ಅರುಣಾಚಲ ಪ್ರದೇಶದಲ್ಲಿ ಚೀನಾದ ಊರು : ಎಷ್ಟು ನಿಜ ಮತ್ತು ಎಷ್ಟು ಸುಳ್ಳು ?

೧. ಚೀನ ಭಾರತೀಯ ಪ್ರದೇಶದಲ್ಲಿ ಊರನ್ನು ನಿರ್ಮಿಸಿದ ವಾರ್ತೆಯು ಅತಿರಂಜಿತ !

ಒಂದು ವಾರ್ತಾವಾಹಿನಿಯು, ಚೀನಾ ಅರುಣಾಚಲ ಪ್ರದೇಶದಲ್ಲಿ ನಾಲ್ಕುವರೆ ಕಿಲೋಮೀಟರ್ ಒಳಗೆ ಬಂದು ಒಂದು ಊರನ್ನು ನಿರ್ಮಿಸಿದೆ’ ಎಂಬ ವಾರ್ತೆಯನ್ನು ನೀಡಿತ್ತು. ಅದಕ್ಕೆ ಸಾಕ್ಷಿಯೆಂದು ಕೆಲವು ಉಪಗ್ರಹಗಳ ಮೂಲಕ ತೆಗೆದ ಛಾಯಾಚಿತ್ರಗಳನ್ನೂ ನೀಡಿತ್ತು. ಒಂದು ವೇಳೆ ಶತ್ರುಗಳಿಗೆ ಅತಿಕ್ರಮಣ ಮಾಡುವುದಿದ್ದರೆ, ಅವರು ಅಲ್ಲಿ ಯಾವುದೇ ಹಳ್ಳಿ ಅಥವಾ ಊರನ್ನು ನಿರ್ಮಿಸುವುದಿಲ್ಲ. ಅವರು ಅಲ್ಲಿ ಸೈನ್ಯ, ಟ್ಯಾಂಕು, ತೋಪು, ಹೆಲಿಕ್ಯಾಪ್ಟರ್, ಡ್ರೋನ್ ಮುಂತಾದ ಶಸ್ತ್ರಗಳನ್ನು ತರುತ್ತಾರೆ. ಯುದ್ಧಕ್ಕಾಗಿ ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರದ ಪ್ರದೇಶದಲ್ಲಿ ಊರನ್ನು ನಿರ್ಮಿಸಿತು ಎಂಬುದು ಯಾರಿಗೂ ಒಪ್ಪಿಗೆಯಾಗುವಂತಹದ್ದಲ್ಲ. ಅಲ್ಲಿನ ನಿಃಶಸ್ತ್ರ ನಾಗರಿಕರ ಮೇಲೆ ಭಾರತವು ಆಕ್ರಮಣ ಮಾಡಬಹುದೇ ? ಆದ್ದರಿಂದ ಇಂತಹ ಅತಿರಂಜಿತ ವಿಷಯಗಳು ಸುಳ್ಳಾಗಿರುತ್ತವೆ. ಯಾವುದಾದರೊಂದು ದೇಶದಲ್ಲಿ ಅತಿಕ್ರಮಣ ಮಾಡುವುದಿದ್ದರೆ, ಅದು ಸೈನ್ಯವನ್ನು ಒಳಗೆ ತರಬಹುದು, ಆದರೆ ಅದು ನಾಗರಿಕರನ್ನು ಎಂದಿಗೂ ಶತ್ರುವಿನ ಪ್ರದೇಶದಲ್ಲಿ ತರುವುದಿಲ್ಲ. ಈ ವಾರ್ತಾವಾಹಿನಿಯ ಸುದ್ದಿಯ ಬಗ್ಗೆ ತಕ್ಷಣ ಭಾರತದ ಪರರಾಷ್ಟ್ರ ಸಚಿವಾಲಯವು, ‘ದೇಶದ ರಕ್ಷಣೆ ಮಾಡಲು ನಾವು ಸಕ್ಷಮರಾಗಿದ್ದೇವೆ. ನಾವು ದೇಶದ ಹಿತದ ಕಡೆಗೆ ಗಮನ ನೀಡುತ್ತೇವೆ’, ಎಂದು ಪ್ರತಿಕ್ರಿಯೆ ಯನ್ನು ನೀಡಿತು. ಸ್ವಲ್ಪದರಲ್ಲಿ ವಿದೇಶಾಂಗ ಸಚಿವಾಲಯಕ್ಕನುಸಾರ ಈ ರೀತಿ ಏನೂ ನಡದೇ ಇಲ್ಲ. ಚೀನಾ ೫ ಮೇ ೨೦೨೦ ರಿಂದ ಲಡಾಖನಲ್ಲಿ ಸಂಘರ್ಷವನ್ನು ಆರಂಭಿಸಿದೆ; ಆದರೆ ಅದರಿಂದ ಚೀನಾಗೆ ಏನೂ ಲಾಭವಾಗಿಲ್ಲ. ಆದ್ದರಿಂದ ಈಗ ಚೀನಾ ವಿವಿಧ ಅಯೋಗ್ಯ ಮಾರ್ಗಗಳನ್ನು ಅವಲಂಬಿಸುತ್ತಿದೆ. ಚೀನಾದ ಕೆಲವು ಸಹಾಯಕರು ಭಾರತೀಯ ಮಾಧ್ಯಮಗಳಲ್ಲಿದ್ದಾರೆ. ಅವರು ಕಳೆದ ೮ ರಿಂದ ೯ ತಿಂಗಳುಗಳಿಂದ ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈಗ ಲಡಾಖನಲ್ಲಿ ಮಂಜು ಬೀಳುತ್ತಿದೆ. ಆದ್ದರಿಂದ ಎಪ್ರಿಲ್‌ವರೆಗೆ ಚೀನಾ ಏನಾದರು ಮಾಡಲು ಬಯಸಿದರೂ, ಅದಕ್ಕೆ ಏನೂ ಮಾಡಲು ಸಾಧ್ಯವಾಗುವುದಿಲ್ಲ.

(ನಿವೃತ್ತ) ಬ್ರಿಗೆಡಿಯರ್ ಹೇಮಂತ ಮಹಾಜನ

೨. ಊರುಗಳನ್ನು ನಿರ್ಮಿಸುವ ಹಿಂದಿನ ಚೀನಾದ ರಣನೀತಿ

. ಶತ್ರುರಾಷ್ಟ್ರದ ಹದ್ದಿನಲ್ಲಿ ಅತಿಕ್ರಮಣ ಮಾಡಲು ಯಾರೂ ಊರುಗಳನ್ನು ನಿರ್ಮಿಸುವುದಿಲ್ಲ. ಆದ್ದರಿಂದ ಇದರ ಹಿಂದಿನ ಹಿನ್ನೆಲೆಯನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುವುದು. ಒಮ್ಮೆ ಚೀನಾ ಗಡಿಯ ಭಾಗದಲ್ಲಿ ೫೦೦ ರಿಂದ ೬೦೦ ವಸತಿಗಳನ್ನು ನಿರ್ಮಿಸುವ ರಣನೀತಿಯನ್ನು ರಚಿಸಿತ್ತು. ಅದಕ್ಕಾಗಿ ಬಹಳಷ್ಟು ಹಣವನ್ನೂ ಖರ್ಚು ಮಾಡುವ ಸಿದ್ಧತೆಯನ್ನೂ ಮಾಡಿತ್ತು. ಅವರಿಗೆ ಈ ವಸತಿಗಳನ್ನು ಚೀನಾದ ರಾಷ್ಟ್ರೀಯ ಹೆದ್ದಾರಿಯೊಂದಿಗೆ ಜೋಡಿಸುವುದಿತ್ತು. ಇದರಲ್ಲಿ ಕೆಲವು ವಸತಿಗಳು (ಊರುಗಳು) ತಯಾರಾಗಿವೆ; ಆದರೆ ಅವೆಲ್ಲವೂ ಚೀನಾದ ಪ್ರದೇಶದಲ್ಲಿದ್ದು ಅಲ್ಲಿ ಯಾರೂ ವಾಸಿಸುವುದಿಲ್ಲ. ಅಲ್ಲಿ ವಾಸಿಸಲು ಅವರನ್ನು ಯಾರಾದರೂ ಬಲವಂತವಾಗಿ ಕಳುಹಿಸುತ್ತಿದ್ದರೆ, ಅದು ಬೇರೆ ವಿಷಯವಾಗಿದೆ; ಆದರೆ ಯಾವುದೇ ಸಾಮಾನ್ಯ ನಾಗರಿಕನು ಇಂತಹ ಕಠಿಣ ಪ್ರದೇಶದಲ್ಲಿ ಇರಲು ತಯಾರಾಗುವುದಿಲ್ಲ.

ಆ. ಹೀಗಿರುವಾಗಲೂ ಚೀನಾಗೆ ಈ ಊರುಗಳನ್ನು ನಿರ್ಮಿಸುವುದಿತ್ತು. ಇದರಿಂದ ಚೀನಾಗೆ ಭಾರತದ ಗಡಿ ಪ್ರದೇಶದಲ್ಲಿರುವ ಭಾಗದಲ್ಲಿರುವ ನಾಗರಿಕರಿಗೆ, ನಾವು ಗಡಿ ಪ್ರದೇಶವನ್ನು ಎಷ್ಟು ಅಭಿವೃದ್ಧಿಗೊಳಿಸಿದ್ದೇವೆ ! ಎಂಬ ಸಂದೇಶವನ್ನು ನೀಡಬೇಕಾಗಿತ್ತು. ಈ ಊರುಗಳಲ್ಲಿ ಚೀನಾಗೆ ಚೀನಿ ಹನ್ ಮತ್ತು ಚೀನಾ ಕಮ್ಯುನಿಷ್ಟ ಪಕ್ಷದ ಸದಸ್ಯರಾಗಿರುವ ಟಿಬೆಟ್ ನಾಗರಿಕರ ವಸತಿಯನ್ನು ನಿರ್ಮಿಸುವುದಿತ್ತು; ಆದರೆ ಯಾವುದೇ ಚೀನಿ ಅಥವಾ ಟಿಬೆಟಿ ನಾಗರಿಕರು ಈ ಗಡಿ ಪ್ರದೇಶಕ್ಕೆ ಬರಲು ಸಿದ್ಧರಿರಲಿಲ್ಲ. ಇದು ಪರ್ವತದ ಭಾಗವಾಗಿರುವುದರಿಂದ ಇಲ್ಲಿ ಬದುಕಲು ಬೇಕಾಗುವಂತಹದ್ದು ಏನೂ ಇಲ್ಲ. ಆದ್ದರಿಂದ ಅಲ್ಲಿ ನೆಲೆಯೂರುವುದು ಅತ್ಯಂತ ಕಠಿಣವಾಗಿದೆ.

ಇ. ಚೀನಾವು ಟಿಬೆಟ್‌ನ ಮೇಲೆ ನಿಯಂತ್ರಣವನ್ನಿಟ್ಟಿದೆ; ಮಾತ್ರ ಭಾರತ-ಚೀನಾ ಗಡಿಯಿಂದ ಭಾರತವು ಗುಪ್ತಚರರನ್ನು ಅಥವಾ ಎಸ್.ಎಸ್.ಎಫ್.ನ ಜನರನ್ನು ಚೀನಾಗೆ ಕಳುಹಿಸುತ್ತಿದ್ದರೆ, ಅವರ ಮೇಲೆ ಗಮನವಿಡಲು ಈ ಊರುಗಳನ್ನು ಗಡಿಯಲ್ಲಿ ನಿರ್ಮಿಸಲಿತ್ತು. ಒಂದು ವೇಳೆ ಟಿಬೆಟಿನ ನಾಗರಿಕರು ಟಿಬೆಟ್‌ನಿಂದ ಗಡಿಯ ಆಚೆಗಿನ ಅರುಣಾಚಲ ಪ್ರದೇಶ, ಸಿಕ್ಕಿಮ್, ಹಿಮಾಚಲ ಪ್ರದೇಶ ಅಥವಾ ಉತ್ತರಾಖಂಡ ಮುಂತಾದ ರಾಜ್ಯಗಳಲ್ಲಿ ಪ್ರವೇಶಿಸಿದರೆ, ಅವರ ಮೇಲೆಯೂ ಗಮನವಿಡಲು ಸಾಧ್ಯವಾಗಬೇಕೆಂಬುದು ಈ ಊರುಗಳನ್ನು ನಿರ್ಮಿಸುವುದರ ಹಿಂದಿನ ಉದ್ದೇಶವಿತ್ತು.

೩. ಚೀನಾ ಊರುಗಳನ್ನು ನಿರ್ಮಿಸಿದ ಬಗೆಗಿನ ಬ್ರೆಕಿಂಗ್ ವಾರ್ತೆಯೇ ಹಾಸ್ಯಾಸ್ಪದ !

ಸುಬನಸಿರಿ ಜಿಲ್ಲೆಯಲ್ಲಿ ಈ ಊರುಗಳು ದಿಢೀರಾಗಿ ಸಿದ್ಧವಾಗಿಲ್ಲ. ದೂರಚಿತ್ರವಾಹಿನಿಯಲ್ಲಿ ತೋರಿಸಲಾಗುವ ವಾರ್ತೆಗಳಲ್ಲಿ ಬ್ರೆಕಿಂಗ್ ನ್ಯೂಜ್ ಎಂಬುದು ಇದರಲ್ಲಿ ಏನೂ ಇಲ್ಲ. ಒಂದು ಊರು ನಿರ್ಮಾಣವಾಗಲು ಕನಿಷ್ಟ ೧ ರಿಂದ ೮ ವರ್ಷಗಳು ಬೇಕಾಗುತ್ತವೆ. ಇಂದು ಭಾರತೀಯ ಸೈನ್ಯದ ಕ್ಷಮತೆ ಎಷ್ಟಿದೆಯೆಂದರೆ, ಉಪಗ್ರಹ ಅಥವಾ ಅದಕ್ಕೆ ಸಮನಾದ ಆಧುನಿಕ ತಂತ್ರಜ್ಞಾನದಿಂದ ಎಲ್ಲಿ ಏನು ನಡೆದಿದೆ, ಎಂಬುದು ಅವರಿಗೆ ಎಲ್ಲ ತಿಳಿದಿದ್ದು ಭಾರತೀಯ ಸೇವೆಗೆ ತಿಳಿದಿಲ್ಲ ಹೀಗಾಗುವ ಸಾಧ್ಯತೆಯೇ ಇಲ್ಲ. ಯಾವುದಾದರೊಂದು ವಿಷಯ ವಾರ್ತಾವಾಹಿನಿಗೆ ಗೊತ್ತಿದೆ, ಆದರೆ ಅದು ಭಾರತೀಯ ಸೈನ್ಯಕ್ಕೆ ಗೊತ್ತಿಲ್ಲ, ಹೀಗೆ ಯಾವುದೇ ವಿಷಯ ಇರಲು ಸಾಧ್ಯವೇ ಇಲ್ಲ. ಸಂಬಂಧಿತ ವಾರ್ತಾವಾಹಿನಿಗೆ ನಾವು ಬಹಳ ದೊಡ್ಡ ಕೆಲಸವನ್ನು ಮಾಡಿದ್ದೇವೆ, ಎಂದು ಅನಿಸುತ್ತಿದ್ದರೆ; ಅದೆಲ್ಲವೂ ಹಾಸ್ಯಾಸ್ಪದವಾಗಿದೆ.

೪. ಚೀನಾವು ವಿವಾದಿತ ಭಾಗದಲ್ಲಿ ಊರನ್ನು ನಿರ್ಮಿಸುವುದು

ಅರುಣಾಚಲ ಪ್ರದೇಶದ ಸುಬನಸಿರಿ ಜಿಲ್ಲೆಯ ಲೋಗ್ಜೂ ಸ್ಥಳವು ಯಾವಾಗಲೂ ವಿವಾದಿತವಾಗಿದೆ. ಭಾರತವು ಆ ಪ್ರದೇಶ ನಮ್ಮದೆಂದು ಹೇಳುತ್ತದೆ ಮತ್ತು ಚೀನಾವೂ ಆ ಪ್ರದೇಶ ನಮ್ಮದೆಂದು ಹೇಳುತ್ತದೆ. ೧೯೫೯ರಲ್ಲಿ ಅಲ್ಲಿ ಭಾರತದ ಚೌಕಿ ಇತ್ತು. ೧೯೬೨ ರ ಯುದ್ಧದ ಮೊದಲು ಚೀನಾ ಆಕ್ರಮಣ ಮಾಡಿ ಅದನ್ನು ಕಬಳಿಸಿತು. ೧೯೫೯ ರಿಂದ ಈ ಭಾಗವು ಚೀನಾದ ವಶದಲ್ಲಿದೆ. ಚೀನಾ, ಲೋಗ್ಜೂನ ಮುಂದೆಯೂ ತಮ್ಮದೇ ಪ್ರದೇಶವಿದೆ, ಎಂದು ಹೇಳುತ್ತದೆ. ಆದರೆ ಅದು ಭಾರತಕ್ಕೆ ಒಪ್ಪಿಗೆ ಇಲ್ಲ. ಆದ್ದರಿಂದ ಚೀನಾ ಊರನ್ನು ನಿರ್ಮಿಸಿದೆ ಎಂದು ಹೇಳುವ ಸ್ಥಳವು ವಿವಾದಿತ ಕ್ಷೇತ್ರದಲ್ಲಿದೆ. ಆದ್ದರಿಂದ ಈ ಊರು ಭಾರತೀಯ ಪ್ರದೇಶದಲ್ಲಿ ಬಂದಿದೆ, ಎಂದು ಹೇಳುವುದು ತಪ್ಪಾಗಿದೆ.

೫. ಚೀನಾ ಭಾರತದ ಪ್ರದೇಶದಲ್ಲಿ ಊರನ್ನು ನಿರ್ಮಿಸುವುದು ಅಷ್ಟು ಸುಲಭದ ವಿಷಯವಲ್ಲ !

ಭಾರತ-ಚೀನಾ ಗಡಿಯು ಸುಮಾರು ೪ ಸಾವಿರ ಕಿಲೋಮೀಟರಷ್ಟಿದೆ. ಭಾರತ-ಪಾಕಿಸ್ತಾನ ನಿಯಂತ್ರಣ ರೇಖೆಯ ಮೇಲೆ  ಹೇಗೆ ಭಾರತೀಯ ಸೈನ್ಯವಿದೆಯೋ, ಹಾಗೆ ಈ ಸ್ಥಳದಲ್ಲಿ ಭಾರತೀಯ ಸೈನ್ಯವಿಲ್ಲ. ಲಡಾಖನಲ್ಲಿ ಸಂಘರ್ಷ ಉದ್ಭವಿಸಿದ ನಂತರ ಈ ಭಾಗದಲ್ಲಿ ಸೈನ್ಯದ ಸುರಕ್ಷೆಯನ್ನು ಹೆಚ್ಚಿಸಲಾಗಿದೆ. ಆದ್ದರಿಂದ ಒಳಗೆ ಬಂದು ಅತಿಕ್ರಮಣ ಮಾಡುವುದು ಚೀನಾಗೆ ಸುಲಭ ವಿಷಯವಲ್ಲ. ಈ ಪ್ರದೇಶದ ಮೇಲೆ ಉಪಗ್ರಹದ ಮೂಲಕ ಭಾರತೀಯ ಸೈನ್ಯದ ಗಮನವಿದೆ. ಡ್ರೋನ್ ಮತ್ತು ಹೆಲಿಕ್ಯಾಪ್ಟರ್‌ಗಳ ಮಾಧ್ಯಮಗಳಿಂದಲೂ ಗಮನವಿಡಲಾಗುತ್ತದೆ. ಆದ್ದರಿಂದ ಭಾರತದ ಗಡಿಯಲ್ಲಿ ಊರುಗಳನ್ನು ನಿರ್ಮಿಸುವುದು ಅಷ್ಟೊಂದು ಸುಲಭ ವಿಷಯವಲ್ಲ; ಆದರೆ ಮುಂದೆ ಹೀಗಾಗುವುದೇ ಇಲ್ಲ, ಎಂದು ಹೇಳಲು ಆಗುವುದಿಲ್ಲ. ಸುಬನಸಿರಿ ಜಿಲ್ಲೆಯ ಲೋಗ್ಜುವಿನಲ್ಲಿ ಇದಾಗಿದೆ. ಅದು ಉಪಗ್ರಹಗಳ ಮಾಧ್ಯಮದಿಂದ ಗಮನಕ್ಕೆ ಬಂದಿತು; ಆದರೆ ಈ ವಿಷಯವು ವಿಶೇಷವಲ್ಲ; ಏಕೆಂದರೆ ಭಾರತೀಯ ಸೈನ್ಯಕ್ಕೆ ಇದು ಮೊದಲಿನಿಂದಲೆ ಗೊತ್ತಿದೆ.

೬. ಭಾರತದೊಂದಿಗೆ ಹೋರಾಡಲು ಸಾಧ್ಯವಿಲ್ಲದ ಕಾರಣ ಚೀನಾ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ !

ಯಾವುದಾದರೊಂದು ದೇಶಕ್ಕೆ ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡಬೇಕಿದ್ದರೆ, ಅದು ಅಲ್ಲಿ ಊರುಗಳನ್ನು ನಿರ್ಮಿಸುವುದೇ ? ಅಥವಾ ತಮ್ಮ ಸೈನ್ಯಕ್ಕಾಗಿ ಅಪಾಯವನ್ನು ತಂದೊಡ್ಡುವುದೇ  ಅಥವಾ ಯುದ್ಧಕ್ಕಾಗಿ ಸಾಮಗ್ರಿಗಳನ್ನು ಸಂಗ್ರಹಿಸುವುದು ? ಯಾವುದೇ ದೇಶ ತನ್ನ ನಾಗರಿಕರನ್ನು ಮುಂದೆ ಮಾಡುವುದಿಲ್ಲ. ಒಂದು ವೇಳೆ ನಾಗರಿಕರು ಅಲ್ಲಿ ವಾಸಿಸತೊಡಗಿದರೆ, ನಾಳೆ ಚೀನಾ ಆ ಭಾಗದ ಮೇಲೆ ನನ್ನ ಹಕ್ಕಿದೆ ಎಂದು ಹೇಳಬಹುದು. ನಮ್ಮ ನಾಗರಿಕರು ಎಷ್ಟೋ ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಈ ಸಂಪೂರ್ಣ ಭಾಗವು ನಮ್ಮದಾಗಿದೆ, ಎಂದು ಚೀನಾ ಹೇಳಬಹುದು; ಆದರೆ ಯುದ್ಧವನ್ನು ಮಾಡಲು ಚೀನಾಗೆ ಈ ರೀತಿಯ ಅವಕಾಶಗಳ ಆವಶ್ಯಕತೆ ಇಲ್ಲ. ಇಂದು ಚೀನಾ ಭಾರತದೊಂದಿಗೆ ಹೋರಾಡುವ ಸ್ಥಿತಿಯಲ್ಲಿಯೇ ಇಲ್ಲ, ಇದು ಸತ್ಯಸ್ಥಿತಿ. ಚೀನಾಗೆ ತನ್ನ ರಕ್ತವನ್ನು ಹರಿಸುವುದು ಬೇಕಾಗಿಲ್ಲ. ಬರುವ ಎಪ್ರಿಲ್ ೨೦೨೧ ರವರೆಗೆ ಅದಕ್ಕೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅದು ಕೇವಲ ಇಂತಹ ವಾರ್ತೆಗಳನ್ನು ಪಸರಿಸುವ ಕೆಲಸವನ್ನು ಮಾಡುತ್ತಿದೆ; ಆದರೆ ದೇಶವಾಸಿಗಳು ಯಾವುದೇ ಸಮತೋಲನವನ್ನು ಕಳೆದುಕೊಳ್ಳಬಾರದು. ಅವರು ಭಾರತೀಯ ಸೈನ್ಯದ ಮೇಲೆ ವಿಶ್ವಾಸವನ್ನು ಇಡಬೇಕು. ಈ ರೀತಿ ಇತರ ಕ್ಷೇತ್ರಗಳಲ್ಲಿಯೂ ಚೀನಾ ನುಸುಳಬಹುದು. ದುರ್ದೈವದಿಂದ ಹಿಂದಿನ ಸರಕಾರವು ಚೀನಾದೊಂದಿಗೆ ಕೆಲವು ಅಂತರಾಷ್ಟ್ರೀಯ ಒಪ್ಪಂದಗಳನ್ನು ಮಾಡಿದೆ. ಆದ್ದರಿಂದ ಈ ಸ್ಥಳದಲ್ಲಿ ಅತಿಕ್ರಮಣವಾದರೆ ಭಾರತವು ಅದನ್ನು ನಿಭಾಯಿಸಲು ಸೇನಾ ಕಾರ್ಯಾಚರಣೆಯನ್ನು ಮಾಡಲಾರದು; ಏಕೆಂದರೆ ಈ ಒಪ್ಪಂದಗಳಿಂದ ಭಾರತೀಯ ಸೈನ್ಯದ ಕೈಗಳನ್ನು ಕಟ್ಟಿ ಹಾಕಲಾಗಿದೆ. ಒಂದು ವೇಳೆ ಚೀನಾ ನಿಜವಾಗಿಯೂ ಅತಿಕ್ರಮಣ ಮಾಡಿದ್ದರೆ, ನಿಶ್ಚಿತವಾಗಿಯೂ ನಾವು ಅದನ್ನು ದೂರ ಮಾಡಲೇ ಬೇಕಾಗುವುದು. ಅದಕ್ಕಾಗಿ ಭಾರತೀಯ ಸೈನ್ಯವನ್ನು ಬಳಕೆ ಮಾಡುವುದು ಉತ್ತಮ ಪರ್ಯಾಯವಾಗಿದೆ. ಚೀನಾಗೆ ಚರ್ಚೆಯ ಭಾಷೆ ತಿಳಿಯುವುದಿಲ್ಲ. ಅದರೊಂದಿಗೆ ವ್ಯವಹರಿಸಲು ಕೇವಲ ಸೈನ್ಯದ ಸೈನ್ಯವನ್ನೇ ಉಪಯೋಗಿಸಬೇಕಾಗುತ್ತದೆ. ಸೈನ್ಯವನ್ನು ಉಪಯೋಗಿಸುವ ಮೊದಲು ಭಾರತಕ್ಕೆ ಚೀನಾದ ಕೆಲವು ರಹಸ್ಯಮಯ ವಿಷಯಗಳು ಗೊತ್ತಿವೆ. ಮೊದಲು ಅವುಗಳ ಉಪಯೋಗವಾಗುವುದು ಆವಶ್ಯಕವಾಗಿದೆ. ಚೀನಾದ ಮೇಲೆ ಆರ್ಥಿಕ ಬಹಿಷ್ಕಾರ ಹಾಕಬೇಕು. ಇಂದಿಗೂ ಕೆಲವು ಭಾರತೀಯ ಕಾರ್ಪೋರೆಟ್ ಸೆಕ್ಟರ್‌ನಲ್ಲಿನ ಜನರು ಚೀನಾದೊಂದಿಗೆ ವ್ಯಾವಹಾರಿಕ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಅವುಗಳ ಮೇಲೆಯೂ ನಿರ್ಬಂಧ ಹೇರಬೇಕು.

೭. ಭಾರತವು ಚೀನಾದ ಊರುಗಳ ಕಡೆಗೆ ಅವಕಾಶವೆಂದು ನೋಡಬೇಕು !

ಒಂದು ವೇಳೆ ಚೀನಾ ಭಾರತ_ಚೀನಾ ಸೀಮೆಯಲ್ಲಿ ಟಿಬೇಟಿ ನಾಗರಿಕರನ್ನು ವಸತಿಯನ್ನು ನಿರ್ಮಿಸುತ್ತಿದ್ದಲ್ಲಿ, ಭಾರತವು ಅದನ್ನು ಅವಕಾಶವೆಂದು ನೋಡಬೇಕು. ಅಲ್ಲಿ ವಾಸಮಾಡುವ ಹೆಚ್ಚಿನ ನಾಗರಿಕರು ಟಿಬೆಟಿಯನ್ನರಾಗಿದ್ದಾರೆ. ಅವರಿಗೆ ಚೀನಾಗಿಂತ ದಲಾಯಿ ಲಾಮಾ ಮತ್ತು ಭಾರತದ ಬಗ್ಗೆ ವಿಶೇಷ ಅಕ್ಕರೆ ಇದೆ. ಆದ್ದರಿಂದ ಭಾರತವು ಈ ಸಂಕಟದ ರೂಪಾಂತರವನ್ನು ಅವಕಾಶದಲ್ಲಿ ಮಾಡಿಕೊಳ್ಳಬೇಕು. ಈ ಊರುಗಳನ್ನು ಚೀನಾದ ವಿರುದ್ಧ ಗುಪ್ತಚಾರಿಕೆಗಾಗಿ ಉಪಯೋಗಿಸಬಹುದೇ ? ಎಂದು ನೋಡಬೇಕು.

೮. ಭಾರತ-ಚೀನಾ ಸಂಘರ್ಷದಲ್ಲಿ ವಿಪಕ್ಷಗಳೂ ಸೈನ್ಯದ ಹಿಂದೆ ದೃಢವಾಗಿರುವುದು ಆವಶ್ಯಕ !

ಚೀನಾದ ಯಾವುದೇ ಕಾರ್ಯಾಚರಣೆಗೆ ಪ್ರತ್ಯುತ್ತರ ನೀಡಲು ಭಾರತವು ಎಲ್ಲ ರೀತಿಯಿಂದಲೂ ತಯಾರಿದೆ. ಆದರೂ ಭಾರತವು ಹೆಚ್ಚೆಚ್ಚು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು; ಏಕೆಂದರೆ ಚೀನಾದೊಂದಿಗಿನ ಹೋರಾಟವು ಅನೇಕ ವರ್ಷಗಳ ಕಾಲ ನಡೆಯಲಿದೆ. ಈ ಹೋರಾಟಕ್ಕೆ ಭಾರತೀಯ ಸೈನ್ಯವು ಸಿದ್ಧವಾಗಿಯೇ ಇದೆ; ಆದರೆ ದೇಶದಲ್ಲಿನ ಇತರ ರಾಜಕೀಯ ಪಕ್ಷಗಳೂ ಸಶಸ್ತ್ರ ಸೈನಿಕರ ಹಿಂದೆ ದೃಢವಾಗಿ ನಿಲ್ಲಬೇಕು. ಯಾವ ಪಕ್ಷಗಳು ಅಥವಾ ಎನ್.ಜಿ.ಓ.ಗಳು ಚೀನಾದ ಭಾಷೆಯನ್ನು ಮಾತನಾಡುತ್ತಿವೆಯೋ, ಅವುಗಳ ಮೇಲೆ ಸಾಮಾಜಿಕ ಬಹಿಷ್ಕಾರನ್ನು ಹಾಕಬೇಕು. ಸದ್ಯ ವಿಶೇಷ ಅಂತಹದ್ದೇನೂ ಆಗಿಲ್ಲ; ಆದರೆ ಮುಂದೆ ಏನೂ ಆಗಲಾರದು, ಎಂದು ನಾವು ನಿಖರವಾಗಿ ಹೇಳಲಾಗದು. ಆದ್ದರಿಂದ ಭಾರತವು ಯಾವಾಗಲೂ ಸಿದ್ಧವಾಗಿರಬೇಕು.

– (ನಿವೃತ್ತ) ಬ್ರಿಗೆಡಿಯರ್ ಹೇಮಂತ ಮಹಾಜನ, ಪುಣೆ