೧೧ ರಿಂದ ೧೩.೩.೨೦೨೧ ರವರೆಗೆ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಗೋಡೆ, ಹಾಸುಗಲ್ಲುಗಳ ಮೇಲೆ ಬಿದ್ದಿರುವ ಕಲೆಗಳ ಛಾಯಾಚಿತ್ರಗಳನ್ನು ತೆಗೆಯಲಾಗಿತ್ತು. ಇದೇ ಕಲೆಗಳ ಛಾಯಾಚಿತ್ರವನ್ನು ೨೦೧೩ ಹಾಗೂ ೨೦೧೮ ನೇ ಇಸವಿಯಲ್ಲಿಯೂ ತೆಗೆಯಲಾಗಿತ್ತು. ಈ ಛಾಯಾಚಿತ್ರಗಳ ತುಲನಾತ್ಮಕ ಅಧ್ಯಯನ ಮಾಡಲಾಯಿತು.(ಕೆಲವು ಕಲೆಗಳ ಛಾಯಾಚಿತ್ರವನ್ನು ೨೦೧೩ ನೇ ಇಸವಿಯಲ್ಲಿ ತೆಗೆದಿರಲಿಲ್ಲ.) ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಉತ್ತರ ದಿಕ್ಕಿನ ಗೋಡೆ ಮೇಲೆ ೨೦೧೮ ನೇ ಇಸವಿಯಲ್ಲಿ ಕಾಲಿನ ಎಲುಬಿನಂತಹ, ಹಾಗೆಯೇ ಮುಂಗೈಯಂತಹ ಬಿಳಿಯ ಕಲೆಗಳು ಕಂಡುಬಂದಿದ್ದವು ಹಾಗೆಯೇ ಪೆನ್ಸಿಲ್‌ನಿಂದ ಬಿಡಿಸಲಾದ -ನಂತಹ ಆಕೃತಿಯೂ ಕಾಣುತ್ತಿತ್ತು. ೨೦೨೧ ನೇ ಇಸವಿಯ ಛಾಯಾಚಿತ್ರದಲ್ಲಿ ಈ ಎರಡೂ ಕಲೆಗಳು ಕಾಣದೇ ಯಾರೋ ಅದನ್ನು ಒರೆಸಿ ಅಳಿಸಿದಂತೆ ಕಾಣುತ್ತಿದೆ. ಇದರ ಆಧ್ಯಾತ್ಮಿಕ ಕಾರ್ಯಕಾರಣಭಾವವು ಮುಂದಿನಂತಿದೆ.
ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಆಗುವ ಒಳ್ಳೆಯ ಹಾಗೂ ತೊಂದರೆದಾಯಕ ಬದಲಾವಣೆಗಳು ದೇವಾಸುರ ಯುದ್ಧದ ಸ್ಥೂಲದ ಪ್ರಕಟೀಕರಣವಾಗಿದೆ !ಹಿಂದಿನ ಕಾಲದಲ್ಲಿ ಋಷಿಮುನಿಗಳು ಯಜ್ಞಯಾಗಾದಿ ವಿಧಿಗಳನ್ನು ಮಾಡುತ್ತಿದ್ದರು ಹಾಗೂ ಅತ್ಯಂತ ಬಲಾಢ್ಯ ರಾಕ್ಷಸರು ಇವುಗಳಲ್ಲಿ ವಿಘ್ನಗಳನ್ನು ತರುತ್ತಿದ್ದರು. ಋಷಿಮುನಿಗಳನ್ನು ಕೊಲ್ಲುತ್ತಿದ್ದರು, ಹಾಗೆಯೇ ಗೋಮಾಂಸ ಭಕ್ಷಣೆ ಮಾಡುತ್ತಿದ್ದರು. ಈ ರೀತಿಯಲ್ಲಿ ಪ್ರತಿಯೊಂದು ಯುಗದಲ್ಲಿ ದೇವಾಸುರರ ಯುದ್ಧವು ನಿರಂತರವಾಗಿ ನಡೆದಿರುತ್ತದೆ, ಹಾಗೆಯೇ ಕಲಿಯುಗದಲ್ಲಿಯೂ ನಡೆಯುತ್ತಿದೆ. ಸಪ್ತಲೋಕಗಳಲ್ಲಿನ ದೈವೀ ಅಥವಾ ಒಳ್ಳೆಯ ಶಕ್ತಿಗಳು ಹಾಗೂ ಸಪ್ತ ಪಾತಾಳಗಳಲ್ಲಿನ ಕೆಟ್ಟ ಶಕ್ತಿಗಳ ನಡುವೆ ನಡೆಯುತ್ತಿರುವ ಈ ಯುದ್ಧದ ಪ್ರಕಟೀಕರಣವು ಭೂಲೋಕದಲ್ಲಿಯೂ ಸ್ಥೂಲದಲ್ಲಿ ಪ್ರಕಟೀಕರಣಗೊಂಡಿರುವುದು ಕಂಡು ಬರುತ್ತದೆ. ಪೃಥ್ವಿಯ ಮೇಲಿನ ಸಾತ್ತ್ವಿಕತೆಯನ್ನು ನಷ್ಟಗೊಳಿಸುವುದು ಹಾಗೂ ದುಷ್ಟಪ್ರವೃತ್ತಿಗಳ ಮಾಧ್ಯಮದಿಂದ ಭೂಮಿಯ ಮೇಲೆ ಕೆಟ್ಟ ಶಕ್ತಿಗಳ ರಾಜ್ಯವನ್ನು ಸ್ಥಾಪಿಸುವುದು ಇದೇ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ಧ್ಯೇಯವಾಗಿದೆ. ಇದಕ್ಕಾಗಿ ಅವರು ಪ್ರಯತ್ನಿಸುತ್ತಿದ್ದಾರೆ. ಭೂಮಂಡಲದಲ್ಲಿ ‘ಹಿಂದೂ ರಾಷ್ಟ್ರ ಅಂದರೆ ‘ವಿಶ್ವಕಲ್ಯಾಣಾರ್ಥವಾಗಿ ಕಾರ್ಯನಿರತವಾಗಿರುವ ಸಾತ್ತ್ವಿಕ ಜನರ ರಾಷ್ಟ್ರವನ್ನು ಸ್ಥಾಪಿಸಲು ಸಂತರು ಹಾಗೂ ಒಳ್ಳೆಯ ಶಕ್ತಿಗಳು ಕಟಿಬದ್ಧವಾಗಿವೆ. ಇದರಿಂದ ‘ಕೆಟ್ಟ ಶಕ್ತಿಗಳ ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವ ಕೆಟ್ಟ ಶಕ್ತಿಗಳ ಪ್ರಯತ್ನಗಳಿಗೆ ಹೊಡೆತ ಬೀಳು ತ್ತದೆ. ಆದುದರಿಂದ ಅವುಗಳು ಸಮಷ್ಟಿ ಸಾಧನೆಯನ್ನು ಮಾಡುವ ಸಂತರ ಹಾಗೂ ಸಾಧಕರ ಕಾರ್ಯದಲ್ಲಿ, ಹಾಗೆಯೇ ಸೇವೆಯಲ್ಲಿ ಅನೇಕ ವಿಘ್ನಗಳನ್ನು ತರುತ್ತವೆ. ಸಾಧಕರ ಬಟ್ಟೆ, ಶರೀರ, ಮನಸ್ಸು ಹಾಗೆಯೇ ಅವರ ವಾಸ್ತುವಿನಲ್ಲಿರುವ ದೇವತೆಗಳ ಚಿತ್ರ, ವಸ್ತು ಇತ್ಯಾದಿಗಳ ಮೇಲೆ ಸೂಕ್ಷ್ಮದಿಂದ ಆಕ್ರಮಣ ಮಾಡುತ್ತವೆ. ಸ್ಥೂಲದಲ್ಲಿನ ಕಾರ್ಯವು ದೃಶ್ಯರೂಪದಲ್ಲಿ ಕಾಣಿಸುತ್ತದೆ; ಆದರೆ ಸೂಕ್ಷ್ಮದಲ್ಲಿ ನಡೆದ ಕಾರ್ಯಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಆದುದರಿಂದ ಕೆಟ್ಟ ಶಕ್ತಿಗಳ ಯುದ್ಧದಲ್ಲಿ ಸಂತರು ಸೂಕ್ಷ್ಮದಲ್ಲಿ ಮಾಡುತ್ತಿರುವ ಕಾರ್ಯದ ಬಗ್ಗೆ ನಾವು ಸಂಪೂರ್ಣವಾಗಿ ಅಜ್ಞಾನದಲ್ಲಿರುತ್ತೇವೆ. ಸೂಕ್ಷ್ಮ ದಲ್ಲಿನ ಹೋರಾಟದ ದೃಶ್ಯ ಪರಿಣಾಮವು ಕೆಲವು ವರ್ಷಗಳ ನಂತರ ಕಂಡುಬರುತ್ತದೆ. ಸೂಕ್ಷ್ಮ ಯುದ್ಧದಲ್ಲಿ ಕಾರ್ಯನಿರತವಾಗಿರುವ ದೈವೀ ಶಕ್ತಿಯಲ್ಲಿನ ಚೈತನ್ಯವು ಸಗುಣ ಮಟ್ಟದಲ್ಲಿ ಕಾರ್ಯನಿರತವಾದಾಗ ಈ ಚೈತನ್ಯವು ಪಂಚತತ್ತ್ವಗಳ ಮಟ್ಟದಲ್ಲಿ ಪ್ರಕಟವಾಗುತ್ತದೆ. ಪೃಥ್ವಿತತ್ತ್ವದಿಂದ ದೈವೀ ಸುಗಂಧವು ಬರುತ್ತದೆ. ಆಪತತ್ತ್ವದಿಂದ ಹಾಸುಗಲ್ಲು ಅಥವಾ ಕಿಟಕಿಯ ಗಾಜು ಪಾರದರ್ಶಕವಾಗುತ್ತದೆ. ತೇಜತತ್ತ್ವದಿಂದ ವಿವಿಧ ಬಣ್ಣಗಳ ಹಾಗೂ ವಿವಿಧ ವಿಧದ ದೈವೀ ಆಕೃತಿಗಳು ಮೂಡುತ್ತವೆ. ವಾಯು ತತ್ತ್ವದಿಂದ ಗೋಡೆ, ಹಾಸುಗಲ್ಲು ಅಥವಾ ಕಿಟಕಿಗಳ ಗಾಜುಗಳನ್ನು ಸ್ಪರ್ಶಿಸಿದಾಗ ಅತ್ಯಂತ ನಯ ಅನಿಸುತ್ತವೆ. ಆಕಾಶತತ್ತ್ವದಿಂದ ವಾಸ್ತುವಿನಲ್ಲಿ ದೈವೀ ಶಕ್ತಿಯು ಕಾರ್ಯನಿರತವಾಗಿರುತ್ತದೆ ಹಾಗೂ ಕೆಟ್ಟ ಶಕ್ತಿಗಳ ಆಕ್ರಮಣದಿಂದ ವಾಸ್ತು ಹಾಗೆಯೇ ವಾಸ್ತುವಿನಲ್ಲಿರುವ ವ್ಯಕ್ತಿಗಳ ರಕ್ಷಣೆಯಾಗುತ್ತದೆ. ಇದೇ ನಿಯಮವು ತೊಂದರೆದಾಯಕ ಶಕ್ತಿಗಳಿಗೂ ಅನ್ವಯವಾಗುವುದರಿಂದ ತೊಂದರೆದಾಯಕ ಶಕ್ತಿಯು ಸಗುಣ ಮಟ್ಟದಲ್ಲಿ ಕಾರ್ಯ ನಿರತವಾದಾಗ ಅದರಲ್ಲಿನ ಪೃಥ್ವಿತತ್ತ್ವದಿಂದ ದುರ್ಗಂಧವು ಉತ್ಪನ್ನವಾಗುತ್ತದೆ. ಆಪತತ್ತ್ವದಿಂದ ಹಾಸುಗಲ್ಲು ಅಥವಾ ಗಾಜಿನ ಪಾರದರ್ಶಕತೆಯು ಕಡಿಮೆಯಾಗಿ ಅಲ್ಲಿ ಒರಟುತನ ಬರುತ್ತದೆ. ತೇಜತತ್ತ್ವದಿಂದ ಪರಚಿದ ಗುರುತು, ಕಲೆ ಅಥವಾ ವಿವಿಧ ರೀತಿಯ ತೊಂದರೆದಾಯಕ ಆಕೃತಿಗಳು ಮೂಡುತ್ತದೆ. ವಾಯುತತ್ತ್ವದಿಂದ ಗೋಡೆ, ಹಾಸುಗಲ್ಲು ಅಥವಾ ಕಿಟಕಿಯ ಗಾಜುಗಳ ಸ್ಪರ್ಶವು ಅಂಟು, ಒರಟು ಅಥವಾ ಉಷ್ಣವೆನಿಸುತ್ತದೆ. ಆಕಾಶತತ್ತ್ವದಿಂದ ವಿವಿಧ ರೀತಿಯ ತೊಂದರೆದಾಯಕ ನಾದಗಳು ಕೇಳುತ್ತವೆ. ಕೆಟ್ಟ ಶಕ್ತಿಗಳು ಮಾಡಿದ ಬದಲಾವಣೆಯಿಂದ ತೊಂದರೆದಾಯಕ ಶಕ್ತಿಗಳು ಕಾರ್ಯನಿರತವಾಗುವುದರಿಂದ ವಾಸ್ತುವಿನಲ್ಲಿ ತೊಂದರೆಯ ಅರಿವಾಗುತ್ತದೆ. |
ಎಲುಬಿನಲ್ಲಿ ಪೃಥ್ವಿ ಹಾಗೂ ವಾಯುತತ್ತ್ವವು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಕೆಟ್ಟ ಶಕ್ತಿಗಳು ಮಾಟ ಮಾಡಲು ಎಲುಬುಗಳನ್ನು ಬಳಸುವಾಗ ಎಲುಬುಗಳ ಮಾಧ್ಯಮದಿಂದ ಪೃಥ್ವಿ ಹಾಗೂ ವಾಯು ತತ್ತ್ವಗಳ ಮಟ್ಟದಲ್ಲಿ ತೊಂದರೆದಾಯಕ ಮಾಯಾವಿ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರಿಗೆ ತೊಂದರೆ ಕೊಡಲು ಪಾತಾಳದಲ್ಲಿನ ದೊಡ್ಡ ಶಕ್ತಿಗಳು ಪೃಥ್ವಿ ಮತ್ತು ವಾಯು ತತ್ತ್ವಗಳ ಮಟ್ಟದಲ್ಲಿ ಕಪ್ಪು ಶಕ್ತಿಗಳ ಪ್ರಕ್ಷೇಪಣೆ ಮಾಡಿವೆ. ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಬಿಡಲಾದ ಸುಮಾರು ಶೇ. ೬೦ ರಷ್ಟು ಕಪ್ಪು ಶಕ್ತಿಯಿಂದ ಅವರ ರಕ್ಷಣೆಯಾಗಲು ಅವರ ಕೋಣೆಯ ಉತ್ತರದ ಗೋಡೆಯ ಮೇಲೆ ಈ ಶಕ್ತಿಯು ಶೇ. ೫ ರಷ್ಟು ಇಂಗಿ ಹೋಯಿತು. ಇದರಿಂದ ಕೋಣೆಯ ಉತ್ತರದ ಗೋಡೆಯ ಮೇಲೆ ಎಲುಬಿನಂತೆ ಕಾಣುವ ಆಕೃತಿಗಳು ಮೂಡಿವೆ. ಉಳಿದ ಶೇ. ೫೫ ರಷ್ಟು ಕೆಟ್ಟ ಶಕ್ತಿಗಳ ಆಕ್ರಮಣವು ಪರಾತ್ಪರ ಗುರು ಡಾ. ಆಠವಲೆಯವರ ಸ್ಥೂಲ ದೇಹದ ಮೇಲಾಯಿತು. ಇದರಿಂದ ಅವರ ಪ್ರಾಣಶಕ್ತಿಯು ಕಡಿಮೆಯಾಗಿ ಅವರಿಗೆ ಬಹಳ ದಣಿವಾಗುವುದು, ಕಾಲು ನೋವು, ನಿಃಶಕ್ತಿಯುಂಟಾಗುವುದು ಹಾಗೂ ತಲೆ ತಿರುಗುವುದು ಇಂತಹ ವಿವಿಧ ಶಾರೀರಿಕ ತೊಂದರೆಗಳಾದವು.
– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರೆತ ಜ್ಞಾನ), ಸನಾತನ ಆಶ್ರಮ, ಗೋವಾ (೧೮.೪.೨೦೨೧)
೨. ಗೋಡೆಯ ಮೇಲೆ ಮೂಡಿದ ಬಿಳಿ ಹಸ್ತದ ಮಾಯಾವಿ ಕಾರ್ಯ
ಗೋಡೆಯ ಮೇಲೆ ಮೂಡಿದ ಬಿಳಿ ಹಸ್ತವು ಮಾಯಾವಿ ಶಕ್ತಿಯಿಂದ ತುಂಬಿಕೊಂಡಿದ್ದು, ಅದು ಆಶೀರ್ವಾದ ನೀಡುವ ಮುದ್ರೆಯಲ್ಲಿದ್ದಂತೆ ಕಾಣಿಸುತ್ತದೆ; ಆದರೆ ಪ್ರತ್ಯಕ್ಷದಲ್ಲಿ ಅದು ಪಂಚತತ್ತ್ವಗಳ ಸ್ತರದಲ್ಲಿ ತೊಂದರೆದಾಯಕ (ಕಪ್ಪು) ಶಕ್ತಿಯನ್ನು ಪ್ರತಿಯೊಂದು ಬೆರಳಿನಿಂದ ಪ್ರಕ್ಷೇಪಿಸಿ ಪರಾತ್ಪರ ಗುರು ಡಾ. ಆಠವಲೆಯವರ ಪ್ರಾಣಶಕ್ತಿಯನ್ನು ಹೀರಿಕೊಳ್ಳಲು ಕಾರ್ಯನಿರತವಾಗಿದೆ.
೩. ಕೆಟ್ಟ ಶಕ್ತಿಗಳು ಪೆನ್ಸಿಲ್‌ನಿಂದ ಗೆರೆಗಳನ್ನು ಎಳೆದಂತೆ ‘ ನಂತಹ ಆಕೃತಿ ಮೂಡಿಸಿದ್ದರ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ
ಶುಕ್ರಾಚಾರ್ಯರು ಶಿವನ ಉಪಾಸಕರಾಗಿದ್ದಾರೆ. ಅವರು ಶಿವನಿಂದ ಸಿಕ್ಕಿರುವ ದೈವೀ ಶಕ್ತಿಯ ಮೇಲೆ ತಂತ್ರವಿದ್ಯೆಯ ಆವರಣವನ್ನು ತಂದು, ಅದನ್ನು ತೊಂದರೆದಾಯಕ ಮಾಯಾವಿ ಶಕ್ತಿಯನ್ನಾಗಿ ರೂಪಾಂತರಿಸಿ ಅದನ್ನು ಪರಾತ್ಪರ ಗುರು ಡಾ. ಆಠವಲೆಯವರ ದಿಕ್ಕಿಗೆ ಪ್ರಕ್ಷೇಪಿಸಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಉತ್ತರ ದಿಕ್ಕಿನ ಗೋಡೆಯಲ್ಲಿ ಶಿವನ ನಿರ್ಗುಣ-ಸಗುಣ ಸ್ತರದ ಶಕ್ತಿಯು ಕಾರ್ಯನಿರತವಾಗಿದೆ. ಶಿವನ ಈ ಶಕ್ತಿಯು ಶುಕ್ರಾಚಾರ್ಯರು ಬಿಟ್ಟಿರುವ ಮಾಯಾವಿ ಶಕ್ತಿಯನ್ನು ತಡೆಹಿಡಿದಿದೆ. ಆದುದರಿಂದ ಉತ್ತರ ದಿಕ್ಕಿನಲ್ಲಿನ ಗೋಡೆಯಲ್ಲಿ ಶಿವನ ಒಳ್ಳೆಯ ಶಕ್ತಿ ಮತ್ತು ಮಾಯಾವಿ ಶಕ್ತಿ ಇವುಗಳಲ್ಲಿ ಭೀಕರ ಸೂಕ್ಷ್ಮ ಯುದ್ಧವಾಗತೊಡಗಿತು. ಆಗ ಈ ಗೋಡೆಯಲ್ಲಿ ಕಾರ್ಯನಿರತವಾಗಿರುವ ಮಾಯಾವಿ ಶಕ್ತಿಯು ಪೆನ್ಸಿಲ್‌ನಿಂದ ಗೆರೆ ಎಳೆದಂತೆ ‘ ನಂತಹ ಆಕೃತಿಯನ್ನು ಧರಿಸಿ ಪರಾತ್ಪರ ಗುರು ಡಾ. ಆಠವಲೆಯವರನ್ನು ಮೋಸ ಮಾಡಲು ಪ್ರಯತ್ನಿಸಿತು; ಆದರೆ ಪರಾತ್ಪರ ಗುರು ಡಾ. ಆಠವಲೆಯವರು ತ್ರಿಕಾಲದರ್ಶಿ ಗಳಾಗಿದ್ದರಿಂದ ಅವರು ಈ ಮಾಯಾವಿ ಶಕ್ತಿಯನ್ನು ಗುರುತಿಸಿದರು. ಪರಾತ್ಪರ ಗುರು ಡಾ. ಆಠವಲೆಯವರ ದೃಷ್ಟಿಯಿಂದ ಪ್ರಕ್ಷೇಪಿತ ವಾದ ಮಾರಕ ಶಕ್ತಿಯಿಂದ ಗೋಡೆಯ ಮೇಲಿನ ‘ ಆಕೃತಿಯಲ್ಲಿ ಸಂಗ್ರಹವಾದ ತೊಂದರೆದಾಯಕ ಶಕ್ತಿಯು ನಾಶವಾಯಿತು.
೪. ಉತ್ತರ ದಿಕ್ಕಿನ ಗೋಡೆಯ ಮೇಲೆ ೨೦೧೪ ರಲ್ಲಿ ಹಸ್ತದ ಕೇವಲ ಬೆರಳುಗಳು ಕಾಣಿಸುವುದು, ೨೦೧೮ ರಲ್ಲಿ ಬೆರಳುಗಳ ಕೆಳಗಿನ ಭಾಗವು ಕಾಣಿಸುವುದು ಮತ್ತು ೨೦೨೧ ರ ಛಾಯಾಚಿತ್ರದಲ್ಲಿ ಕಲೆಯು ಅಸ್ಪಷ್ಟವಾಗಿ ಕಾಣಿಸುವುದರ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ
೨೦೧೪ ರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಉತ್ತರ ದಿಕ್ಕಿನ ಗೋಡೆಯ ಮೇಲೆ ಮೂಡಿದ ಹಸ್ತದ ಬೆರಳುಗಳಿಂದ ಸಗುಣ-ನಿರ್ಗುಣ ಸ್ತರದ ತೊಂದರೆದಾಯಕ ಶಕ್ತಿಯು ಕಾರ್ಯನಿರತವಾಯಿತು. ಕಿರುಬೆರಳಿನಿಂದ ಪೃಥ್ವಿ, ಅನಾಮಿಕಾದಿಂದ ಆಪ, ಮಧ್ಯಮಾದಿಂದ ತೇಜ, ತರ್ಜನಿಯಿಂದ ವಾಯು ಮತ್ತು ಹೆಬ್ಬೆರಳಿನಿಂದ ಆಕಾಶ ಈ ತತ್ತ್ವಗಳ ಸ್ತರದ ಶಕ್ತಿಯು ವಾತಾವರಣದಲ್ಲಿ ಪ್ರಕ್ಷೇಪಿಸುತ್ತಿತ್ತು. ೨೦೧೮ ರಲ್ಲಿ ಈ ಹಸ್ತದಿಂದ ನಿರ್ಗುಣ-ಸಗುಣ ಸ್ತರದಲ್ಲಿ ತೊಂದರೆದಾಯಕ ಶಕ್ತಿಯು ಪ್ರಕ್ಷೇಪಿಸತೊಡಗಿತು, ಹಾಗಾಗಿ ಬೆರಳುಗಳ ಕೆಳಗಿನ ಹಸ್ತದ ಭಾಗವು ಕಾಣಿಸತೊಡಗಿತು. ೨೦೧೮ ರಿಂದ ೨೦೨೧ ರವರೆಗೆ ಪರಾತ್ಪರ ಗುರು ಡಾ. ಆಠವಲೆಯವರಿಂದ ಪ್ರಕ್ಷೇಪಿತವಾದ ಶ್ರೀವಿಷ್ಣುವಿನ ನಿರ್ಗುಣ-ಸಗುಣ ಸ್ತರದಲ್ಲಿ ತತ್ತ್ವದಿಂದ ಉತ್ತರ ದಿಕ್ಕಿನ ಗೋಡೆಯ ಮೇಲಿನ ಹಸ್ತ ಮತ್ತು ಬೆರಳುಗಳಲ್ಲಿನ ತೊಂದರೆದಾಯಕ ಶಕ್ತಿಯ ಪ್ರಮಾಣವು ತುಂಬಾ ಕಡಿಮೆಯಾಯಿತು. ಹಾಗಾಗಿ ೨೦೨೧ ರ ಛಾಯಾಚಿತ್ರದಲ್ಲಿ ಕಲೆಗಳು ಅಸ್ಪಷ್ಟವಾಗಿ ಕಾಣಿಸುತ್ತಿವೆ.
೫. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಉತ್ತರ ದಿಕ್ಕಿನ ಗೋಡೆಯ ಮೇಲೆ ೨೦೧೮ ರ ಛಾಯಾಚಿತ್ರದ ಕಲೆಯು ೨೦೨೧ ರ ಛಾಯಾಚಿತ್ರದಲ್ಲಿ ಕಾಣಿಸದಿರುವುದರ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ
ಶ್ರೀವಿಷ್ಣುವು ಶಿವನ ಆರಾಧ್ಯದೇವನಾಗಿದ್ದಾನೆ ಮತ್ತು ಶಿವನು ಶ್ರೀವಿಷ್ಣುವಿನ ಆರಾಧ್ಯದೇವನಾಗಿದ್ದಾನೆ. ಪಾತಾಳದಲ್ಲಿನ ದೊಡ್ಡ ಕೆಟ್ಟ ಶಕ್ತಿಗಳು ಮತ್ತು ಶುಕ್ರಾಚಾರ್ಯರು ಮಾಡಿದ ಸೂಕ್ಷ್ಮದ ಆಕ್ರಮಣಗಳಿಂದ ವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರನ್ನು ರಕ್ಷಿಸಲು ೨೦೧೩ ರಿಂದ ಶಿವತತ್ತ್ವವು ಕಾರ್ಯನಿರತವಾಗಿದೆ. ದೇವಾಸುರರ ಸಂಗ್ರಾಮದ ತೀವ್ರತೆಗನುಸಾರ ಶಿವನ ತತ್ತ್ವವು ೨೦೧೩ ರಿಂದ ೨೦೨೧ ರವರೆಗೆ ಹೆಚ್ಚಾಗುತ್ತಾ ಹೋಗಿದೆ. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಮೇಲಾದ ಮಾರಣಾಂತಿಕ ಆಕ್ರಮಣಗಳಿಂದ ಅವರ ರಕ್ಷಣೆಯಾಗಿ ಅವರ ಮೇಲಿನ ಮಹಾಮೃತ್ಯುಯೋಗದ ಸಂಕಟವು ದೂರವಾಗುತ್ತಿದೆ. ಪರಾತ್ಪರ ಗುರು ಡಾ. ಆಠವಲೆಯವರ ರಕ್ಷಣೆಗಾಗಿ ಕಾರ್ಯನಿರತವಾಗಿರುವ ಶಿವತತ್ತ್ವವೂ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಉತ್ತರ ದಿಕ್ಕಿನ ಗೋಡೆಯ ಮೇಲೆ ಘನೀಕರಣವಾಗಿದೆ; ಏಕೆಂದರೆ ಉತ್ತರ ದಿಕ್ಕಿನಲ್ಲಿ ಕೈಲಾಸ ಪರ್ವತವಿದೆ. ಉತ್ತರ ದಿಕ್ಕಿನ ಗೋಡೆಯಲ್ಲಿನ ಶಿವತತ್ತ್ವಮಯ ಚೈತನ್ಯವು ಉತ್ತರೋತ್ತರ ಹೆಚ್ಚಾಗುತ್ತಿರುವುದರಿಂದ ಈ ಗೋಡೆಯ ಮೇಲಿನ ಕಲೆಗಳ ಪ್ರಮಾಣವು ಕಡಿಮೆಯಾಗಿ ಅವು ಸಂಪೂರ್ಣ ನಾಶವಾಗಿವೆ. ದೈವೀ ಚೈತನ್ಯದೆದುರು ಕೆಟ್ಟ ಶಕ್ತಿಗಳ ಮಾಯೆ ಹೆಚ್ಚು ಕಾಲ ಉಳಿಯಲಾರದು. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಉತ್ತರ ದಿಕ್ಕಿನ ಗೋಡೆಯ ಮೇಲಿನ ೨೦೧೮ ರಲ್ಲಿ ಛಾಯಾಚಿತ್ರದಲ್ಲಿ ಹಸ್ತದ ಕಲೆಯು ಕಾಣಿಸುವುದಿಲ್ಲ. ಈ ಪರಿಣಾಮವು ಕೆಟ್ಟ ಶಕ್ತಿಗಳ ಮೇಲೆ ದೈವೀ ಶಕ್ತಿಯು ಪ್ರಾಪ್ತಮಾಡಿಕೊಂಡ ವಿಜಯದ ಪ್ರತೀಕವಾಗಿದೆ.
೬. ‘ಕೋಣೆಯ ಉತ್ತರ ದಿಕ್ಕಿನ ಗೋಡೆಯ ಮೇಲೆ ೨೦೧೮ ರ ಛಾಯಾಚಿತ್ರದಲ್ಲಿ ಗೋಡೆಯ ಮೇಲಿನ ಉಬ್ಬಿದ ಭಾಗದ ಮೇಲೆ ಮುಖ ಕಾಣಿಸುವುದು ಮತ್ತು ೨೦೨೧ ರ ಛಾಯಾಚಿತ್ರದಲ್ಲಿ ಆ ಉಬ್ಬಿದ ಭಾಗವು ಒಡೆದು ನಾಶವಾಗಿರುವಂತೆ ಕಾಣಿಸುವುದು, ಈ ಉಬ್ಬಿದ ಭಾಗದ ಬದಲಾವಣೆಯ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ
ಯಾವಾಗ ತೊಂದರೆದಾಯಕ ಶಕ್ತಿಯು ಆಪ ಮತ್ತು ವಾಯು ಈ ಎರಡೂ ತತ್ತ್ವಗಳ ಮೇಲೆ ಕಾರ್ಯನಿರತವಾಗಿರುತ್ತದೆಯೋ, ಆಗ ಗೋಡೆ, ಗಾಜು ಅಥವಾ ಹಾಸುಗಲ್ಲುಗಳ ಮೇಲೆ ಉಬ್ಬುಗಳು ನಿರ್ಮಾಣವಾಗುತ್ತವೆ. ಉಬ್ಬುಗಳ ಮೇಲ್ಭಾಗದಲ್ಲಿ ತೇಜತತ್ತ್ವವು ಕಾರ್ಯನಿರತವಾಗಿ ಅದರ ಮೇಲೆ ವಿವಿಧ ರೀತಿಯ ಕೆಟ್ಟ ಶಕ್ತಿಗಳ ಮುಖಗಳು ಮೂಡುತ್ತವೆ. ಈ ರೀತಿ ಉಬ್ಬುಗಳಲ್ಲಿನ ಆಪತತ್ತ್ವದ ಮಾಧ್ಯಮದಿಂದ ಸಗುಣ, ಮುಖಗಳಲ್ಲಿನ ತೇಜತತ್ತ್ವದ ಮಾಧ್ಯಮದಿಂದ ಸಗುಣ-ನಿರ್ಗುಣ ಮತ್ತು ವಾಯುತತ್ತ್ವದ ಮಾಧ್ಯಮದಿಂದ ನಿರ್ಗುಣ-ಸಗುಣ ಹೀಗೆ ಮೂರು ಸ್ತರಗಳಲ್ಲಿ ತೊಂದರೆದಾಯಕ ಶಕ್ತಿಯ ಪ್ರಕ್ಷೇಪಣೆಯಾಗುತ್ತದೆ. ಆದುದರಿಂದ ಸಗುಣ ಸ್ತರದಲ್ಲಿ ಸ್ಥೂಲದೇಹದಲ್ಲಿ ವಿವಿಧ ಅವಯವಗಳು, ಸಗುಣ-ನಿರ್ಗುಣ ಸ್ತರದಲ್ಲಿ ದೇಹದಲ್ಲಿನ ಪ್ರಾಣಶಕ್ತಿ ಮತ್ತು ನಿರ್ಗುಣ-ಸಗುಣ ಸ್ತರದಲ್ಲಿ ವಾಯುರೂಪಿ ಪ್ರಾಣ ಇವುಗಳ ಮೇಲೆ ತೊಂದರೆದಾಯಕ ಶಕ್ತಿಯ ಆಕ್ರಮಣವು ಒಂದೇ ಬಾರಿಗೆ ಆರಂಭವಾಗುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರಿಗೆ ತೊಂದರೆಗಳನ್ನು ಕೊಡಲು ಪಾತಾಳದಲ್ಲಿನ ಅಘೋರಿ ಕೆಟ್ಟ ಶಕ್ತಿಗಳು ಶುಕ್ರಾಚಾರ್ಯರ ಸಂಕಲ್ಪಶಕ್ತಿಯ ಆಧಾರದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಆಪತತ್ತ್ವದ ಸಹಾಯದಿಂದ ಸಗುಣ, ತೇಜತತ್ತ್ವದ ಸಹಾಯದಿಂದ ಸಗುಣ-ನಿರ್ಗುಣ ಮತ್ತು ವಾಯುತತ್ತ್ವದ ಸಹಾಯದಿಂದ ನಿರ್ಗುಣ-ಸಗುಣ ಹೀಗೆ ಮೂರೂ ಸ್ತರಗಳಲ್ಲಿ ಒಂದೇ ಬಾರಿಗೆ ಆಕ್ರಮಣಗಳನ್ನು ಮಾಡಲು ಅವರ ಕೋಣೆಯ ಉತ್ತರ ದಿಕ್ಕಿನ ಗೋಡೆಯ ಮೇಲೆ ಉಬ್ಬುಗಳನ್ನು ನಿರ್ಮಾಣ ಮಾಡಿದವು. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಶಾರೀರಿಕ ಸ್ವಾಸ್ಥ್ಯವು ಹದಗೆಟ್ಟು ಅವರಿಗೆ ವಿವಿಧ ರೀತಿಯ ಕಾಯಲೆಗಳಾದವು. ಅದೇ ರೀತಿ ಅವರ ಪ್ರಾಣಶಕ್ತಿಯು ಕಡಿಮೆಯಾಗಿ ಅವರ ಪ್ರಾಣಹರಣ ಮಾಡಲು ಅವರ ಮೇಲೆ ಮಹಾಮೃತ್ಯುಯೋಗದ ಸಂಕಟಗಳು ಬಂದವು. ಉತ್ತರ ದಿಕ್ಕಿನಲ್ಲಿನ ಗೋಡೆಯಲ್ಲಿ ಕಾರ್ಯನಿರತವಾಗಿರುವ ಮಹಾಮೃತ್ಯುಂಜಯ ಸ್ವರೂಪದ ಶಿವತತ್ತ್ವದಲ್ಲಿನ ಪ್ರಕಟ ಶಕ್ತಿಯು ಗೋಡೆಯ ಮೇಲಿನ ಉಬ್ಬುಗಳಲ್ಲಿನ ಆಪ ಮತ್ತು ತೇಜ ಈ ತತ್ತ್ವಗಳ ಸ್ತರಗಳಲ್ಲಿನ ತೊಂದರೆದಾಯಕ ಶಕ್ತಿಯೊಂದಿಗೆ ಸಗುಣ ಮತ್ತು ಸಗುಣ-ನಿರ್ಗುಣ ಸ್ತರಗಳಲ್ಲಿ ಸೂಕ್ಷ್ಮ ಯುದ್ಧವನ್ನು ಮಾಡಿ ಅವುಗಳ ವಿಘಟನೆಯನ್ನು ಮಾಡಿದವು. ಯಾವಾಗ ಶಿವತತ್ತ್ವಮಯ ಚೈತನ್ಯವು ಉಬ್ಬುಗಳಲ್ಲಿನ ವಾಯುತತ್ತ್ವದ ಸ್ತರದಲ್ಲಿನ ತೊಂದರೆದಾಯಕ ಶಕ್ತಿಯೊಂದಿಗೆ ನಿರ್ಗುಣ-ಸಗುಣ ಸ್ತರದಲ್ಲಿ ಸೂಕ್ಷ್ಮ ಯುದ್ಧ ಮಾಡಿದವೋ, ಆಗ ಉಬ್ಬುಗಳಲ್ಲಿನ ವಾಯುತತ್ತ್ವಮಯ ಕಪ್ಪು ಶಕ್ತಿಯಲ್ಲಿ ದೊಡ್ಡ ಸ್ಫೋಟವಾಗಿ ಅದರ ಸಂಪೂರ್ಣ ವಿಘಟನೆ ಯಾಯಿತು. ಆದುದರಿಂದ ೨೦೨೧ ರಲ್ಲಿ ಈ ಉಬ್ಬುಗಳಲ್ಲಿನ ತೇಜತತ್ತ್ವದ ಸ್ತರದಲ್ಲಿನ ಕಪ್ಪು ಶಕ್ತಿಯಿಂದ ತಯಾರಾದ ಮುಖವು ಒಡೆದು ನಾಶವಾದಂತೆ ಕಾಣಿಸುತ್ತಿದೆ. ‘ಗೋಡೆಯ ಮೇಲಿನ ಉಬ್ಬು ಮತ್ತು ಅದರ ಮೇಲಿನ ತೊಂದರೆದಾಯಕ ಮುಖವು ನಾಶವಾಗುವುದು, ಇದು ಕೆಟ್ಟ ಶಕ್ತಿಯ ಮೇಲೆ ಒಳ್ಳೆಯ ಶಕ್ತಿ ಪ್ರಾಪ್ತಮಾಡಿಕೊಂಡ ವಿಜಯದ ಪ್ರತೀಕವಾಗಿದೆ. ಈಗ ಉತ್ತರೋತ್ತರ ಒಳ್ಳೆಯ ಶಕ್ತಿಯ ವಿಜಯವಾಗಲಿರುವುದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆ, ಸನಾತನದ ವಿವಿಧ ಸ್ಥಳಗಳಲ್ಲಿನ ಆಶ್ರಮಗಳು ಮತ್ತು ದೇಶವಿದೇಶಗಳಲ್ಲಿನ ಸಾಧಕರ ಮನೆಗಳಲ್ಲಿ ಕೆಟ್ಟ ಶಕ್ತಿಗಳಿಂದ ನಿರ್ಮಾಣವಾಗಿರುವ ಪರಚಿದ ಗುರುತುಗಳು, ಕಲೆಗಳು, ಉಬ್ಬುಗಳು ಮತ್ತು ವಿವಿಧ ಆಕೃತಿಗಳು ಪೂರ್ಣ ನಾಶವಾಗಲಿವೆ. ಯಾವಾಗ ಹಿಂದೂ ರಾಷ್ಟ್ರ ಬರುವುದೋ, ಆಗ ಮೇಲಿನ ಎಲ್ಲ ಸ್ಥಳಗಳಲ್ಲಿ ದೈವೀ ಚಿಹ್ನೆಗಳು ಮೂಡಲಿವೆ. – ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ) (೧೮.೪.೨೦೨೧)
ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಿಗೆ ವಿನಂತಿ !‘ಸನಾತನದ ರಾಮನಾಥಿ (ಗೋವಾ)ಯಲ್ಲಿನ ಆಶ್ರಮದಲ್ಲಿ ಅನೇಕ ಬುದ್ಧಿಗೆ ನಿಲುಕದ ಘಟನೆಗಳು ಘಟಿಸುತ್ತಿರುತ್ತವೆ. ಅವುಗಳಲ್ಲಿ ಒಂದೆಂದರೆ, ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಗೋಡೆಗಳ ಮೇಲೆ ೨೦೧೩ ರಿಂದ ೨೦೨೧ ರ ವರೆಗೆ ಮೂಡಿದ ವಿವಿಧ ಆಕೃತಿಗಳು ಮತ್ತು ಅವು ಗಳಲ್ಲಿ ತನ್ನಿಂದತಾನೇ ಆದ ಬದಲಾವಣೆ ! ‘ಗೋಡೆಯ ಮೇಲೆ ಇಂತಹ ಆಕೃತಿಗಳು ಮೂಡಿರುವ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಕಾರಣವೇನಿದೆ ? ಅದರಲ್ಲಿ ತಾನಾಗಿ ಹೇಗೆ ಬದಲಾವಣೆ ಆಗುತ್ತದೆ ? ಯಾವ ವೈಜ್ಞಾನಿಕ ಉಪಕರಣಗಳಿಂದ ಅವುಗಳ ಸಂಶೋಧನೆ ಮಾಡಬೇಕು ? ಈ ಕುರಿತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರ ಸಹಾಯ ಲಭಿಸಿದರೆ ನಾವು ಕೃತಜ್ಞರಾಗಿರುತ್ತೇವೆ. – ವ್ಯವಸ್ಥಾಪಕರು, ಸನಾತನ ಆಶ್ರಮ, ರಾಮನಾಥಿ, ಗೋವಾ. (ಸಂಪರ್ಕ : ರೂಪೇಶ ಲಕ್ಷ್ಮಣ ರೆಡಕರ, ವಿ-ಅಂಚೆ : [email protected]) |
ವಾಚಕರಲ್ಲಿ ವಿನಂತಿ ! : ಮುದ್ರಣದಲ್ಲಿನ ತಾಂತ್ರಿಕ ಅಡಚಣೆಗಳಿಂದ ಇಲ್ಲಿ ಮೇಲೆ ಪ್ರಕಟಿಸಲಾದ ಛಾಯಾಚಿತ್ರಗಳು ಹೇಗಿವೆಯೋ ಹಾಗೆಯೇ ಮುದ್ರಣವಾಗಿ ಬಂದಿಲ್ಲ. ಇದರ ಮೇಲಿನ ಉಪಾಯವೆಂದು ಹಾಗೂ ಎಲ್ಲರಿಗೂ ಈ ಆಕಾರಗಳು ಕಾಣಿಸಬೇಕು ಮತ್ತು ವಿಷಯ ತಿಳಿಯಬೇಕು ಎಂದು ಛಾಯಾಚಿತ್ರದಲ್ಲಿನ ಆಕಾರಗಳನ್ನು ಗಣಕಯಂತ್ರದ ಸಹಾಯದಿಂದ ಹೆಚ್ಚು ಎದ್ದು ಕಾಣುವಂತೆ ತೋರಿಸಲಾಗಿದೆ ಎಂಬುದನ್ನು ಗಮನದಲ್ಲಿಡಬೇಕು. ಮೂಲ ಛಾಯಾಚಿತ್ರಗಳನ್ನು ಸ್ಪಷ್ಟವಾಗಿ ನೋಡಲು ವಾಚಕರು ಸನಾತನ ಪ್ರಭಾತದ ಜಾಲತಾಣದಲ್ಲಿನ https://bits.ly/3uheQVI ಈ ಕೊಂಡಿಗೆ ಭೇಟಿ ನೀಡಬೇಕು. (ಈ ಕೊಂಡಿಯಲ್ಲಿನ ಕೆಲವು ಅಕ್ಷರಗಳು ‘ಕ್ಯಾಪಿಟಲ್ ಇರುವುದನ್ನು ಗಮನಿಸಬೇಕು.) |