೧೯೪೭ ರಂತೆ ಭಾರತದ ವಿಭಜನೆಯ ಪುನರಾವೃತ್ತಿ ತಡೆಯಬೇಕಿದ್ದರೇ, ವೀರ ಸಾವರ್ಕರ ಅವರ ಮಾರ್ಗವನ್ನು ಅನುಸರಿಸಿ ! – ಶ್ರೀ. ರಣಜಿತ್ ಸಾವರ್ಕರ್

ಅಂಡಮಾನ್ ಜೈಲಿನಿಂದ ಸ್ವಾತಂತ್ರವೀರ ಸಾವರ್ಕರ್ ಬಿಡುಗಡೆಯಾದ ಶತಮಾನೋತ್ಸವದ ಸಂದರ್ಭದಲ್ಲಿ ವಿಶೇಷ ಚರ್ಚಾಗೋಷ್ಠಿ !

ಹೆಚ್ಚುತ್ತಿರುವ ಮುಸ್ಲಿಮರ ಜನಸಂಖ್ಯೆಯ ಬಗ್ಗೆ ಸ್ವಾತಂತ್ರವೀರ ಸಾವರ್ಕರ ಹಿಂದೂಗಳಿಗೆ ಯಾವಾಗಲೂ ಎಚ್ಚರಿಸಿದ್ದಾರೆ. ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ೧೯೨೦ ರಲ್ಲಿ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ಶೇಕಡಾ ೨೨ ಕ್ಕೆ ತಲುಪಿದಾಗ, ಖಿಲಾಫತ್ ಆಂದೋಲನವನ್ನು ಬೆಂಬಲಿಸುವ ಹೆಸರಿನಲ್ಲಿ ದೇಶಾದ್ಯಂತ ಗಲಭೆಗಳು ನಡೆಸಿ ಕೇರಳ ಮತ್ತು ಬಂಗಾಲದಲ್ಲಿ ಲಕ್ಷಾಂತರ ಹಿಂದೂಗಳನ್ನು ಕೊಂದರು. ಕಳೆದ ವರ್ಷ ೨೦೨೦ ರಲ್ಲಿ ಮತ್ತೆ ಶೇ. ೨೨ ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಮರು ದೆಹಲಿಯಲ್ಲಿ ಗಲಭೆ ನಡೆಸಿ ಅನೇಕ ಹಿಂದೂಗಳನ್ನು ಕೊಲ್ಲುವ ಮೂಲಕ ೧೦೦ ವರ್ಷಗಳ ಇತಿಹಾಸವನ್ನು ಪುನರಾವರ್ತಿಸಿದ್ದಾರೆ. ೧೯೪೭ ರಲ್ಲಿ ಅವರ ಜನಸಂಖ್ಯೆಯು ಶೇಕಡಾ ೩೫ ಕ್ಕೆ ತಲುಪಿದಾಗ, ಅವರು ದೇಶಾದ್ಯಂತ ಗಲಭೆಗಳನ್ನು ಉಂಟುಮಾಡಿ ಭಾರತವನ್ನು ವಿಭಜಿಸಿದರು. ೨೦೪೭ ರಲ್ಲಿ ಅವರ ಜನಸಂಖ್ಯೆಯು ಶೇಕಡಾ ೩೫ ಕ್ಕೆ ತಲುಪಿದರೆ, ಭಾರತದ ವಿಭಜನೆಯು ಪುನರಾವರ್ತನೆಯಾಗುವ ಸಾಧ್ಯತೆಯಿದೆ. ಈ ಇತಿಹಾಸದ ಪುನರಾವರ್ತನೆಯನ್ನು ತಪ್ಪಿಸಲು ಮತ್ತು ಹಿಂದೂಗಳನ್ನು ಕಾಪಾಡಬೇಕಿದ್ದಲ್ಲಿ, ನಾವು ಸ್ವಾತಂತ್ರವೀರ ಸಾವರ್ಕರ್ ಅವರ ಮಾರ್ಗವನ್ನು ಅನುಸರಿಸಬೇಕು ಎಂದು ‘ಸ್ವಾತಂತ್ರವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ’ದ ಕಾರ್ಯಾಧ್ಯಕ್ಷ ಶ್ರೀ. ರಣಜಿತ್ ಸಾವರ್ಕರ್ ಹೇಳಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಹಿಂದೂ ಹೃದಯಸಾಮ್ರಾಟ ವೀರ ಸಾವರ್ಕರ್ : ಅಂಡಮಾನ್ ಜೈಲಿನಿಂದ ಬಿಡುಗಡೆಯ ಶತಮಾನೋತ್ಸವ’ ಕುರಿತು ವಿಶೇಷ ಆನ್‌ಲೈನ್ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ‘ಯೂಟ್ಯೂಬ್’ ನಲ್ಲಿ ೫೪೩೧ ಜನರು ವೀಕ್ಷಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಭಾರತದ ಮಾಹಿತಿ ಆಯುಕ್ತ ಮತ್ತು ಹಿರಿಯ ಪತ್ರಕರ್ತ ಶ್ರೀ. ಉದಯ ಮಾಹುರಕರ ಅವರು, ವೀರ ಸಾವರ್ಕರ ಅವರ ಪ್ರಖರ ರಾಷ್ಟ್ರೀಯತೆಯು ಮುಸ್ಲಿಮರ ಓಲೈಕೆಗೆ ಅಡ್ಡಿಯಾಗುತ್ತಿದ್ದರಿಂದ ಅವರನ್ನು ಕಾಂಗ್ರೆಸ್ ವಿರೋಧಿಸಿದೆ ಎಂದು ಹೇಳಿದ್ದಾರೆ. ಸಾವರ್ಕರ್ ಹೇಳುವುದನ್ನು ಕೇಳಿದ್ದರೇ, ೧೯೪೭ ರಲ್ಲಿ ದೇಶವನ್ನು ವಿಭಜಿಸಲಾಗುತ್ತಿರಲಿಲ್ಲ. ಅವರು ೧೯೩೬ ರಿಂದ ವಿಭಜನೆಯ ಸಿದ್ಧತೆ ನಡೆಯುತ್ತಿರುವ ಬಗ್ಗೆ ಹೇಳುತ್ತಿದ್ದರು. ಸಾವರ್ಕರ್ ಅವರ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದರೆ, ಇಡೀ ದೇಶವು ಒಂದಾಗಬಹುದು; ಆದರೆ ಈ ಜನರಿಗೆ ಅದು ಬೇಡವಾಗಿದೆ. ಸಾವರ್ಕರ್ ಅವರನ್ನು ಮೂರು ಬಗೆಯ ಜನರು ವಿರೋಧಿಸುತ್ತಾರೆ, ಒಬ್ಬರೆಂದರೆ ಮುಸ್ಲಿಂ ಪಕ್ಷ, ಇನ್ನೊಬ್ಬರೆಂದರೆ ಕಮ್ಯುನಿಸ್ಟ್ ಪಕ್ಷ ಮತ್ತು ಮೂರನೆಯದು ಮುಸ್ಲಿಮರ ಮತಗಳಿಗಾಗಿ ಭಿಕ್ಷೆ ಬೇಡುವ ರಾಜಕೀಯ ಪಕ್ಷ ಎಂದು ಹೇಳಿದರು ! ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಬರಹಗಾರ ಮತ್ತು ಪ್ರವಚನಕಾರ ಶ್ರೀ. ಸಚ್ಚಿದಾನಂದ ಶೇವಡೆಯವರು, ಅಂಡಮಾನ್‌ನಲ್ಲಿನ ಕಿರುಕುಳದಿಂದಾಗಿ, ಕೆಲವು ಕೈದಿಗಳು ಆತ್ಮಹತ್ಯೆ ಮಾಡಿಕೊಂಡರೆ, ಇತರರು ಹುಚ್ಚರಾದರು; ಆದರೂ ಈ ಎಲ್ಲಾ ತೀವ್ರವಾದ ಚಿತ್ರಹಿಂಸೆಗಳನ್ನು ಸಹಿಸಿಕೊಂಡು, ವೀರ್ ಸಾವರ್ಕರ್ ರಾಷ್ಟ್ರೀಯ ಹಿತಾಸಕ್ತಿಗಾಗಿ ಸಾವಿರಾರು ಪುಟಗಳ ಚಿರಂತನ ಸಾಹಿತ್ಯವನ್ನು ಬರೆದಿದ್ದಾರೆ. ‘ಧರ್ಮದ ಸ್ಥಾನ ಹೃದಯದಲ್ಲಿರುತ್ತದೆ, ಹೊಟ್ಟೆಯಲ್ಲಿಲ್ಲ’ ಎಂದು ಹೇಳುವ ಮೂಲಕ ಮತಾಂತರಗೊಂಡ ಹಿಂದೂಗಳನ್ನು ಶುದ್ಧೀಕರಿಸಿದರು. ಸಾವರ್ಕರ್ ಹಿಂದೂಗಳಿಗೆ ರಾಷ್ಟ್ರೀಯ ಗುರುತನ್ನು ಕಾಪಾಡಿಕೊಳ್ಳಲು ಕಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಯುವ ಸಂಘಟಕ ಶ್ರೀ. ಸುಮಿತ ಸಾಗವೇಕರ ಅವರು, ಸಾವರ್ಕರ್ ಅವರನ್ನು ಮಾಫೀವೀರ ಎಂದು ಕರೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಧೈರ್ಯವಿದ್ದರೆ, ಅವರು ಅಂಡಮಾನ್‌ಗೆ ಹೋಗಿ — ತೋರಿಸಲಿ ಎಂದು ಹೇಳಿದರು. ಕೇವಲ ಎರಡು ಅಥವಾ ಮೂರು ಭಾಷಣಗಳನ್ನು ನೀಡಿದ ನಂತರ ವಿರಾಮಕ್ಕಾಗಿ ಬ್ಯಾಂಕಾಕ್‌ಗೆ ಹೋಗುವವರಿಂದ ಏನನ್ನು ಅಪೇಕ್ಷಿಸಬಹುದು. ಜೆಎನ್‌ಯುನಲ್ಲಿ ಸಾವರ್ಕರ್ ಅವರ ಪ್ರತಿಮೆಯನ್ನು ಮಸಿ ಬಳಿದ ‘ತುಕಡೆ ತುಕಡೆ ಗ್ಯಾಂಗ್’ ಮೊದಲು ಉತ್ತರಿಸಬೇಕು, ‘ಕಾಮ್ರೇಡ್ ಡ್ಯಾಂಗೆ ಬ್ರಿಟಿಷರಲ್ಲಿ ಕ್ಷಮೆಯಾಚಿಸಿದ್ದರು ಮತ್ತು ‘ನಾನು ಬ್ರಿಟಿಷರಿಗೆ ನಿಷ್ಠನಾಗಿರುತ್ತೇನೆ’, ಎಂದು ಏಕೆ ಹೇಳಿದ್ದರು ?