೧. ಯಾವುದೇ ಭೌಗೋಲಿಕ ಮತ್ತು ನೈಸರ್ಗಿಕ ಪರಿಸ್ಥಿತಿ ಇಲ್ಲದಿರುವಾಗ ಅನಿರೀಕ್ಷಿತ ಹಿಮಗಡ್ಡೆ ಉರುಳಿ ಬೀಳುವುದು
ಕೆಲವು ದಿನಗಳ ಹಿಂದೆ ಉತ್ತರಾಖಂಡದಲ್ಲಿ ಒಂದು ಹಿಮಗಡ್ಡೆ ಕುಸಿದು ಅದರ ಅಡಿಗೆ ಬಿದ್ದು ಅನೇಕ ಜನರು ಮೃತಪಟ್ಟರು. ಅಲ್ಲದೇ ಅಲ್ಲಿದ್ದ ಒಂದು ಆಣೆಕಟ್ಟು ಒಡೆದು ನದಿಗೆ ಅನಿರೀಕ್ಷಿತ ನೆರೆ ಬಂದಿತು. ಅದರಲ್ಲಿ ನದಿಯ ದಡದಲ್ಲಿ ವಾಸಿಸುತ್ತಿದ್ದ ಕೆಲವು ಜನರು ಕೊಚ್ಚಿಕೊಂಡು ಹೋದರು. ಇದು ಗಡಿಪ್ರದೇಶವಾಗಿರುವುದರಿಂದ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಸೈನಿಕರನ್ನು ನೇಮಕ ಮಾಡಲಾಗಿರುತ್ತದೆ. ಆದ್ದರಿಂದ ಭಾರತೀಯ ಸೈನಿಕರು ತಕ್ಷಣ ಘಟನಾಸ್ಥಳಕ್ಕೆ ತಲುಪಿ ಅವರು ಅನೇಕ ಜನರನ್ನು ಮಣ್ಣಿನ ರಾಶಿಯಿಂದ ಹೊರಗೆ ತೆಗೆದರು. ‘ಸಾಸೆ’ ಇದೊಂದು ಸಂಸ್ಥೆಯಾಗಿದೆ. ಹಿಮ ಬೀಳುವ ಈ ಪ್ರದೇಶದಲ್ಲಿ ಹಿಮಗಡ್ಡೆ ಅಥವಾ ಬಂಡೆಗಳು ಬೀಳುವ ಸಾಧ್ಯತೆಯಿದ್ದರೆ, ಈ ಸಂಸ್ಥೆ ಪರಿಸರದ ನಾಗರಿಕರನ್ನು ಜಾಗರೂಕಗೊಳಿಸುತ್ತದೆ. ಈ ಹಿಂದೆ ಇಂತಹ ಘಟನೆಗಳಾಗುವ ಮೊದಲೆ ಎಚ್ಚರಿಕೆ ನೀಡಲಾಗುತ್ತಿತ್ತು. ಈ ಸಲದ ಘಟನೆ ಘಟಿಸುವಾಗ ‘ಸಾಸೆ’ಯಿಂದ ಯಾವುದೇ ಎಚ್ಚರಿಕೆ ಬಂದಿರಲಿಲ್ಲ. ಈ ಸಮಯದಲ್ಲಿ ಮಳೆ ಬೀಳುತ್ತಿರಲಿಲ್ಲ ಅಥವಾ ಹಿಮ ಕೂಡ ಬೀಳುತ್ತಿರಲಿಲ್ಲ. ಆದ್ದರಿಂದ ಇಂತಹ ಎಚ್ಚರಿಕೆಯನ್ನು ಬಹುಶಃ ನೀಡಿರಲಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದು ನೈಸರ್ಗಿಕ ಆಪತ್ತು ಆಗಿತ್ತೇ ಅಥವಾ ಮಾಡಿಸಿರುವ ಅಪಘಾತವಾಗಿತ್ತೇ ? ಇದರ ಸಂಶೋಧನೆಗಾಗಿ ಈ ಪ್ರದೇಶಕ್ಕೆ `ಡಿ.ಆರ್.ಡಿ.ಓ.’ದ (ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ) ಸಂಶೋಧಕರನ್ನು ತಕ್ಷಣ ಹೆಲಿಕಾಪ್ಟರ್ ಮೂಲಕ ಕಳುಹಿಸಲಾಯಿತು. ಸದ್ಯ ಅವರು ಈ ಘಟನೆಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.
೨. ಇದು ನೈಸರ್ಗಿಕ ಅಪಘಾತವೋ ಅಥವಾ ಚೀನಾ ಮಾಡಿಸಿರುವ ಅಪಘಾತವೋ ?
ವಿಜ್ಞಾನಿಗಳ ಅಭಿಪ್ರಾಯದಲ್ಲಿ ‘ಫೆಬ್ರವರಿಯಲ್ಲಿ ಇಂತಹ ಹಿಮಗಡ್ಡೆಗಳು ಅಥವಾ ಬಂಡೆಗಳು ಉರುಳುವುದು ಅಸಾಧ್ಯ. ಹಿಮಗಡ್ಡೆ ಉರುಳಲು ಬೇಕಾಗುವ ಭೌಗೋಲಿಕ ಹಾಗೂ ನೈರ್ಗಿಕ ಕಾರಣಗಳು ಪ್ರಾಥಮಿಕ ವೀಕ್ಷಣೆಯಲ್ಲಿ ಕಂಡು ಬಂದಿಲ್ಲ.’ ಹಿಮಗಡ್ಡೆ ಕುಸಿಯಲು ಅನಿರೀಕ್ಷಿತ ಬಿಸಿಲು ಬಂದು ತಾಪಮಾನ ಹೆಚ್ಚಾಗಬೇಕಾಗುತ್ತದೆ. ಸದ್ಯ ಅಲ್ಲಿರುವ ತಾಪಮಾನ – ೨೦ ಡಿಗ್ರಿ ಸೆಂಟಿಗ್ರೇಡ್‍ನಷ್ಟಿದೆ. ಅಲ್ಲಿ ಹೊಸ ಹಿಮ ಕೂಡ ಬಿದ್ದಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಹಿಮಗಡ್ಡೆ ಕುಸಿಯುವುದು ಅಸಾಧ್ಯದ ವಿಷಯವಾಗಿದೆ. ಆದ್ದರಿಂದ ಇದು ಉದ್ದೇಶಪೂರ್ವಕ ಮಾಡಿದ ಅನಾಹುತವೇ ? ಎನ್ನುವ ಸಂಶಯ ಮೂಡುತ್ತದೆ. ಇಂತಹ ಅಪಘಾತಗಳನ್ನು ದೂರದಲ್ಲಿದ್ದೂ ಮಾಡಬಹುದು. ಚೀನಾ ತನ್ನ ಸೈನಿಕರ ಅಥವಾ ದಲಾಲರ ಮೂಲಕ ಅಲ್ಲಿ ಸ್ಫೋಟವನ್ನು ಮಾಡಿಸಿದೆಯೇ ? ಎಂಬುದನ್ನು ಕೂಡ ನೋಡಬೇಕಾಗಿದೆ. ಆ ಪ್ರದೇಶದಲ್ಲಿ ಗಡವಾಲ್ ರೆಜಿಮೆಂಟ್‍ನ ಮತ್ತು ಇತರ ಸೈನಿಕರು ವಾಸಿಸುತ್ತಾರೆ. ಅಲ್ಲಿನ ಕೆಲವು ನಿವೃತ್ತ ಸೈನಿಕರಿಗೆ ಸ್ಫೋಟವಾಗಿರುವ ಧ್ವನಿ ಕೇಳಿಸಿದೆ. ‘ಈ ಸ್ಫೋಟದ ಧ್ವನಿಯು ನೈಸರ್ಗಿಕವಾಗಿರಲಿಲ್ಲ’, ಎನ್ನುವ ಅಭಿಪ್ರಾಯವನ್ನು ಮಾಜಿ ಸೈನಿಕರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದರು. ಆದ್ದರಿಂದ ಈ ಸ್ಫೋಟವನ್ನು ಮಾಡಿಸಲಾಗಿದೆ, ಎಂದೇ ಅನಿಸುತ್ತದೆ. ಅಂದರೆ ಈ ಘಟನೆಯ ವಿಷಯದಲ್ಲಿ ಸಂಪೂರ್ಣ ತನಿಖೆ ನಡೆಯುತ್ತಿದೆ. ಚೀನಾ ಇಂತಹ ಅಪಘಾತಗಳನ್ನು ಈ ಹಿಂದೆಯೂ ಮಾಡಿಸಿದೆ ಎಂಬುದರಲ್ಲಿ ಸಂದೇಹವಿಲ್ಲ.
೩. ಟಿಬೇಟ್‍ನಲ್ಲಿ ಸರೋವರದ ಆಣೆಕಟ್ಟು ಒಡೆದು ಹಿಮಾಚಲ ಪ್ರದೇಶದಲ್ಲಿ ನೆರೆಹಾವಳಿಯ ಸ್ಥಿತಿ ಉದ್ಭವಿಸಿತ್ತು
ಹಿಮಾಚಲ ಪ್ರದೇಶದ ಎತ್ತರದ ಪ್ರದೇಶದಲ್ಲಿರುವ ಟಿಬೇಟ್‍ನಿಂದ ಅನೇಕ ನದಿಗಳು ಉಗಮವಾಗುತ್ತವೆ. ೨೦೦೫ ರಲ್ಲಿ ಟಿಬೇಟ್‍ನ ಪಾರಛೂ ಸರೋವರದಲ್ಲಿ ಹೊರಗಿನಿಂದ ಬರುವ ಪ್ರವಾಹದ ವೇಗವು ಅನಿರೀಕ್ಷಿತವಾಗಿ ಹೆಚ್ಚಾಯಿತು. ಸರೋವರದ ಆಕಾರವು ೩೪ ಹೆಕ್ಟರ್ ಇರುವುದು ೧೦೦ ಹೆಕ್ಟರ್‍ನ ವರೆಗೆ ಹೆಚ್ಚಾಯಿತು. ನೀರಿನ ಪ್ರವಾಹ ಕಡಿಮೆಯಾಗದಿರುವುದರಿಂದ ಸರೋವರದ ನೀರಿನ ಮಟ್ಟ ಹೆಚ್ಚಾಯಿತು. ಆದ್ದರಿಂದ ಅನಿರೀಕ್ಷಿತವಾಗಿ ಸರೋವರದ ಆಣೆಕಟ್ಟು ಒಡೆಯಿತು ಹಾಗೂ ಹಿಮಾಚಲ ಪ್ರದೇಶದಲ್ಲಿ ಹಾಹಾಕಾರವೆದ್ದಿತು. ಈ ಪ್ರಕರಣದ ವಿಷಯದಲ್ಲಿ ಚರ್ಚೆಗಾಗಿ ಹೋಗಿದ್ದ ಭಾರತೀಯ ನಿಯೋಗಕ್ಕೆ ಸರೋವರದ ವಿಷಯದ ಎಲ್ಲ ಮಾಹಿತಿಯನ್ನು ಮುಂದೆ ನೀಡುತ್ತೇವೆ ಎಂದು ಚೀನಾ ಆಶ್ವಾಸನೆ ನೀಡಿತ್ತು; ಆದರೆ ಚೀನಾ ಅದನ್ನು ಪಾಲಿಸಲಿಲ್ಲ. ಟಿಬೇಟ್‍ನಲ್ಲಿ ಹರಿಯುವ ಪಾರಛೂ ನದಿಯಲ್ಲಿ ೨೦೦೪ ರಲ್ಲಿ ಆಗಿರುವ ಭೂಕುಸಿತದಿಂದ ಈ ಸರೋವರ ನಿರ್ಮಾಣವಾಗಿತ್ತು.
೪. ೨೦೦೩ ರಲ್ಲಿ ಉತ್ತರಾಖಂಡದಲ್ಲಿ ನಡೆದಿರುವ ಮೇಘಸ್ಫೋಟದ ಹಿಂದೆ ಚೀನಾದ ಕೈವಾಡವಿರುವ ಸಾಧ್ಯತೆ ?
೨೦೦೩ ರಲ್ಲಿ ಉತ್ತರಾಖಂಡದಲ್ಲಿ ಘಟಿಸಿದ ನೈಸರ್ಗಿಕ ವಿಕೋಪದ ನಂತರ ಎಲ್ಲೆಡೆ ಹಾಹಾಕಾರವೆದ್ದಿತ್ತು. ಮೇಘಸ್ಫೋಟ ಆಗಿರುವುದರಿಂದ ಸಹಾಯಕಾರ್ಯದಲ್ಲಿ ಅಡ್ಡಿಯಾಗಿತ್ತು. ಮೋಡಗಳು ಸತತ ತುಂಬಿ ಬಂದಿರುವುದರಿಂದ ಮೋಡದಿಂದಾಗಿ ಸುತ್ತಮುತ್ತಲಿನ ಪ್ರದೇಶ ಕಾಣಿಸದಂತಾಯಿತು. ಮಳೆಯಿಂದಾಗಿ ನದಿಗಳು ತುಂಬಿ ಹರಿಯಲಾರಂಭಿಸಿದವು. ರಸ್ತೆಗಳು ಕುಸಿದವು, ಸೇತುವೆಗಳು ಕೊಚ್ಚಿ ಹೋದವು ಹಾಗೂ ಸಾವಿರಾರು ಜನರು ಮೃತಪಟ್ಟರು. ಬಂಡೆಗಳ ಅಡಿಗೆ ಬಿದ್ದು ಮತ್ತು ಮಣ್ಣಿನ ರಾಶಿಯ ಕೆಳಗೆ ಸಿಲುಕಿದವರನ್ನು ರಕ್ಷಿಸಬೇಕಾಗಿತ್ತು. ಈ ಪ್ರಕೋಪವು ಚೀನಾದಿಂದ ಆಗಿರಬಹುದೇ ? ಒಂದು ವರ್ತಮಾನಪತ್ರಿಕೆ ‘ಚೀನಾವು ಕ್ಲೌಡ್ ಸಿಡಿಂಗ್’ (ಕೃತಕ ಮಳೆ ಬೀಳಿಸುವುದು) ಮಾಡಿರುವುದರಿಂದ ಹೀಗಾಗಿರಬಹುದು’, ಎನ್ನುವ ಸಂಶಯವನ್ನು ವ್ಯಕ್ತಪಡಿಸಿತ್ತು. ಭಾರತದಲ್ಲಿ ಇಂತಹ ದೃಷ್ಟಿಕೋನದಿಂದ ಹೆಚ್ಚಿನ ವಿಚಾರಣೆಯನ್ನು ಮಾಡಿಲ್ಲ. ಚೀನಾ ಯಾವಾಗಲೂ ಟಿಬೇಟ್ ಅಥವಾ ಗಡಿಪ್ರದೇಶದಲ್ಲಿ ಇಂತಹ ಪ್ರಯೋಗಗಳನ್ನು ಮಾಡುತ್ತಿರುತ್ತದೆ. ಈ ಪ್ರಯೋಗದಿಂದ ಅನಿರೀಕ್ಷಿತ ನೆರೆ ಬಂದರೆ ಭಾರತಕ್ಕೆ ಹಾನಿಯಾಗಬಲ್ಲದು, ಎನ್ನುವುದು ಇದರ ಹಿಂದಿನ ಉದ್ದೇಶವಿರುತ್ತದೆ.
೫. ಚೀನಾದ ಬ್ರಹ್ಮಪುತ್ರಾ ನದಿಯ ಆಣೆಕಟ್ಟುಗಳ ನೀರನ್ನು ಒಮ್ಮೆಲೆ ಬಿಟ್ಟರೆ, ಏನಾಗಬಹುದು ಎಂಬುದರ ಬಗ್ಗೆ ಇದು ಪರೀಕ್ಷಣೆಯಲ್ಲವಲ್ಲ ?
ಬ್ರಹ್ಮಪುತ್ರ ನದಿಯು ಚೀನಾದಲ್ಲಿ ಉಗಮವಾಗುತ್ತದೆ. ಅಲ್ಲಿ ಅದಕ್ಕೆ ‘ಯಾರಲಾಂಗ ಸ್ತಾಂಗಪೋ’ ಎಂದು ಹೇಳುತ್ತಾರೆ. ಅದು ೮೦೦ ರಿಂದ ೯೦೦ ಕಿಲೋಮೀಟರ್‍ನಷ್ಟು ಪ್ರವಾಸ ಮಾಡಿ ಒಂದು ಪರ್ವತವನ್ನು ಸುತ್ತುವರಿದು ಭಾರತದೊಳಗೆ ಪ್ರವೇಶಿಸುತ್ತದೆ. ಅರುಣಾಚಲ ಪ್ರದೇಶದಲ್ಲಿ ಈ ನದಿಗೆ ‘ಸಿಯಾಂಗ ನದಿ’ ಎಂದು ಹೇಳುತ್ತಾರೆ. ಅದು ಅಸಾಮ್‍ನ ಸಮತಟ್ಟಾದ ಪ್ರದೇಶದಲ್ಲಿ ಹರಿಯುವಾಗ ಅದಕ್ಕೆ ಬ್ರಹ್ಮಪುತ್ರಾ ಎಂದು ಕರೆಯುತ್ತಾರೆ. ಚೀನಾ ಈ ನದಿಗೆ ಆಣೆಕಟ್ಟು ಕಟ್ಟುತ್ತಿದೆಯೆಂಬ ವಾರ್ತೆ ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಬ್ರಹ್ಮಪುತ್ರಾದ ತಿರುವಿನಲ್ಲಿ ದೊಡ್ಡ ಆಣೆಕಟ್ಟನ್ನು ಕಟ್ಟಿದರೆ, ಅದು ಈಶಾನ್ಯ ಭಾರತದ ತಲೆಯ ಮೇಲೆ ತೂಗುಕತ್ತಿಯಾಗಬಹುದು. ವಿಶ್ವಾಸದ್ರೋಹಿ ಚೀನಾವು ಭಾರತದ ಮೇಲೆ ಕುತಂತ್ರ ಮಾಡಲು ಆಣೆಕಟ್ಟಿನ ನೀರನ್ನು ಒಮ್ಮೆಲೆ ಬಿಡಬಹುದು ಎಂಬ ಸಾಧ್ಯತೆಯನ್ನು ಸಹ ಅಲ್ಲಗಳೆಯುವಂತಿಲ್ಲ, ಇದರಿಂದ, ಭವಿಷ್ಯದಲ್ಲಿ ಈ ನೀರಿನ ಪ್ರವಾಹದಿಂದ ಅರುಣಾಚಲ ಪ್ರದೇಶ ಮತ್ತು ಅಸಾಮ್ ಇವುಗಳ ಹೆಚ್ಚಿನ ಭಾಗಗಳಿಗೆ ದೊಡ್ಡ ಅಪಾಯವಾಗಬಹುದು ಎಂದು ತಜ್ಞರು ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಚೀನಾ ಸಿಯಾಂಗ ನದಿಯ ನೀರನ್ನು ಎರಡು ದಿನ ತಡೆÀಗಟ್ಟಿ ಇಟ್ಟಿರುವ ಘಟನೆ ಘಟಿಸಿದೆ. ಆದ್ದರಿಂದ ಚೀನಾದ ಮೇಲೆ ಕಣ್ಗಾವಲನ್ನು ಹೆಚ್ಚಿಸುವ ಅವಶ್ಯಕತೆಯಿದೆ.
೬. ಭಾರತೀಯ ಸೈನ್ಯ ಉಪಯೋಗಿಸುತ್ತಿದ್ದ ಏಕೈಕ ಸೇತುವೆಯು ಕೊಚ್ಚಿಕೊಂಡು ಹೋಗುವುದು ಮತ್ತು ಸೈನ್ಯ ಅದನ್ನು ತಕ್ಷಣ ಪುನರ್ನಿರ್ಮಾಣ ಮಾಡುವುದು
ಈ ಹಿಮಗಡ್ಡೆಯನ್ನು ಬೀಳಿಸಲು ಚೀನಾ ಕ್ಷಿಪಣಿಗಳನ್ನು ಉಪಯೋಗಿಸಿರಬಹುದು. ಇಂತಹ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧವಾಗುತ್ತಿವೆ. ಈ ಘಟನೆಯಲ್ಲಿ ಗಡಿಪ್ರದೇಶದ ರಸ್ತೆಗಳಲ್ಲಿ ಏಕೈಕ ಸೇತುವೆ ನೆರೆಯಲ್ಲಿ ಕೊಚ್ಚಿಕೊಂಡು ಹೋಯಿತು. ಭಾರತೀಯ ಸೈನ್ಯವು ಗಡಿಪ್ರದೇಶಕ್ಕೆ ಹೋಗಲು ಈ ಸೇತುವೆಯನ್ನು ಉಪಯೋಗಿಸುತ್ತಿತ್ತು. ಗಡಿಪ್ರದೇಶದಲ್ಲಿ ಚೀನಾದ ಅತಿಕ್ರಮಣಕ್ಕೆ ಪ್ರತ್ಯುತ್ತರ ನೀಡುವ ಭಾರತೀಯ ಸೈನ್ಯದ ಚಲನವಲನವನ್ನು ಸ್ವಲ್ಪ ಸಮಯ ನಿಲ್ಲಿಸುವುದೇ ಚೀನಾದ ಉದ್ದೇಶವಾಗಿರಬಹುದು. ಅಂದರೆ ಭಾರತೀಯ ಸೈನ್ಯದ ಅಭಿಯಂತರು ಈ ಸೇತುವೆಯನ್ನು ತಕ್ಷಣ ಪುನರ್ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ಚೀನಾ ಏನಾದರೂ ಸೈನಿಕ ಕಾರ್ಯಾಚರಣೆ ಮಾಡಿದರೂ ಭಾರತೀಯ ಸೈನ್ಯ ಸಿದ್ಧವಾಗಿದೆ.
೭. ಹಿಮಗಡ್ಡೆಯ ಈ ದುರ್ಘಟನೆಯಿಂದಾಗಿ ಪರಿಸರವಾದಿಗಳ ವಿರೋಧದಿಂದ ಅಲ್ಲಿನ ಅಭಿವೃದ್ಧಿ ಕಾರ್ಯದಲ್ಲಿ ಅಡ್ಡಿಯಾಗಬಹುದು
ಹಿಮಗಡ್ಡೆ ಕುಸಿದು ಆಗಿರುವ ಅಪಘಾತವನ್ನು ಚೀನಾ ಮಾಡಿರಬಹುದು, ಎಂದು ಅನಿಸುತ್ತದೆ. ಚೀನಾ ಹೀಗೇಕೆ ಮಾಡುತ್ತದೆ ? ಇದರಿಂದ ಪರಿಸರವಾದಿಗಳಿಗೆ ಪ್ರೋತ್ಸಾಹ ಸಿಗುವುದು ಹಾಗೂ ಅವರು ಬೊಬ್ಬೆ ಹೊಡೆಯಲು ಆರಂಭಿಸುವರು. ಈ ಪ್ರದೇಶದಲ್ಲಿರುವ ಆಣೆಕಟ್ಟುಗಳು ಮತ್ತು ಇತರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ, ಅದನ್ನು ನಿಲ್ಲಿಸಲಾಗುವುದು. ಅದರಿಂದ ಈ ಘಟನೆಯ ಬಗ್ಗೆ ಕೂಲಕಂಷ ತನಿಖೆ ಮಾಡಬೇಕು. ಚೀನಾ ಭಾರತದ ವಿರುದ್ಧ ಪರಿಸರ ಯುದ್ಧವನ್ನು ಆರಂಭಿಸಿದ್ದರೆ, ನಾವು ಕೂಡ ಅದಕ್ಕೆ ತಕ್ಷಣ ಪ್ರತ್ಯುತ್ತರ ನೀಡಲು ಸಿದ್ಧವಾಗಿರುವ ಅವಶ್ಯಕತೆಯಿದೆ.
– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ.