ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಗಣಿತ ಮತ್ತು ಭೂಗೋಳ ಬೇರೆ ಬೇರೆ ವಿಷಯವಾಗಿದೆ ಒಂದೇ ಭಾಷೆಯಲ್ಲಿ ಮತ್ತೊಂದು ವಿಷಯವನ್ನು ಹೇಳಲಾಗುವುದಿಲ್ಲ. ಅದರಂತೆ ವಿಜ್ಞಾನ ಮತ್ತು ಅಧ್ಯಾತ್ಮ ಇವು ಬೇರೆ ಬೇರೆ ವಿಷಯವಾಗಿವೆ, ಇದನ್ನು ವಿಜ್ಞಾನವು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.

ಮಾನವನಿಗೆ ಮನುಷ್ಯತ್ವವನ್ನು ಕಲಿಸದಿರುವ ಆದರೆ ವಿಧ್ವಂಸಕ ಅಸ್ತ್ರ, ಶಸ್ತ್ರಗಳನ್ನು ನೀಡುವ ವಿಜ್ಞಾನದ ಮೌಲ್ಯವು ಶೂನ್ಯವಾಗಿದೆ.

ಶರೀರದಲ್ಲಿ ಜಂತುಗಳಿದ್ದರೆ ಅದು ಶರೀರಕ್ಕೆ ತೆಗೆದುಕೊಂಡ ಔಷಧಿಯಿಂದ ಸಾಯುತ್ತದೆ. ಅದರಂತೆ ವಾತಾವರಣದಲ್ಲಿಯ ನಕಾರಾತ್ಮಕ ರಜ-ತಮವು ಯಜ್ಞದಲ್ಲಿಯ ಸ್ಥೂಲ ಮತ್ತು ಸೂಕ್ಷ್ಮ ಧೂಮದಿಂದ ನಾಶವಾಗುತ್ತದೆ.

ದೇವರ ಮೇಲೆ ಮತ್ತು ಸಾಧನೆಯ ಮೇಲೆ ವಿಶ್ವಾಸವಿಲ್ಲದಿದ್ದರೂ ಚಿರಂತನ ಆನಂದ ಪ್ರತಿಯೊಬ್ಬರಿಗೂ ಬೇಕಾಗಿರುತ್ತದೆ. ಅದು ಕೇವಲ ಸಾಧನೆಯಿಂದ ಸಿಗುತ್ತದೆ. ಇದೊಮ್ಮೆ ಗಮನಕ್ಕೆ ಬಂದರೆ ಮಾನವನು ಸಾಧನೆ ಮಾಡದೇ ಪರ್ಯಾಯವಿಲ್ಲವಂದು ಸಾಧನೆಯ ಕಡೆಗೆ ತಿರುಗುತ್ತಾನೆ.

ಸಾಮ್ಯವಾದಿಗಳಿಗೆ ಪ್ರಾರಬ್ಧ ಮುಂತಾದ ಶಬ್ದವೂ ತಿಳಿದಿಲ್ಲದ್ದರಿಂದ ಅವರು ಸಾಮ್ಯವಾದ ಈ ಪದವನ್ನು ಬಳಸುತ್ತಾರೆ ಮತ್ತು ಅದು ಹಾಸ್ಯಾಸ್ಪದವಾಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ