ಭಾರತವು ಇತರ ದೇಶಗಳಿಗೆ ಕೊರೋನಾ ಲಸಿಕೆ ದಾನ ಅಥವಾ ಮಾರಾಟ ಮಾಡುತ್ತಿದೆ; ಆದರೆ ದೇಶದ ನಾಗರಿಕರು ಅದರಿಂದ ವಂಚಿತರಾಗಿದ್ದಾರೆ! – ದೆಹಲಿ ಉಚ್ಚ ನ್ಯಾಯಾಲಯ

ಸೀರಮ್ ಇನ್‌ಸ್ಟಿಟ್ಯೂಟ್ ಮತ್ತು ಭಾರತ ಬಯೋಟೆಕ್‌ಗೆ ಉತ್ಪಾದನಾ ಸಾಮರ್ಥ್ಯವನ್ನು ಬಹಿರಂಗಪಡಿಸುವಂತೆ ಆದೇಶ

ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್ ಮತ್ತು ಭಾರತ ಬಯೋಟೆಕ್ ಹೆಚ್ಚಿನ ಸಂಖ್ಯೆಯ ಲಸಿಕೆಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿವೆ; ಆದಾಗ್ಯೂ, ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿಲ್ಲ ಎಂದು ತೋರುತ್ತದೆ. ನಾವು ಇತರ ದೇಶಗಳಿಗೆ ಲಸಿಕೆಗಳನ್ನು ದಾನ ಮಾಡುತ್ತಿದ್ದೇವೆ ಅಥವಾ ಮಾರಾಟ ಮಾಡುತ್ತಿದ್ದೇವೆ; ಆದರೆ, ಭಾರತದಲ್ಲಿ ಸಾಕಷ್ಟು ಲಸಿಕೆಗಳನ್ನು ನೀಡಲಾಗುತ್ತಿಲ್ಲ. ಈ ವಿಷಯದಲ್ಲಿ ಜವಾಬ್ದಾರಿ ಮತ್ತು ಸನ್ನದ್ಧತೆಯ ಭಾವನೆ ಇರಬೇಕು ಎಂದು ದೆಹಲಿ ಬಾರ್ ಅಸೋಸಿಯೇಷನ್ ​​ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ದೆಹಲಿ ಉಚ್ಚ ನ್ಯಾಯಾಲಯ ಹೇಳಿದೆ. ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿಗೆ ಲಸಿಕೆ ಹಾಕಲು ಆದ್ಯತೆಯ ನೀಡಬೇಕು ಎಂದು ಈ ಅಸೋಸಿಯೇಷನ್ ಒತ್ತಾಯಿಸಿದೆ.

೧. ಕೊರೋನಾ ಲಸಿಕೆಗಳ ವರ್ಗೀಕರಣದ ಬಗ್ಗೆ ಕಾರಣಗಳನ್ನು ತಿಳಿಸಲು ನ್ಯಾಯಾಲಯ ಕೇಂದ್ರಕ್ಕೆ ನಿರ್ದೇಶನ ನೀಡಿತು. ನ್ಯಾಯಾಲಯವು ಪುಣೆಯ ಸಿರಾಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾಗ್ಯನಗರದ ಭಾರತ ಬಯೋಟೆಕ್‌ಗೆ ಅವರ ಲಸಿಕೆ ಉತ್ಪಾದಿಸುವ ಸಾಮರ್ಥ್ಯದ ಬಗ್ಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿತು. ಕೋವಿಶೀಲ್ಡ್ ಲಸಿಕೆಯನ್ನು ಸೀರಮ್‌ನಿಂದ ಮತ್ತು ಭಾರತ ಬಯೋಟೆಕ್‌ನಿಂದ ಕೊವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

. ಮೊದಲ ಹಂತದಲ್ಲಿ ಕೊರೋನಾ ವಿರುದ್ಧ ಯುದ್ಧದಲ್ಲಿ ಮುಂದಿನ ಸಾಲಿನಲ್ಲಿರುವ ಸಿಬ್ಬಂದಿಗಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಯೋಜಿಸಿದ್ದರೆ, ಎರಡನೇ ಹಂತದಲ್ಲಿ ೬೦ ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮತ್ತು ೪೫ ವರ್ಷಕ್ಕಿಂತ ಮೇಲ್ಪಟ್ಟ ಅನಾರೋಗ್ಯ ಪೀಡಿತರಿಗೆ ಲಸಿಕೆ ನೀಡಲಾಗುತ್ತಿದೆ.