ಪರಾತ್ಪರ ಗುರು ಡಾ. ಆಠವಲೆಯವರ ೭೯ ನೇ ಜನ್ಮೋತ್ಸವದ ನಿಮಿತ್ತ ಕೋಟಿ ಕೋಟಿ ನಮನಗಳು

ಸಾಧಕರ ಜೀವದ ರಕ್ಷಣೆಗಾಗಿ ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ

‘ಈಶ್ವರನು ಸಂಕಟಕಾಲದಲ್ಲಿ ತನ್ನ ಭಕ್ತರನ್ನು ಖಂಡಿತ ರಕ್ಷಿಸುತ್ತಾನೆ, ಎಂದರಿತು ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗಲು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಸಾಧನೆಯನ್ನು ಹೆಚ್ಚಿಸಲು ಆದ್ಯತೆ ನೀಡಿದರು. ಅದರೊಂದಿಗೆ ಅವರಿಗೆ ಆಧ್ಯಾತ್ಮಿಕ ಆಧಾರ ಸಿಗಬೇಕೆಂದು ಸಂತರ ಮಾರ್ಗದರ್ಶನದಲ್ಲಿ ಅನುಷ್ಠಾನ, ಯಜ್ಞ-ಯಾಗಗಳನ್ನು ಮಾಡುತ್ತಿದ್ದಾರೆ. ಆಪತ್ಕಾಲವನ್ನು ಎದುರಿಸಲು ಸ್ಥೂಲದ ಸಿದ್ಧತೆಯೊಂದಿಗೆ ಅಖಿಲ ಮನುಕುಲದ ರಕ್ಷಣೆಗಾಗಿ ಅವರು ಮಾಡಿದ ಅಭೂತಪೂರ್ವ ಆಧ್ಯಾತ್ಮಿಕ ಕಾರ್ಯದ ಸಂಕ್ಷಿಪ್ತ ಮಾಹಿತಿಯನ್ನು ವಿಶೇಷಾಂಕದ ರೂಪದಲ್ಲಿ ಅವರ ಚರಣಗಳಲ್ಲಿ ಅರ್ಪಿಸುತ್ತಿದ್ದೇವೆ !

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗಾಗಿ ಎಷ್ಟು ಮಾಡಿದ್ದಾರೆ ಎಂದರೆ, ಅದಕ್ಕೆ ಸೀಮೆಯೇ ಇಲ್ಲ ! ಹೇ ಗುರುದೇವಾ, ಈ ಅತ್ಯಂತ ಕಠಿಣ ಕಾಲದಲ್ಲಿ ಕೇವಲ ತಮ್ಮ ಕೃಪೆಯಿಂದಲೇ ನಮ್ಮೆಲ್ಲ ಸಾಧಕರ ಜೀವನವು ಕೇವಲ ಸಹನೀಯವಷ್ಟೇ ಅಲ್ಲ; ಆನಂದಮಯವಾಗುತ್ತಿದೆ, ಇದಕ್ಕಾಗಿ ಕೃತಜ್ಞತೆ ! ಕೃತಜ್ಞತೆ !! ಕೃತಜ್ಞತೆ !!!

ಬರವಣಿಗೆಯ ಮಾಧ್ಯಮದಿಂದ ಪ್ರಬೋಧನೆ

ಆಪತ್ಕಾಲದ ಭೀಕರತೆಯ ಬಗ್ಗೆ ಗ್ರಂಥ, ನಿಯತಕಾಲಿಕೆ ಮುಂತಾದವುಗಳಿಂದ ಸಮಾಜದಲ್ಲಿ ಜಾಗೃತಿ ಮತ್ತು ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ

ರೋಗಗಳಿಗಾಗಿ ವಿಶಿಷ್ಟ ನಾಮಜಪ ಹುಡುಕುವುದು

ಆಪತ್ಕಾಲದ ಸಂಜೀವಿನಿಯಾಗಿರುವ ರೋಗ ನಿವಾರಣೆಗಾಗಿ ಹುಡುಕಿದ ವಿಶಿಷ್ಟ  ಜಪ ಹಾಗೆಯೇ ಪ್ರಾಣಶಕ್ತಿವಹನ ಪದ್ಧತಿಯ ಶೋಧ

ಧಾರ್ಮಿಕ ವಿಧಿಗಳಿಂದ ದೇವತೆಗಳ ಆವಾಹನೆ

ಮನುಕುಲದ ಕಲ್ಯಾಣದೊಂದಿಗೆ ಸಾಧಕರ ರಕ್ಷಣೆಯ ಸಂಕಲ್ಪ ಮಾಡಿ ನೂರಾರು ಯಜ್ಞ ಹಾಗೂ ವಿಧಿಗಳು, ಇದೊಂದು ಬಹುದೊಡ್ಡ ಆಧ್ಯಾತ್ಮಿಕಬಲ