ಉನ್ನತರು ಮಂತ್ರಿಸಿಕೊಟ್ಟ ಮಣ್ಣಿನ ಮಡಕೆಯಿಂದ ದೃಷ್ಟಿಯನ್ನು ತೆಗೆದ ನಂತರ ಮಡಕೆಯ ಮೇಲಾದ ಪರಿಣಾಮಗಳು

ದೃಷ್ಟಿಯನ್ನು ತೆಗೆಯುವ ಕುರಿತು ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ
ಪ್ರಾ. ಸುಹಾಸ ಜಗತಾಪ

‘ಪರಾತ್ಪರ ಗುರು ಡಾ. ಆಠವಲೆಯವರು ಈಶ್ವರೀ ರಾಜ್ಯದ ಸ್ಥಾಪನೆಯ ಮಹಾನ ಸಮಷ್ಟಿ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ಅಡಚಣೆಗಳನ್ನು ತರಲು ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ಸತತವಾಗಿ ಆಕ್ರಮಣಗಳನ್ನು ಮಾಡುತ್ತವೆ. ಇದರಿಂದ ಪರಾತ್ಪರ ಗುರು ಡಾಕ್ಟರರಿಗೆ ವಿವಿಧ ರೀತಿಯ ಶಾರೀರಿಕ ತೊಂದರೆಗಳಾಗುತ್ತವೆ. ಅವರಿಗಾಗುವ ತೊಂದರೆಗಳು ದೂರವಾಗಬೇಕೆಂದು, ಓರ್ವ ಉನ್ನತರು ಅಭಿಮಂತ್ರಿಸಿ ಕೊಟ್ಟ ಮಣ್ಣಿನ ಮಡಕೆಯಿಂದ ಸದ್ಗುರು ಡಾ. ಮುಕುಲ ಗಾಡಗೀಳ ಇವರು ೨೫.೧೨.೨೦೧೯ ರಂದು ಪರಾತ್ಪರ ಗುರು ಡಾಕ್ಟರರ ದೃಷ್ಟಿಯನ್ನು ತೆಗೆದರು. ‘ದೃಷ್ಟಿಯನ್ನು ತೆಗೆದ ನಂತರ ಅಭಿಮಂತ್ರಿಸಿದ ಮಣ್ಣಿನ ಮಡಕೆಯ ಮೇಲೆ ಏನು ಪರಿಣಾಮವಾಯಿತು ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನಮಾಡಲು ಆ ಮಣ್ಣಿನ ಮಡಕೆಯ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಕೆಳಗೆ ಕೊಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗೆ ಸಂಬಂಧಿಸಿದ ನಿರೀಕ್ಷಣೆಗಳ ವಿಶ್ಲೇಷಣೆ – ಅಭಿಮಂತ್ರಿಸಿದ ಮಣ್ಣಿನ ಮಡಕೆಯಿಂದ ದೃಷ್ಟಿಯನ್ನು ತೆಗೆದ ನಂತರ ಆ ಮಡಕೆಯಲ್ಲಿ ಸಕಾರಾತ್ಮಕ ಊರ್ಜೆಯು ಇಲ್ಲವಾಗಿ ಅದರಲ್ಲಿ ಬಹಳಷ್ಡು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ನಿರ್ಮಾಣವಾಗುವುದು : ಮೊದಲು (ದೃಷ್ಟಿಯನ್ನು ತೆಗೆಯುವ ಮೊದಲು) ಮಣ್ಣಿನ ಮಡಕೆಯಲ್ಲಿ ನಕಾರಾತ್ಮಕ ಊರ್ಜೆ ಇರಲಿಲ್ಲ, ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯಿತ್ತು. ಮಣ್ಣಿನ ಮಡಕೆಯಿಂದ ಪರಾತ್ಪರ ಗುರು ಡಾಕ್ಟರರ ದೃಷ್ಟಿಯನ್ನು ತೆಗೆದ ನಂತರ ಅದರಲ್ಲಿ ಸಕಾರಾತ್ಮಕ ಊರ್ಜೆ ಇಲ್ಲವಾಗಿ ಅದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಗಳು ನಿರ್ಮಾಣವಾದವು, ಇದು ಕೆಳಗೆ ನೀಡಿದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೨. ನಿಷ್ಕರ್ಷ

ದೃಷ್ಟಿಯನ್ನು ತೆಗೆದ ನಂತರ ಮಣ್ಣಿನ ಮಡಕೆಯಲ್ಲಿ ಸಕಾರಾತ್ಮಕ ಊರ್ಜೆ ಇಲ್ಲವಾಗಿ ಅದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ನಿರ್ಮಾಣವಾಯಿತು.

೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ದೃಷ್ಟಿಯನ್ನು ತೆಗೆಯುವುದರಿಂದ ವ್ಯಕ್ತಿಯ ಸ್ಥೂಲದೇಹ, ಮನೋದೇಹ ಮತ್ತು ಸೂಕ್ಷ್ಮದೇಹದ ಮೇಲೆ ಬಂದಿರುವ ರಜ-ತಮಾತ್ಮಕ ಆವರಣ (ತೊಂದರೆದಾಯಕ ಸ್ಪಂದನಗಳು) ದೂರವಾಗುವುದು : ವ್ಯಕ್ತಿಗೆ ದೃಷ್ಟಿತಾಗಿದರೆ ಅವನ ಸುತ್ತಲೂ ರಜ-ತಮಾತ್ಮಕ ಆವರಣ (ತೊಂದರೆದಾಯಕ ಸ್ಪಂದನಗಳು) ನಿರ್ಮಾಣವಾಗುತ್ತವೆ. ಆದ್ದರಿಂದ ಅವನ ಸ್ಥೂಲದೇಹ, ಮನೋದೇಹ ಮತ್ತು ಸೂಕ್ಷ್ಮ ದೇಹದ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ಯಾವಾಗ ವ್ಯಕ್ತಿಯ ಸ್ಥೂಲದೇಹವು ರಜ-ತಮಾತ್ಮಕ ಸ್ಪಂದನಗಳಿಂದ ತುಂಬಿಕೊಳ್ಳುತ್ತದೆಯೋ, ಆಗ ಅವನು ಶಾರೀರಿಕ ವ್ಯಾಧಿಗಳಿಂದ ಸಂಕಟಕ್ಕೀಡಾಗುತ್ತಾನೆ. ಶಾರೀರಿಕ ವ್ಯಾಧಿಗಳಲ್ಲಿ ತೀವ್ರ ತಲೆನೋವು, ಕಿವಿ ನೋವು, ಕಣ್ಣು ನೋವು, ಕಣ್ಣುಗಳೆದುರು ಕತ್ತಲು ಬರುವುದು, ಕೈ-ಕಾಲುಗಳು ಜುಮ್ಮುಗಟ್ಟುವುದು, ಎದೆಯಲ್ಲಿ ಡವಡವ ಎನ್ನುವುದು, ಕೈ-ಕಾಲುಗಳು ತಣ್ಣಗಾಗಿ ಶಕ್ತಿ ಇಲ್ಲದಂತಾಗುವುದು ಮುಂತಾದ ತೊಂದರೆಗಳಾಗುತ್ತವೆ. ದೃಷ್ಟಿಯನ್ನು ತೆಗೆಯುವುದರಿಂದ ಅವನ ಸ್ಥೂಲ ದೇಹ, ಮನೋದೇಹ ಮತ್ತು ಸೂಕ್ಷ್ಮದೇಹದ ಮೇಲೆ ಬಂದಿರುವ ರಜ-ತಮಾತ್ಮಕ ಆವರಣವು ದೂರವಾಗುತ್ತದೆ. ಇದರಿಂದ ವ್ಯಕ್ತಿಗಾಗುವ ತೊಂದರೆಗಳು ಕಡಿಮೆಯಾಗುತ್ತವೆ ಅಥವಾ ಇಲ್ಲವಾಗುತ್ತವೆ.

೩. ಆ. ದೃಷ್ಟಿಯನ್ನು ತೆಗೆದ ನಂತರ ಮಣ್ಣಿನ ಮಡಕೆ (ಗಡಿಗೆ) ಯಲ್ಲಿನ ಸಕಾರಾತ್ಮಕ ಊರ್ಜೆಯು ಇಲ್ಲವಾಗಿ ಅದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡು ಬರುವುದು : ಮಣ್ಣಿನ ಮಡಕೆಯಿಂದ ಪರಾತ್ಪರ ಗುರು ಡಾಕ್ಟರರ ದೃಷ್ಟಿಯನ್ನು ತೆಗೆದುದರಿಂದ ಅವರ ಸುತ್ತಲಿನ ತೊಂದರೆದಾಯಕ ಸ್ಪಂದನಗಳು ಮಣ್ಣಿನ ಮಡಕೆಯಲ್ಲಿ ಸೆಳೆಯಲ್ಪಟ್ಟವು ಆದ್ದರಿಂದ ಮಣ್ಣಿನ ಮಡಕೆಯಲ್ಲಿನ ಸಕಾರಾತ್ಮಕ ಊರ್ಜೆಯು ಇಲ್ಲವಾಗಿ ಅದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆಯು ಕಂಡು ಬಂದಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪರಾತ್ಪರ ಗುರು ಡಾಕ್ಟರರ ಮೇಲೆ ಕೆಟ್ಟ ಶಕ್ತಿಗಳಿಂದ ಅತ್ಯಂತ ತೀವ್ರ ಸ್ವರೂಪದಲ್ಲಿ ಆಕ್ರಮಣಗಳಾಗುವುದರಿಂದ ಅವುಗಳಿಂದಾಗುವ ತೊಂದರೆಗಳನ್ನು ದೂರಗೊಳಿಸಲು ಉನ್ನತರು ಮಣ್ಣಿನ ಮಡಕೆಯನ್ನು ಮಂತ್ರಿಸಿ ಕೊಟ್ಟಿದ್ದರು. ಆದುದರಿಂದ ದೃಷ್ಟಿಯನ್ನು ತೆಗೆಯುವ ಮೊದಲು ಆ ಮಣ್ಣಿನ ಮಡಕೆಯಲ್ಲಿ ಬಹಳಷ್ಟು (೨೨.೨೧ ಮೀಟರ್) ಸಕಾರಾತ್ಮಕ ಊರ್ಜೆ ಕಂಡು ಬಂದಿತು. ದೃಷ್ಟಿಯನ್ನು ತೆಗೆದ ನಂತರ ಮಾತ್ರ ಮಣ್ಣಿನ ಮಡಕೆಯಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಗಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ನಿರ್ಮಾಣವಾಯಿತು. ಇದರಿಂದ ಪರಾತ್ಪರ ಗುರು ಡಾಕ್ಟರರ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣ ಗಳು ಎಷ್ಟು ಮಾರಣಾಂತಿಕವಾಗಿರುತ್ತವೆ, ಎಂಬುದು ಗಮನಕ್ಕೆ ಬರುತ್ತದೆ.’

– ಪ್ರಾ. ಸುಹಾಸ ಜಗತಾಪ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೧೦.೨೦೨೦)

ವಿ-ಅಂಚೆ : [email protected]