ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೭೯ ನೇ ಜನ್ಮೋತ್ಸವ !
‘ಗುರು ಪರಮೇಶ್ವರ ಗುರು ಮಾತೆ | ಸದಾ ನೀಡು ಕೃಪೆಯ ಛಾಯೆ || ಭಕ್ತರಿಗಾಗಿ ದೇವರು
ಗುರುವಾಗಿ ತಾಳಿದರು ಅವತಾರವ’ | ಸನಾತನದ ಸಾಧಕರು ಪಡೆದರು ಇದರ ಪ್ರಚೀತಿಯ
ರಾಮನಾಥಿ (ಗೋವಾ) : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಜನ್ಮೋತ್ಸವವೆಂದರೆ ಸಾಧಕರಿಗೆ ಚೈತನ್ಯ ಹಾಗೂ ಆನಂದದ ಸುರಿಮಳೆಯನ್ನೇ ಸುರಿಸುವ ಮಹೋತ್ಸವದ ದಿನ ! ಪ್ರೀತಿ ಸ್ವರೂಪ, ಕೃಪಾವತ್ಸಲ, ಕರುಣಾಕರ ಇಂತಹ ಶ್ರೀಗುರುಗಳ ಕೇವಲ ದರ್ಶನದಿಂದಲೇ ಭಯಮುಕ್ತ, ಚಿಂತಾಮುಕ್ತರಾಗಿ ಸಂಕಟಗಳ ಭವಸಾಗರದಿಂದ ಪಾರಾಗುತ್ತಾರೆ. ನೂರಾರು ಸಾಧಕರು ಇದರ ಅನುಭೂತಿಯನ್ನು ಪಡೆದಿದ್ದಾರೆ. ಮಹರ್ಷಿಗಳ ಆಜ್ಞೆಯಿಂದ ಪರಾತ್ಪರ ಗುರುದೇವರ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ, ಆದರೆ ಈ ವರ್ಷ ಕೊರೋನಾ ಮಹಾಮಾರಿಯಿಂದಾಗಿ ಜನ್ಮೋತ್ಸವವನ್ನು ಆಚರಿಸಲು ಸಾಧ್ಯವಾಗಲಿಲ್ಲ. ೨ ಮೇ ೨೦೨೧ ರಂದು ಜನ್ಮೋತ್ಸವದ ನಿಮಿತ್ತ ‘ಆನ್‌ಲೈನ್ ಭಾವಸತ್ಸಂಗದಲ್ಲಿ ಈ ಹಿಂದಿನ ಜನ್ಮೋತ್ಸವಗಳಲ್ಲಿ ಪರಾತ್ಪರ ಗುರುದೇವರು ಸಾಧಕರಿಗೆ ಶ್ರೀವಿಷ್ಣು ಹಾಗೂ ಶ್ರೀರಾಮನ ರೂಪದಲ್ಲಿ ನೀಡಿದ ದರ್ಶನದ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಲಾಯಿತು. ಆದ್ದರಿಂದ ಸಾಧಕರಿಗೆ ಮತ್ತೊಮ್ಮೆ ಶ್ರೀಗುರುದೇವರ ಅವತಾರತ್ವದ ಅನುಭೂತಿಯನ್ನು ಪಡೆಯುವ ಭಾಗ್ಯವು ಲಭಿಸಿತು. ಈ ಘೋರ ಆಪತ್ಕಾಲದಲ್ಲಿಯೂ ಈ ಭಾವ ಸಮಾರಂಭದ ಮೂಲಕ ಸಾಧಕರ ಮೇಲೆ ಕೃಪೆಯ ಸುರಿಮಳೆಯನ್ನು ಸುರಿಸುವ ಗುರುದೇವರ ಬಗ್ಗೆ ಸಾಧಕರು ಮನಸ್ಸಿನಲ್ಲಿಯೇ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಸಾಧಕರ ಭಕ್ತಿಭಾವದಲ್ಲಿ ವೃದ್ಧಿ !
ಕೊರೋನಾರೂಪಿ ಆಪತ್ಕಾಲದಿಂದ ಎಲ್ಲಡೆ ಅಶಾಂತಿ, ಅಸ್ವಸ್ಥತೆ ಹಾಗೂ ದುಃಖದ ವಾತಾವರಣವಿದೆ. ಅಧರ್ಮವು ಹೆಚ್ಚಾದಾಗ ಈಶ್ವರನು ಅವತಾರವನ್ನು ತಾಳಿ ಸಾಧಕ ಮತ್ತು ಸಜ್ಜನರ ರಕ್ಷಣೆಯನ್ನು ಮಾಡುತ್ತಾನೆ. ಈ ಧ್ವನಿಚಿತ್ರಮುದ್ರಿಕೆಯನ್ನು ನೋಡುತ್ತಿರುವಾಗ ಸಾಧಕರಿಗೆ ಆ ವಚನವು ನೆನಪಾಯಿತು. ಸಾಧಕರು ವಿಷ್ಣುಲೋಕದಲ್ಲಿನ ಆನಂದವನ್ನು ಅನುಭವಿಸುತ್ತಿದ್ದರು. ‘ಶ್ರೀಮನ್ನಾರಾಯಣಸ್ವರೂಪ ಗುರುದೇವರು ಸಾಕ್ಷಾತ್ ನಮ್ಮೊಂದಿಗಿದ್ದು ಕೃಪೆಯ ಮಳೆಯನ್ನೇ ಸುರಿಸುತ್ತಿದ್ದಾರೆ, ಎಂಬ ಅನುಭೂತಿಯನ್ನು ಸಾಧಕರು ಪಡೆದರು. ಈ ಧ್ವನಿಚಿತ್ರಮುದ್ರಿಕೆ ಅಂದರೆ ಸಾಧಕರಲ್ಲಿ ಗುರುಗಳ ಬಗ್ಗೆ ಶ್ರದ್ಧೆ ಹಾಗೂ ಭಾವಭಕ್ತಿ ಹೆಚ್ಚಿಸುವ ಅತುಲನೀಯ ಸಮಾರಂಭವಾಗಿತ್ತು.
ಹೀಗಾಯಿತು ‘ಆನ್‌ಲೈನ್ ಭಾವಸತ್ಸಂಗ !
೧. ಆರಂಭದಲ್ಲಿ ಈ ಹಿಂದೆ ಆಚರಿಸಲಾದ ಪರಾತ್ಪರ ಗುರು ಡಾ. ಆಠವಲೆಯವರ ವಿಷ್ಣುರೂಪದ ‘ಡೊಲೋತ್ಸವ (ಉಯ್ಯಾಲೆಯ ಮೇಲೆ ಕುಳ್ಳಿರಿಸಿ ಸ್ತುತಿ ಮಾಡುವುದು) ಈ ಕುರಿತಾದ ಧ್ವನಿಚಿತ್ರ ಮುದ್ರಿಕೆಯನ್ನು ತೋರಿಸಲಾಯಿತು.
೨. ಅನಂತರ ಸಾಧಕರಿಗೆ ಶ್ರೀರಾಮರೂಪದಲ್ಲಿನ ಪರಾತ್ಪರ ಗುರುದೇವರ ದರ್ಶನವಾಯಿತು.
ಗಮನಾರ್ಹ ಅಂಶಗಳು
ಪರಾತ್ಪರ ಗುರು ಡಾಕ್ಟರರ ಜನ್ಮೋತ್ಸವದ ನಿಮಿತ್ತ ಸನಾತನದ ರಾಮನಾಥಿ (ಗೋವಾ)ಯಲ್ಲಿನ ಆಶ್ರಮವನ್ನು ರಂಗೋಲಿ ಬಿಡಿಸಿ ಹಾಗೂ ಹಣತೆಗಳನ್ನು ಹಚ್ಚಿ ಸರಳವಾಗಿ ಅಲಂಕರಿಸಲಾಗಿತ್ತು.