ಬೆಂಗಳೂರಿನ ೧೬ ಮಸೀದಿಗಳಿಂದ ಶಬ್ದ ಮಾಲಿನ್ಯ – ಕರ್ನಾಟಕ ಉಚ್ಚ ನ್ಯಾಯಾಲಯದಿಂದ ನೋಟಿಸ್ ಜಾರಿ

* ಇಂತಹ ವಿಷಯಗಳ ಬಗ್ಗೆ ಜನರು ನ್ಯಾಯಾಲಯಕ್ಕೆ ಹೋಗುವ ಪ್ರಮೇಯವೇ ಬಾರದು ! ಪೊಲೀಸರು ಮತ್ತು ಸರಕಾರ ಕಿವುಡರಾಗಿದ್ದಾರೆಯೇ ? ಜನರ ಗಮನಕ್ಕೆ ಬರುವ ವಿಷಯ ಇವರಿಗೆ ಏಕೆ ಗಮನಕ್ಕೆ ಬರುವುದಿಲ್ಲ ? ಅಥವಾ ಮಸೀದಿ ಆಗಿದ್ದರಿಂದ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುತ್ತಾರೆಯೇ?

* ಬೆಂಗಳೂರು ಅಷ್ಟೆ ಅಲ್ಲ, ದೇಶದ ಅನೇಕ ಸ್ಥಳಗಳಲ್ಲಿ ಮಸೀದಿಗಳ ಮೇಲೆ ಅಕ್ರಮವಾಗಿ ಧ್ವನಿವರ್ಧಕಗಳನ್ನು ಹಾಕಿ ಶಬ್ದ ಮಾಲಿನ್ಯ ಮಾಡಲಾಗುತ್ತಿದೆ. ಇದರ ಬಗ್ಗೆ ಇನ್ನು ಕೇಂದ್ರ ಸರಕಾರದ ನೇತೃತ್ವದಲ್ಲೇ ಮೇಲ್ವಿಚಾರಣೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ !

ಬೆಂಗಳೂರು(ಮಾ.೧೫) : ನಗರದ ಥಣಿಸಂದ್ರದಲ್ಲಿ ೧೬ ಮಸೀದಿಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಕರ್ನಾಟಕ ಉಚ್ಚ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಈ ಮಸೀದಿಗಳಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಧ್ವನಿವರ್ಧಕ ಬಳಸಿ ಆಜಾನ್ ನೀಡಲಾಗುತ್ತಿದೆ. ಧ್ವನಿವರ್ಧಕಗಳಿಂದ ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಹೊರಹೊಮ್ಮುತ್ತಿದೆ. ಇದರಿಂದ ಮಸೀದಿ ಸುತ್ತಮುತ್ತ ಶಬ್ದ ಮಾಲಿನ್ಯ ಉಂಟಾಗಿ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.