ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ಸನಾತನವು ಕಳೆದ ಅನೇಕ ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಈಗ ಬಾಗಿಲಿನ ಹೊಸ್ತಿಲಿನ ಮೇಲೆ ಬಂದು ನಿಂತಿದೆ. ಅದು ಯಾವುದೇ ಕ್ಷಣ ಒಳಗೆ ಬರಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿದ ಕರೋನಾ ಮಹಾಮಾರಿಯೂ ಆಪತ್ಕಾಲದ ಒಂದು ಸಣ್ಣ ಮಾದರಿಯೇ ಆಗಿದೆ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಇದರಲ್ಲಿ ಮಾನವನಿರ್ಮಿತ ಮತ್ತು ನೈಸರ್ಗಿಕ ಎರಡೂ ವಿಪತ್ತುಗಳೂ ಇರಲಿವೆ, ಆಪತ್ಕಾಲವು ವಿಭಿನ್ನ ರೂಪಗಳಲ್ಲಿ ಬಂದೆರಗಲಿದೆ. ಅವುಗಳಲ್ಲಿ ಕೆಲವನ್ನು ನಾವು ಈ ಲೇಖನ ಮಾಲೆಯಲ್ಲಿ ನೋಡಲಿದ್ದೇವೆ. ಈ ಆಪತ್ಕಾಲದಲ್ಲಿ ತಮ್ಮನ್ನು ಮತ್ತು ತಮ್ಮ ಕುಟುಂಬದವರನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂಬುದರ ಸ್ವಲ್ಪ ಮಾಹಿತಿಯನ್ನು ನೀಡಲು ಈ ಲೇಖನವು ಪ್ರಯತ್ನಿಸಿದೆ. ಈ ಲೇಖನದಲ್ಲಿ ಸುನಾಮಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಈ ಲೇಖನದಲ್ಲಿ ಸುನಾಮಿ ಎಂದರೇನು ? ಸುನಾಮಿ ಅಪ್ಪಳಿಸುವ ಮುಂಚೆ ಮಾಡಬೇಕಾದ ಕೆಲವು ಸಿದ್ಧತೆಗಳು, ಸುನಾಮಿ ಸಂಭವಿಸುವ ಬಗ್ಗೆ ಮುನ್ಸೂಚನೆಗಳು, ಪ್ರತ್ಯಕ್ಷ ಸುನಾಮಿ ಆಗುತ್ತಿರುವಾಗ ವಹಿಸಬೇಕಾದ ಎಚ್ಚರಿಕೆ ಮತ್ತು ಸುನಾಮಿ ಆಗಿಹೋದ ನಂತರ ಪಾಲಿಸಬೇಕಾದ ಸೂಚನೆಗಳ ಬಗ್ಗೆ ಇಲ್ಲಿ ನೀಡಲಾಗಿದೆ. 

(ಭಾಗ ೫)

೨. ನೈಸರ್ಗಿಕ ವಿಕೋಪಗಳು

೨ ಆ. ಸುನಾಮಿ

೨ ಆ ೧. ಸುನಾಮಿ ಎಂದರೇನು ? : ಸುನಾಮಿ ಎನ್ನುವುದು ಭೂಕಂಪ, ಸಮುದ್ರದಾಳದಲ್ಲಿ ಭೂಕುಸಿತ, ಜ್ವಾಲಾಮುಖಿ ಸ್ಫೋಟ ಅಥವಾ ಕ್ಷುದ್ರಗ್ರಹ ಅಪ್ಪಳಿಸುವುದರಿಂದ ಉಂಟಾಗುವ ಬೃಹತ್ ಅಲೆಗಳ ಸರಣಿಯಾಗಿದೆ. (ಆಧಾರ : ready.gov/tsunamis)

ಕೆಲವೊಮ್ಮೆ ಸುನಾಮಿಗಳು ನೀರಿನ ಗೋಡೆಗಳನ್ನು ನಿರ್ಮಿಸಬಹುದು; (ಇದನ್ನು ‘ಸುನಾಮಿ ಬೋರ್’ ಎಂದು ಕರೆಯುತ್ತಾರೆತ್ತದೆ) ಆದರೆ ಸುನಾಮಿಯು ಸಾಮಾನ್ಯವಾಗಿ ವೇಗವಾಗಿ ಬರುವ ಪ್ರವಾಹದಂತಿರುತ್ತದೆ. ಇದು ಸಮುದ್ರದ ಉಬ್ಬರ ಮತ್ತು ಇಳಿತದ ಚಕ್ರವನ್ನು ಹೋಲುತ್ತದೆ. ಹೀಗೆ ಘಟಿಸುವ ಅವಧಿ ೧೦ ನಿಮಿಷಗಳು, ೧ ಗಂಟೆ ಅಥವಾ ೧೨ ಗಂಟೆಗಳವರೆಗೆ ತೆಗೆದುಕೊಳ್ಳಬಹುದು. (ಆಧಾರ : redcross.org/get-help/how-to-prepare-for-emergencies/types-of-emergencies/tsunami.html)

೨ ಆ ೨. ಸುನಾಮಿ ವಿಪತ್ತು ಬಂದಪ್ಪಳಿಸುವ ಮೊದಲು ಮಾಡಬೇಕಾದ ಸಿದ್ಧತೆ

. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಗದಿಪಡಿಸಿದ ನಿಯಮಗಳ ಪ್ರಕಾರ ಮನೆ ಅಥವಾ ಕಟ್ಟಡವನ್ನು ನಿರ್ಮಿಸಬೇಕು.

. ಸುನಾಮಿಯಿಂದ ಉದ್ಭವಿಸುವ ಅಪಾಯಗಳ ಬಗ್ಗೆ ನಿಮಗೆ ಮತ್ತು ನಿಮ್ಮ ಮನೆಯವರಿಗೆ ತಿಳಿದಿರಲಿ. ಸಮಯ ಬಂದಾಗ ಸುರಕ್ಷಿತವಾಗಿ ಮನೆಯಿಂದ ಆಚೆ ಬರುವ ವಿಧಾನವನ್ನು ಆಗಾಗ ಅಭ್ಯಾಸ ಮಾಡಿ.

. ಸಮುದ್ರಮಟ್ಟಕ್ಕಿಂತ ನಿಮ್ಮ ನಿವಾಸದ ಎತ್ತರ, ಹಾಗೆಯೇ ಕರಾವಳಿ ಅಥವಾ ಇತರ ಜಲಮಾರ್ಗಗಳಿಂದ ಎಷ್ಟು ದೂರದಲ್ಲಿದೆ ಎಂಬುದನ್ನು ತಿಳಿದುಕೊಳ್ಳಿ.

ಈ. ನೀವು ಪ್ರವಾಸಿಗರಾಗಿದ್ದರೆ, ಸುನಾಮಿ ಬಂದಲ್ಲಿ ಸ್ಥಳೀಯ ಪದ್ಧತಿಗನುಗುಣವಾಗಿ ನಿಮ್ಮ ನಿವಾಸವನ್ನು ಹೇಗೆ ಖಾಲಿ ಮಾಡಬೇಕು ಎಂದು ನಿಮಗೆ ತಿಳಿದಿರಬೇಕು.

. ಭೂಕಂಪ ಸಂಭವಿಸಿದಾಗ ನೀವು ಕರಾವಳಿ ಪ್ರದೇಶದಲ್ಲಿದ್ದರೆ, ಆಡಳಿತದಿಂದ ಸುನಾಮಿಯ ಎಚ್ಚರಿಕೆ ಇದೆಯೇ ? ಎಂದು ತಿಳಿದುಕೊಳ್ಳಲು ರೇಡಿಯೋ ಕೇಳಿ.

. ಹತ್ತಿರದ ಅತಿ ಎತ್ತರದ ಸ್ಥಳವನ್ನು ತಲುಪುವ ಸುರಕ್ಷಿತ ಮತ್ತು ಸುಲಭವಾದ ಮಾರ್ಗವನ್ನು ಮೊದಲೇ ಗುರುತಿಸಿಟ್ಟುಕೊಳ್ಳಿ.

೨ ಆ ೩. ಸುನಾಮಿ ಉದ್ಭವಿಸುವ ಚಿಹ್ನೆಗಳು

ಅ. ಸಮುದ್ರವು ಇದ್ದಕ್ಕಿದ್ದಂತೆ ತುಂಬ ದೂರ ಹಿಮ್ಮೆಟ್ಟುತ್ತದೆ (ನೂರಾರು ಮೀಟರ್) ಮತ್ತು ಕಡಲು ತೀರವು ತುಂಬಾ ದೊಡ್ಡದಾಗುತ್ತದೆ. ಈ ಅವಧಿಯು ಸುಮಾರು ೫-೬ ನಿಮಿಷಗಳವರೆಗೆ ಇರುತ್ತದೆ. ನಂತರ ಹಠಾತ್ ಸುನಾಮಿ ಅಲೆಗಳು ಬರುತ್ತವೆ. ಕೆಲವೊಮ್ಮೆ ಇದಕ್ಕೆ ವಿರುದ್ಧವಾಗಿ ಸಮುದ್ರವು ಇದ್ದಕ್ಕಿದ್ದಂತೆ ತುಂಬಾ ಮುಂದೆ ಬರುತ್ತದೆ.

. ಸಮುದ್ರದಿಂದ ಒಮ್ಮಿಂದೊಮ್ಮೆಲೆ ದೊಡ್ಡ ಶಬ್ದ ಬರುತ್ತದೆ.

. ಸಮುದ್ರದ ಬಳಿ ಒಮ್ಮಿಂದೊಮ್ಮೆಲೆ ಭೂಕಂಪಗಳ ದೊಡ್ಡ ಅಥವಾ ಸುದೀರ್ಘ ನಡುಕ ಉಂಟಾಗಬಹುದು.

ಈ. ಇದ್ದಕ್ಕಿದ್ದಂತೆ ಸಮುದ್ರದಲ್ಲಿ ನೀರಿನ ದೊಡ್ಡ ಗೋಡೆ (ಇವು ಬೃಹದಾಕಾರದ ಅಲೆಗಳು) ಕಾಣಿಸಿಕೊಳ್ಳುತ್ತದೆ.

. ಸಮುದ್ರದ ಸಮೀಪವಿರುವ ಪ್ರಾಣಿಗಳು, ಪಕ್ಷಿಗಳು ಇದ್ದಕ್ಕಿದ್ದಂತೆ ಕಿರುಚಾಡಲು, ಓಡಿಹೋಗಲು ಪ್ರಾರಂಭಿಸುತ್ತವೆ.

೨ ಆ ೪. ಸುನಾಮಿ ಸಂಭವಿಸುವಾಗ ವಹಿಸಬೇಕಾದ ಕಾಳಜಿ

ಅ. ಶಾಂತವಾಗಿರಬೇಕು, ಭಯಪಡಬಾರದು.

. ಸುನಾಮಿ ಬಹಳ ವೇಗವಾಗಿ ಸಂಚರಿಸುತ್ತದೆ, ಆದ್ದರಿಂದ ಜೀವವನ್ನು ಉಳಿಸಿಕೊಳ್ಳಲು ಆದ್ಯತೆ ನೀಡಿ, ಆಸ್ತಿಯನ್ನಲ್ಲ.

. ಮಕ್ಕಳು, ವೃದ್ಧರು, ಅಂಗವಿಕಲರು, ವಿಶೇಷ ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡಬೇಕು.

. ಸರಕಾರಿ ಅಧಿಕಾರಿಗಳ ಸೂಚನೆ ಇದ್ದರೆ ತಕ್ಷಣ ಸುರಕ್ಷಿತ ಸ್ಥಳಕ್ಕೆ ಹೋಗಬೇಕು.

. ತೀರದಿಂದ ದೂರವಿರಿ (ಕನಿಷ್ಠ ೩ ಕಿಲೋಮೀಟರ್), ಹಾಗೆಯೇ ಎತ್ತರದ ನೆಲದಲ್ಲಿ (ನೀರಿನ ಮಟ್ಟದಿಂದ ಕನಿಷ್ಠ ೩೦ ಮೀಟರ್ ಎತ್ತರ) ಆಶ್ರಯ ಪಡೆಯಬೇಕು.

ಊ. ಕಡಲತೀರ ಮತ್ತು ನದಿ ತೀರದ ಪ್ರದೇಶದಿಂದ ದೂರವಿರಬೇಕು.

. ದೂರ ಹೋಗಲು ಸಾಧ್ಯವಾಗದಿದ್ದರೆ, ಹತ್ತಿರದ ಎತ್ತರದ ಕಟ್ಟಡದ ಮೇಲ್ಛಾವಣಿಯ ಮೇಲೆ ಆಶ್ರಯ ಪಡೆಯಬೇಕು.

. ನೀವು ನೀರಿನಲ್ಲಿದ್ದರೆ, ತೇಲುವ ವಸ್ತು, ಉದಾ. ತೆಪ್ಪ, ಮರದ ಕಾಂಡ ಇತ್ಯಾದಿಗಳನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು.

. ಎರಡು ಸುನಾಮಿ ಅಲೆಗಳ ನಡುವೆ ಕೆಲವು ನಿಮಿಷಗಳ ಅಥವಾ ಗಂಟೆಗಳ ಅಂತರವಿರುತ್ತದೆ. ಆದ್ದರಿಂದ ಮೊದಲ ಸುನಾಮಿ ಬಂದು ಹೋದರೂ, ಮುಂದಿನ ದೊಡ್ಡ ಅಲೆಯನ್ನು ಎದುರಿಸಲು ಸಿದ್ಧರಾಗಿರಬೇಕು.

ಐ. ಸುನಾಮಿಯ ನೀರಿನಲ್ಲಿ ತೇಲಿ ಬರುವ, ವೇಗವಾಗಿ ಚಲಿಸುವ ವಸ್ತುಗಳಿಂದ ಅಪಾಯವಿರುತ್ತದೆ. ಸುನಾಮಿ ಸಂಭವಿಸಿದಾಗ, ಬಿದ್ದಿರುವ ವಿದ್ಯುತ್ ತಂತಿಗಳು, ಕುಸಿಯುವ ಕಟ್ಟಡಗಳು ಇವುಗಳಿಂದಲೂ ಅಪಾಯವಿರುತ್ತದೆ.

. ನೀವು ಸಮುದ್ರದಲ್ಲಿ ದೋಣಿಯಲ್ಲಿದ್ದರೆ, ಸುನಾಮಿಯ ಸಮಯದಲ್ಲಿ ಆಳವಾದ ಸಮುದ್ರಕ್ಕೆ (ಕಡಿಮೆಪಕ್ಷ ೪೫ ಮೀಟರ್ ಆಳ)ಹೋಗುವುದು ಸೂಕ್ತ; ಆಳವಾದ ಸಮುದ್ರದಲ್ಲಿ ಸುನಾಮಿ ಅಲೆಗಳು ತೀರಾ ಕಡಿಮೆ ಇರುವುದರಿಂದ ಅವು ತೀರದ ಹತ್ತಿರದ ಅಲೆಗಳಷ್ಟು ವಿನಾಶಕಾರಿಯಾಗಿರುವುದಿಲ್ಲ.

. ನೀವು ಬಂದರಿನಲ್ಲಿದ್ದರೆ, ಎತ್ತರದ ಪ್ರದೇಶಗಳಿಗೆ ಹೋಗಬೇಕು.

೨ ಆ ೫. ಸುನಾಮಿಯ ನಂತರ ಮಾಡಬೇಕಾದ ಕೃತಿಗಳು

ಅ. ‘ವಿಪತ್ತು ನಿರ್ವಾಹಣಾ ಅಧಿಕಾರಿಗಳು ಸ್ಥಳವನ್ನು ಸುರಕ್ಷಿತ ಎಂದು ಘೋಷಿಸಿದ ನಂತರವೇ ಮನೆಗೆ ಹಿಂದಿರುಗಬೇಕು.

. ಸುನಾಮಿಗ್ರಸ್ತ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. ಅನಗತ್ಯವಾಗಿ ನೀವು ಅಲ್ಲಿದ್ದರೆ ಸಹಾಯ ಮತ್ತು ಇತರ ತುರ್ತು ಕಾರ್ಯಾಚರಣೆಗಳಿಗೆ ಅಡ್ಡಿಯಾಗಬಹುದು. ಅಲ್ಲದೆ, ಸುನಾಮಿಯ ನಂತರದ ಕಲುಷಿತ ನೀರು, ಕುಸಿದ ರಸ್ತೆಗಳು, ಭೂಕುಸಿತ, ಮಣ್ಣು ಕುಸಿತ ಇವುಗಳಿಂದ ಇನ್ನಷ್ಟು ಅಪಾಯವಿರುತ್ತದೆ.

ಇ. ಸುನಾಮಿ ಅಪ್ಪಳಿಸುವ ಮೊದಲು ಪ್ರಬಲ ಭೂಕಂಪ (ರಿಕ್ಟರ್ ಮಾಪಕದಲ್ಲಿ ೮-೯ ಅಥವಾ ಅದಕ್ಕಿಂತ ಪ್ರಬಲ) ಸಂಭವಿಸಿದಲ್ಲಿ, ಅಧಿಕೇಂದ್ರವು (ಎಪಿಸೆಂಟರ್) ಸಮೀಪದಲ್ಲಿದ್ದರೆ ಮತ್ತೆ ಭೂಕಂಪ (ಆಫ್ಟರ್ ಶಾಕ್ಸ್) ಸಂಭವಿಸಬಹುದು. ಕೆಲವು ನಂತರದ ಕಂಪನಗಳು ರಿಕ್ಟರ್ ಮಾಪಕದಲ್ಲಿ ೭ ಕ್ಕಿಂತ ಹೆಚ್ಚಿರಬಹುದು ಮತ್ತು ಅದು ಮತ್ತೊಂದು ಸುನಾಮಿಯನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುತ್ತವೆ. ಈ ನಂತರದ ಕಂಪನಗಳು ಕಡಿಮೆಯಾಗಲು ದಿನಗಳು, ವಾರಗಳು ಅಥವಾ ತಿಂಗಳುಗಳು ತೆಗೆದುಕೊಳ್ಳಬಹುದು.

ಈ. ನೀರಿನಲ್ಲಿ ತೇಲಿ ಬರುವ ವಸ್ತುಗಳಿಂದ ದೂರವಿರಬೇಕು.

. ಗಾಯಗೊಂಡವರಿಗೆ ಅಥವಾ ಸಿಕ್ಕಿಕೊಂಡಿರುವವರಿಗೆ ಸಹಾಯ ಮಾಡುವ ಮೊದಲು ಸ್ವತಃ ತನಗೆ ಗಾಯಗಳಾಗಿವೆಯೇ ಎಂದು ನೋಡಬೇಕು. ಆವಶ್ಯಕತೆಗನುಸಾರ ಪ್ರಥಮ ಚಿಕಿತ್ಸೆ ಪಡೆದುಕೊಳ್ಳಬೇಕು.

. ಯಾರನ್ನಾದರೂ ರಕ್ಷಿಸಬೇಕಾದರೆ ಮತ್ತು ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಸಹಾಯ ಮಾಡಲು ಸರಿಯಾದ ಸಾಧನಗಳನ್ನು ಹೊಂದಿರುವವರನ್ನು ಕರೆಸಿಕೊಳ್ಳಬೇಕು.

ಋ. ಮಕ್ಕಳು, ವೃದ್ಧರು ಮತ್ತು ಅಂಗವಿಕಲರು ಇಂತಹವರಿಗೆ ವಿಶೇಷ ನೆರವು ಬೇಕಾಗಬಹುದು, ಅವರಿಗೆ ಸಹಾಯ ಮಾಡಬೇಕು.

. ಹೊಸಹೊಸ ಮಾಹಿತಿಗಳನ್ನು ಪಡೆಯಲು ರೇಡಿಯೋ ಅಥವಾ ಟಿ.ವಿ. ಬಳಸಬೇಕು.

. ಸುನಾಮಿ ನೀರು ಕಟ್ಟಡಗಳಿಗೆ ಹಾನಿ ಮಾಡಬಹುದು ಅಥವಾ ಗೋಡೆಗಳು ಕುಸಿಯಲು ಕಾರಣವಾಗಬಹುದು. ಆದ್ದರಿಂದ, ಜಲಾವೃತವಾಗಿರುವ ಕಟ್ಟಡಗಳಿಂದ ದೂರವಿರಬೇಕು. ಕಟ್ಟಡ ಅಥವಾ ಮನೆಯನ್ನು ಪುನಃ ಪ್ರವೇಶಿಸುವಾಗ ಎಚ್ಚರ ವಹಿಸಬೇಕು. ರಕ್ಷಣಾತ್ಮಕ ಉಡುಪುಗಳನ್ನು ಧರಿಸಿ ಮತ್ತು ಸ್ವಚ್ಛತೆ ಮಾಡುವಾಗ ಗಾಯಗಳಾಗದಂತೆ ಜಾಗರೂಕರಾಗಿರಬೇಕು.

. ಸುನಾಮಿಯಿಂದ ಮನೆಯೊಳಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿದ್ದರೆ, ನೀರಿನೊಂದಿಗೆ ಬಂದ ಕೆಸರನ್ನು ಅದು ಗಟ್ಟಿಯಾಗುವ ಮೊದಲೇ ತೆಗೆದುಹಾಕಿ.

ಒ. ಗಾಳಿಯಿಂದ ಮನೆ ಒಣಗಲು ಕಿಟಕಿ ಮತ್ತು ಬಾಗಿಲುಗಳನ್ನು ತೆರೆದಿಡಬೇಕು.

ಓ. ತೆರೆದಿಟ್ಟ ತಿಂಡಿ ಅಥವಾ ಪಾನೀಯವನ್ನು ಸೇವಿಸಬಾರದು.

. ನೀವು ಮನೆ ಖಾಲಿ ಮಾಡಬೇಕಾದರೆ, ನೀವು ಎಲ್ಲಿದ್ದೀರಿ ಎಂದು ತಿಳಿಸುವ ಸಂದೇಶವನ್ನು ಬರೆದಿಟ್ಟು ಹೋಗಬೇಕು.

ಅಂ. ವದಂತಿಗಳನ್ನು ಹರಡಬಾರದು, ವದಂತಿಗಳನ್ನು ನಂಬಬಾರದು.

(ಮುಂದುವರಿಯುವುದು)