ದೇವಸ್ಥಾನ ಸರಕಾರೀಕರಣ : ದೇವನಿಧಿಯನ್ನು ಕೊಳ್ಳೆ ಹೊಡೆಯುವ ಹಿಂದೂದ್ವೇಷಿ ವ್ಯವಸ್ಥೆ !

ಸದ್ಯ ಕರೋನಾ ಸಹಿತ ವಿವಿಧ ಕಾರಣಗಳಿಂದ ನಡೆಯುತ್ತಿರುವ ದೇಶವು ಆರ್ಥಿಕ ಸಂಕಟದಲ್ಲಿ ಸಿಲುಕಿದೆ. ಇದಕ್ಕೆ ಪರಿಹಾರವೆಂದು ಅನೇಕ ಜನಪ್ರತಿನಿಧಿಗಳು, ಪ್ರಗತಿಪರರು ಮುಂತಾದವರಿಂದ ಹಿಂದೂಗಳ ದೇವಸ್ಥಾನಗಳಲ್ಲಿನ ನಿಧಿ ಮತ್ತು ಸಂಪತ್ತನ್ನು ಉಪಯೋಗಿಸುವ ಹಿಂದೂದ್ವೇಷಿ ಸಲಹೆಯನ್ನು ನೀಡಲಾಗುತ್ತಿದೆ. ಸ್ವಾತಂತ್ರ್ಯದ ನಂತರದ ೭೨ ವರ್ಷಗಳಲ್ಲಿನ ಸರಕಾರಗಳು ಕೇವಲ ಹಿಂದೂಗಳ ಅನೇಕ ದೇವಸ್ಥಾನಗಳನ್ನು ಸರಕಾರೀಕರಣ ಮಾಡಿ ದೇವಸ್ಥಾನಗಳ ಸಂಪತ್ತನ್ನು ತಮ್ಮ ವಂಶಜರ ಸಂಪತ್ತು ಎಂದು ತಿಳಿದು ಅದನ್ನು ತಥಾಕಥಿತ ವಿಕಾಸಕಾರ್ಯ, ದಾನ, ಇತರ ಪಂಥದವರಿಗೆ ಸಹಾಯ, ಇತ್ಯಾದಿ ಅಧಾರ್ಮಿಕ ವಿಷಯಗಳಿಗೆ ಖರ್ಚು ಮಾಡುತ್ತಿದ್ದಾರೆ. ವಾಸ್ತವಿಕವೆಂದರೆ ಹಿಂದೂ ದೇವಸ್ಥಾನಗಳ ನಿಧಿಯು ಹಿಂದೂ ಧರ್ಮ ಕಾರ್ಯಕ್ಕಾಗಿಯೇ ಖರ್ಚಾಗಬೇಕು. ಜಾತ್ಯತೀತ ದೇಶದಲ್ಲಿ ಕೇವಲ ಹಿಂದೂ ದೇವಸ್ಥಾನಗಳ ಸರಕಾರೀಕರಣವೇಕೆ ? ಇತರ ಪಂಥೀಯರ ಶ್ರದ್ಧಾಸ್ಥಾನಗಳ ಸರಕಾರೀಕರಣವೇಕಿಲ್ಲ ?, ಎನ್ನುವ ಪ್ರಶ್ನೆಗೆ ಇಂದಿನವರೆಗಿನ ಎಲ್ಲ ಸರಕಾರಗಳೂ ಮೌನ ವಹಿಸುತ್ತಾ ಬಂದಿವೆ. ‘ಎಲ್ಲ ಕ್ಷೇತ್ರಗಳ ಖಾಸಗೀಕರಣವಾಗುತ್ತಿರುವಾಗ ಕೇವಲ ದೇವಸ್ಥಾನಗಳೆ ಸರಕಾರೀಕರಣವೇಕೆ ?, ಎನ್ನುವ ಪ್ರಶ್ನೆಯೂ ಅವರನ್ನು ಕಾಡುತ್ತಿದೆ. ಇದು ಧಾರ್ಮಿಕ ತಾರತಮ್ಯ ಅಲ್ಲವೆ ? ತಮ್ಮ ಇಚ್ಚಾನುಸಾರ ಯಾವುದೆ ಕಾರಣಕ್ಕಾಗಿ ದೇವಸ್ಥಾನಗಳ ಸಂಪತ್ತನ್ನು ಉಪಯೋಗಿಸುವ ಹಿಂದೂದ್ವೇಷಿ ಸಲಹೆಯನ್ನು ನೀಡುವ ಜನಪ್ರತಿನಿಧಿಗಳು, ಪ್ರಗತಿಪರರು ಮುಂತಾದವರು ಎಂದಾದರೂ ವಿದೇಶದಲ್ಲಿನ ಕಪ್ಪುಹಣವನ್ನು ತಂದು ಅದನ್ನು ಉಪಯೋಗಿಸಬೇಕೆಂದು ಏಕೆ ಸಲಹೆ ನೀಡುವುದಿಲ್ಲ ? ವಾಸ್ತವಿಕವೆಂದರೆ ಸರಕಾರದಲ್ಲಿ ಭ್ರಷ್ಟಾಚಾರವಿಲ್ಲದ ವಿಭಾಗವೇ ಇಲ್ಲ ಎನ್ನಬಹುದು. ಆದ್ದರಿಂದ ಸರಕಾರೀಕರಣವಾಗಿರುವ ದೇವಸ್ಥಾನಗಳಾದರೂ ಅದರಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ ? ಹೀಗಾಗುವುದೆಂದರೆ, ಇದು ಧರ್ಮಹಾನಿಯೆ ಆಗಿದೆ. ದೇವಸ್ಥಾನಗಳೆಂದರೆ, ಚೈತನ್ಯದ ಮೂಲವಾಗಿವೆ, ಆದ್ದರಿಂದ ಅವುಗಳು ಭಕ್ತರ ವಶದಲ್ಲಿರುವುದು ಆವಶ್ಯಕವಾಗಿದೆ. ಅದಕ್ಕಾಗಿ ಹಿಂದೂಗಳು ಕಾನೂನುಮಾರ್ಗದಲ್ಲಿ ಪ್ರಯತ್ನಿಸಬೇಕು. ದೇಶ ಸ್ವತಂತ್ರವಾಗುವ ಮೊದಲು ಆಂಗ್ಲರು ಮತ್ತು ಸ್ವಾತಂತ್ರ್ಯದ ನಂತರ ೧೯೫೧ ರಿಂದ ದೇವಸ್ಥಾನಗಳ ಸರಕಾರೀಕರಣ ಕಾನೂನು ಆದನಂತರ ದೇವಸ್ಥಾನಗಳಲ್ಲಿ ಸಂಗ್ರಹವಾಗಿರುವ ದೇವನಿಧಿಯನ್ನು ಹೇಗೆ ಕೊಳ್ಳೆ ಹೊಡೆಯಲಾಯಿತು, ಎಂಬುದರ ವಾಸ್ತವಿಕತೆಯನ್ನು ಮಂಡಿಸುವ ಲೇಖನವನ್ನು ವಾಚಕರಿಗಾಗಿ ೨ ಭಾಗಗಳಲ್ಲಿ ಪ್ರಕಟಿಸುತ್ತಿದ್ದೇವೆ.

(ಭಾಗ ೨)

೭. ಪ್ರಾಚೀನ ದೇವಸ್ಥಾನಗಳನ್ನು ನಿರ್ಮಿಸುವ ಭಾರತೀಯ ರಾಜರ ಉದಾರತೆಯ ಕುರಿತು ವಿದೇಶಿ ಲೇಖಕ ಸ್ಟೀಫನ್ ನೈಪ್ ಇವರು ನೀಡಿದ ದಾಖಲೆಗಳು !

ದುಃಖದ ವಿಷಯವೆಂದರೆ, ಹಿಂದೂ ದೇವಸ್ಥಾನಗಳ ಈ ಲೂಟಿಯ ವಿಷಯದಲ್ಲಿ ಹಿಂದೂ ಸಂತರು ಅಥವಾ ಹಿಂದೂ ಸಂಘಟನೆಗಳಲ್ಲ, ವಿದೇಶದ ಓರ್ವ ಲೇಖಕ ಸ್ಟೀಫನ್ ನೈಪ್ ಇವರು ಅತ್ಯಂತ ಶೋಧಾತ್ಮಕ ಹಾಗೂ ತಥ್ಯಾತ್ಮಕ ಪುಸ್ತಕವನ್ನು ಬರೆದಿದ್ದಾರೆ. ‘ಕ್ರೈಮ್ಸ್ ಎಗೇನ್ಸ್ಟ್ ಇಂಡಿಯಾ ಎಂಡ್ ದ ನೀಡ್ ಟು ಪ್ರೊಟೆಕ್ಟ್ ಎನ್ಸಿಯೆಂಟ್ ವೈದಿಕ್ ಟ್ರೆಡಿಶನ್ ಎಂಬುದು ಈ ಪುಸ್ತಕದ ಹೆಸರು, ಅದು ಅಮೇರಿಕಾದಲ್ಲಿ ಪ್ರಕಾಶನವಾಗಿದೆ. ಈ ಪುಸ್ತಕವನ್ನು ಓದಿದಾಗ ನಿಮಗೆ ಆಶ್ಚರ್ಯವಾಗಬಹುದು. ಸ್ಟೀಫನ್ ನೈಪ್ ಬರೆಯುತ್ತಾರೆ, ಈ ದೇವಸ್ಥಾನಗಳನ್ನು ನಿರ್ಮಿಸಿದ ಯಾವ ರಾಜ ಕೂಡ ಆ ದೇವಸ್ಥಾನಗಳ ಮೇಲೆ ತನ್ನ ಅಥವಾ ತನ್ನ ಕುಟುಂಬದವರಿಗೆ ಯಾವುದೇ ಅಧಿಕಾರವಿದೆಯೆಂದು ಹೇಳಿಲ್ಲ, ಅನೇಕ ರಾಜರು ತಮ್ಮ ಸ್ವಂತದ ಹೆಸರನ್ನು ಕೂಡ ದೇವಸ್ಥಾನದ ಮೇಲೆ ಬರೆಯಲಿಲ್ಲ. ಯುಗಯುಗಾಂತರಗಳಿಂದ ಸ್ಥಿರವಾಗಿರುವ ಹಳೆಯ ಈ ಕೆಲವು ದೇವಸ್ಥಾನಗಳಿಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿ ಯಾರು ನಿರ್ಮಿಸಿದರು, ಎನ್ನುವ ಮಾಹಿತಿ ಕೂಡ ಸಿಗುವುದಿಲ್ಲ. ದೇವಸ್ಥಾನ ಮತ್ತು ಅವುಗಳ ಹಣದ ಮೇಲೆ ನಿಯಂತ್ರಣ ಬಿಡಿ, ಈ ರಾಜರು ಭೂಮಿ ಮತ್ತು ಇನ್ನಿತರ ಸಂಪತ್ತನ್ನು ಕೂಡ ದೇವಸ್ಥಾನದ ಹೆಸರಿಗೆ ಮಾಡಿದ್ದರು. ಅವುಗಳಲ್ಲಿ ಆಭರಣಗಳು ಕೂಡ ಇವೆ. ಹಿಂದೂ ರಾಜರು ಕೇವಲ ದೇವಸ್ಥಾನಗಳಿಗೆ ಸಹಾಯ ಮಾಡಿದರು, ಅವುಗಳ ಮೇಲೆ ಯಾವುದೇ ಹಕ್ಕನ್ನು ತೋರಿಸಲಿಲ್ಲ. ನಿಜವಾಗಿಯೂ ಹಾಗೆಯೆ ಇರಬೇಕು. (ಓರ್ವ ವಿದೇಶಿ ಲೇಖಕರಿಗೆ ಅರಿವಾಗುತ್ತದೆ, ಅದು ದೇಶದಲ್ಲಿನ ಜನಪ್ರತಿನಿಧಿಗಳಿಗೆ ತಿಳಿಯುವುದಿಲ್ಲವೆಂದರೆ, ಇದು ವೈಭವಶಾಲಿ ಭಾರತಕ್ಕೆ ಅತ್ಯಂತ ದುರ್ದೈವವೆಂದೇ ಹೇಳಬೇಕಾಗುತ್ತದೆ. ಹಿಂದೂಗಳೆ, ನಿಮ್ಮ ವೈಭವ ಶಾಲಿ ಪರಂಪರೆಗಳನ್ನು ಲೂಟಿ ಮಾಡಲಾಗುತ್ತದೆ, ಇದು ನಿಮಗೆ ಒಪ್ಪಿಗೆ ಇದೆಯೇ ? – ಸಂಪಾದಕರು)

೮. ಹೆಚ್ಚಿನ ದೇವಸ್ಥಾನಗಳ ಸಂಪತ್ತನ್ನು ಅಜ್ಞಾತ ಕಾರ್ಯ ಹಾಗೂ ಹಿಂದೂಗಳೇತರರಿಗಾಗಿ ಉಪಯೋಗಿಸಲಾಗುವುದು, ಇದಕ್ಕೆ ಹಿಂದೂಗಳ ಅಸಡ್ಡೆ ಹಾಗೂ ಸಹಿಷ್ಣುತೆಯೇ ಕಾರಣ

ಕೆಲವು ಅಪವಾದಗಳನ್ನು ಬಿಟ್ಟರೆ ಸದ್ಯದ ಯಾವುದೇ ಸರಕಾರವು ದೊಡ್ಡ ದೇವಸ್ಥಾನಗಳನ್ನು ನಿರ್ಮಾಣ ಮಾಡಿಲ್ಲ. ಅವರಿಗೆ ಯಾವುದೇ ದೇವಸ್ಥಾನದಲ್ಲಿನ ಹಣ, ಆಡಳಿತ ಅಥವಾ ಪೂಜೆಯ ಪದ್ಧತಿಯ ವಿಷಯದಲ್ಲಿ ಯಾವುದೇ ಅಧಿಕಾರವಿಲ್ಲ. ದೇವಸ್ಥಾನಗಳ ಹಣವನ್ನು ಕೇವಲ ದೇವಸ್ಥಾನಗಳ ಆಡಳಿತ, ಅವುಗಳ ಜೋಪಾನ, ಸಂವರ್ಧನೆ, ಅವುಗಳಿಗೆ ಸಂಬಂಧಿಸಿದ ಸಂರಚನೆ ಮತ್ತು ಸೌಲಭ್ಯಗಳಿಗೆ ಖರ್ಚು ಮಾಡಬೇಕು. ಅನಂತರ ಹಣ ಉಳಿದರೆ, ಆವಶ್ಯಕವಿರುವ ಇನ್ನಿತರ ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಖರ್ಚು ಮಾಡಬೇಕು. ದೇವಸ್ಥಾನ ಸರಕಾರೀಕರಣ ಕಾನೂನಿನ (Temple Endowment Act) ಅಂತರ್ಗತ ಆಂಧ್ರಪ್ರದೇಶದ ೪೩ ಸಾವಿರ ದೇವಸ್ಥಾನಗಳು ಸರಕಾರದ ನಿಯಂತ್ರಣದಲ್ಲಿವೆ. ಈ ದೇವಸ್ಥಾನಗಳ ಕೇವಲ ಶೇ. ೧೮ ರಷ್ಟು ಆದಾಯವನ್ನು ಮಾತ್ರ ದೇವಸ್ಥಾನಗಳಿಗೆ ಹಿಂದಿರುಗಿಸಲಾಗಿದೆ. ಉಳಿದ ಶೇ. ೮೨ ರಷ್ಟು ಹಣವನ್ನು ಅಜ್ಞಾತ ಕಾರ್ಯಕ್ಕಾಗಿ (ಈ ಹಣ ಏನಾಗಿದೆಯೆಂಬುದು ನಿಮಗೆ ತಿಳಿದಿರಬಹುದು!) ಖರ್ಚು ಮಾಡಲಾಗಿದೆ. ಜಗತ್ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನ ಕೂಡ ಇದಕ್ಕೆ ಹೊರತಾಗಿಲ್ಲ. ಸ್ಟೀಫನ್ ಇವರ ಹೇಳಿಕೆಗನುಸಾರ ಈ ದೇವಸ್ಥಾನದಲ್ಲಿ ಪ್ರತಿ ವರ್ಷ ೩ ಸಾವಿರದ ೧೦೦ ಕೋಟಿಗಿಂತಲೂ ಹೆಚ್ಚು ಹಣ ಸಂಗ್ರಹವಾಗುತ್ತದೆ. ಈ ಮೊತ್ತದ ಶೇ. ೮೫ ರಷ್ಟು ಭಾಗವು ರಾಜಕೋಶದಲ್ಲಿ ಜಮೆಯಾಗುತ್ತದೆ. ರಾಜ್ಯ ಸರಕಾರವು ಈ ಆರೋಪವನ್ನು ತಳ್ಳೀಹಾಕಿಲ್ಲ. ದೇವಸ್ಥಾನದ ಉತ್ಪನ್ನದಲ್ಲಿ ಹೆಚ್ಚಿನ ಭಾಗವನ್ನು ಹಿಂದೂ ಸಮಾಜಕ್ಕೆ ಸಂಬಂಧವಿಲ್ಲದ ವಿಷಯಗಳಿಗೆ ಖರ್ಚು ಮಾಡಲಾಗುತ್ತದೆ. ಇನ್ನೊಂದು ಆರೋಪ ಕೇಳಿಬರುತ್ತಿದೆ, ಅದೆಂದರೆ, ಆಂಧ್ರಪ್ರದೇಶ ಸರಕಾರವು ಗೋಲ್ಫ್ ಕೋರ್ಸ್ ನಿರ್ಮಾಣಕ್ಕಾಗಿ ಕಡಿಮೆಯೆಂದರೂ ೧೦ ದೇವಸ್ಥಾನಗಳನ್ನು ಉರುಳಿಸಲು ಆನುಮತಿ ನೀಡಿದೆ. ಸ್ಟೀಫನ್ ನೈಪ್ ಬರೆಯುತ್ತಾರೆ, ‘ಒಂದು ವೇಳೆ ೧೦ ಮಸೀದಿಗಳನ್ನು ಕೆಡವಿದ್ದಲ್ಲಿ, ಎಷ್ಟು ‘ಸೆಕ್ಯುಲರ್ ಕೋಲಾಹಲ ಏಳುತ್ತಿತ್ತು? ಎಂದು ಕಲ್ಪನೆ ಮಾಡಬಹುದು ಕರ್ನಾಟಕದಲ್ಲಿ ಸುಮಾರು ೨ ಲಕ್ಷ ಸಣ್ಣ ದೇವಸ್ಥಾನಗಳಿಂದ ೭೯ ಕೋಟಿ ರೂಪಾಯಿಗಳನ್ನು ವಸೂಲಿ ಮಾಡ ಲಾಯಿತು. ಅದರಿಂದ ದೇವಸ್ಥಾನಗಳಿಗೆ ಕೇವಲ ೭ ಕೋಟಿ ಸಿಕ್ಕಿತು. ಮದರಸಾಗಳು ಮತ್ತು ಹಜ್ ಅನುದಾನಕ್ಕಾಗಿ ೫೯ ಕೋಟಿ ರೂಪಾಯಿಗಳನ್ನು ಕೊಡಲಾಯಿತು ಹಾಗೂ ಚರ್ಚ್‌ಗಳಿಗೆ ಸುಮಾರು ೧೩ ಕೋಟಿ ರೂಪಾಯಿಗಳನ್ನು ಕೊಡಲಾಯಿತು. ಸ್ಟೀಫನ್ ನೈಪ್ ಬರೆಯುತ್ತಾರೆ, ಇದರಿಂದ ೨ ಲಕ್ಷ ದೇವಸ್ಥಾನಗಳಿಗೆ ಶೇ. ೨೫ ರಷ್ಟೇ ಹಣವನ್ನು ಕೊಡಲಾಯಿತು, ಅಂದರೆ ಕರ್ನಾಟಕದಲ್ಲಿ ಸುಮಾರು ೫೦ ಸಾವಿರ ದೇವಸ್ಥಾನಗಳು ಆರ್ಥಿಕತೆಯ ಅಭಾವದಿಂದ ಮುಚ್ಚಬೇಕಾಗುವುದು. ನೈಪ್ ಇವರ ಅಭಿಪ್ರಾಯದಲ್ಲಿ ಸರಕಾರದ ಕೃತ್ಯ ಗಳಿಗೆ ಕೇವಲ ಹಿಂದೂಗಳ ಅಸಡ್ಡೆ ಮತ್ತು ಸಹಿಷ್ಣುತೆಯೇ ಕಾರಣವಾಗಿದೆ.

೯. ದೇವಸ್ಥಾನಗಳ ಸಂಪತ್ತು ಮತ್ತು ಭೂಮಿಯ ಮೇಲಿನ ಅತಿಕ್ರಮಣ

ನೈಪ್ ತಮ್ಮ ಪುಸ್ತಕದಲ್ಲಿ ಕೇರಳದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಗುರುವಾಯೂರು ದೇವಸ್ಥಾನದ ನಿಧಿಯನ್ನು (ಫಂಡ್) ಇತರ ಸರಕಾರಿಯೋಜನೆಗಳಿಗೆ ಉಪಯೋಗಿಸಲಾಯಿತು. ಅದರಿಂದಾಗಿ ೪೫ ದೇವಸ್ಥಾನಗಳ ವಿಕಾಸಕಾರ್ಯ ನಿಂತುಹೋಯಿತು ಅಯ್ಯಪ್ಪ ಮಂದಿರದ ಭೂಮಿಯಲ್ಲಿ ಅತಿಕ್ರಮಣ ಮಾಡಲಾಯಿತು ಹಾಗೂ ಚರ್ಚ್‌ಗಳು ಮತ್ತು ವಿಸ್ತಾರವಾದ ಅರಣ್ಯ ಇಲಾಖೆಯು ಶಬರಿಮಲೆಯ ಸಾವಿರಾರು ಎಕ್ರೆ ಭೂಮಿಯನ್ನು ಅತಿಕ್ರಮಣ ಮಾಡಿದವು. ಕೇರಳದ ಸಾಮ್ಯವಾದಿ (ಕಮ್ಯುನಿಸ್ಟ್) ರಾಜ್ಯ ಸರಕಾರ ಒಂದು ಸುಗ್ರೀವಾಜ್ಞೆ ಹೊರಡಿಸುವ ವಿಚಾರ ಮಾಡುತ್ತಿದೆ, ಅದರಿಂದ ‘ತ್ರಾವಣಕೋರ್ ದೇವಸ್ವಮ್ ಬೋರ್ಡ್ ವಿಸರ್ಜನೆಯಾಗಬೇಕು ಹಾಗೂ ಅದರ ಮೂಲಕ ೧ ಸಾವಿರದ ೮೦೦ ಹಿಂದೂ ಮಂದಿರಗಳ ಸೀಮಿತ ಸ್ವತಂತ್ರ ಅಧಿಕಾರಗಳನ್ನು ಕೈಗೆತ್ತಿಕೊಳ್ಳಬೇಕು. ರಾಜ್ಯದ ದಿವಾಳಿತನ ನಿವಾರಣೆಯಾಗಬೇಕು ಎಂದು ಮಹಾರಾಷ್ಟ್ರ ಸರಕಾರವು ಸಹ ರಾಜ್ಯದ ೪೫ ಸಾವಿರ ದೇವಸ್ಥಾನಗಳ ಮೇಲೆ ಅತಿಕ್ರಮಣ ಮಾಡುವ ಸಿದ್ಧತೆಯಲ್ಲಿದೆ. ಇದೇ ರೀತಿ ಒಡಿಶಾ ರಾಜ್ಯ ಸರಕಾರ ಜಗನ್ನಾಥ ಮಂದಿರದಲ್ಲಿ ದಾನ ಸ್ವರೂಪದಲ್ಲಿ ಬಂದಿರುವ ೭೦ ಸಾವಿರ ಎಕ್ರೆಗಿಂತ ಹೆಚ್ಚು ಭೂಮಿಯನ್ನು ಮಾರಾಟ ಮಾಡುವ ಸಿದ್ಧತೆಯಲ್ಲಿದೆ. ದೇವಸ್ಥಾನದ ಅಯೋಗ್ಯ ವ್ಯವಸ್ಥಾಪನೆಯಿಂದಾದ ಆರ್ಥಿಕ ಹಾನಿಯನ್ನು ಆ ಹಣದಿಂದ ತುಂಬಿಸಿಕೊಳ್ಳಲಿದೆ.

೧೦. ಹಿಂದೂವಿರೋಧಿ ಭಾರತೀಯ ಮಾಧ್ಯಮಗಳಿಂದಾಗಿ ಸರಕಾರದ ಹಿಂದೂವಿರೋಧಿ ಕಾರ್ಯವು ಯಾರನ್ನೂ ಆಕರ್ಷಿಸದೇ ಅದೇ ರೀತಿ ಮುಂದುವರಿದಿದೆ

ನೈಪ್ ಇವರ ಪುಸ್ತಕದ ಪ್ರಕಾರ, ಭಾರತೀಯ ಮಾಧ್ಯಮಗಳು, ವಿಶೇಷವಾಗಿ ಅಂಗ್ಲ ವಾಹಿನಿಗಳು ಮತ್ತು ಪತ್ರಿಕೆಗಳು ಹಿಂದೂವಿರೋಧಿಗಳಾಗಿವೆ, ಆದ್ದರಿಂದ ಈ ವಿಷಯಗಳ ಬಗ್ಗೆ ಮಾಹಿತಿ ಮುಂದೆ ಬರುವುದಿಲ್ಲ. ಈ ಮಾಧ್ಯಮಗಳು ಹಿಂದೂಗಳನ್ನು ಪ್ರಭಾವಿತಗೊಳಿಸುವಂತಹ ಯಾವುದಕ್ಕೂ ‘ಕವರೇಜ್ ನೀಡಲು ಬಯಸುವುದಿಲ್ಲ ಮತ್ತು ಅವರಲ್ಲಿ ಯಾರೊಬ್ಬರೂ ಅದರ ಬಗ್ಗೆ ಸಹಾನುಭೂತಿ ಹೊಂದಿಲ್ಲ. ಆದ್ದರಿಂದ ಸರಕಾರದ ಎಲ್ಲ ಹಿಂದೂವಿರೋಧಿ ಚಟುವಟಿಕೆಗಳು ಯಾರ ಗಮನವನ್ನೂ ಸೆಳೆಯದೆ ಮುಂದುವರಿಯುತ್ತಿವೆ.

ಕೆಲವು ದುಷ್ಟವಿಚಾರಪ್ರವೃತ್ತಿಯ ಜನರು ಹಣ ಸಂಪಾದಿಸಲು ದೇವಸ್ಥಾನಗಳನ್ನು ನಿರ್ಮಾಣ ಮಾಡುತ್ತಿರಬಹುದು; ಆದರೆ ಸರಕಾರಕ್ಕೆ ಇದರಿಂದ ಏನಾಗಬೇಕು ? ಎಲ್ಲ ಉತ್ಪನ್ನವನ್ನು ಕಬಳಿಸುವ ಬದಲು ಸರಕಾರ ದೇವಸ್ಥಾನಗಳ ಹಣದ ನಿರ್ವಹಣೆಗಾಗಿ ಸಮಿತಿಯನ್ನು ನಿರ್ಮಾಣ ಮಾಡಬಹುದು, ಅದರಿಂದ ಆ ಹಣವು ಕೇವಲ ದೇವಸ್ಥಾನಗಳಿಗಾಗಿ ಯೋಗ್ಯ ರೀತಿಯಲ್ಲಿ ಉಪಯೋಗವಾಗಬಹುದು.

೧೧. ನಿರ್ಲಕ್ಷ ಹಾಗೂ ಸಹಿಷ್ಣು ಹಿಂದೂಗಳು ತಮ್ಮ ವಿಚಾರವನ್ನು ಸ್ಪಷ್ಟ ಹಾಗೂ ಪ್ರಖರವಾದ ಧ್ವನಿಯಲ್ಲಿ ಮಂಡಿಸುವ ಆವಶ್ಯಕತೆಯಿದೆ !

ಜಗತ್ತಿನಲ್ಲಿ ಯಾವುದೇ ಸ್ವತಂತ್ರ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಸರಕಾರ ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಿಸುವುದಿಲ್ಲ ಹಾಗೂ ಜನರನ್ನು ಧಾರ್ಮಿಕ ಸ್ವಾತಂತ್ರ್ಯದಿಂದ ವಂಚಿಸುವುದೂ ಇಲ್ಲ; ಆದರೆ ಭಾರತದಲ್ಲಿ ಹೀಗೆ ಆಗುತ್ತಿದೆ. ಸರಕಾರಿ ಅಧಿಕಾರಿಗಳು ಹಿಂದೂಗಳ ದೇವಸ್ಥಾನಗಳನ್ನು ತಮ್ಮ ವಶದಲ್ಲಿ ತೆಗೆದುಕೊಂಡರು; ಏಕೆಂದರೆ ಅವರಿಗೆ ಇದರಿಂದ ಸಿಗುವ ಹಣದ ಆಸಕ್ತಿ ಇದೆ. ಅವರು ಹಿಂದೂಗಳ ಅಸಡ್ಡೆಯನ್ನು ಗುರುತಿಸಿದ್ದಾರೆ. ಏಕೆಂದರೆ ಹಿಂದೂಗಳು ಸಹಿಷ್ಣುಗಳು ಮತ್ತು ಧೈರ್ಯಶಾಲಿಗಳಾಗಿದ್ದಾರೆ ಎಂಬುದು ಕೂಡ ಅವರಿಗೆ ತಿಳಿದಿದೆ, ರಸ್ತೆಯಲ್ಲಿ ಪ್ರದರ್ಶನ ಮಾಡುವುದು, ಸಂಪತ್ತನ್ನು ಧ್ವಂಸ ಮಾಡುವುದು, ಬೆದರಿಕೆ, ಲೂಟಿ, ಕೊಲೆ ಇತ್ಯಾದಿ ವಿಷಯಗಳನ್ನು ಮಾಡುವುದು ಹಿಂದೂಗಳ ರಕ್ತದಲ್ಲಿಲ್ಲ. ಹಿಂದೂಗಳು ಸುಮ್ಮನೆ ಕುಳಿತುಕೊಂಡು ತಮ್ಮ ಸಂಸ್ಕೃತಿಯ ವಿನಾಶವನ್ನು ನೋಡುತ್ತಿದ್ದಾರೆ. ಹಿಂದೂಗಳು ತಮ್ಮ ವಿಚಾರವನ್ನು ಸ್ಪಷ್ಟವಾಗಿ ಹಾಗೂ ಪ್ರಖರವಾಗಿ ಧ್ವನಿಯೆತ್ತಬೇಕು. ಸರಕಾರದ ಎಲ್ಲ ಸತ್ಯವನ್ನು ಮುಂದಿಟ್ಟು ಜನರಿಗೆ ಅವರ ಹಿಂದೆ ಏನಾಗುತ್ತಿದೆ, ಎಂಬುದನ್ನು ತಿಳಿಸುವ ಸಮಯ ಬಂದಿದೆ. ‘ಪೀಟರ್‌ನನ್ನು ಲೂಟಿ ಮಾಡಿ ಪಾಲ್‌ನ ಹೊಟ್ಟೆ ತುಂಬಿಸುವುದು, ಇದು ಧರ್ಮ ನಿರಪೇಕ್ಷತೆಯಲ್ಲ. ದೇವಸ್ಥಾನಗಳನ್ನು ಕೊಳ್ಳೆ ಹೊಡೆಯುವ ಸಲುವಾಗಿ ನಿರ್ಮಾಣ ಮಾಡಿಲ್ಲ. ‘ಮಹಮ್ಮದ ಗಝನಿ ಸತ್ತುಹೋದನು, ಎಂದು ನಾವು ತಿಳಿದಿದ್ದೆವು; ಆದರೆ ಹಾಗಿಲ್ಲ, ‘ಅವನು ಪ್ರಜಾಪ್ರಭುತ್ವದಲ್ಲಿಯೂ ಬಣ್ಣ ಬದಲಾಯಿಸಿ ಕಾರ್ಯನಿರತನಾಗಿದ್ದಾನೆ.

(ಮುಕ್ತಾಯ)

(ಸರಕಾರೀಕರಣವಾಗಿರುವ ದೇವಸ್ಥಾನಗಳ ಲೂಟಿಯನ್ನು ತಡೆಗಟ್ಟಲು ದೇವಸ್ಥಾನಗಳನ್ನು ಭಕ್ತರ ವಶಕ್ಕೆ ಕೊಡುವುದು ಎಷ್ಟು ಆವಶ್ಯಕವಾಗಿದೆ, ಎಂಬುದೇ ಇದರಿಂದ ಕಾಣಿಸುತ್ತಿದೆ. ಹಿಂದೂ ಜನಜಾಗೃತಿ ಸಮಿತಿ ಸಹಿತ ಅನೇಕ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಮಂದಿರ ಸರಕಾರೀ ಕರಣದ ವಿರುದ್ಧ ವಿವಿಧ ಸ್ತರದಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹಿಂದೂ ರಾಷ್ಟ್ರದಲ್ಲಿ ಎಲ್ಲ ದೇವಸ್ಥಾನಗಳ ವಹಿವಾಟು ಭಕ್ತರಲ್ಲಿರುವುದು ! – ಸಂಪಾದಕರು)