‘ಕೆಂಗಣ್ಣು ರೋಗ’ಕ್ಕೆ ಮನೆಮದ್ದು

ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ : ಸಂಚಿಕೆ 223

ಕೆಂಗಣ್ಣು ರೋಗ’ದ ತೊಂದರೆಯಾದಾಗ ಈ ಮುಂದಿನಂತೆ ಆಹಾರ ಮತ್ತು ಔಷಧವನ್ನು ತೆಗೆದುಕೊಳ್ಳಬೇಕು.

1. ಕಣ್ಣುಗಳು ಚೇತರಿಸಿಕೊಳ್ಳುವವರೆಗೆ ನಿಯಮಿತ (ಸಾಮಾನ್ಯ) ಆಹಾರಗಳನ್ನು ತೆಗೆದುಕೊಳ್ಳದೆ, ಜೀರ್ಣಿಸಲು ಸುಲಭವಾದ ಆಹಾರಗಳಾದ (ಲಘು ಆಹಾರಗಳಾದ) ಹೆಸರು ಬೇಳೆಯ ಸಾರು ಮತ್ತು ಅನ್ನ ಹೆಸರು ಬೇಳೆಯ ಕಡಣ (ಬೇಳೆಯನ್ನು ಬೇಯಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪನ್ನು ಸೇರಿಸಿ ತಯಾರಿಸಿದ ದ್ರವ ಪದಾರ್ಥ), ರವೆಯ ಉಪ್ಪಿಟ್ಟು ಅಥವಾ ಶಿರಾ, ಗಂಜಿ, ಹೆಸರು ಬೇಳೆಯಿಂದ ಮಾಡಿದ ಅಕ್ಕಿಯ ಖಿಚಡಿ, ರೊಟ್ಟಿ ಇಂತಹ ಜೀರ್ಣಿಸಲು ಸುಲಭವಾದ ಆಹಾರವನ್ನು ತೆಗೆದುಕೊಳ್ಳಿ.

2. 2-2 ಚಿಟಿಕೆ ತ್ರಿಫಲಾ ಚೂರ್ಣವನ್ನು ದಿನದಲ್ಲಿ 4-5 ಬಾರಿ ಅಗಿಯಿರಿ.

3. ಕಣ್ಣುಗಳು ಉರಿಯುತ್ತಿದ್ದರೆ, ಮಲಗುವಾಗ ಕಣ್ಣು ಮುಚ್ಚಿ ಸೌತೆಕಾಯಿಯ ಚೂರುಗಳನ್ನು ಕತ್ತರಿಸಿ ಸ್ವಚ್ಛವಾಗಿ ತೊಳೆದ ಕರವಸ್ತ್ರದಿಂದ ಕಣ್ಣುಗಳ ಮೇಲೆ ಕಟ್ಟಿಕೊಳ್ಳಿ. ಸೌತೆಕಾಯಿಯಂತೆಯೇ, ಮೆಂತ್ಯದ ಎಲೆಗಳನ್ನು ಸಹ ಕಣ್ಣುಗಳ ಮೇಲೆ ಕಟ್ಟಬಹುದು.

4. ಕಣ್ಣುಗಳನ್ನು ಮುಟ್ಟಿದ ಕೈಗಳಿಂದ ಬೇರೆಡೆ ಮುಟ್ಟಬಾರದು. ಕಣ್ಣುಗಳನ್ನು ಮುಟ್ಟುವ ಮೊದಲು ಮತ್ತು ನಂತರ ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಿರಿ.

5. ಒಂದು ಚಿಟಿಕೆ ಭೀಮಸೇನಿ ಕರ್ಪೂರವನ್ನು ಅಂಗೈಗಳ ನಡುವೆ ಉಜ್ಜಿ ಮತ್ತು ಅಂಗೈಗಳನ್ನು ಕಣ್ಣುಗಳನ್ನು ತೆರೆದು ಕಣ್ಣುಗಳ ಹತ್ತಿರ ಇರಿಸಿ. ಅಂಗೈಗಳು ಕಣ್ಣುಗಳನ್ನು ಒತ್ತಿಡಬಾರದು. ಈ ಪರಿಹಾರವು ಕಣ್ಣಿನ ಉರಿಯೂತವನ್ನು ತಕ್ಷಣ ಕಡಿಮೆ ಮಾಡುತ್ತದೆ.

6. ಸಾಧ್ಯವಾದರೆ ಇತರರೊಂದಿಗೆ ಸಂಪರ್ಕವನ್ನು ತಪ್ಪಿಸಿ. ಇದರಿಂದ ಜೊತೆಗಿರುವವರಿಗೆ ಇದು ಹರಡುವುದಂತೆ ತಡೆಯಲು ಸಹಾಯಕವಾಗುತ್ತದೆ.

– ವೈದ್ಯ ಮೇಘರಾಜ ಮಾಧವ ಪರಾಡಕರ ಸನಾತನ ಆಶ್ರಮ, ರಾಮನಾಥಿ, ಗೋವಾ. (1.8.2023)

(ಈ ಲೇಖನವನ್ನು ಆಧರಿಸಿದ ಗ್ರಂಥವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.)

ಸರಣಿಯ ಎಲ್ಲಾ ಲೇಖನಗಳನ್ನು ಒಟ್ಟಿಗೆ ಓದಲು ಲಿಂಕ್ : bit.ly/3YMwWPx