ಆಹಾರ ಮತ್ತು ಆಚಾರ ಇವುಗಳ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
೧. ಮಾತುಕತೆಯ ಸ್ವರೂಪ
೧ ಅ. ಉಪಹಾರಗೃಹ : ಅಡಿಗೆ ಮನೆಯಲ್ಲಿ ನೌಕರರು ಅಡಿಗೆಯನ್ನು ಮಾಡುವಾಗ ಮತ್ತು ಪರಸ್ಪರರೊಂದಿಗೆ ಮಾತನಾಡುವಾಗ ಪರಸ್ಪರ ಬೈದಾಡುತ್ತಾರೆ. ಆದ್ದರಿಂದ ನನಗೆ ಉಪಹಾರ ಗೃಹದಲ್ಲಿ ಊಟವನ್ನು ತಯಾರಿಸುವಾಗ ಯಾವತ್ತೂ ಒಳ್ಳೆಯದೆನಿಸಲಿಲ್ಲ ಮತ್ತು ಆನಂದವೂ ಸಿಗುತ್ತಿರಲಿಲ್ಲ. ಅಲ್ಲಿ ಯಾವಾಗಲೂ ಜನರು ಗದ್ದಲವನ್ನು ಮಾಡುತ್ತಿರುತ್ತಾರೆ. ಆದ್ದರಿಂದ ಅಲ್ಲಿ ಶಾಂತಿಯಿರುತ್ತಿರಲಿಲ್ಲ ಮತ್ತು ವಾತಾವರಣದಲ್ಲಿ ಬಹಳ ರಜ-ತಮದ ಅರಿವಾಗುತ್ತಿತ್ತು.
೧ ಆ. ಆಶ್ರಮ : ಆಶ್ರಮದಲ್ಲಿ ಅನ್ನಪೂರ್ಣಾಕಕ್ಷೆಯಲ್ಲಿ ಸೇವೆಯನ್ನು ಮಾಡುವಾಗ ನನಗೆ ಬಹಳ ಒಳ್ಳೆಯದೆನಿಸುತ್ತದೆ ಮತ್ತು ಪ್ರಸನ್ನತೆಯ ಅರಿವಾಗುತ್ತದೆ; ಏಕೆಂದರೆ ಸಾಧಕರು ಶಾಂತವಾಗಿ ಮತ್ತು ನಾಮಜಪವನ್ನು ಮಾಡುತ್ತಾ ಅಡುಗೆಯನ್ನು ಮಾಡುತ್ತಾರೆ. ಸಾಧಕರು ‘ಗುರುಗಳಿಗೆ ಪ್ರಸಾದವನ್ನು ತಯಾರಿಸುತ್ತಿದ್ದೇವೆ’, ಎಂಬ ಭಾವದಿಂದ ಅಡುಗೆಯನ್ನು ಮಾಡುತ್ತಾರೆ. ಆದ್ದರಿಂದ ಅಲ್ಲಿನ ವಾತಾವರಣದಲ್ಲಿ ಚೈತನ್ಯದ ಅರಿವಾಗುತ್ತದೆ.
೨. ಶಬ್ದ
೨ ಅ. ಉಪಹಾರಗೃಹ : ಉಪಹಾರಗೃಹದ ಅಡುಗೆಮನೆಯಲ್ಲಿ ಮಾತನಾಡುವ ಮತ್ತು ಪಾತ್ರೆಗಳ ಶಬ್ದ ಬಹಳಷ್ಟಿರುತ್ತದೆ. ಆದ್ದರಿಂದ ಕೆಲಸ ಮಾಡುವಾಗ ನನ್ನ ಮನಸ್ಸು ಸ್ಥಿರವಾಗಿರುತ್ತಿರಲಿಲ್ಲ. ಬಹಳ ಅಸ್ವಸ್ಥವೆನಿಸುತ್ತಿತ್ತು ಮತ್ತು ಕೆಲವೊಮ್ಮೆ ತಲೆ ನೋಯುತ್ತಿತ್ತು.
೨ ಆ. ಆಶ್ರಮ : ಸೇವೆಯನ್ನು ಮಾಡುವಾಗ ನನ್ನ ಮನಸ್ಸು ಬಹಳ ಸ್ಥಿರವಿರುತ್ತದೆ. ನಾನು ‘ಪಾತ್ರೆಗಳ ಶಬ್ದದಿಂದ ನನಗೆ ದೈವೀ ನಾದ ಕೇಳಿಸುತ್ತದೆ’, ಎಂಬ ಭಾವವನ್ನು ಇಟ್ಟುಕೊಳ್ಳುತ್ತೇನೆ. ಆದ್ದರಿಂದ ಅನ್ನಪೂರ್ಣಾಕಕ್ಷೆಯಲ್ಲಿ ಎಷ್ಟೇ ಶಬ್ದ ಬಂದರೂ ವಾತಾವರಣದಲ್ಲಿ ಪ್ರಸನ್ನತೆಯ ಅರಿವಾಗುತ್ತದೆ. ಅನ್ನಪೂರ್ಣಾಕಕ್ಷೆಯಲ್ಲಿಯೂ ಮಾತನಾಡುವ ಮತ್ತು ಪಾತ್ರೆಗಳ ಸಪ್ಪಳ ಇರುತ್ತದೆ, ಆದರೆ ಅದರಿಂದ ನನಗೆ ಎಂದಿಗೂ ತೊಂದರೆಯಾಗಿಲ್ಲ.
೩. ಅಹಂನ ಅರಿವಾಗುವುದು
೩ ಅ. ಉಪಹಾರಗೃಹ
೧. ಉಪಹಾರಗೃಹದ ಅಡುಗೆಮನೆಯಲ್ಲಿ ಕೆಲಸವನ್ನು ಮಾಡುವಾಗ ಯಾವಾಗಲೂ ‘ನನಗೆ ಎಲ್ಲವನ್ನೂ ಚೆನ್ನಾಗಿ ಮಾಡಲು ಬರುತ್ತದೆ. ನಾನು ಬಹಳ ಚೆನ್ನಾಗಿ ಪದಾರ್ಥಗಳನ್ನು ತಯಾರಿಸುತ್ತೇನೆ. ನಾನು ಎಲ್ಲರಿಗಿಂತ ಚೆನ್ನಾಗಿ ಕೆಲಸ ಮಾಡುತ್ತೇನೆ’, ಎಂಬ ಅಹಂನ ವಿಚಾರಗಳು ಮನಸ್ಸಿನಲ್ಲಿ ಬರುತ್ತಿದ್ದವು.
೨. ಉಪಹಾರಗೃಹದಲ್ಲಿ ನಾನು ಬಹಳ ತೀವ್ರ ಗತಿಯಲ್ಲಿ ತರಕಾರಿಗಳನ್ನು ಕೊಯ್ಯುತ್ತಿದ್ದೆನು. ಆಗ ಮನಸ್ಸಿನಲ್ಲಿ ‘ನಾನೆಷ್ಟು ವೇಗವಾಗಿ ತರಕಾರಿಗಳನ್ನು ಕೊಯ್ಯುತ್ತೇನೆ’, ಎಂಬ ಅಹಂನ ವಿಚಾರಗಳಿರುತ್ತಿದ್ದವು.
೩ ಆ. ಆಶ್ರಮ
೧. ಅನ್ನಪೂರ್ಣಾಕಕ್ಷೆಯಲ್ಲಿ ಸೇವೆಯನ್ನು ಮಾಡುವಾಗ ಸ್ವಭಾವ ದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಿದೆನು. ಅದರೊಂದಿಗೆ ‘ಭಾವವನ್ನು ಹೇಗಿಡಬೇಕು ? ನಾಮಜಪವನ್ನು ಮಾಡುತ್ತಾ ಅಡುಗೆಯನ್ನು ಹೇಗೆ ಮಾಡಬೇಕು ?’, ಎಂದೂ ಕಲಿತೆನು. ‘ನಾನು ದೇವರಿಗಾಗಿಯೇ ಅಡುಗೆಯನ್ನು ಮಾಡುತ್ತಿದ್ದೇನೆ’, ಎಂಬ ಭಾವವಿಟ್ಟುಕೊಳ್ಳುತ್ತಿದ್ದೆನು. ಆದ್ದರಿಂದ ‘ಅವನೇ ಎಲ್ಲವನ್ನೂ ಮಾಡುತ್ತಿದ್ದಾನೆ’, ಎಂದು ಅನಿಸುತ್ತಿತ್ತು. ನನಗೆ ನನ್ನಲ್ಲಿನ ಅಹಂನ ತೀವ್ರತೆಯು ಗಮನಕ್ಕೆ ಬಂದಿತು.
೨. ಆಶ್ರಮಕ್ಕೆ ಬಂದ ನಂತರವೂ ನಾನು ಚಾಕುವಿನಿಂದ ತರಕಾರಿಗಳನ್ನು ಕೊಯ್ಯುತ್ತಿದ್ದೆನು, ಆಗ ನನ್ನ ಮನಸ್ಸಿನಲ್ಲಿ ಬಹಳಷ್ಟು ಅಹಂನ ವಿಚಾರಗಳಿರುತ್ತಿದ್ದವು ಮತ್ತು ನನ್ನಲ್ಲಿ ಆಡಂಬರವೂ ಇರುತ್ತಿತ್ತು.
ಸಾಧಕರು ನನ್ನನ್ನು ಪ್ರಶಂಸಿದರೆ, ನನ್ನ ಅಹಂ ಇನ್ನೂ ಹೆಚ್ಚಾಗುತ್ತಿತ್ತು. ನಾನು ಮನಸ್ಸಿನಲ್ಲಿ ‘ನಾನು ಈಳಿಗೆಮಣೆಯಿಂದ ಎಂದಿಗೂ ಹೆಚ್ಚುವುದಿಲ್ಲ’, ಎಂದು ನಿಶ್ಚಯಿಸಿದ್ದೆನು. ಆದರೆ ಒಂದು ದಿನ ನಾನು ಈಳಿಗೆಮಣೆಯಿಂದ ತರಕಾರಿಗಳನ್ನು ಹೆಚ್ಚಲು ಕುಳಿತೆನು. ಸ್ವಲ್ಪ ಸಮಯದಲ್ಲಿಯೇ ನನಗೆ ಬಹಳ ಒಳ್ಳೆಯದೆನಿಸತೊಡಗಿತು. ಮನಸ್ಸು ಶಾಂತವಾಯಿತು ಮತ್ತು ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಯಿತು.
ಆಗ ನನ್ನಲ್ಲಿ ಕಲಿಯುವ ಸ್ಥಿತಿ ಇಲ್ಲದಿರುವುದರಿಂದ ‘ಚಾಕುವಿನಿಂದ ತರಕಾರಿಗಳನ್ನು ಕೊಯ್ಯುವಾಗ ನನ್ನ ಅಹಂಭಾವ ಜಾಗೃತವಾಗುತ್ತಿತ್ತು; ಏಕೆಂದರೆ ಚಾಕುವಿನಿಂದ ನಾನು ಚೆನ್ನಾಗಿ ತರಕಾರಿಗಳನ್ನು ಕೊಯ್ಯ ಬಲ್ಲೆ’, ಎಂಬ ವಿಚಾರ ಮನಸ್ಸಿನಲ್ಲಿ ಇರುತ್ತಿತ್ತು; ಆದರೆ ಈಳಿಗೆಯಿಂದ ಹೆಚ್ಚಲು ಬರದಿರುವುದರಿಂದ ದೇವರಲ್ಲಿ ಎಲ್ಲವನ್ನು ಕೇಳಿ ಮಾಡಬೇಕಾಗುತ್ತಿತ್ತು. ಇದರಿಂದ ಕಲಿಯುವ ಸ್ಥಿತಿಯಲ್ಲಿರಲು ಸಾಧ್ಯವಾಯಿತು. ಆ ದಿನದ ನಂತರ ‘ನಾನು ಇನ್ನು ಮುಂದೆ ಈಳಿಗೆಯ ಮೇಲೆಯೇ ಹೆಚ್ಚುವುದೆಂದು’, ನಿಶ್ಚಯಿಸಿದೆ. ಅದಕ್ಕಾಗಿ ದೇವರ ಚರಣಗಳಲ್ಲಿ ಕೃತಜ್ಞತೆಗಳು !
೪. ಮನೆಯ ನೆನಪು
೪ ಅ. ಉಪಹಾರಗೃಹ : ಉಪಹಾರಗೃಹದಲ್ಲಿ ಕೆಲಸಕ್ಕೆ ಬಂದ ನಂತರ ನನ್ನ ಮೇಲೆ ಆವರಣ ಬರುತ್ತಿತ್ತು. ಮನಸ್ಸಿನಲ್ಲಿ ಯಾವಾಗಲೂ ‘ಈ ಕೆಲಸ ಯಾವಾಗ ಮುಗಿಯುವುದು ಮತ್ತು ನಾನು ಯಾವಾಗ ಮನೆಗೆ ಹೋಗುವೆನು’, ಎಂದೆನಿಸುತ್ತಿತ್ತು. ಮನೆಗೆ ಹೋದ ನಂತರ ನನಗೆ ಸೇವೆಯನ್ನು ಮಾಡಲು ಸಿಗುವುದು ಮತ್ತು ನನ್ನ ಎಲ್ಲ ದಣಿವು ದೂರಾಗುವುದು’, ಎಂದು ನನಗೆ ಅನಿಸುತ್ತಿತ್ತು. ಆದ್ದರಿಂದ ನಾನು ಕೆಲಸದ ಸಮಯ ಮುಗಿಯುವ ದಾರಿಯನ್ನೇ ಕಾಯುತ್ತಿದ್ದೆನು.
೪ ಆ. ಆಶ್ರಮ : ನಾನು ಆಶ್ರಮಕ್ಕೆ ಅಧಿವೇಶನದ ಸಮಯದಲ್ಲಿ ಸೇವೆಗಾಗಿ ಬರುತ್ತಿದ್ದೆನು ಮತ್ತು ಅನ್ನಪೂರ್ಣಾಕಕ್ಷೆಯಲ್ಲಿ ಸೇವೆಯನ್ನು ಮಾಡುತ್ತಿದ್ದೆನು. ಆ ಸಮಯದಲ್ಲಿ ನನಗೆ ಎಂದಿಗೂ ತೊಂದರೆಯಾಗಲಿಲ್ಲ. ಮನೆಯ ನೆನಪು ಬರುತ್ತಿರಲಿಲ್ಲ. ‘ದಿನವಿಡಿ ಅಡುಗೆಯನ್ನು ಮಾಡುತ್ತಿರಬೇಕು’, ಎಂದು ಅನಿಸುತ್ತಿತ್ತು. ಆಗ ‘ಪುನಃ ನೌಕರಿ ಮಾಡಲು ಹೋಗಲೇಬಾರದು. ಅನ್ನಪೂರ್ಣಾ ಕಕ್ಷೆಯಲ್ಲಿಯೇ ಸೇವೆಯನ್ನು ಮಾಡಬೇಕು’, ಎಂದು ಅನಿಸುತ್ತಿತ್ತು.
೫. ಸಹೋದ್ಯೋಗಿಗಳು ಮತ್ತು ಸಾಧಕರ ಮಾನಸಿಕತೆ
೫ ಅ. ಉಪಹಾರಗೃಹ : ಉಪಹಾರಗೃಹದಲ್ಲಿ ಕೆಲಸ ಮಾಡುವಾಗ ನಾನು ನಾಮಜಪ ಮಾಡುತ್ತಾ ಪದಾರ್ಥಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದೆನು; ಆದರೆ ನನ್ನ ಸಹೋದ್ಯೋಗಿಗಳು ನಾನು ಶಾಂತವಾಗಿರುವುದು ಕಂಡುಬಂದರೆ, ನನ್ನನ್ನು ವಿನಾಕಾರಣ ಅಣಕಿಸುತ್ತಿದ್ದರು. ಆಗ ನನಗೆ ಕಿರಿಕಿರಿಯಾಗುತ್ತಿತ್ತು ಮತ್ತು ನನ್ನ ಏಕಾಗ್ರತೆಯು ವಿಚಲಿತವಾಗುತ್ತಿತ್ತು.
೫ ಆ. ಆಶ್ರಮ : ಅನ್ನಪೂರ್ಣಾಕಕ್ಷೆಯಲ್ಲಿ ಸೇವೆಯನ್ನು ಮಾಡುವಾಗ ಸಾಧಕರು ಪರಸ್ಪರರಿಗೆ ಸಹಾಯ ಮಾಡುತ್ತಾರೆ. ಸಮಯ ವ್ಯರ್ಥವಾಗುತ್ತಿದ್ದರೆ ಅವರು ಅದರ ಅರಿವು ಮಾಡಿಕೊಡುತ್ತಾರೆ. ಆಗ ದೇವರ ಚರಣಗಳಲ್ಲಿ ಬಹಳ ಕೃತಜ್ಞತೆ ಅನಿಸುತ್ತದೆ.
೬. ಆಹಾರದ ಅಪವ್ಯಯ ಮತ್ತು ಉಳಿತಾಯ
೬ ಅ. ಉಪಹಾರಗೃಹ : ಉಪಹಾರಗೃಹದಲ್ಲಿ ತರಕಾರಿಗಳನ್ನು ಕೊಯ್ಯುವಾಗ ಅವು ಸ್ವಲ್ಪ ಕೆಟ್ಟಿದ್ದರೂ ಅಥವಾ ಸ್ವಲ್ಪ ಹುಳುಕಾಗಿದ್ದರೂ, ನಾವು ಸಂಪೂರ್ಣ ತರಕಾರಿಗಳನ್ನು ಎಸೆಯುತ್ತಿದ್ದೆವು.
೬ ಆ. ಆಶ್ರಮ : ಆಶ್ರಮದಲ್ಲಿ ತರಕಾರಿಗಳ ಅರ್ಪಣೆ ಬರುತ್ತದೆ ಮತ್ತು ಖರೀದಿಯನ್ನೂ ಮಾಡಲಾಗುತ್ತದೆ. ಗುರುಧನದ ಹಾನಿಯಾಗಬಾರದೆಂದು, ಆಶ್ರಮದಲ್ಲಿ ಇಡೀ ತರಕಾರಿಗಳನ್ನು ಉಪಯೋಗಿಸಲಾಗುತ್ತದೆ. ತರಕಾರಿಗಳು ಕೆಟ್ಟಿದ್ದರೆ ಅಥವಾ ಹುಳುಕಾಗಿದ್ದರೆ ಅದರ ಅಷ್ಟೇ ಭಾಗವನ್ನು ಎಸೆದು ಒಳ್ಳೆಯ ಭಾಗವನ್ನು ತೆಗೆದುಕೊಳ್ಳಲಾಗುತ್ತದೆ. ತರಕಾರಿಗಳಲ್ಲಿನ ಬೀಜಗಳನ್ನು ಸಹ ವಿವಿಧ ಪದಾರ್ಥಗಳಿಗಾಗಿ ಉಪಯೋಗಿಸಲಾಗುತ್ತದೆ. ‘ಆಹಾರದ ಒಂದೂ ಕಣವೂ ಹಾಳಾಗಬಾರದು’ ಎಂದು ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ.
೭. ಪ್ರಾರ್ಥನೆಯ ಸ್ವರೂಪ
೭ ಅ. ಉಪಹಾರಗೃಹ : ಉಪಹಾರಗೃಹದಲ್ಲಿ ಅಡುಗೆಯನ್ನು ಮಾಡುವಾಗ ನಾನು ಕೆಲವೊಮ್ಮೆ ಪ್ರಾರ್ಥನೆಯನ್ನು ಮಾಡು ತ್ತಿರಲಿಲ್ಲ. ಆದ್ದರಿಂದ ಹೆಚ್ಚಿನ ಬಾರಿ ಕೆಲಸವನ್ನು ಮಾಡುವಾಗ ಏನೂ ಹೊಳೆಯುತ್ತಿರಲಿಲ್ಲ ಮತ್ತು ಬಹಳ ಕಿರಿಕಿರಿಯೂ ಆಗುತ್ತಿತ್ತು. ಕೆಲವೊಮ್ಮೆ ಪ್ರಾರ್ಥನೆಯನ್ನು ಮಾಡಿ ಅಡುಗೆಯನ್ನು ಮಾಡಿದರೆ ನನ್ನಲ್ಲಿ ಸ್ಥಿರತೆಯ ಅರಿವಾಗುತ್ತಿತ್ತು ಮತ್ತು ಶಾಂತ ವೆನಿಸುತ್ತಿತ್ತು. ನಾನು ಪ್ರಾರ್ಥನೆಯನ್ನು ಮಾಡಲು ಮರೆತರೆ ನನಗೆ ಗೊಂದಲವಾಗುತ್ತಿತ್ತು.
೭ ಆ. ಆಶ್ರಮ : ಅನ್ನಪೂರ್ಣಾಕಕ್ಷೆಯಲ್ಲಿ ಪ್ರಾರ್ಥನೆಯನ್ನು ಮಾಡಿ ಅಡುಗೆಯನ್ನು ಪ್ರಾರಂಭಿಸುವುದರಿಂದ ‘ಸಾಕ್ಷಾತ್ ಅನ್ನಪೂರ್ಣಾ ದೇವಿಯೇ ಅಡುಗೆಯನ್ನು ಹೇಗೆ ಮಾಡಬೇಕು, ಎಂಬುದನ್ನು ಕಲಿಸುತ್ತಿದ್ದಾಳೆ’, ಎಂಬ ಅನುಭೂತಿಯು ಬರುತ್ತದೆ.
೮. ತಪ್ಪುಗಳಾಗುವುದು ಮತ್ತು ಅದರ ಮುಂದಿನ ಪ್ರಕ್ರಿಯೆ
೮ ಅ. ಉಪಹಾರಗೃಹ : ಅಡುಗೆಯನ್ನು ಮಾಡುವಾಗ ತಪ್ಪುಗಳಾದರೆ ನಮ್ಮ ಮೇಲಧಿಕಾರಿಗಳು ನಮಗೆ ಬೈಯ್ಯುತ್ತಿದ್ದರು. ಇದರಿಂದ ಅವರ ಮೇಲೆ ಸಿಟ್ಟು ಬರುತ್ತಿತ್ತು ಮತ್ತು ಮನಸ್ಸಿನ ಸ್ಥಿತಿ ಬದಲಾಗಿ ಬಹಳ ಕಿರಿಕಿರಿಯಾಗುತ್ತಿತ್ತು. ಇದರಿಂದ ಅಡುಗೆಯನ್ನೂ ಸಮಾಧಾನದಿಂದ ತಯಾರಿಸಲು ಬರುತ್ತಿರಲಿಲ್ಲ. ಪದಾರ್ಥಗಳನ್ನು ತಯಾರಿಸುವಾಗ ‘ಮೇಲಧಿಕಾರಿಗಳ ಮೇಲಿನ ಎಲ್ಲ ಸಿಟ್ಟನ್ನು ಆ ಪದಾರ್ಥಗಳ ಮೇಲೆ ತೆಗೆಯುತ್ತಿದ್ದೇನೆ’, ಎಂದು ಅನಿಸುತ್ತಿತ್ತು.
೮ ಆ ಆಶ್ರಮ : ಅನ್ನಪೂರ್ಣಾಕಕ್ಷೆಯಲ್ಲಿ ತಪ್ಪುಗಳಾದ ನಂತರ ಸಂತರ ಮಾರ್ಗದರ್ಶನ ಲಭಿಸುತ್ತದೆ. ಅವರು ಪ್ರತಿಯೊಂದು ಬಾರಿ ನಮಗೆ ಎಲ್ಲವನ್ನೂ ಸಮಾಧಾನದಿಂದ ತಿಳಿಸಿ ಹೇಳುತ್ತಾರೆ. ಆದ್ದರಿಂದ ಒತ್ತಡವಾಗುವುದಿಲ್ಲ ಮತ್ತು ಅಡುಗೆಯನ್ನು ತಯಾರಿಸುವ ಆನಂದವನ್ನು ಪಡೆಯಲು ಸಾಧ್ಯವಾಗುತ್ತದೆ. ಸಂತರು ನಮಗೆ ತಪ್ಪುಗಳ ಬಗ್ಗೆ ಮಾರ್ಗದರ್ಶನ ಮಾಡಿದ ನಂತರ ದೇವರ ಚರಣಗಳಲ್ಲಿ ಕೃತಜ್ಞತೆ ಅನಿಸುತ್ತದೆ ಮತ್ತು ಕಲಿಯುವ ಸ್ಥಿತಿಯಲ್ಲಿರಲು ಬರುತ್ತದೆ.
೯. ಪದಾರ್ಥಗಳನ್ನು ತಯಾರಿಸುವ ಸ್ವರೂಪ ಮತ್ತು ಅದರ ಪರಿಣಾಮ
೯ ಅ ಉಪಹಾರಗೃಹ : ಮಾಂಸಾಹಾರಿ ಮತ್ತು ಶಾಕಾಹಾರಿ ಪದಾರ್ಥಗಳನ್ನು ಒಂದೇ ಎಣ್ಣೆಯಲ್ಲಿ ಕರಿಯುತ್ತಿದ್ದರು. ಹೀಗೆ ಗ್ರಾಹಕರನ್ನು ವಂಚಿಸಲಾಗುತ್ತಿತ್ತು. ಮಾಂಸಾಹಾರವನ್ನು ಬೇಯಿಸುವಾಗ ತುಂಬಾ ಆವರಣ ಬರುತ್ತಿತ್ತು. ವಾತಾವರಣದಲ್ಲಿಯೂ ಉಷ್ಣತೆಯ ಅರಿವಾಗುತ್ತಿತ್ತು.
೯ ಆ. ಆಶ್ರಮ : ಆಶ್ರಮದಲ್ಲಿ ಶಾಕಾಹಾರಿ ಆಹಾರವನ್ನೇ ಸೇವಿಸುತ್ತಾರೆ. ಅದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿದೆ. ‘ಅನ್ನಪೂರ್ಣಾ ಕಕ್ಷೆಯಲ್ಲಿ ಶಾಕಾಹಾರಿ ಆಹಾರವನ್ನು ಬೇಯಿಸುತ್ತಾರೆ. ಆದ್ದರಿಂದ ದೇಹದ ಮೇಲಿನ ಎಲ್ಲ ಆವರಣ ದೂರವಾಗುತ್ತದೆ, ಎಂದು ಅರಿವಾಗುತ್ತದೆ. ಪರಾತ್ಪರ ಗುರು ಡಾಕ್ಟರರು ಈ ಬರವಣಿಗೆಯನ್ನು ಮಾಡಲು ಸೂಚಿಸಿದ್ದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
– ಶ್ರೀ. ಅಪೂರ್ವ ಪ್ರ. ಢಗೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩.೬.೨೦೧೯)