‘ಸದ್ಯದ ಕಾಲವು ಎಷ್ಟು ಭಯಾನಕವಾಗಿದೆ ಎಂದು ತಿಳಿಯಲು ದಿನಪತ್ರಿಕೆಗಳಲ್ಲಿರುವ ಕೆಲವು ಶೀರ್ಷಿಕೆಗಳೇ ಸಾಕು. ‘ವಿಧಿಯ ರೌದ್ರಾವತಾರ, ‘ನರಕವೆಂದು ಇದಕ್ಕೇ ಹೇಳುತ್ತಾರೆಯೇ ?, ಎಂಬಂತಹ ಶೀರ್ಷಿಕೆಗಳಿಂದಲೇ ಸದ್ಯ ಸಾಮಾಜಿಕ ಸ್ಥಿತಿಯು ಎಷ್ಟು ಭೀಕರವಾಗಿದೆ ಎಂದು ತಿಳಿಯಬಹುದು. ಪ್ರತಿಯೊಬ್ಬ ವ್ಯಕ್ತಿಯು ಅಕ್ಷರಶಃ ಜೀವವನ್ನು ಅಂಗೈಯಲ್ಲಿ ಹಿಡಿದು ಬದುಕುತ್ತಿದ್ದಾನೆ. ‘ಆಕ್ಸಿಜನ್‌ನ ಕೊರತೆ, ‘ಔಷಧಿಗಳ ಕೊರತೆ, ‘ಸಾಕಷ್ಟು ವೈದ್ಯಕೀಯ ಸೌಲಭ್ಯಗಳ ಅಭಾವ ಹೀಗೆ ದಯನೀಯ ಚಿತ್ರಣವಿದೆ. ವೈದ್ಯಕೀಯಕ್ಷೇತ್ರದಲ್ಲಿ ಪ್ರಚಂಡ ಅತ್ಯಾಧುನಿಕಿರಣವಾಗಿರುವಾಗ, ವಿದೇಶಿ ಕಂಪನಿಗಳು ಭಾರತದಲ್ಲಿ ಪ್ರವೇಶಿಸಿದಾಗಿನಿಂದ ಜನರ ಕಿಸೆಯಲ್ಲಿ ಬಹಳಷ್ಟು ಹಣವು ಸದ್ದು ಮಾಡುತ್ತಿರುವಾಗ, ಪ್ರತಿಯೊಬ್ಬರಲ್ಲಿ ಸಂಚಾರವಾಣಿ ಇರುವಾಗ, ಒಳ್ಳೆಯ ಸಂಪರ್ಕ ವ್ಯವಸ್ಥೆ ಇರುವಾಗ, ಮನೆಮನೆಗಳಲ್ಲಿ ಆರೋಗ್ಯ ವಿಮೆ ಇರುವಾಗ ಇಂದು ನಾವು ಒಂದು ವಿಷಾಣುವಿನೆದುರು ಇಷ್ಟೇಕೆ ಅಸಹಾಯಕರಾಗಿದ್ದೇವೆ ?
‘ಇಂದಿನ ಅಸಹಾಯಕತೆಯ ಮೂಲವನ್ನು ಹುಡುಕಲು ಹೋದರೆ ಅದಕ್ಕೆ ‘ಕಾಲವೇ ಉತ್ತರವಾಗಿದೆ, ಎಂದು ತಿಳಿದು ಬರುತ್ತದೆ. ಸದ್ಯ ಕಲಿಯುಗಾಂತರ್ಗತ ಈಶ್ವರೀ ರಾಜ್ಯದ ಸ್ಥಾಪನೆಯಾಗುವ ಪರಿವರ್ತನೆಯ ಕಾಲವು ನಡೆಯುತ್ತಿದೆ. ಭಗವಂತನು ಗೀತೆಯಲ್ಲಿ ಹೇಳಿದಂತೆ ಇದು ಧರ್ಮಗ್ಲಾನಿಯ ಕಾಲವಾಗಿದೆ. ಕಲಿಯುಗದಲ್ಲಿ ಧರ್ಮವು ಲೋಪವಾದುದರಿಂದ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಾಬಲ್ಯವು ಹೆಚ್ಚಾಗಿದೆ. ಅವುಗಳನ್ನು ಸಹಿಸಿಕೊಳ್ಳುವಂತಹ ಸಾತ್ತ್ವಿಕ, ಆತ್ಮಬಲ ಸಂಪನ್ನ ಸಮಾಜವು ಇಲ್ಲದಿರುವುದರಿಂದ ಇಂದು ಎಲ್ಲೆಡೆ ಹಾಹಾಕಾರವುಂಟಾಗಿದೆ. ಈ ಸಮಸ್ಯೆಗಳೊಂದಿಗೆ ಹೋರಾಡಲು ಕೇವಲ ಭೌತಿಕ ಸೌಲಭ್ಯಗಳು ಸಾಕಾಗದು, ಅವುಗಳೊಂದಿಗೆ ಆಧ್ಯಾತ್ಮಿಕ ಸ್ತರದ ಪರಿಹಾರೋಪಾಯ ಮಾಡುವುದು ಆವಶ್ಯಕವಾಗಿದೆ ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಅರಿತು ತಕ್ಷಣ ಅದಕ್ಕೆ ಪರಿಹಾರೋಪಾಯವನ್ನು ಮಾಡಲು ಪ್ರಯತ್ನಿಸಿದರು.
ಅನೇಕ ವರ್ಷಗಳ ಹಿಂದೆಯೇ ಮುಂದೆ ಆಪತ್ಕಾಲವು ಬರುವುದೆಂದು ತಿಳಿದು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ಪ್ರೇರಣೆ ನೀಡಿದರು. ಅವರು ಕಾಲದ ಪ್ರತಿಕೂಲತೆಯನ್ನು ನೋಡಿ ‘ಆಧ್ಯಾತ್ಮಿಕ ಸ್ತರದಲ್ಲಿ ವಿವಿಧ ಉಪಾಯಗಳನ್ನು ಹೇಗೆ ಮಾಡಬೇಕು ? ಎಂದು ಸಾಧಕರಿಗೆ ಕಲಿಸಿದರು. ಈ ರೀತಿ ಸಾಧಕರ ಆಧ್ಯಾತ್ಮಿಕ ಸ್ತರದಲ್ಲಿ ರಕ್ಷಣೆಯಾಗಲು ಅವರು ಹಗಲಿರುಳು ಪರಿಶ್ರಮ ಪಟ್ಟರು. ಆಪತ್ಕಾಲದಲ್ಲಿ ಯಾವುದೇ ಸ್ಥೂಲದ ಅಥವಾ ಪ್ರತ್ಯಕ್ಷ ಆಧಾರವಿಲ್ಲದಿರುವಾಗ ಸಾಧಕರು ಈಶ್ವರನ ಮೇಲಿನ ಶ್ರದ್ಧೆಯಿಂದ ಆಧ್ಯಾತ್ಮಿಕ ಬಲದಲ್ಲಿ ಸುರಕ್ಷಿತರಾಗಿರಲು, ಅವರ ಸುತ್ತಲೂ ಸದಾ ಈಶ್ವರೀ ಕೃಪೆಯ ಕವಚವಿರಬೇಕೆಂದು ಅವರು ಕಳೆದ ಅನೇಕ ವರ್ಷಗಳಿಂದಲೇ ಪ್ರಯತ್ನಿಸುತ್ತಿದ್ದಾರೆ. ಆದುದರಿಂದಲೇ ಸನಾತನದ ಸಾಧಕರ ಮೇಲೆ ವಾತಾವರಣದಲ್ಲಿನ ಅಥವಾ ಸಾಮಾಜಿಕ ನಕಾರಾತ್ಮಕತೆಯ ಪ್ರಭಾವದಿಂದ ಇತರರ ತುಲನೆಯಲ್ಲಿ ಅತ್ಯಲ್ಪ ಪರಿಣಾಮವಾಗುತ್ತಿದೆ ಎಂಬ ಅನುಭೂತಿಯನ್ನು ಸಾವಿರಾರು ಸಾಧಕರು ಪಡೆಯುತ್ತಿದ್ದಾರೆ.
ಪರಾತ್ಪರ ಗುರು ಡಾಕ್ಟರರು ಅಧ್ಯಾತ್ಮದ ಕ್ಷೇತ್ರದಲ್ಲಿ ಮಾಡಿದ ಈ ಕಾರ್ಯವು ಕೇವಲ ಇತಿಹಾಸವಲ್ಲ ಸಾಧಕರಿಗೆ ಕಲಿಯ ಪ್ರಭಾವದಿಂದ ರಕ್ಷಿಸಲು ನೀಡಿದ ಹೋರಾಟವಾಗಿದೆ. ಇಲ್ಲಿ ನೀಡಲಾಗಿರುವ ಪ್ರಸಂಗಗಳು ಅವರು ಮಾಡಿದ ಸ್ಥೂಲದ ಪ್ರಯತ್ನಗಳದ್ದಾಗಿವೆ. ಸಾಧಕರ ರಕ್ಷಣೆಯಾಗಲು ಪರಾತ್ಪರ ಗುರುದೇವರು ಸೂಕ್ಷ್ಮ ಸ್ತರದಲ್ಲಿ ನಮಗಾಗಿ ಏನೆಲ್ಲ ಮಾಡಿದ್ದಾರೆ ಎಂದು ತಿಳಿಯುವ ಕ್ಷಮತೆ ನಮ್ಮಲ್ಲಿಯೂ ಇಲ್ಲ. ಆದರೂ ಏನೆಲ್ಲ ಗಮನಕ್ಕೆ ಬಂದವೋ, ಅವುಗಳಲ್ಲಿನ ಕೆಲವು ಪ್ರಮುಖ ಅಂಶಗಳನ್ನು ಶಬ್ದಗಳಲ್ಲಿ ವ್ಯಕ್ತ ಪಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ.
ಸಂಕಲನಕಾರರು : ಸದ್ಗುರು ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆ ಮಾಡಿ ದೇವರನ್ನು ತಮ್ಮವರನ್ನಾಗಿಸಿಕೊಳ್ಳಲು ಹೇಳುವುದು
ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ತುಂಬಾ ಹಿಂದಿನಿಂದಲೇ, ‘ನೀವು ತಪ್ಪುಗಳನ್ನು ಮಾಡುತ್ತಾ ಹೋದರೆ ಮತ್ತು ಅಯೋಗ್ಯವಾಗಿ ವರ್ತಿಸುತ್ತಾ ಹೋದರೆ, ದೇವರಿಗೆ ನೀವು ತನ್ನವರು ಎಂದು ಅನಿಸಬಹುದೇ ? ದೇವರ ಗಮನ ನಿಮ್ಮ ಕಡೆಗೆ ಹೋಗಬಹುದೇ ? ಸಂಕಟಕಾಲದಲ್ಲಿ ದೇವರು ನಿಮ್ಮ ರಕ್ಷಣೆಯನ್ನು ಮಾಡಬಹುದೇ ? ಎಂದು ಹೇಳುತ್ತಿದ್ದರು. ಈ ವಾಕ್ಯಗಳನ್ನು ಅವರು ಸಾಧಕರಲ್ಲಿ ಬಿಂಬಿಸಿದರು. ಸಾಧಕರ ಮನಸ್ಸು, ಬುದ್ಧಿ ಮತ್ತು ಚಿತ್ತ ಇವುಗಳ ಶುದ್ಧಿಯಾಗಲೆಂದು ಅವರು ಸಾಧಕರಿಗೆ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಕಲಿಸಿದರು. ಸಾಧಕರು ಈ ಪ್ರಕ್ರಿಯೆಯನ್ನು ಕಳೆದ ಎರಡು ದಶಕಗಳಿಂದ ನಡೆಸುತ್ತಿದ್ದಾರೆ. ಈ ಪ್ರಕ್ರಿಯೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಅವರು ಆ ಕುರಿತಾದ ಗ್ರಂಥವನ್ನೂ ಪ್ರಕಾಶಿಸಿದ್ದಾರೆ. ಆಧ್ಯಾತ್ಮಿಕ ಸ್ತರದಲ್ಲಿ ದೇಹವು ಶುದ್ಧವಾಗತೊಡಗಿದಾಗಲೇ ನಾವು ಏಕಾಗ್ರತೆಯಿಂದ ದೇವರ ನಾಮಸ್ಮರಣೆಯನ್ನು ಮಾಡಬಹುದು, ಹಾಗೆಯೇ ನಮ್ಮಿಂದ ಸಾಧನೆಯಾಗುತ್ತದೆ. ಸಾಧಕರು ಈ ಪ್ರಕ್ರಿಯೆಯನ್ನು ಮನಃಪೂರ್ವಕ ನಡೆಸಿದುದರಿಂದ ಅನೇಕ ಸಾಧಕರ ಉನ್ನತಿಯಾಗಿ ಅವರು ಸಂತಪದವಿಗೆ ತಲುಪಿದ್ದಾರೆ. ‘ಮನಸ್ಸು, ಬುದ್ಧಿ ಮತ್ತು ಚಿತ್ತ ಇವುಗಳು ಶುದ್ಧವಾಗದ ಹೊರತು ನಾವು ದೇವರೊಂದಿಗೆ ಏಕರೂಪವಾಗಲು ಸಾಧ್ಯವಿಲ್ಲ ಎಂಬ ತತ್ತ್ವವಿದೆ. ಈ ರೀತಿ ದೇವರನ್ನು ತಮ್ಮವರನ್ನಾಗಿಸಲು ಕಲಿಸಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ಆಪತ್ಕಾಲದ ಸಿದ್ಧತೆಯನ್ನು ಬಹಳ ಹಿಂದಿನಿಂದಲೇ ಮಾಡಿಸಿಕೊಳ್ಳುತ್ತಿದ್ದಾರೆ.
ವಿಶಿಷ್ಟ ತೊಂದರೆಗಾಗಿ ವಿಶಿಷ್ಟ ದೇವತೆಯ ನಾಮಜಪ
ಸನಾತನದ ಸಾಧಕರಿಗೆ ಕೆಟ್ಟ ಶಕ್ತಿಗಳಿಂದ ಆಧ್ಯಾತ್ಮಿಕ ತೊಂದರೆಯಾಗತೊಡಗಿತು, ಆಗ ‘ಸನಾತನದ ಸಾಧಕರು ಈಶ್ವರೀ ರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಗಾಗಿ ಕಾರ್ಯನಿರತರಾಗಿರುವುದರಿಂದಲೇ ಸಾಧಕರಿಗೆ ಹೆಚ್ಚಿನ ತೊಂದರೆಯನ್ನು ಭೋಗಿಸಬೇಕಾಗುತ್ತಿದೆ, ಎಂದು ಪರಾತ್ಪರ ಗುರು ಡಾಕ್ಟರರು ನಮಗೆ ಆಗಾಗ ಹೇಳಿದರು. ಆಗ ಸಾಧಕರ ತೊಂದರೆಯನ್ನು ದೂರ ಮಾಡಲು ಯಾವ ವಿಶಿಷ್ಟ ನಾಮಜಪವನ್ನು ಮಾಡಿದರೆ ಲಾಭವಾಗುವುದು ಎಂದು ಪರಾತ್ಪರ ಗುರುದೇವರು ಸ್ವತಃ ಹುಡುಕುತ್ತಿದ್ದರು. ಈಗ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡ ಸನಾತನದ ಕೆಲವು ಸಾಧಕರು, ಸಂತರು ಮತ್ತು ಸದ್ಗುರುಗಳೂ ವಿಶಿಷ್ಟ ತೊಂದರೆಗಳಿಗಾಗಿ ವಿಶಿಷ್ಟ ನಾಮಜಪವನ್ನು ಹುಡುಕಿ ಸಾಧಕರಿಗೆ ಸಹಾಯ ಮಾಡುತ್ತಿದ್ದಾರೆ. ನನಗೆ ಪ್ರೇರಣೆಯನ್ನು ನೀಡಿ ಪರಾತ್ಪರ ಗುರು ಡಾಕ್ಟರರು ನನ್ನಿಂದ ಕೊರೋನಾ ಮಹಾಮಾರಿಯ ಕಾಲದಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗುರುದೇವ ದತ್ತ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಓಂ ನಮಃ ಶಿವಾಯ | ಎಂಬ ಆತ್ಮಬಲವನ್ನು ಹೆಚ್ಚಿಸುವ ನಾಮಜಪವನ್ನು ಕಂಡುಹುಡುಕುವಂತೆ ಮಾಡಿದರು. ಈ ನಾಮಜಪವು ಅತ್ಯಂತ ಪರಿಣಾಮಕಾರಿಯಾಗಿದೆ ಎಂಬುದರ ಬಗ್ಗೆ ನೂರಾರು ಸಾಧಕರು ಅನುಭೂತಿಯನ್ನು ಪಡೆದಿದ್ದಾರೆ.
ಇದರ ಹೊರತಾಗಿ ಇತರ ಶಾರೀರಿಕ ಕಾಯಿಲೆಗಳಿಗೆ, ಅಡಚಣೆಗಳನ್ನು ದೂರಗೊಳಿಸಲು ಕಂಡುಹಿಡಿದ ನಾಮಜಪಗಳು ಈ ಆಪತ್ಕಾಲದ ಪರಿಸ್ಥಿತಿಯಲ್ಲಿ ಸಾಧಕರಿಗೆ ವರದಾನವಾಗುತ್ತಿವೆ. ಆಪತ್ಕಾಲದಲ್ಲಾಗುವ ಔಷಧಿಗಳ ಅಭಾವವನ್ನು ಗಮನದಲ್ಲಿಟ್ಟು ಕೆಲವು ವರ್ಷಗಳ ಹಿಂದೆಯೇ ಪರಾತ್ಪರ ಗುರು ಡಾಕ್ಟರರು ‘ರೋಗ ನಿವಾರಣೆಗಾಗಿ ನಾಮಜಪ, ‘ನಾಮಜಪಗಳಿಂದ ದೂರವಾಗುವ ರೋಗಗಳು ಎಂಬ ಗ್ರಂಥಗಳನ್ನು ಪ್ರಕಾಶಿಸಿದ್ದಾರೆ. ಈ ಕುರಿತು ಇನ್ನೂ ಮುಂದಿನ ಸಂಶೋಧನೆ ನಡೆದಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಕಾಯಿಲೆಗಳಿಗಾಗಿ ಔಷಧಿಗಳು ಇವೆ, ಸಮಾಜದ ಕೈಯಲ್ಲಿ ಹಣವಿದೆ; ಆದರೆ ರೋಗಿಗಳ ವರೆಗೆ ಔಷಧಿಗಳನ್ನು ತಲುಪಿಸಲು ಅಡಚಣೆಯುಂಟಾಗಿದೆ. ಕೊರೋನಾ ಕಾಲದಲ್ಲಿ ಆಕ್ಸಿಜನ್ ಅಭಾವದಿಂದ ಅನೇಕ ರೋಗಿಗಳು ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತಿದೆ. ಒಂದೆಡೆ ‘ರೆಮಡೆಸಿವಿರ್ ಇಂಜೆಕ್ಷನ್‌ನ ಅಭಾವ ಮತ್ತೊಂದೆಡೆ ಕಾಳಸಂತೆ ನಡೆಯುತ್ತಿದೆ. ಇವೆಲ್ಲ ಪರಿಸ್ಥಿತಿಗಳಲ್ಲಿ ‘ಅನೇಕ ಚಿಕ್ಕ-ದೊಡ್ಡ ಕಾಯಿಲೆಗಳಿಗೆ ಕಂಡುಹುಡುಕಿದ ನಾಮಜಪವು ಸಂಜೀವಿನಿಯೇ ಆಗಿದೆ ಎಂದು ಸಾಧಕರ ಭಾವವಾಗಿದೆ.
ಸಂತರು ಹೇಳಿದ ಉಪಾಯ
ಹಿಂದೆಲ್ಲ ಪರಾತ್ಪರ ಗುರು ಡಾಕ್ಟರರು ಯಾವಾಗ ಸಂತರನ್ನು ಭೇಟಿಯಾಗುತ್ತಿದ್ದರೋ, ಆಗ ಅವರು ಸಂತರಿಗೆ ಸಾಧಕರ ತೊಂದರೆ, ಕಾಲದ ಪ್ರತಿಕೂಲತೆ ಇವುಗಳ ಕುರಿತು ಹೇಳಿ ಸಾಧಕರಿಗಾಗಿ ನಾಮಜಪಾದಿ ಉಪಾಯವನ್ನು ಮಾಡಲು ವಿನಂತಿಸಿಕೊಳ್ಳುತ್ತಿದ್ದರು. ಅವರ ಮೇಲಿನ ಪ್ರೀತಿಯಿಂದ ಅನೇಕ ಸಂತರು ಸಾಧಕರ ತೊಂದರೆಗಳು ದೂರವಾಗಲೆಂದು ವಿವಿಧ ಪ್ರಕಾರದ ಉಪಾಯಗಳನ್ನು ಮಾಡಿದರು. ಕಳೆದ ಕೆಲವು ವರ್ಷಗಳಿಂದ ಅನೇಕ ಸಂತರು, ಅಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಗಳು ರಾಮನಾಥಿ ಆಶ್ರಮಕ್ಕೆ ಬರುತ್ತಿದ್ದಾರೆ. ಸಂತರು ಹೇಳಿದ ಎಲ್ಲ ಉಪಾಯ, ವಿಧಿ, ಅನುಷ್ಠಾನಗಳನ್ನು ಪರಾತ್ಪರ ಗುರು ಡಾಕ್ಟರರೂ ಅತ್ಯಂತ ಗಾಂಭೀರ್ಯದಿಂದ ಮತ್ತು ಭಾವಪೂರ್ಣವಾಗಿ ಮಾಡುತ್ತಾರೆ. ಶ್ರೀ ಶತಚಂಡಿಯಾಗ, ಸಂಕಟಗಳ ನಿವಾರಣೆ ಮಾಡಲು ವಿಶಿಷ್ಟ ಪದ್ಧತಿಯಲ್ಲಿ ಶ್ವಾಸದ ಲಯ ಹಿಡಿದು ದೇವತೆಯ ಜಪ ಮಾಡುವುದು, ಶ್ರೀ ಸಪ್ತಶತಿ ಪಾರಾಯಣ ಮಾಡುವುದು ಇವು ಅವುಗಳಲ್ಲಿನ ಕೆಲವು ವೈಶಿಷ್ಟ್ಯಪೂರ್ಣ ಅನುಷ್ಠಾನಗಳಾಗಿವೆ. ಇಂತಹ ಸಾವಿರಾರು ಚಿಕ್ಕ-ದೊಡ್ಡ ಉಪಾಯಗಳನ್ನು ಪರಾತ್ಪರ ಗುರು ಡಾಕ್ಟರರು ಅತ್ಯಂತ ಶ್ರದ್ಧೆಯಿಂದ ಮಾಡಿದ್ದಾರೆ. ಸಂತರ ಆಜ್ಞೆಯಿಂದ ಮಾಡಿದ ಅನುಷ್ಠಾನಗಳಿಂದ, ಧಾರ್ಮಿಕ ವಿಧಿಗಳಿಂದ ತೊಂದರೆಗಳ ನಿವಾರಣೆಯಾದ ಅನುಭೂತಿಯನ್ನೂ ಸಾಧಕರು ಪಡೆದಿದ್ದಾರೆ.
ಪ್ರಾಣಶಕ್ತಿವಹನ ಉಪಚಾರಪದ್ಧತಿಯನ್ನು ಹುಡುಕುವುದು
ಪ್ರಾಣಶಕ್ತಿವಹನ ಪದ್ಧತಿಗನುಸಾರ ಉಪಾಯ ಹುಡುಕುತ್ತಿರುವ ಪರಾತ್ಪರ ಗುರು ಡಾ. ಆಠವಲೆ ನಮ್ಮ ಮನಸ್ಸಿಗೆ ಕಾರ್ಯ ಮಾಡಲು ಯಾವ ಶಕ್ತಿಯ ಆವಶ್ಯಕತೆ ಇದೆಯೋ, ಅದನ್ನು ಪ್ರಾಣಶಕ್ತಿ (ಚೇತನಾ) ವಹನ ವ್ಯೂಹವು ಪೂರೈಸುತ್ತದೆ. ಹಾಗೆಯೇ ನಮ್ಮ ಶರೀರದಲ್ಲಿ ಕಾರ್ಯನಿರತವಾಗಿರುವ ರಕ್ತಪರಿಚಲನೆ, ಉಸಿರಾಟ, ಜೀರ್ಣಾಂಗ ಇತ್ಯಾದಿ ವ್ಯೂಹಗಳಿಗೂ ಯಾವ ಶಕ್ತಿಯ ಆವಶ್ಯಕತೆ ಇದೆಯೋ, ಅದನ್ನು ಪ್ರಾಣಶಕ್ತಿವಹನ ವ್ಯೂಹವು ಪೂರೈಸುತ್ತದೆ. ಅದರಲ್ಲಿ ಯಾವು ದಾದರೊಂದು ಸ್ಥಳದಲ್ಲಿ ಅಡಚಣೆ ಬಂದರೆ ಸಂಬಂಧಿತ ಇಂದ್ರಿಯಗಳ ಕಾರ್ಯಕ್ಷಮತೆಯು ಕಡಿಮೆಯಾಗಿ ರೋಗಗಳು ಬರುತ್ತವೆ. ಇಂತಹ ಸಮಯದಲ್ಲಿ ಇಂದ್ರಿಯಗಳ ಕಾರ್ಯವನ್ನು ಸುಧಾರಿಸಲು ಆಯುರ್ವೇದಿಕ, ‘ಅಲೋಪಥಿ ಮುಂತಾದ ಔಷಧಿಗಳನ್ನು ಎಷ್ಟೇ ತೆಗೆದುಕೊಂಡರೂ ಅವುಗಳಿಂದ ವಿಶೇಷ ಪರಿಣಾಮವಾಗುವುದಿಲ್ಲ. ಅದಕ್ಕಾಗಿ ಪ್ರಾಣಶಕ್ತಿವಹನ ವ್ಯೂಹದಲ್ಲಿ ಉಂಟಾದ ಅಡಚಣೆಗಳನ್ನು ದೂರ ಮಾಡುವುದೊಂದೇ ಮಾರ್ಗವಾಗಿರುತ್ತದೆ. ನಮ್ಮ ಕೈಗಳ ಬೆರಳುಗಳಿಂದ ಪ್ರಾಣಶಕ್ತಿಯು ಹೊರಬೀಳುತ್ತಿರುತ್ತದೆ. ಅದನ್ನು ಬಳಸಿ ರೋಗಗಳನ್ನು ಗುಣಪಡಿಸುವುದು ಪ್ರಾಣಶಕ್ತಿವಹನ ಉಪಾಯ ಪದ್ಧತಿಯ ತಿರುಳಾಗಿದೆ. ಈ ಅತ್ಯಂತ ಸುಲಭ ಉಪಾಯಪದ್ಧತಿಯನ್ನು ಪರಾತ್ಪರ ಗುರುದೇವರು ಸಾಧಕರಿಗಾಗಿ ಕಂಡುಹಿಡಿದಿದ್ದಾರೆ.
ರೋಗನಿವಾರಣೆಯ ಸಂದರ್ಭದಲ್ಲಿ ಬಿಂದುಒತ್ತಡ, ರಿಫ್ಲೆಕ್ಸಾಲಜಿ ಮುಂತಾದ ಉಪಾಯಪದ್ಧತಿ ಗಳಲ್ಲಿ ಪುಸ್ತಕ ಅಥವಾ ತಜ್ಞರ ಸಹಾಯದ ಆವಶ್ಯಕತೆ ಇರುತ್ತದೆ. ಪಿರಮಿಡ್, ಆಯಸ್ಕಾಂತ ಮುಂತಾದ ಉಪಾಯಪದ್ಧತಿಗಳಲ್ಲಿ ಆಯಾ ಸಾಧನಗಳ ಆವಶ್ಯಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯಾರ ಸಹಾಯವಿಲ್ಲದೇ ಮತ್ತು ಯಾವುದೇ ಸಾಧನಗಳ ಆವಶ್ಯಕತೆಯಿಲ್ಲದ ಪ್ರಾಣಶಕ್ತಿವಹನ ವ್ಯೂಹ ಉಪಾಯಪದ್ಧತಿಯು ಭೀಕರ ಆಪತ್ಕಾಲದ ವಿಚಾರದಿಂದ ಹೆಚ್ಚು ಸ್ವಾವಲಂಬಿಯಾಗಿದೆ. ಆಪತ್ಕಾಲದಲ್ಲಿ ಆಧುನಿಕ ವೈದ್ಯರು, ಮಾರ್ಗದರ್ಶಕ ಸಾಧಕರು ಮುಂತಾದವರು ಸಿಗುವುದು ಕಠಿಣವಾದಾಗ, ಈ ಪ್ರಾಣಶಕ್ತಿವಹನ ಉಪಾಯಪದ್ಧತಿಯಿಂದ ಸಾಧಕರು ತಮ್ಮ ಮೇಲೆ ತಾವೇ ಉಪಾಯ ಮಾಡಿಕೊಳ್ಳಬಹುದು. ಯಾವ ಸಾಧಕರಿಗೆ ಈ ರೀತಿ ಉಪಾಯವನ್ನು ಹುಡುಕಲು ಬರುವುದಿಲ್ಲವೋ, ಅವರಿಗೆ ಇತರ ಕೆಲವು ಸಾಧಕರು ಉಪಾಯವನ್ನು ಹುಡುಕಿ ಕೊಡುತ್ತಿದ್ದಾರೆ. ಹಾಗೆಯೇ ಈ ಉಪಾಯಪದ್ಧತಿಯ ಇನ್ನೊಂದು ಮಹತ್ವದ ವೈಶಿಷ್ಟ್ಯವೆಂದರೆ ದೂರದಲ್ಲಿರುವ ರೋಗಿಯ ಮೇಲೆ, ಅಂದರೆ ಆ ರೋಗಿಯು ಜಗತ್ತಿನಲ್ಲಿ ಎಲ್ಲಿಯೇ ಇದ್ದರೂ ಅಥವಾ ಅವನು ‘ಐ.ಸಿ.ಯುನಲ್ಲಿ (ತುರ್ತು ನಿಗಾ ಘಟಕದಲ್ಲಿ) ಇದ್ದರೂ, ಅವನ ಮೇಲೆ ಆವಶ್ಯಕವಾದ ಉಪಾಯವನ್ನು ಉಚ್ಚ ಆಧ್ಯಾತ್ಮಿಕ ಸ್ತರದ ವ್ಯಕ್ತಿಯು ತನ್ನ ಮೇಲೆ ಮಾಡಿಕೊಂಡು ಆ ರೋಗಿಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಸಮಷ್ಟಿಗಾಗಿ ಅತ್ಯಂತ ಪರಿಣಾಮಕಾರಿ ಮತ್ತು ಕೆಲವು ಕಿಲೋಮೀಟರ್‌ವರೆಗಿನ ವಾತಾವರಣವನ್ನು ಶುದ್ಧಗೊಳಿಸುವ ಯಜ್ಞ-ಯಾಗ !
ಮುಂಬರುವ ಮೂರನೇ ಮಹಾಯುದ್ಧದ ಕಾಲದಲ್ಲಿ ವಾತಾವರಣವು ಅತ್ಯಂತ ಕಲುಷಿತಗೊಳ್ಳಲಿದೆ. ‘ಕೊರೋನಾ ಮಹಾಮಾರಿ ಯಂತಹ ರೋಗ-ರುಜಿನಗಳು ಹರಡುವುದರಿಂದಲೂ ವಾತಾವರಣವು ಕಲುಷಿತ ಗೊಳ್ಳುತ್ತದೆ. ವಾತಾವರಣವನ್ನು ಶುದ್ಧಗೊಳಿಸಲು ಈಗಿನಿಂದಲೇ ಪ್ರಯತ್ನಿಸುವುದು ಆವಶ್ಯಕವಾಗಿದೆ. ಯಜ್ಞ-ಯಾಗಗಳಿಂದ ಕೆಲವು ಕಿಲೋಮೀಟರ್ ವರೆಗಿನ ವಾತಾವರಣವು ಶುದ್ಧವಾಗುತ್ತದೆ ಹಾಗೂ ಯಜ್ಞ-ಯಾಗಾದಿ ಗಳಲ್ಲಿ ಆವಾಹನೆ ಮಾಡುವ ದೇವತೆ ಗಳು ಪ್ರಸನ್ನರಾಗಿ ಅವರ ಆಶೀರ್ವಾದವೂ ದೊರಕುತ್ತದೆ. ಇದರಿಂದ ನೈಸರ್ಗಿಕ ವಿಪತ್ತು, ಯುದ್ಧಗಳಂತಹ ಸಂಕಷ್ಟದ ಕಾಲದಲ್ಲಿ ರಕ್ಷಣೆಯಾಗುತ್ತದೆ ಎನ್ನುವುದನ್ನು ಗಮನ ದಲ್ಲಿಟ್ಟು ಪರಾತ್ಪರ ಗುರು ಡಾಕ್ಟರರು ೨೦೦೧ ರಿಂದಲೇ ಕಾಲಾನುಸಾರ ಯಜ್ಞ ಸಾಧನೆಯನ್ನು ಮಾಡಲು ಪ್ರಾರಂಭಿಸಿ ದ್ದರು. ೨೦೦೦ ನೇ ಇಸವಿಯಲ್ಲಿ ಸಾಧಕರಿಗೆ ಕೆಟ್ಟ ಶಕ್ತಿಗಳಿಂದ ಆಧ್ಯಾತ್ಮಿಕ ತೊಂದರೆ ಪ್ರಾರಂಭವಾದ ಬಳಿಕ ಗೋವಾದ ಫೋಂಡಾ ದಲ್ಲಿರುವ ‘ಸುಖಸಾಗರ ಸೇವಾಕೇಂದ್ರದಲ್ಲಿ ಕೆಲವು ಯಜ್ಞಗಳನ್ನು ಮಾಡಲಾಯಿತು. ನಂತರದ ಕಾಲದಲ್ಲಿಯೂ ವಿವಿಧ ಸಂತರ ಮಾರ್ಗದರ್ಶನದಡಿಯಲ್ಲಿ ‘ಉಚ್ಛಿಷ್ಟ ಗಣಪತಿಯಾಗ, ‘ಸಾಗ್ನಿಚಿತ್ ಅಶ್ವಮೇಧ ಮಹಾಸೋಮಯಾಗ, ‘ಚಂಡಿಯಾಗ ‘ಧನ್ವಂತರಿಯಾಗ ಇತ್ಯಾದಿ ವಿವಿಧ ವೈಶಿಷ್ಟ್ಯಪೂರ್ಣ ಯಜ್ಞಗಳನ್ನು ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ನೆರವೇರಿಸಲಾಯಿತು. ಈಗ ಸಾಧಕರ ರಕ್ಷಣೆ, ಧರ್ಮಪ್ರಸಾರದ ಕಾರ್ಯ ದಲ್ಲಿ ಬರುವ ಸಂಕಟಗಳ ನಿವಾರಣೆ, ಅಲ್ಲದೇ ಶೀಘ್ರವಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಸಾಧ್ಯವಾಗಬೇಕೆಂದು ಕಳೆದ ೪ ವರ್ಷಗಳಿಂದ ಮಹರ್ಷಿಗಳು ವಿವಿಧ ದೇವತೆಗಳ ಯಜ್ಞವನ್ನು ಮಾಡಲು ಹೇಳುತ್ತಿದ್ದಾರೆ. ಮಹರ್ಷಿಗಳ ಆಜ್ಞೆಯಿಂದ ಮತ್ತು ಪರಾತ್ಪರ ಗುರು ಡಾಕ್ಟರರ ಸಂಕಲ್ಪದಿಂದ ಈ ಯಜ್ಞಗಳು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ಜರುಗುತ್ತಿವೆ. ಈ ಸಂದರ್ಭದಲ್ಲಿ ವರ್ಷ ೨೦೧೭ ರಲ್ಲಿ ಪರಾತ್ಪರ ಗುರು ಡಾಕ್ಟರರು ‘ಪ್ರಸ್ತುತ ಆಪತ್ಕಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಧಕರಿಗೆ ಆಗುತ್ತಿರುವ ತೊಂದರೆ ಅತ್ಯಧಿಕ ತೀವ್ರವಾಗಿದ್ದು, ಸಂತರು ತಿಳಿಸಿರುವ ಉಪಾಯಗಳು ಸಹ ಹೆಚ್ಚು ಪರಿಣಾಮಕಾರಿ ಆಗುತ್ತಿಲ್ಲ. ಇದನ್ನು ಗುರುತಿಸಿಯೇ ಮಹರ್ಷಿಗಳು ಸಾಧಕರ ರಕ್ಷಣೆಗಾಗಿ ನಿರಂತರವಾಗಿ ಯಜ್ಞಗಳನ್ನು ಮಾಡಲು ಹೇಳುತ್ತಿದ್ದಾರೆ ಎಂದು ಹೇಳಿದ್ದರು.
ಪ್ರತ್ಯಕ್ಷವಾಗಿಯೂ ಏಪ್ರಿಲ್ ೨೦೨೧ ರವರೆಗೆ ಸನಾತನದ ಆಶ್ರಮಗಳಲ್ಲಿ ೨೬೭ ಕ್ಕಿಂತ ಹೆಚ್ಚು ಯಜ್ಞಗಳು ಜರುಗಿವೆ. ಈ ಎಲ್ಲ ಯಾಗಗಳಲ್ಲಿ ‘ಆಪತ್ಕಾಲ ದಲ್ಲಿ ಸಾಧಕರ ರಕ್ಷಣೆಯಾಗಲಿ ಎಂದು ಸಂಕಲ್ಪವನ್ನು ಮಾಡಲಾಗಿದೆ. ‘ಸಾಂಕ್ರಾಮಿಕ ರೋಗಗಳಿಂದ ರಕ್ಷಣೆಯಾಗಬೇಕು, ಎಂದು ಮಾಡಿರುವ ‘ಸಂಜೀವನಿ ಹೋಮ, ಪಂಚಮಹಾಭೂತಗಳ ಪ್ರಕೋಪದಿಂದ ರಕ್ಷಣೆಯಾಗಲು ಮಾಡಿರುವ ‘ಪಂಚಮಹಾಭೂತ ಯಾಗ, ‘ಆರೋಗ್ಯ ಚೆನ್ನಾಗಿರಬೇಕು ಎಂದು ಮಾಡಿರುವ ‘ಧನ್ವಂತರಿಯಾಗ, ‘ಪ್ರಾಣಶಕ್ತಿ ಹೆಚ್ಚಳವಾಗಬೇಕು ಎಂದು ಮಾಡಿರುವ ‘ಶ್ರೀ ಗಣೇಶಯಾಗ ಇವುಗಳು ಸಾಧಕರ ಆರೋಗ್ಯ ರಕ್ಷಣೆಗಾಗಿ ಮಹತ್ವಪೂರ್ಣವಾಗಿವೆ.
ಮೂಲದಲ್ಲಿಯೇ ಯಜ್ಞಗಳು ತುಂಬಾ ಒಳ್ಳೆಯ ಪರಿಣಾಮವನ್ನು ಬೀರುತ್ತವೆ. ಅದರಲ್ಲಿಯೂ ಅವು ಸನಾತನದ ಆಶ್ರಮದಲ್ಲಿ ಪರಾತ್ಪರ ಗುರು ಡಾಕ್ಟರರ ಸಂಕಲ್ಪದಿಂದ ಜರುಗುವುದು ದೈವಿ ಘಟನೆಯಾಗಿದೆ. ಯಜ್ಞಗಳಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಕೆಲವೊಮ್ಮೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಇತರ ಸದ್ಗುರುಗಳು ಮತ್ತು ಸಂತರು ಭಾಗವಹಿಸಿರುತ್ತಾರೆ. ಅರ್ಥಾರ್ಜನೆಗಾಗಿ ಅಲ್ಲ, ಈಶ್ವರಪ್ರಾಪ್ತಿಗಾಗಿ ಪೌರೋಹಿತ್ಯವನ್ನು ಮಾಡುವ ಸನಾತನದ ಪುರೋಹಿತರು ಯಜ್ಞನಾರಾಯಣನ ಸೇವೆಯನ್ನು ಭಾವಪೂರ್ಣ ಮತ್ತು ಪರಿಪೂರ್ಣವಾಗಿ ಮಾಡಲು ಪ್ರಯತ್ನಿಸುತ್ತಾರೆ. ಈ ಕಾರಣದಿಂದಲೇ ಈ ಯಜ್ಞಗಳಿಂದ ನೂರಾರು ಸಾಧಕರಿಗೆ ಒಳ್ಳೆಯ ಅನುಭೂತಿಗಳು ಬಂದಿವೆ. ಇವೆಲ್ಲವೂ ಘಟಿಸುತ್ತಿರುವುದು ಕೇವಲ ಮತ್ತು ಕೇವಲ ಪರಾತ್ಪರ ಗುರು ಡಾಕ್ಟರರಿಗೆ ಇರುವ ಸಮಷ್ಟಿಯ ರಕ್ಷಣೆಯ ತಳಮಳದಿಂದ ಮಾತ್ರ !
ದೇವತೆಗಳ ಆಶೀರ್ವಾದ ಪಡೆಯಲು ದೇಶ-ವಿದೇಶಗಳಲ್ಲಿನ ತೀರ್ಥಕ್ಷೇತ್ರಗಳಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಪ್ರವಾಸ
ಇದೇ ರೀತಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಸಾವಿರಾರು ತೀರ್ಥಕ್ಷೇತ್ರಗಳಿಗೆ ಹೋಗಿ ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗಲು ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿನ ಅಡಚಣೆಗಳು ದೂರವಾಗಲು ಪ್ರಾರ್ಥನೆ ಮಾಡಿದ್ದಾರೆ.
ಟಿಪ್ಪಣಿ : ಈ ಲೇಖನದಲ್ಲಿ ಯಜ್ಞ ಅಥವಾ ಪ್ರಾರ್ಥನೆಗಳು ಸಾಧಕರ ರಕ್ಷಣೆಗಾಗಿ ಎಂದು ಹೇಳಿದ್ದರೂ, ಅದರರ್ಥ ಕೇವಲ ‘ಸನಾತನದ ಸಾಧಕರ ರಕ್ಷಣೆಗಾಗಿ ಎಂದು ಸೀಮಿತವಾಗಿರದೇ ಈ ಉಪಾಯಗಳಿಂದ ‘ಒಬ್ಬ ಸಾಧಕರಂತೆ ಆಚರಣೆ ಮಾಡುತ್ತಿರುವ ಸಮಾಜದಲ್ಲಿರುವ ವ್ಯಕ್ತಿ, ಈಶ್ವರನ ಭಕ್ತ, ಸಂತರು ಇವರೆಲ್ಲರ ರಕ್ಷಣೆಗಾಗಿ ಎಂದು ವ್ಯಾಪಕವಾದ ಅರ್ಥವಿದೆ.
ವಾಸ್ತವದಲ್ಲಿ ಪರಾತ್ಪರ ಗುರುದೇವರ ಆಧ್ಯಾತ್ಮಿಕ ಅಧಿಕಾರ ಎಷ್ಟು ಅಗಾಧವಾಗಿದೆಯೆಂದರೆ ಕೇವಲ ಅವರ ಅಸ್ತಿತ್ವದಿಂದಲೇ ಸಾಧಕರ ರಕ್ಷಣೆಯಾಗಲಿದೆ. ಹೀಗಿದ್ದರೂ ಸಾಧಕರಿಗೆ ಒಂದು ವಿಶಿಷ್ಟ ಶಾಸ್ತ್ರ ಕಲಿಯಲು ಸಿಗಬೇಕು, ಮುಂದಿನ ಅನೇಕ ಪೀಳಿಗೆಗಳಿಗೆ ‘ಆಧ್ಯಾತ್ಮಿಕ ಸ್ತರದಲ್ಲಿ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದು ತಿಳಿಯಬೇಕು ಎಂಬುದಕ್ಕಾಗಿ ಇವೆಲ್ಲವನ್ನು ಮಾಡುತ್ತಿದ್ದಾರೆ. ಈ ಆಪತ್ಕಾಲದಲ್ಲಿ ಗಾಂಭೀರ್ಯದಿಂದ ಮತ್ತು ಶ್ರದ್ಧಾಪೂರ್ವಕವಾಗಿ ಸಾಧನೆಯನ್ನು ಮಾಡುತ್ತಿರು ವುದೇ ಅವರಿಗೆ ಸಮರ್ಪಿಸುವ ನಿಜವಾದ ಕೃತಜ್ಞತೆಯಾಗಿದೆ !
ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕಳೆದ ೯ ವರ್ಷಗಳಿಂದ ದೇಶ-ವಿದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಮಹರ್ಷಿಗಳ ಆಜ್ಞೆಯಿಂದ ವಿವಿಧ ತೀರ್ಥಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ತೊಂದರೆಗಳ ನಿವಾರಣೆಯಾಗಲು, ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗಲು ಅವರು ವಿವಿಧ ವಿಧಿ, ಪರಿಹಾರಗಳನ್ನು ಮಾಡುತ್ತಿದ್ದಾರೆ. ಈ ರೀತಿ ಇಲ್ಲಿಯವರೆಗೆ ಅವರು ೯ ಲಕ್ಷಕ್ಕಿಂತ ಹೆಚ್ಚು ಕಿಲೋಮೀಟರ್‌ಗಳಷ್ಟು ಪ್ರವಾಸ ಮಾಡಿದ್ದಾರೆ. ಮಹತ್ವದ ವಿಷಯವೆಂದರೆ ಅನೇಕ ಬಾರಿ ಸಂಕಟಗಳು ಎದುರಾಗುವ ಮೊದಲೇ ಮಹರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ವಿವಿಧ ವಿಧಿಗಳನ್ನು ಮಾಡಿಸಿಕೊಳ್ಳುತ್ತಾರೆ. ಶ್ರೀಗುರುಗಳ ಕೃಪೆ ಮತ್ತು ಮಹರ್ಷಿಗಳ ಆಶೀರ್ವಾದಗಳಿಂದ ಈ ವಿಧಿಗಳು ಫಲಪ್ರದವಾಗಿ ಅನೇಕ ತೊಂದರೆಗಳು ದೂರವಾಗುತ್ತಿವೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಇಲ್ಲಿಯವರೆಗೆ ಸಾವಿರಾರು ವಿಧಿಗಳನ್ನು ಮಾಡಿದ್ದಾರೆ. ಅದರಲ್ಲಿ ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗುವ ದೃಷ್ಟಿಯಿಂದ ಮಾಡಿರುವ ಕೆಲವು ವೈಶಿಷ್ಟ್ಯಪೂರ್ಣ ವಿಧಿ ಮತ್ತು ಪ್ರಾರ್ಥನೆಗಳನ್ನು ಉದಾಹರಣೆಗಾಗಿ ಇಲ್ಲಿ ನೀಡುತ್ತಿದ್ದೇವೆ.
‘ಸಾಧಕರ ಜ್ವರಭಯ ದೂರವಾಗಬೇಕು ಎಂದು ಶ್ರೀ ಜ್ವರಹರೇಶ್ವರ ದೇವರಿಗೆ ಅಭಿಷೇಕ ಮಾಡುವುದು
ಕಳೆದ ಕೆಲವು ವರ್ಷಗಳಲ್ಲಿ ಜಗತ್ತಿನಾದ್ಯಂತ ಅನೇಕ ಜನರು ವಿವಿಧ ಸಾಂಕ್ರಾಮಿಕ ರೋಗಗಳಿಂದ ಅನಾರೋಗ್ಯಪೀಡಿತರಾಗುತ್ತಿದ್ದಾರೆ. ಹೀಗಿರುವಾಗ ‘ಸನಾತನದ ಸಾಧಕರು ಯಾವುದೇ ಜ್ವರದಿಂದ ಪೀಡಿತರಾಗಿ ಭಯಭೀತರಾಗಬಾರದು ಎಂದು ಮಹರ್ಷಿಗಳ ಆಜ್ಞೆಯ ಮೇರೆಗೆ ೧೦.೩.೨೦೨೦ ರಂದು ‘ಶ್ರೀ ಜ್ವರಹರೇಶ್ವರ ದೇವರಿಗೆ ವಿವಿಧ ಹಣ್ಣುಗಳ ರಸದ ಅಭಿಷೇಕ ಮಾಡಲಾಯಿತು. ಈರೋಡನ (ತಮಿಳುನಾಡು) ಭವಾನಿ ಊರಿನಲ್ಲಿ ಕಾವೇರಿ, ಭವಾನಿ ಮತ್ತು ಅಮೃತಾವಾಹಿನಿ (ಗುಪ್ತನದಿ) ಈ ೩ ನದಿಗಳ ಸಂಗಮವಿದೆ. ಈ ಸ್ಥಳದಲ್ಲಿ ಶ್ರೀ ಜ್ವರಹರೇಶ್ವರ ದೇವಸ್ಥಾನವಿದೆ.
ಸಾಧಕರಿಗೆ ಭರವಸೆ ನೀಡುವ ಪರಾತ್ಪರ ಗುರು ಡಾಕ್ಟರರ ಮಾತುಗಳು ‘ಆಪತ್ಕಾಲಬರುವ ಮೊದಲು ಅನೇಕ ಸಂತರು ದೇಹತ್ಯಾಗ ಮಾಡುವರು. ನಾನು ಮಾತ್ರ ಸಾಧಕರಾದ ನಿಮ್ಮೆಲ್ಲರೊಂದಿಗೆ ಕೊನೆಯ ತನಕ, ಅಂದರೆ ಸಂಪತ್ಕಾಲ ಬರುವ ತನಕ (ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ತನಕ) ಇರುವೆನು. – ಪರಾತ್ಪರ ಗುರು ಡಾ. ಆಠವಲೆ |
ಆಪತ್ಕಾಲದಲ್ಲಿ ಸಾಧಕರಿಗೆ ಅನ್ನಾಹಾರ ಕಡಿಮೆಯಾಗಬಾರದು ಎಂದು ಶ್ರೀ ಅನ್ನಪೂರ್ಣಾದೇವಿಗೆ ಪ್ರಾರ್ಥನೆ ಮಾಡುವುದು
‘೪.೪.೨೦೧೯ ರಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕಾಶಿ (ಉತ್ತರಪ್ರದೇಶ) ಯಲ್ಲಿನ ಕಾಶಿ ವಿಶ್ವನಾಥನ ಮಂದಿರದ ಪರಿಸರದಲ್ಲಿರುವ ಅನ್ನಪೂರ್ಣಾ ದೇವಿಯ ದರ್ಶನವನ್ನು ಪಡೆದರು. ಅವರು ದೇವಿಗೆ ‘ಮುಂಬರುವ ಆಪತ್ಕಾಲದಲ್ಲಿ ಮತ್ತು ಯುದ್ಧದ ಸಮಯದಲ್ಲಿ ಸಾಧಕರಿಗೆ ಎಂದಿಗೂ ಅನ್ನಾಹಾರದ ಕೊರತೆಯಾಗಬಾರದು ಎಂದು ಪ್ರಾರ್ಥಿಸಿದರು. ತದನಂತರ ಅವರು ದೇವಿಯ ಚರಣಗಳಿಗೆ ಅರ್ಪಿಸಿರುವ ಅಕ್ಕಿಯನ್ನು ತೆಗೆದುಕೊಂಡರು ಮತ್ತು ಅದನ್ನು ರಾಮನಾಥಿ ಆಶ್ರಮದ ಧಾನ್ಯ ಸಂಗ್ರಹಗಾರದಲ್ಲಿ ಇಡುವುದಕ್ಕಾಗಿ ಪರಾತ್ಪರ ಗುರು ಆಠವಲೆಯವರ ಇನ್ನೋರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಯಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ಕಳುಹಿಸಿಕೊಟ್ಟರು.
ಈ ರೀತಿ ಸಾಧಕರಿಗಾಗಿ ಅನೇಕ ಸ್ತರಗಳಲ್ಲಿ ಉಪಾಯಗಳು ನಡೆಯುತ್ತಿವೆ.
– (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.