಣ ಮಾಡಿ ಅದರಿಂದ ೨ ಚಿಟಿಕೆಯಷ್ಟು ಚೂರ್ಣವನ್ನು ಈ ಔಷಧದ ಮಾತ್ರೆಯ ಬದಲು ತೆಗೆದುಕೊಳ್ಳಬಹುದು.
೨ ಏ. ಮಹಾಸುದರ್ಶನ ವಟಿ : ಇದು ಜ್ವರಕ್ಕೆ ಒಂದು ಒಳ್ಳೆಯ ಔಷಧವಾಗಿದೆ. ಇದರಿಂದ ಪಿತ್ತ ಕಡಿಮೆಯಾಗುತ್ತದೆ. ಪಿತ್ತಜನಕಾಂಗವು (ಯಕೃತ್) ಊದಿಕೊಂಡಿದ್ದಲ್ಲಿ ಅದನ್ನು ಕಡಿಮೆಗೊಳಿಸಲು ಇದರ ಲಾಭವಾಗುತ್ತದೆ. ಇದು ಅತ್ಯಂತ ಕಹಿಯಾಗಿರುವುದರಿಂದ ಕೆಲವರಿಗೆ ರಕ್ತದಲ್ಲಿರುವ ಸಕ್ಕರೆ ಮತ್ತು ಬೊಜ್ಜು ಕರಗಿಸಲು ಇದು ಉಪಯುಕ್ತವಾಗಿರುವುದರ ಉದಾಹರಣೆಗಳಿವೆ.
ಮಾತ್ರೆಯ ತೂಕ : ೩೦೦ ಮಿಲಿಗ್ರಾಮ್
ಪ್ರಮಾಣ : ೧-೧ ಮಾತ್ರೆ ದಿನದಲ್ಲಿ ೩ ಬಾರಿ (೧೫ ದಿನಗಳಿಗೆ ೪೫ ಮಾತ್ರೆಗಳು)
ಈ ಔಷಧದ ಮಾತ್ರೆ ಸಿಗದಿದ್ದರೆ, ಮಹಾಸುದರ್ಶನ ಚೂರ್ಣ ಸಿಗುತ್ತದೆ. ೫೦ ಗ್ರಾಮ್ ಚೂರ್ಣವನ್ನು ತಂದು ಇದರಿಂದ ೨ ಚಿಟಿಕೆಯಷ್ಟು ಚೂರ್ಣವನ್ನು ಈ ಮಾತ್ರೆಯ ಬದಲು ತೆಗೆದುಕೊಳ್ಳಬೇಕು.
೨ ಐ. ಜಯಮಂಗಲ ರಸ : ಇದೊಂದು ಸುವರ್ಣಯುಕ್ತ ಜೀವರಕ್ಷಕ ಔಷಧವಾಗಿದ್ದು ೧೦೩ ಡಿಗ್ರಿಗಿಂತ ಹೆಚ್ಚು ತೀವ್ರ ಜ್ವರಗಳಿಗೆ ಉಪಯುಕ್ತವಾಗಿದೆ.
ಮಾತ್ರೆಯ ತೂಕ : ಅಂದಾಜು ೧೦೦ ಮಿಲಿಗ್ರಾಮ್
ಪ್ರಮಾಣ : ತೀವ್ರ ಜ್ವರವಿದ್ದರೆ, ೧-೧ ಮಾತ್ರೆ ದಿನದಲ್ಲಿ ೨ ರಿಂದ ೩ ಸಲ. (ಒಟ್ಟು ೫ ಮಾತ್ರೆ) ಕೆಲವೊಮ್ಮೆ ಯಾವುದೇ ಔಷಧ ಕೊಟ್ಟರೂ ಜ್ವರ ಕಡಿಮೆಯಾಗುವುದಿಲ್ಲ. ಆಗ ಕೆಲವು ವೈದ್ಯರು ರೋಗಿಗಳಿಗೆ ಒಂದೆರಡು ಚಮಚ ಹರಳೆಣ್ಣೆಯನ್ನು ನೀಡಿ ಅದರ ಮೇಲೆ ಬಿಸಿ ನೀರನ್ನು ಕುಡಿಸುತ್ತಾರೆ. ಇದರಿಂದ ೨-೩ ಸಲ ಭೇದಿಯಾಗುತ್ತದೆ ಹಾಗೂ ಜ್ವರ ಕಡಿಮೆಯಾಗುತ್ತದೆ, ಎಂದು ಕೆಲವು ವೈದ್ಯರ ಅನುಭವವಾಗಿದೆ. ಅನಂತರ ಜಯಮಂಗಲ ರಸ ಈ ಔಷಧವನ್ನು ನೀಡಿದರೆ ಜ್ವರ ಪುನಃ ಬರುವ ಸಂಭವ ಕಡಿಮೆಯಾಗುತ್ತದೆ. ಭೇದಿಯಾಗುತ್ತಿರುವಾಗ ಶಕ್ತಿಕ್ಷಯವಾಗಬಾರದೆಂದು ಬಿಸಿ ನೀರು ಕುಡಿಯುತ್ತಾ ಇರಬೇಕು. ಆವಶ್ಯಕತೆಯಿದ್ದರೆ ನೀರಿನಲ್ಲಿ ರುಚಿಗೆ ತಕ್ಕಷ್ಟು ಸ್ವಲ್ಪ ಸಕ್ಕರೆ ಮತ್ತು ಉಪ್ಪನ್ನು ಹಾಕಬಹುದು. ೨-೩ ಸಲ ಭೇದಿಯಾಗಿ ಹಸಿವಾದಾಗ ತುಪ್ಪ ಮತ್ತು ಉಪ್ಪು ಹಾಕಿ ಬಿಸಿ ಗಂಜಿ ಊಟ ಮಾಡಬೇಕು.
೩. ಕೊರೊನಾ ಬಂದು ಗುಣಮುಖರಾದ ನಂತರ ಶರೀರದ ಸವಕಳಿ ತುಂಬಿಸಲು ಉಪಯುಕ್ತ ಔಷಧಗಳು
ಕೊರೊನಾದ ಲಕ್ಷಣಗಳು ಹೋದ ನಂತರ ಮುಂದಿನ ೧೫ ದಿನದಿಂದ ೧ ತಿಂಗಳು ಈ ಔಷಧಗಳನ್ನು ತೆಗೆದುಕೊಳ್ಳಬೇಕು.
೩ ಅ. ಲಕ್ಷ್ಮೀ ವಿಲಾಸ ಗುಟಿ : ಈ ಔಷಧವು ರೋಗದಿಂದ ಕ್ಷೀಣವಾದ ಹೃದಯ ಮತ್ತು ಫುಪ್ಪುಸಕ್ಕೆ ಶಕ್ತಿಯನ್ನು ನೀಡುವಂತಹದ್ದಾಗಿದೆ. ಇದರಿಂದ ಶುಕ್ರಧಾತು (ವೀರ್ಯ) ಮತ್ತು ಓಜಸ್ಸು (ತೇಜ) ಹೆಚ್ಚಾಗುತ್ತದೆ. ಹೆಚ್ಚಾದ ಹೃದಯ ಬಡಿತ ಕಡಿಮೆಯಾಗುತ್ತದೆ.
ಮಾತ್ರೆಯ ತೂಕ : ೧೨೫ ಮಿಲಿಗ್ರಾಮ್
ಪ್ರಮಾಣ : ೧-೧ ಮಾತ್ರೆ ದಿನಕ್ಕೆ ೩ ಅಥವಾ ೩ ಸಲ (೧೫ ದಿನಗಳಿಗೆ ೩೦ ರಿಂದ ೪೫ ಮಾತ್ರೆಗಳು)
೩ ಆ. ಪ್ರಭಾಕರ ವಟಿ : ಈ ಔಷಧವು ರಕ್ತವರ್ಧಕ ಹಾಗೂ ಹೃದಯ ಮತ್ತು ಫುಪ್ಪುಸಕ್ಕೆ ಶಕ್ತಿಯನ್ನು ನೀಡುವಂತಹದ್ದಾಗಿದೆ.
ಮಾತ್ರೆಯ ತೂಕ : ೨೫೦ ಮಿಲಿಗ್ರಾಮ್
ಪ್ರಮಾಣ : ೧-೧ ಮಾತ್ರೆ ದಿನದಲ್ಲಿ ೨ ಅಥವಾ ೩ ಸಲ. (೧೫ ದಿನಗಳಿಗೆ ೩೦ ರಿಂದ ೪೫ ಮಾತ್ರೆಗಳು)
೩ ಇ. ಸಾರೀವಾದಿ ವಟಿ : ಇದು ರಕ್ತವನ್ನು ಶುದ್ಧಗೊಳಿಸುವ ಮತ್ತು ಎಲ್ಲ ಅವಯವಗಳಿಗೆ ಶಕ್ತಿಯನ್ನು ನೀಡುವ, ಅದೇ ರೀತಿ ಉಷ್ಣತೆಯನ್ನು ಕಡಿಮೆಗೊಳಿಸುವ ಔಷಧವಾಗಿದೆ. ಮಾಸಿಕ ಸರದಿಯ ಸಮಯದಲ್ಲಿ ಹೆಚ್ಚು ಅಥವಾ ಹೆಚ್ಚು ದಿನ ರಕ್ತಸ್ರಾವವಾಗುತ್ತಿದ್ದರೆ, ಹಾಗೆಯೇ ಗರ್ಭಾಶಯದ ರೋಗಗಳಿಗೆ ಇದು ಉಪಯುಕ್ತವಾಗಿದೆ. ಕಿವಿಯ ತೊಂದರೆಗಳಿಗೆ (ಉದಾ. ಕಿವಿ ಸೋರುವುದು, ಕಿವಿಯಲ್ಲಿ ಗುಂಯ್‌ಗುಡುವುದು) ಇತ್ಯಾದಿಗಳಿಗೆ ಈ ಔಷಧ ವಿಶೇಷ ಉಪಯುಕ್ತವಾಗಿದೆ.
ಮಾತ್ರೆಯ ತೂಕ : ೨೫೦ ಮಿಲಿಗ್ರಾಮ್
ಪ್ರಮಾಣ : ೧-೧ ಮಾತ್ರೆ ದಿನದಲ್ಲಿ ೨ ಸಲ (೧೫ ದಿನಗಳಿಗೆ ೩೦ ಮಾತ್ರೆಗಳು)
೩ ಈ. ನಿತ್ಯಾನಂದ ರಸ : ರಕ್ತ ಹೆಪ್ಪುಗಟ್ಟಬಾರದೆಂದು ಈ ಔಷಧ ವನ್ನು ಉಪಯೋಗಿಸುತ್ತಾರೆ.
ಮಾತ್ರೆಯ ತೂಕ : ೨೫೦ ಮಿಲಿಗ್ರಾಮ್
ಪ್ರಮಾಣ : ೧-೧ ಮಾತ್ರೆ ದಿನದಲ್ಲಿ ೨ ಸಲ. (೧೫ ದಿನಗಳಿಗೆ ೩೦ ಮಾತ್ರೆಗಳು)
೩. ಕೆಲವು ಸೂಚನೆಗಳು
ಅ. ಈ ಮೇಲಿನ ಎಲ್ಲ ಔಷಧಗಳು ೩ ರಿಂದ ೭ ವರ್ಷದ ಮಕ್ಕಳಿಗೆ ಕಾಲು ಪ್ರಮಾಣದಲ್ಲಿ, ೮ ರಿಂದ ೧೪ ವರ್ಷದ ಮಕ್ಕಳಿಗೆ ಅರ್ಧ ಪ್ರಮಾಣದಲ್ಲಿ ಕೊಡಬೇಕು.
ಆ. ಆದಷ್ಟು ಔಷಧವನ್ನು ಜಗಿದು ತಿನ್ನಬೇಕು (ಮೆಲ್ಲಬೇಕು). ಇದರಿಂದ ಅದರ ಪರಿಣಾಮ ಹೆಚ್ಚಾಗುತ್ತದೆ.
ಇ. ಮಧುಮೇಹ ಇರುವ ವ್ಯಕ್ತಿಗಳು ಔಷಧವನ್ನು ಜೇನುತುಪ್ಪದ ಜೊತೆಗೆ ತೆಗೆದುಕೊಳ್ಳದೆ ನೀರಿನೊಂದಿಗೆ ತೆಗೆದುಕೊಳ್ಳಬೇಕು.
ಈ. ಇಲ್ಲಿ ನೀಡಿರುವ ಔಷಧಿಗಳು ಅತ್ಯಂತ ಸುರಕ್ಷಿತ ಹಾಗೂ ದುಷ್ಪರಿಣಾಮರಹಿತವಾಗಿವೆ. ಇಂದು ಕೆಲವರು ‘ಧಾತುವಿನ ಭಸ್ಮಗಳಿರುವ ಆಯುರ್ವೇದ ಔಷಧಗಳಿಂದ ಮೂತ್ರಪಿಂಡ ಅಥವಾ ಪಿತ್ತಾಶಯ ಹಾಳಾಗುತ್ತದೆ, ಎಂದು ಅಪಪ್ರಚಾರ ಮಾಡುತ್ತಾರೆ. ಇದರಿಂದ ಅನೇಕ ಆಧುನಿಕ ವೈದ್ಯರು ತಮ್ಮ ರೋಗಿಗಳಿಗೆ ಆಯುರ್ವೇದ ಔಷಧಗಳನ್ನು ತೆಗೆದುಕೊಳ್ಳಬೇಡಿ ಎಂದು ಹೇಳುತ್ತಾರೆ. ‘ಶಾಸ್ತ್ರೀಯ ಪದ್ಧತಿಯಿಂದ ತಯಾರಿಸಿದ ಯಾವುದೇ ಧಾತುಗಳ ಭಸ್ಮಗಳಿಂದ ಮೂತ್ರಪಿಂಡ ಅಥವಾ ಪಿತ್ತಾಶಯ ಹಾಳಾಗುತ್ತದೆ ಎಂದು ಹೇಳುವುದು ಕೇವಲ ಅಪಪ್ರಚಾರವಾಗಿದೆ. ಇದಕ್ಕೆ ಶಾಸ್ತ್ರೀಯ ಆಧಾರವಿಲ್ಲ.
ಉ. ಇಲ್ಲಿ ನೀಡಿರುವ ಹೆಚ್ಚಿನ ಔಷಧಗಳು ಪೇಟೆಯಲ್ಲಿ ಬೈದ್ಯನಾಥ ಸಂಸ್ಥೆಯ (ಕಂಪನಿಯ) ಹೆಸರಿನಲ್ಲಿ ಸಿಗುತ್ತವೆ. ಯಾವುದೇ ಕಂಪನಿಯ ಔಷಧಗಳನ್ನು ತೆಗೆದುಕೊಳ್ಳಲು ಅಡ್ಡಿಯಿಲ್ಲ.
ಊ. ಇಲ್ಲಿ ನೀಡಿರುವ ಔಷಧಗಳನ್ನು ಅಲೋಪಥಿ ಅಥವಾ ಹೋಮಿಯೋಪಥಿ ಔಷಧೋಪಚಾರಗಳು ನಡೆಯುತ್ತಿರುವಾಗ ಕೂಡ ತೆಗೆದುಕೊಳ್ಳಲು ಅಡ್ಡಿಯಿಲ್ಲ. ಆದರೆ ಅವುಗಳನ್ನು ತೆಗೆದುಕೊಳ್ಳುವಾಗ ಕನಿಷ್ಠ ೧೫ ನಿಮಿಷಗಳ ಅಂತರವಿಡಬೇಕು. ಸಾಧ್ಯವಿದ್ದರೆ ಔಷಧವನ್ನು ಖಾಲಿ ಹೊಟ್ಟೆಗೆ ತೆಗೆದುಕೊಳ್ಳಬೇಕು. ಅದು ಸಾಧ್ಯವಿಲ್ಲದಿದ್ದರೆ, ಆಹಾರ ಸೇವಿಸಿದ ನಂತರವೂ ತೆಗೆದುಕೊಳ್ಳಬಹುದು.
ಎ. ಇವೆಲ್ಲ ಲೇಖನಗಳನ್ನು ಜನಹಿತಕ್ಕಾಗಿ ಬರೆಯಲಾಗಿದೆ. ಕೊರೊನಾ ಮಹಾಮಾರಿಯ ಕಾಲದಲ್ಲಿ ಡಾಕ್ಟರ್, ವೈದ್ಯರು ಸಿಗದಿರುವಾಗ ಜನರ ಪ್ರಾಣವನ್ನು ರಕ್ಷಿಸಲು ಸಾಧ್ಯವಾಗಬೇಕೆಂಬುದು ಇದರ ಹಿಂದಿನ ಉದ್ದೇಶವಾಗಿದೆ. ಜನರಿಗೆ ಡಾಕ್ಟರ್ ಅಥವಾ ವೈದ್ಯರಲ್ಲಿಗೆ ಹೋಗದೇ ಸ್ವಂತ ಮನಸ್ಸಿನಿಂದ ಔಷಧ ತೆಗೆದುಕೊಳ್ಳುವಂತೆ ಪ್ರೇರೇಪಿಸಲು ಈ ಲೇಖನವನ್ನು ಬರೆದಿಲ್ಲ.
ಏ. ಯಾವುದೇ ವೈದ್ಯರಲ್ಲಿ ಕೊರೊನಾದ ಉಪಚಾರ ನಡೆಯು ತ್ತಿದ್ದರೆ ಅಥವಾ ನಾವು ನಿಯಮಿತ ಉಪಚಾರ ಮಾಡಿಸುವ ವೈದ್ಯರ ಬಳಿ ಔಷಧ ತೆಗೆದುಕೊಳ್ಳುತ್ತಿದ್ದರೆ, ಇಲ್ಲಿ ಕೊಟ್ಟಿರುವ ಔಷಧಗಳನ್ನು ತೆಗೆದುಕೊಳ್ಳುವ ಮೊದಲು ಅವರಿಗೆ ಕೇಳಿಕೊಳ್ಳಬಹುದು.
ಐ. ಔಷಧಗಳನ್ನು ಹೆಚ್ಚು ಸಮಯದ ವರೆಗೆ ತೆಗೆದುಕೊಳ್ಳಬೇಕಾಗಿದ್ದರೆ ಅಥವಾ ಈ ಲೇಖನದ ಬಗ್ಗೆ ಏನಾದರೂ ಸಂಶಯವಿದ್ದರೆ, ಆಯುರ್ವೇದದ ಉಪಚಾರ ಮಾಡುವ ಸ್ಥಳೀಯ ವೈದ್ಯರ ಮಾರ್ಗದರ್ಶನ ಪಡೆದುಕೊಳ್ಳಬೇಕು.
೪. ಸಾರಾಂಶ
( ಪೂ.) ವೈದ್ಯ ವಿನಯ ನೀಳಕಂಠ ಭಾವೆ, ರತ್ನಗಿರಿ (೪.೫.೨೦೨೧)