ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

೧೯೬೨ ರ ಯುದ್ಧದಲ್ಲಿ ಚೀನಾವು ಭಾರತದ ಭೂಮಿಯನ್ನು ಕಬಳಿಸಿತು, ಇದು ರಾಷ್ಟ್ರೀಯ ಅವಮಾನವಾಗಿದೆ. ಇದನ್ನು ಮರೆಯುವವರಿಗೆ ದೇಶದಲ್ಲಿ ಇರುವ ಅಧಿಕಾರವಿದೆಯೇ ?

ಜಗತ್ತಿನಲ್ಲಿನ ಏಕೈಕ ಹಿಂದೂ ರಾಷ್ಟ್ರವಾಗಿದ್ದ ನೇಪಾಳವನ್ನು ಚೀನಾ ಸಾಮ್ಯವಾದಿ ದೇಶವನ್ನಾಗಿ ಮಾಡಿತು, ಇದನ್ನು ದೇಶದಲ್ಲಿನ ಹಿಂದೂಗಳು ಯಾವತ್ತೂ ಮರೆಯಬಾರದು.

೧೯೭೧ ರ ಭಾರತ ಪಾಕ್ ಯುದ್ಧದಲ್ಲಿ ಪಾಕಿಸ್ತಾನದ ಸಹಾಯಕ್ಕಾಗಿ ನೌಕಾದಳವನ್ನು ಕಳುಹಿಸಲು ಸಿದ್ಧವಾಗಿದ್ದ ಚೀನಾದ ಕಪಟಿ ಒಳಸಂಚನ್ನು ಗಮನದಲ್ಲಿಟ್ಟುಕೊಂಡು ಅರ್ಥಕಾರಣದ ಹಜ್ಜೆಗಳನ್ನು ಇಟ್ಟರೆ ಭಾರತವು ಮಹಾಧಿಕಾರಿಯಾಗಬಹುದು !

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಣೆಕಟ್ಟನ್ನು ಕಟ್ಟಲು ಇಚ್ಛಿಸುವ ಚೀನಾದ ಕುತಂತ್ರವನ್ನು ತಿಳಿದುಕೊಳ್ಳದೇ ಹಿಂದಿ-ಚೀನಿ ಭಾಯಿ-ಭಾಯಿ ಎನ್ನುವವರ ಬಗ್ಗೆ ಎಷ್ಟು ಕರುಣೆ ತೋರಿಸಿದರೂ ಅದು ಕಡಿಮೆಯೇ.

ವಿಜ್ಞಾನವು ಪೃಥ್ವಿತತ್ತ್ವಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಇದೆ ಮತ್ತು ಅಧ್ಯಾತ್ಮವು ಪೃಥ್ವಿ, ಆಪ, ತೇಜ, ವಾಯು, ಆಕಾಶ ಈ ಪಂಚಮಹಾಭೂತಗಳು ಮತ್ತು ನಿರ್ಗುಣತತ್ತ್ವ ಇವುಗಳಿಗೆ ಸಂಬಂಧಿಸಿದೆ. ಆದುದರಿಂದಲೇ ವಿಜ್ಞಾನವು ಪೃಥ್ವಿಯ ಹೊರಗಿನ ಇತರ ಪೃಥ್ವಿಗಳ ಅಧ್ಯಯನವನ್ನು ಮಾಡುತ್ತದೆ.

ಹಿಂದೂ ರಾಷ್ಟ್ರದಲ್ಲಿ (ಈಶ್ವರೀ ರಾಜ್ಯದಲ್ಲಿ) ದಿನಪತ್ರಿಕೆಗಳು, ದೂರದರ್ಶನವಾಹಿನಿ, ಜಾಲತಾಣ ಮುಂತಾದವುಗಳನ್ನು ಕೇವಲ ಧರ್ಮಶಿಕ್ಷಣ ಮತ್ತು ಸಾಧನೆಯ ಸಂದರ್ಭದಲ್ಲಿ ಉಪಯೋಗಿಸಲಾಗುವುದು. ಆದುದರಿಂದ ಈಶ್ವರೀ ರಾಜ್ಯದಲ್ಲಿ ಅಪರಾಧಿಗಳು ಇರುವುದಿಲ್ಲ ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿ ಇರುವುದರಿಂದ ಆನಂದದಿಂದ ಇರಬಹುದು.

ಹಿಂದಿನ ಕಾಲದಲ್ಲಿ ಎಲ್ಲರೂ ಸಾಧನೆ ಮಾಡುವವರಾಗಿದ್ದರು, ಆದುದರಿಂದ ಅವರಿಗೆ ಇತರರೊಂದಿಗೆ ಹೇಗೆ ಮಾತನಾಡಬೇಕು ? ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು ?, ಎಂಬುದನ್ನು ಕಲಿಸಬೇಕಾಗಿರಲಿಲ್ಲ. ಅದು ಅವರಲ್ಲಿ ಚಿಕ್ಕಂದಿನಿಂದಲೇ ಮೈಗೂಡಿರುತ್ತಿತ್ತು. ಈಗ ಮಾತ್ರ ಅದನ್ನು ಪ್ರತಿಯೊಬ್ಬರಿಗೂ ಕಲಿಸಬೇಕಾಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ