ದೇವಸ್ಥಾನಗಳ ಸರಕಾರೀಕರಣವನ್ನು ನಿಲ್ಲಿಸಿ ದೇವಸ್ಥಾನಗಳ ಕಾರುಬಾರು ಭಕ್ತರ ಮುಖಾಂತರ ನಡೆಸಲು ಹಿಂದೂಗಳು ಹೋರಾಟ ನಡೆಸಬೇಕು ! – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಹಿಂದೂ ವಿಧಿಜ್ಞ ಪರಿಷದ

‘ರಾಜ್ಯ ಸರಕಾರದಿಂದ ಕೇವಲ ಹಿಂದೂಗಳ ದೇವಸ್ಥಾನದ ನಿಧಿಯ ದುರ್ಬಳಕೆ ಏಕೆ ?’ ಈ ವಿಷಯದಲ್ಲಿ ವಿಶೇಷ ಪರಿಸಂವಾದ

ಭಾರತದ ವಿವಿಧ ರಾಜ್ಯ ಸರಕಾರಗಳು ಚರ್ಚ್‌ಗಳನ್ನು ಮತ್ತು ಮಸೀದಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿಲ್ಲ, ಕೇವಲ ಹಿಂದೂಗಳ ದೇವಸ್ಥಾನಗಳನ್ನು ಮಾತ್ರ ತಮ್ಮ ವಶಕ್ಕೆ ತೆಗೆದುಕೊಂಡಿವೆ. ಹಿಂದೂಗಳು ಜಾಗರೂಕರಿಲ್ಲದ ಹಾಗೂ ಸಂಘಟಿತರಾಗಿಲ್ಲದಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ದೇವಸ್ಥಾನಗಳು ಅನಾದಿಕಾಲದಿಂದ ಹಿಂದೂಗಳಿಗಾಗಿ ಒಂದು ಶಕ್ತಿಯ ಸ್ರೋತಗಳಾಗಿವೆ. ಆದರೆ ಸದ್ಯದ ಸ್ಥಿತಿಯಲ್ಲಿ ದೇವಸ್ಥಾನಗಳ ಮೂಲಕ ಹಿಂದೂಗಳಿಗೆ ಎಲ್ಲಿಯೂ ಧರ್ಮಶಿಕ್ಷಣ ಸಿಗುತ್ತಿಲ್ಲ. ಇತರ ಪಂಥೀಯರಿಗೆ ತಮ್ಮ ಪ್ರಾರ್ಥನಾಸ್ಥಳಗಳಿಂದ ಧರ್ಮಶಿಕ್ಷಣವನ್ನು ನೀಡಲಾಗುತ್ತದೆ. ದೇವಸ್ಥಾನಗಳನ್ನು ಸಾಮಾಜಿಕ ಕಾರ್ಯಕ್ಕಾಗಿ ನಿರ್ಮಿಸಲಾಗಿಲ್ಲ ಬದಲಾಗಿ ಭಕ್ತರಿಗೆ ಉಪಾಸನೆಗಾಗಿ ಮತ್ತು ಹಿಂದೂಗಳಿಗೆ ಧರ್ಮಶಿಕ್ಷಣ ಪಡೆಯಲಿಕ್ಕಾಗಿ ಇರಬೇಕು. ಸರಕಾರಿ ಸಂಘಸಂಸ್ಥೆಗಳನ್ನು ನಷ್ಟದಲ್ಲಿ ನಡೆಸುತ್ತಿರುವ ಹಾಗೂ ಅವುಗಳನ್ನು ಸರಿಯಾಗಿ ಸಂಭಾಳಿಸಲಾಗದ ವಿವಿಧ ರಾಜ್ಯಗಳ ಸರಕಾರಗಳು, ಪ್ರಶಿಕ್ಷಿತರಲ್ಲದ ಸರಕಾರಿ ಅಧಿಕಾರಿಗಳು ಮತ್ತು ನೌಕರರಿಂದ ಹಿಂದೂಗಳ ದೇವಸ್ಥಾನಗಳ ಕಾರುಬಾರನ್ನು ಸಂಭಾಳಿಸಲಾಗುತ್ತದೆ. ಅದರ ಮೂಲಕ ದೇವಸ್ಥಾನಗಳ ಹಣ, ಸಂಪತ್ತು ಇವೆಲ್ಲವೂ ಸಾರಾಸಗಟಾಗಿ ದುರುಪಯೋಗವಾಗುತ್ತಿವೆ. ಈ ದೇವಸ್ಥಾನಗಳ ಕಾರುಬಾರಿನಲ್ಲಿ ಭ್ರಷ್ಟಾಚಾರವಾದಾಗಲೂ ಯಾವುದೇ ಶಿಕ್ಷೆಯಾದದ್ದು ಕಂಡುಬರುವುದಿಲ್ಲ. ಹಿಂದೂಗಳ ದೇವಸ್ಥಾನಗಳ ಸರಕಾರಿಕರಣವನ್ನು ನಿಲ್ಲಿಸಿ ದೇವಸ್ಥಾನಗಳ ಕಾರುಬಾರು ಭಕ್ತರ ಮುಖೇನ ನಡೆಸಲಾಗಬೇಕು ಎಂಬುದಕ್ಕಾಗಿ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಮತ್ತು ಭಕ್ತರ ಸಹಿತ ಎಲ್ಲ ಹಿಂದೂ ಧರ್ಮಬಾಂಧವರು ಈಗ ಕೇವಲ ‘ಜನ್ಮಹಿಂದೂ’ವಾಗಿರದೇ ‘ಕರ್ಮಹಿಂದೂ’ಗಳಾಗಿ ಇದರ ವಿರುದ್ಧ ಹೋರಾಡಬೇಕಾಗಿದೆ ಎಂದು ‘ಹಿಂದೂ ವಿಧಿಜ್ಞ ಪರಿಷದ’ನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಇವರು ಕರೆ ನೀಡಿದರು. ಈ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು. ವಿದೇಶದಲ್ಲಿರುವ ಹಿರಿಯ ಪತ್ರಕರ್ತ ಮೀನಾ ದಾಸ ನಾರಾಯಣ ಇವರ ‘ಕ್ಯಾನಡಿಡ್ ಮೀನಾ’ ಎಂಬ ಪ್ರಸಿದ್ಧ ‘ಯು-ಟ್ಯೂಬ್ ವಾಹಿನಿ’ಯಿಂದ ಈ ಸಂವಾದವನ್ನು ಸಾಧಿಸಲಾಯಿತು. ಆ ಸಮಯದಲ್ಲಿ ಅವರು ವಿಚಾರಿಸಿದ ಪ್ರಶ್ನೆಗಳಿಗೆ ನ್ಯಾಯವಾದಿ ಇಚಲಕರಂಜಿಕರರು ಉತ್ತರಿಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ದೇವಸ್ಥಾನಗಳ ಸರಕಾರಿಕರಣದ ದುಷ್ಪರಿಣಾಮಗಳು, ದೇವಸ್ಥಾನಗಳನ್ನು ಭಕ್ತರ ಸುಪರ್ದಿಗೊಪ್ಪಿಸಲು ಕೃತಿಯ ದಿಶೆ, ಮಾಹಿತಿ-ಹಕ್ಕು ಅಧಿಕಾರದ ಉಪಯೋಗ, ಸೆಕ್ಯುಲರಿಝಮ್’ ನ ಹೆಸರಿನಲ್ಲಿ ಹಿಂದೂಗಳ ವಿಷಯದಲ್ಲಾಗುವ ಮಲತಾಯಿ ಧೋರಣೆ ಮುಂತಾದ ವಿಷಯಗಳ ಬಗ್ಗೆ ವೀಕ್ಷಕರು ವಿಚಾರಿಸಿದ ಪ್ರಶ್ನೆಗಳಿಗೆ ಸಂದೇಹನಿವಾರಣೆ ಮಾಡಲಾಯಿತು.

ವಕ್ಫ್ ಬೋರ್ಡ್‌ಗೆ ನೀಡಲಾಗಿರುವ ಸೀಮಾತೀತ ಅಧಿಕಾರಗಳ ಮೂಲಕ ಸರಕಾರದಿಂದ ಹಿಂದೂಗಳ ಬಗ್ಗೆ ಭೇದಭಾವ !

ತಮ್ಮ ವಿಷಯವನ್ನು ಮಂಡಿಸುವಾಗ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರರು ಹೀಗೆಂದರು, ‘ಅಂದಿನ ಕೇಂದ್ರ ಸರಕಾರದ ಮೂಲಕ 1995 ರ ‘ವಕ್ಫ್ ಕಾನೂನು’ ಅನ್ವಯಿಸಲಾಗಿತ್ತು. ಇದರ ಮೂಲಕ ವಕ್ಫ್ ಬೋರ್ಡ್‌ಗೆ ಕೇವಲ ಮುಸಲ್ಮಾನರ ಹಿತಕ್ಕಾಗಿ ಸೀಮಾತೀತ ಅಧಿಕಾರವನ್ನು ನೀಡಲಾಗಿದೆ. ಸರಕಾರೀ ವರದಿಗನುಸಾರ ಇದೇ ವಕ್ಫ್ ಬೋರ್ಡ್‌ನ ಬಳಿ ದೇಶದಾದ್ಯಂತ 6 ಲಕ್ಷ ಕ್ಕಿಂತ ಹೆಚ್ಚು ಎಕರೆ ಭೂಮಿಯಿದ್ದು ಅದರ ಸಂಪತ್ತಿನ ಮೊತ್ತವು 1.20 ಲಕ್ಷ ಕೋಟಿಯಷ್ಟಿದೆ ಹಾಗೂ ಈ ವಕ್ಫ್ ಬೋರ್ಡ್ ನ ಬಳಿ ಇಷ್ಟು ಅಗಾಧ ಪ್ರಮಾಣದಲ್ಲಿ ಹಣವು ಒಟ್ಟಾಗುತ್ತಿದ್ದರೂ ಸರಕಾರವೂ ಹಿಂದೂಗಳ ದೇವಸ್ಥಾನಗಳ ಹಣವನ್ನು ಉಪಯೋಗಿಸಿ ಮತ್ತು ತೆರಿಗೆದಾರರಿಂದ ಹಣವನ್ನು ಸಂಗ್ರಹಿಸಿ 15 ಕೋಟಿಗಿಂತಲೂ ಹೆಚ್ಚು ಅಧಿಕ ಜನಸಂಖ್ಯೆಯಿರುವ ಮುಸಲ್ಮಾನರನ್ನು ಪೋಷಿಸುತ್ತಿದೆ. ಹಿಂದೂಗಳಿಗಾಗುತ್ತಿರುವ ಈ ಭೇದಭಾವದ ವಿರುದ್ಧ ಕಾನೂನುರೀತ್ಯಾ ಹೋರಾಡಬೇಕಾಗಿದೆ. ಸದ್ಯ ವಿವಿಧ ‘ವೆಬ್ ಸಿರೀಸ್’ಗಳ ಮೂಲಕ ಹಿಂದೂಗಳ ದೇವಸ್ಥಾನಗಳು, ಸಂತರು, ಸಂರಕ್ಷಣಾ ದಳಗಳ ಬಗ್ಗೆ ತಪ್ಪು ಚಿತ್ರಣವನ್ನು ಸಹ ಬಿಂಬಿಸಲಾಗುತ್ತಿದೆ. ಇದನ್ನು ಸಹ ತಡೆಗಟ್ಟಲು ಪ್ರಯತ್ನಿಸಬೇಕಾಗಿದೆ. ಚರ್ಚ್‌ಗಳಲ್ಲಿ ನಡೆಯುತ್ತಿರುವ ಲೈಂಗಿಕ ಶೋಷಣೆಯಂತಹ ಅನೇಕ ವಿಷಯಗಳ ಬಗ್ಗೆ ‘ವೆಬ್ ಸಿರೀಸ್’ಅನ್ನು ತೆಗೆಯುವ ಧೈರ್ಯವನ್ನು ಯಾರೂ ಮಾಡುತ್ತಿಲ್ಲ ಎಂದೂ ನ್ಯಾಯವಾದಿ ಇಚಲಕರಂಜಿಕರರು ಕೊನೆಗೆ ಹೇಳಿದರು.