ಸಪ್ತರ್ಷಿಗಳು ಹೇಳುತ್ತಾರೆ, “ಪರಾತ್ಪರ ಗುರು ಡಾ. ಆಠವಲೆಯವರ ಜನ್ಮತಿಥಿ ವೈಶಾಖ ಕೃಷ್ಣ ಪಕ್ಷ ಸಪ್ತಮಿಯಾಗಿದ್ದು, ಅದು ೧ ಜೂನ್ ೨೦೨೧ ರಂದು ಬರುತ್ತದೆ, ಹೀಗಿದ್ದರೂ ಚೈತ್ರ ಮಾಸದ ಉತ್ತರಾಷಾಢ ಈ ಜನ್ಮ ನಕ್ಷತ್ರದ ದಿನ ಅಂದರೆ ೨ ಮೇ ೨೦೨೧ ರಂದು ಗುರುದೇವರ ಜನ್ಮೋತ್ಸವವನ್ನು ಆಚರಿಸುವುದಿದೆ.
ಮುಂದೆ ಸಪ್ತರ್ಷಿಗಳು ಹೇಳುತ್ತಾರೆ, ‘ಈ ವರ್ಷ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವವನ್ನು ವೈಶಾಖ ಮಾಸದಲ್ಲಿ ಆಚರಿಸದೇ ಚೈತ್ರ ಮಾಸದಲ್ಲಿ ಆಚರಿಸಬೇಕು. ನಮ್ಮ ಋಷಿ-ಮುನಿಗಳ ಪಂಚಾಂಗವು ಕಾಲಗತಿಗನುಸಾರ, ಅಂದರೆ ಬ್ರಹ್ಮಾಂಡದಲ್ಲಿ ಆಗುವ ಚಲನವಲನಕ್ಕನುಸಾರ ಇರುತ್ತದೆ. ಮನುಷ್ಯರ ಪಂಚಾಂಗವು ಭೂಲೋಕದಲ್ಲಿನ ಘಟನೆಗಳು ಮತ್ತು ಅವುಗಳ ಬಗೆಗಿನ ಜ್ಯೋತಿಷ ವಿಷಯದಲ್ಲಿನ ಇತಿಹಾಸವನ್ನು ತೋರಿಸುತ್ತದೆ.
ಗುರುದೇವರು ಸ್ವತಃ ಶ್ರೀವಿಷ್ಣುವಿನ ಅವತಾರವಾಗಿರುವುದರಿಂದ ಅವರ ಅವತಾರಿ ಕಾರ್ಯದ ಬಗೆಗಿನ ಮುಹೂರ್ತವನ್ನು ನಿರ್ಧರಿಸುವವರು ನಾವು ಋಷಿ-ಮುನಿಗಳೇ ಆಗಿದ್ದೇವೆ. ಈಗಿನ ದೇವಲೋಕದಲ್ಲಿನ ಅವತಾರಿ ಕಾರ್ಯದ ಗ್ರಹಗತಿಯನ್ನು ಆಧರಿಸಿ ದೇವಲೋಕದ ಪಂಚಾಂಗದಂತೆ ನಾವು ಸಪ್ತರ್ಷಿ ವೈಶಾಖ ಮಾಸದ ಬದಲು ಚೈತ್ರ ಮಾಸದಲ್ಲಿ ಜನ್ಮೋತ್ಸವದ ಮುಹೂರ್ತವನ್ನು ನೀಡುತ್ತಿದ್ದೇವೆ.
– ಸಪ್ತರ್ಷಿ. (ಪೂ. ಡಾ. ಓಂ ಉಲಗನಾಥನ್‌ಜಿ ಇವರ ಮಾಧ್ಯಮದಿಂದ) (ಆಧಾರ : ಸಪ್ತರ್ಷಿ ಜೀವನಾಡಿ ವಾಚನ ಕ್ರಮಸಂಖ್ಯೆ ೧೭೯, ದಿನಾಂಕ ೯.೪.೨೦೨೧)
ಸಂಕಟಕಾಲದಲ್ಲಿ ಸಾಧಕರ ರಕ್ಷಣೆಯಾಗಬೇಕೆಂದು ಮಹರ್ಷಿಗಳು ಪರಾತ್ಪರ ಗುರುದೇವರ ಜನ್ಮೋತ್ಸವವನ್ನು ೧ ತಿಂಗಳು ಮೊದಲೇ ಆಚರಿಸಲು ಹೇಳುವುದು !ಗುರುದೇವರ ಜನ್ಮತಿಥಿಯು ವೈಶಾಖ ಮಾಸದಲಿದ್ದರೂ ಮಹರ್ಷಿಗಳು ಒಂದು ತಿಂಗಳು ಮೊದಲೇ, ಅಂದರೆ ಚೈತ್ರ ಮಾಸದಲ್ಲಿ ಅವರ ಜನ್ಮೋತ್ಸವವನ್ನು ಆಚರಿಸಲು ಹೇಳಿದ್ದಾರೆ. ಪೃಥ್ವಿಯ ಮೇಲೆ ಸದ್ಯ ಘೋರ ಆಪತ್ಕಾಲ ನಡೆದಿದೆ. ಆಪತ್ಕಾಲದ ತೀವ್ರತೆ ಹೆಚ್ಚಾಗುವ ಮೊದಲೇ ಸಂಪೂರ್ಣ ಪೃಥ್ವಿಗೆ ಗುರುದೇವರ ಜನ್ಮೋತ್ಸವದ ಕಲ್ಯಾಣಕಾರಿ ಸ್ಪಂದನಗಳ ಲಾಭವು ಆಗಬೇಕೆಂದು ಮತ್ತು ಸಂಕಟಕಾಲದಲ್ಲಿ ಸಾಧಕರ ರಕ್ಷಣೆಯಾಗಬೇಕೆಂದು ಮಹರ್ಷಿಗಳು ಹೀಗೆ ಹೇಳಿದ್ದಾರೆ, ಎಂದು ನನಗೆ ಅನಿಸಿತು. ಮಹರ್ಷಿಗಳ ಆದೇಶದ ಪಾಲನೆ ಮಾಡುವುದು, ಸಾಧಕರಾದ ನಮ್ಮೆಲ್ಲರ ಕರ್ತವ್ಯವೇ ಆಗಿದ್ದರಿಂದ ಮಹರ್ಷಿಗಳ ಆಜ್ಞೆಯಂತೆ ನಾವು ಗುರುದೇವರ ಜನ್ಮೋತ್ಸವವನ್ನು ವೈಶಾಖ ಮಾಸದ ಬದಲಾಗಿ ಚೈತ್ರ ಮಾಸದಲ್ಲಿ ಆಚರಿಸುತ್ತಿದ್ದೇವೆ. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ. (೯.೪.೨೦೨೧) |