ಪರಾತ್ಪರ ಗುರು ಡಾ. ಜಯಂತ ಆಠವಲೆ !

ಆಪತ್ಕಾಲದಲ್ಲಿ ಮಾನವಜಾತಿಯ ರಕ್ಷಣೆಗಾಗಿ ಮತ್ತು ಸೃಷ್ಟಿಯ ಉದ್ಧಾರಕ್ಕಾಗಿ ಕಾರ್ಯನಿರತರಾಗಿರುವ ಜಗತ್ತಿನ ಏಕೈಕ ದಾರ್ಶನಿಕ

ಪರಾತ್ಪರ ಗುರು ಡಾ. ಆಠವಲೆ

ಹಿರಣ್ಯಾಕ್ಷನೆಂಬ ರಾಕ್ಷಸನು ಪೃಥ್ವಿಯನ್ನು ಅಪಹರಿಸಿ ಮಹಾಸಾಗರದಲ್ಲಿ ಬಚ್ಚಿಟ್ಟಾಗ ಶ್ರೀವಿಷ್ಣುವು ವರಾಹ ಅವತಾರವನ್ನು ತಾಳಿ ಪೃಥ್ವಿಯನ್ನು ರಕ್ಷಿಸಿದ್ದನು. ಸೃಷ್ಟಿಯು ಯಾವಾಗಲೂ ಸಮತೋಲನವಾಗಿರಬೇಕೆಂದು ಭಗವಾನ್ ಶಿವನು ಅಖಂಡ ಧ್ಯಾನಾವಸ್ಥೆಯಲ್ಲಿರುತ್ತಾನೆ. ಪರಾತ್ಪರ ಗುರು ಡಾ. ಜಯಂತ ಆಠವಲೆಯವರೂ ಅನೇಕ ದೈವೀ ಗುಣಗಳಿಂದ ಯುಕ್ತರಾಗಿದ್ದು ದೇವತಾಸಮಾನರಾಗಿದ್ದಾರೆ ಎಂಬ ಅನೇಕ ಅನುಭೂತಿಗಳು ಸಾಧಕರಿಗೆ ಬಂದಿವೆ. ಪರಾತ್ಪರ ಗುರು ಡಾಕ್ಟರರಿಗೂ ದೇವತೆಗಳಂತೆ ಅಖಿಲ ಮಾನವಜಾತಿಯ ರಕ್ಷಣೆ ಮತ್ತು ಕಲ್ಯಾಣದ ಜೊತೆಗೆ ಸೃಷ್ಟಿಯ ಕಾಳಜಿಯೂ ಇದೆ.

(ಪೂ.) ಸಂದೀಪ ಆಳಶಿ

ಕಳೆದ ಕೆಲವು ವರ್ಷಗಳಿಂದ ಪರಾತ್ಪರ ಗುರು ಡಾಕ್ಟರರ ಪ್ರಾಣಶಕ್ತಿಯು ಅತ್ಯಂತ ಕಡಿಮೆ ಇದೆ, ಅಂದರೆ ಕೇವಲ ಜೀವಂತವಾಗಿರಲು ಆವಶ್ಯಕವಿರುವಷ್ಟೇ ಇದ್ದು, ಅವರಿಗೆ ಅನೇಕ ಶಾರೀರಿಕ ತೊಂದರೆಗಳೂ ಆಗುತ್ತಿರುತ್ತವೆ. ಅವರು ಸ್ವತಃ ಬ್ರಹ್ಮಲೀನ ಅವಸ್ಥೆಯಲ್ಲಿದ್ದು ಮನಸ್ಸು ಮಾಡಿದರೆ ಅವರು ಯಾವುದೇ ಕ್ಷಣದಲ್ಲಿ ಆನಂದದಿಂದ ದೇಹತ್ಯಾಗ ಮಾಡಬಲ್ಲರು. ಹೀಗಿರುವಾಗಲೂ ಅವರು ಕೇವಲ ಮಾನವರನ್ನು ಆಪತ್ಕಾಲದಿಂದ ರಕ್ಷಿಸಲು ಮತ್ತು ಅಖಿಲ ಮಾನವಜಾತಿಯನ್ನು ಸಾತ್ತ್ವಿಕವನ್ನಾಗಿಸಿ ಎಲ್ಲೆಡೆ ಈಶ್ವರೀ ರಾಜ್ಯ ಬರಬೇಕು ಮತ್ತು ಸಕಲ ಸೃಷ್ಟಿಯ ಕಲ್ಯಾಣವಾಗಬೇಕೆಂದು ಪ್ರತಿದಿನ ಅಕ್ಷರಶಃ ದೇಹದಲ್ಲಿನ ಪ್ರಾಣವನ್ನು ಒಟ್ಟುಗೂಡಿಸಿ ಕಾರ್ಯನಿರತರಾಗಿರುತ್ತಾರೆ?! ಇಂತಹ ಧರ್ಮಸಂಸ್ಥಾಪಕ, ಜಗದೋದ್ಧಾರಕ, ಸೃಷ್ಟಿಯ ಪಾಲನಕರ್ತ ಮತ್ತು ಯುಗಪ್ರವರ್ತಕ ಪರಮ ಕೃಪಾಮಯ ಗುರುಗಳ ಚರಣಗಳಲ್ಲಿ ಶಿರಸಾಷ್ಟಾಂಗ ನಮನಗಳು ! – (ಪೂ.) ಶ್ರೀ. ಸಂದೀಪ ಆಳಶಿ

ಆಪತ್ಕಾಲದ ದೃಷ್ಟಿಯಿಂದ ‘ಔಷಧಿ ವನಸ್ಪತಿಗಳ ಕೃಷಿ ಈ ಉಪಕ್ರಮದ ಆರಂಭವನ್ನು ಮಾಡುತ್ತಿರುವ ಪರಾತ್ಪರ ಗುರು ಡಾಕ್ಟರ್, ಜೊತೆಯಲ್ಲಿ ಸಾಧಕರಾದ ಶ್ರೀ. ವಿಷ್ಣು ಜಾಧವ

ವಿವಿಧ ಉಪಚಾರಪದ್ಧತಿಗಳ ಮಾಹಿತಿಯನ್ನು ಮುಂಚಿನಿಂದಲೂ ಸಂಗ್ರಹಿಸಿ ಅವುಗಳಿಂದ ಸಾಧಕರಿಗೆ ಆಪತ್ಕಾಲದಲ್ಲಿ ಸಹಾಯವಾಗಲೆಂದು ಗ್ರಂಥ ಸಿದ್ಧಪಡಿಸುವುದು

ಪರಾತ್ಪರ ಗುರು ಡಾ. ಆಠವಲೆಯವರು ಸಂಗ್ರಹಿಸಿದ ಆರೋಗ್ಯ ವಿಷಯದ ಲೇಖನಗಳ ಬಗ್ಗೆ ಸಂದೇಹ ನಿವಾರಿಸಿಕೊಳ್ಳುತ್ತಿರುವ ಸಾಧಕ ವೈದ್ಯ ಮೇಘರಾಜ ಪರಾಡಕರ

ಮುಂಬರುವ ಆಪತ್ಕಾಲದಲ್ಲಿ ನೆರೆ, ಭೂಕಂಪದಂತಹ ನೈಸರ್ಗಿಕ ಆಪತ್ತುಗಳು ಮತ್ತು ಮಹಾಯುದ್ಧದಂತಹ ಮಾನವ-ನಿರ್ಮಿತ ಆಪತ್ತುಗಳು ಬರಲಿವೆ. ಅಖಿಲ ಮಾನವಜಾತಿಗೆ ಈ ಆಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಮಾರ್ಗದರ್ಶನ ಸಿಗಬೇಕೆಂದು ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ೨೦೧೩ ರಿಂದ ‘ಆಪತ್ಕಾಲದ ಸಂಜೀವಿನಿ ಎಂಬ ಗ್ರಂಥಮಾಲಿಕೆಯನ್ನು ರಚಿಸಲು ಪ್ರಾರಂಭಿಸಿದರು. ಇದರಲ್ಲಿ ಡಾಕ್ಟರರು, ಔಷಧಿ ಇತ್ಯಾದಿಗಳು ಸಿಗದಿದ್ದಾಗ ತಾವೇ ಸ್ವತಃ ಉಪಚಾರ ಮಾಡಿಕೊಳ್ಳಲು ಸಾಧ್ಯವಾಗುವಂತಹ ವಿವಿಧ ಉಪಚಾರ ಪದ್ಧತಿಗಳ ಬಗೆಗಿನ ಗ್ರಂಥಗಳಿವೆ. ಇದರಲ್ಲಿ ‘ಪ್ರಾಣಶಕ್ತಿವಹನ ಉಪಾಯ ಮತ್ತು ‘ಖಾಲಿ ಪೆಟ್ಟಿಗೆಗಳ ಉಪಾಯ ಇವೆರಡು ಸರಳ ಮತ್ತು ಪ್ರಭಾವಶಾಲಿ ಉಪಚಾರ ಪದ್ಧತಿಗಳನ್ನು ಸ್ವತಃ ಪರಾತ್ಪರ ಗುರು ಡಾಕ್ಟರರೇ ಕಂಡುಹಿಡಿದಿದ್ದಾರೆ. ಪರಾತ್ಪರ ಗುರು ಡಾಕ್ಟರರು ೧೯೮೦ ರಿಂದಲೇ ಮುಂಬೈಯ ತಮ್ಮ ಮನೆಯಲ್ಲಿ ವಾಸ್ತವ್ಯವಿದ್ದಾಗ ಆಯುರ್ವೇದ, ಬಿಂದುಒತ್ತಡ, ರೇಕಿ ಮುಂತಾದ ಉಪಚಾರಪದ್ಧತಿಗಳ ವಿಷಯದಲ್ಲಿನ ನೂರಾರು ಲೇಖನಗಳನ್ನು ಸಂಗ್ರಹಿಸಿಟ್ಟಿದ್ದರು. ಈ ಲೇಖನಗಳು ಈಗ ಗ್ರಂಥಗಳನ್ನು ತಯಾರಿಸುವಾಗ ಉಪಯುಕ್ತವಾಗುತ್ತಿವೆ. ಇದರಿಂದಲೂ ಪರಾತ್ಪರ ಗುರು ಡಾಕ್ಟರರ ದಾರ್ಶನಿಕತೆಯು ಸ್ಪಷ್ಟವಾಗುತ್ತದೆ. ಆಪತ್ಕಾಲದಲ್ಲಿ ಮನೆಮದ್ದುಗಳು ಸುಲಭವಾಗಿ ಲಭ್ಯವಾಗಬೇಕೆಂದು ದೇಶ-ವಿದೇಶಗಳಲ್ಲಿನ ಜನರಿಗೆ ತಮ್ಮ ಮನೆಯ ಮೇಲ್ಛಾವಣಿಯಲ್ಲಿ, ಅಂಗಳದಲ್ಲಿ ಅಥವಾ ಮನೆಯ ಸಮೀಪದ ಪರಿಸರದಲ್ಲಿ ಸಹಜವಾಗಿ ಬೆಳೆಸಲು ಸಾಧ್ಯವಾಗ ಬಹುದಾದಂತಹ ಔಷಧೀ ಸಸ್ಯಗಳ ಅಧ್ಯಯನವನ್ನು ಅವರು ಸಾಧಕರಿಂದ ಮಾಡಿಸಿಕೊಳ್ಳುತ್ತಿದ್ದು, ಈ ಸಸ್ಯಗಳನ್ನು ಎಲ್ಲ ಕಡೆ ಬೆಳೆಸಬೇಕೆಂದು ಅವರು ಗಮನ ಹರಿಸುತ್ತಿದ್ದಾರೆ. ಅವರು ಔಷಧೀ ಸಸ್ಯಗಳ ಕೃಷಿಯ ಬಗ್ಗೆ ಗ್ರಂಥಗಳನ್ನೂ ತಯಾರಿಸಿಕೊಂಡಿದ್ದಾರೆ.

ಮಹಾಭೀಕರ ಆಪತ್ತುಗಳ ಸಮಯದಲ್ಲಿ ದೇವರಿಂದ ಸಹಾಯ ಪಡೆಯಲು ಸಾಧನೆಯ ಮಹತ್ವ ಹೇಳುವುದು

ಆಪತ್ಕಾಲದಲ್ಲಿ ರಕ್ಷಣೆಯಾಗಲು ವ್ಯಕ್ತಿಯು ಸ್ವಂತದ ಬಲದಲ್ಲಿ ಎಷ್ಟು ಸಿದ್ಧತೆಯನ್ನು ಮಾಡಿದರೂ, ಭೂಕಂಪ, ತ್ಸುನಾಮಿಯಂತಹ ಮಹಾಭಯಂಕರ ವಿಪತ್ತುಗಳಿಂದ ಪಾರಾಗಲು ಕೊನೆಗೆ ಎಲ್ಲ ವಿಶ್ವಾಸವನ್ನು ದೇವರ ಮೇಲಿಡಬೇಕಾಗುತ್ತದೆ. ವ್ಯಕ್ತಿಯು ಸಾಧನೆಯನ್ನು ಮಾಡಿ ದೇವರ ಕೃಪೆಯನ್ನು ಪಡೆದರೆ ದೇವರು ಆತನನ್ನು ಎಲ್ಲ ಸಂಕಟಗಳಿಂದ ರಕ್ಷಣೆ ಮಾಡುತ್ತಾರೆ. ಭಕ್ತ ಪ್ರಹ್ಲಾದ, ಪಾಂಡವರು ಮುಂತಾದವರ ಅನೇಕ ಉದಾಹರಣೆಗಳಿಂದ ಇದು  ದೃಢಪಟ್ಟಿದೆ. ಇದಕ್ಕಾಗಿಯೇ ಪರಾತ್ಪರ ಗುರು ಡಾಕ್ಟರರು ಕೆಲವು ವರ್ಷಗಳಿಂದ ಅಖಿಲ ಮನುಕುಲಕ್ಕೆ ಅತ್ಯಂತ ಕಳಕಳಿಯಿಂದ ‘ಈಗ ಜೀವಂತವಿರಲಿಕ್ಕಾದರೂ ಸಾಧನೆ ಮಾಡಿ ! ಎಂದು ಹೇಳುತ್ತಿದ್ದಾರೆ.

‘ಧರ್ಮಾಚರಣೆಯು ನಾಶವಾಗಿ ಅಧರ್ಮವು ಪ್ರಬಲವಾದಾಗ ಪೃಥ್ವಿಯ ಮೇಲೆ ಸಂಕಟಗಳು ಬರುತ್ತವೆ, ಎಂದು ಹಿಂದೂ ಧರ್ಮಶಾಸ್ತ್ರವು ಹೇಳುತ್ತದೆ. ಸಮಾಜವು ಧರ್ಮಾಚರಣಿ ಮತ್ತು ಸಾಧಕನಾದರೆ, ಹಾಗೆಯೇ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ಧರ್ಮದ ಅಧಿಷ್ಠಾನವಿದ್ದಲ್ಲಿ ಪೃಥ್ವಿಯಲ್ಲಿ ಸಂಕಟಗಳು ಬರುವುದಿಲ್ಲ ಮತ್ತು ಸೃಷ್ಟಿಯು ಸಮತೋಲನ ವಾಗಿರಲು ಸಹಾಯವಾಗುತ್ತದೆ. ಇದಕ್ಕಾಗಿಯೇ ಪರಾತ್ಪರ ಗುರು ಡಾಕ್ಟರರು ಕೇವಲ ಭಾರತದಲ್ಲಿ ಮಾತ್ರವಲ್ಲ, ಸಂಪೂರ್ಣ ಪೃಥ್ವಿಯಲ್ಲಿ ಧರ್ಮದ ಅಧಿಷ್ಠಾನವಿರುವ ‘ಈಶ್ವರೀ ರಾಜ್ಯವನ್ನು ಸ್ಥಾಪಿಸಲು ಆಧ್ಯಾತ್ಮಿಕ ಸ್ತರದಲ್ಲಿ ಮಾರ್ಗದರ್ಶನ ಮಾಡುತ್ತಿದ್ದು ಅದಕ್ಕಾಗಿ ಸಂತರು, ಸಂಪ್ರದಾಯದವರು, ಸಾಧಕರು, ಹಿಂದುತ್ವವಾದಿಗಳು, ಧರ್ಮಪ್ರೇಮಿಗಳು ಮತ್ತು ರಾಷ್ಟ್ರಭಕ್ತರ ಸಂಘಟನೆಯನ್ನೂ ಮಾಡುತ್ತಿದ್ದಾರೆ.

– (ಪೂ.) ಶ್ರೀ. ಸಂದೀಪ ಆಳಶಿ (೧೧.೧೧.೨೦೧೯)