ಮಾರ್ಚ್ – ಎಪ್ರಿಲ್ ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆಯಲಿರುವ ಮಹಾಕುಂಭಪರ್ವದ ಸಂದರ್ಭದಲ್ಲಿ ಸಾಧಕರಿಗೆ ಸೂಚನೆಗಳು

“೧೧.೩.೨೦೨೧ ರಿಂದ ೨೭.೪.೨೦೨೧ ಈ ಕಾಲಾವಧಿಯಲ್ಲಿ ಹರಿದ್ವಾರದಲ್ಲಿ (ಉತ್ತರಾಖಂಡ) ಮಹಾಕುಂಭಪರ್ವವಿದೆ. ಈ ಕಾಲಾವಧಿಯಲ್ಲಿ ಕುಂಭಕ್ಷೇತ್ರದಲ್ಲಿ ಧರ್ಮಪ್ರಸಾರ ಮತ್ತು ‘ಹಿಂದೂ ರಾಷ್ಟ್ರದ ಜಾಗೃತಿ ಅಭಿಯಾನವನ್ನು ವ್ಯಾಪಕ ಸ್ತರದಲ್ಲಿ ಮಾಡಲಿಕ್ಕಿದೆ. ಕುಂಭಪರ್ವದ ಸೇವೆಗೆ ಬರಲಿರುವ ಸಾಧಕರಿಗಾಗಿ ಸೂಚನೆಗಳನ್ನು ಮುಂದೆ ಕೊಡಲಾಗಿದೆ.

ಮಹತ್ವದ ಸೂಚನೆಗಳು

. ಕುಂಭಪರ್ವಕ್ಕೆ  ಬರಲು ಇಚ್ಛಿಸುವ ಸಾಧಕರ ಶಾರೀರಿಕ ಕ್ಷಮತೆ ಉತ್ತಮವಾಗಿರಬೇಕು. ಸಾಮಾನ್ಯವಾಗಿ ೧೬ ವರ್ಷಗಳಿಂದ  ೬೫ ವಯಸ್ಸಿನ ತನಕದ ಸಾಧಕರು ಈ ಸೇವೆಯಲ್ಲಿ ಪಾಲ್ಗೊಳ್ಳಬಹುದು. ಈ ಸೇವೆಯಲ್ಲಿ ಮಧುಮೇಹ, ರಕ್ತದೊತ್ತಡ, ಹೃದ್ರೋಗ ಮತ್ತು ಅಸ್ತಮಾದಂತಹ ದೀರ್ಘಕಾಲೀನ ರೋಗಗಳಿರುವ ಸಾಧಕರು ಭಾಗವಹಿಸಬಾರದು.

ಆ. ಸಾಧಕರು ತಮ್ಮ ಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ವಿವರವಾದ ಮಾಹಿತಿಯನ್ನು ಜಿಲ್ಲಾಸೇವಕರಿಗೆ ಕೊಡಬೇಕು.

. ಕುಂಭಪರ್ವಕ್ಕೆ ಬರುವ ಮೊದಲು ಎಲ್ಲರೂ ತಮ್ಮ ಪ್ರತಿಯೊಂದು ವಸ್ತುವಿನ ಮೇಲೆ, ಉದಾ. ಸಂಚಾರವಾಣಿ, ಚಾರ್ಜರ್, ಪೆನ್, ವಹಿ, ಚಾದರ, ತಲೆದಿಂಬು, ಗಾಳಿಯ ದಿಂಬು (ಏರ್ ಪಿಲ್ಲೋ), ಸ್ವೆಟರ್ ಇತ್ಯಾದಿಗಳ ಮೇಲೆ ತಮ್ಮ ಹೆಸರನ್ನು ಬರೆಯಬೇಕು ಅಥವಾ ಹೆಸರನ್ನು ಅಂಟಿಸಬೇಕು.

ಈ. ಊಟದಲ್ಲಿ ಯಾವುದಾದರೂ ಪಥ್ಯವಿದ್ದರೆ ಅದರ ವಿವರವಾದ ಮಾಹಿತಿಯನ್ನು ನೋಂದಣಿ ಅರ್ಜಿಯಲ್ಲಿ (‘ರಿಜಿಸ್ಟ್ರೇಶನ್ ಫಾರ್ಮ್ನಲ್ಲಿ) ಬರೆಯಬೇಕು.

೨. ಪ್ರವಾಸಕ್ಕೆ ಸಂಬಂಧಿಸಿದ ಸೂಚನೆಗಳು

ಅ. ಹರಿದ್ವಾರ ನಗರದಲ್ಲಿ ಹರಿದ್ವಾರ ರೈಲು ನಿಲ್ದಾಣ (HW), ಮೋತಿಚೂರ ರೈಲು ನಿಲ್ದಾಣ (MOTC), ಜ್ಯಾಲಾಪೂರ ರೈಲು ನಿಲ್ದಾಣ (JWP),  ಹಾಗೆಯೇ ಹೃಷಿಕೇಶ ರೈಲು ನಿಲ್ದಾಣ (RKSH) ಈ ಸ್ಥಳಗಳಲ್ಲಿ ರೈಲು ನಿಲ್ಲುತ್ತದೆ. ಪ್ರತಿಯೊಂದು ರೈಲಿಗೆ ಇವುಗಳ ಪೈಕಿ ಬೇರೆ ಬೇರೆ ನಿಲ್ದಾಣಕ್ಕಾಗಿ ಬೇರೆಬೇರೆ ಸೀಟುಗಳ ಕಾಯ್ದಿರಿಸುವಿಕೆ (ರಿಝರವೇಶನ್) ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಾಧಕರು ಸೀಟು ಕಾಯ್ದಿರಿಸುವಿಕೆಯ ಉಪಲಬ್ಧತೆಯನ್ನು ಗಮನಿಸಿ ಟಿಕೇಟುಗಳನ್ನು ತೆಗೆಯಬೇಕು.

ಆ. ಕೆಲವು ರಾಜ್ಯಗಳಿಂದ ನೇರವಾಗಿ ಹರಿದ್ವಾರಕ್ಕೆ ಹೋಗುವ ರೈಲುಗಳಿಲ್ಲ. ಆದರೆ ದಿಲ್ಲಿಗೆ ಹೋಗುವ ರೈಲುಗಳಿವೆ.  ಇಂತಹ ಸ್ಥಳಗಳ ಸಾಧಕರು ದಿಲ್ಲಿಯ ದೆಹಲಿ (DLI), ನವ ದೆಹಲಿ (NDLS) ಅಥವಾ ಹಜರತ ನಿಜಾಮುದ್ದೀನ (NZM) ವರೆಗೆ ಟಕೇಟ್ ಕಾಯ್ದಿರಿಸಬೇಕು. ಅಲ್ಲಿಂದ ಹರಿದ್ವಾರಕ್ಕಾಗಿ ಮುಂದಿನ ರೈಲ್ವೇ ಪ್ರಯಾಣಕ್ಕೆ ಟಿಕೇಟ್ ಕಾಯ್ದಿರಿಸುವಾಗ ಎರಡೂ ಪ್ರಯಾಣದ ನಡುವೆ ಸಾಕಷ್ಟು ಅವಧಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

ಇ. ಕೊನೆಕ್ಷಣದಲ್ಲಿ ರೈಲಿನ ಟಿಕೀಟು ಸಿಗುವುದು ಕಠಿಣವಾಗಿರುವುದರಿಂದ, ಎಲ್ಲರು ಹೋಗುವ-ಬರುವ ಟಿಕೀಟು ಗಳನ್ನು ‘ಕನ್ಫರ್ಮ(ದೃಢೀಕರಿಸಿ) ಮಾಡಿ ಕೊಳ್ಳಬೇಕು.

ಈ. ರೇಲ್ವೆ ನಿಲ್ದಾಣದಲ್ಲಿ ಸಾಮಾನುಗಳ ಕಳ್ಳತನವಾಗುವ ಸಾಧ್ಯತೆಯಿರುವುದರಿಂದ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಮತ್ತು ತಮ್ಮ ಸಾಮಾನುಗಳ ಮೇಲೆ ಗಮನವನ್ನಿಡಬೇಕು.

ಉ. ಪ್ರವಾಸದಲ್ಲಿ ಸಹಪ್ರಯಾಣಿಕರು ಖಾದ್ಯಪದಾರ್ಥ ಅಥವಾ ಪೇಯವನ್ನು ನೀಡಿದರೆ ಅವುಗಳನ್ನು ಸ್ವೀಕರಿಸಬಾರದು.

. ಪ್ರವಾಸದಲ್ಲಿ ಸಂಚಾರವಾಣಿಯನ್ನು ಹೆಚ್ಚು ಸಮಯ ಉಪಯೋಗಿಸಿದರೆ, ಸಂಚಾರವಾಣಿಯ ‘ಬ್ಯಾಟರಿ ಬೇಗನೆ ‘ಡಿಸ್ಚಾರ್ಜ ಆಗುವುದರಿಂದ ಇತರರನ್ನು ಸಂಪರ್ಕಿಸಲು ತೊಂದರೆಯಾಗುತ್ತದೆ. ಆದುದರಿಂದ ಸಂಚಾರವಾಣಿಯನ್ನು ಆವಶ್ಯಕವಿರುವಷ್ಟೇ ಉಪಯೋಗಿಸಬೇಕು. ಇತ್ತೀಚೆಗೆ ರೈಲಿನಲ್ಲಿ ಸಂಚಾರ ವಾಣಿಯನ್ನು ಚಾರ್ಜ ಮಾಡುವ ಸೌಲಭ್ಯ ಲಭ್ಯವಿರುತ್ತದೆ, ಹಾಗಿದ್ದಲ್ಲಿ ಸಂಚಾರವಾಣಿ ಯನ್ನು ಚಾರ್ಜ ಮಾಡಿಕೊಳ್ಳಬೇಕು.

ಎ . ರೈಲು ನಿಲ್ದಾಣದಲ್ಲಿ ರೈಲಿನ ಕಿಡಕಿಯಿಂದ ಪರ್ಸ ಅಥವಾ ಸಂಚಾರವಾಣಿ ಕಳ್ಳತನವಾಗುವ ಘಟನೆಗಳು ನಡೆಯುತ್ತವೆ. ಆದುದರಿಂದ ಕಿಡಕಿಯ ಹತ್ತಿರದ ಆಸನವಿದ್ದರೆ ಬೆಲೆಬಾಳುವ ವಸ್ತುಗಳನ್ನು ಕಿಡಕಿಯ ಸಮೀಪವಿಡದೆ ದೂರದ ಸ್ಥಳದಲ್ಲಿ ಇಡಬೇಕು. ಹಾಗೆಯೇ ಸಂಚಾರವಾಣಿಯನ್ನು ಜಾಗ್ರತೆಯಿಂದ ಉಪಯೋಗಿಸಬೇಕು.

ಏ. ೧೧ ಮಾರ್ಚ, ೧೨, ೧೪ ಮತ್ತು ೨೭ ಎಪ್ರಿಲ್ ಈ ದಿನಗಳಂದು ಕುಂಭಪರ್ವದ ಮುಖ್ಯ ಅಮೃತಸ್ನಾನ ಇರಲಿದೆ. ಸ್ನಾನದ ಹಿಂದಿನ ದಿನ, ಸ್ನಾನದ ದಿನ  ಮತ್ತು ಮರುದಿನ ಕುಂಭಕ್ಷೇತ್ರದಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ. ಆದುದ ರಿಂದ ಸಾಧಕರು ಈ ದಿನಗಳಲ್ಲಿ ತಮ್ಮ ಬರು-ಹೋಗುವ ನಿಯೋಜನೆಯನ್ನು ಮಾಡಬಾರದು.

೩. ಸೇವೆಗೆ ಬರುವಾಗ ತಮ್ಮೊಂದಿಗೆ ತರಬೇಕಾದ ವಸ್ತುಗಳು

.ತಮ್ಮ ಸರಕಾರಿ ಗುರುತಿನ ಚೀಟಿ, ಉದಾ. ವಾಹನ ನಡೆಸುವ ಪರವಾನಗಿ (ಡ್ರೈವಿಂಗ ಲೈಸೆನ್ಸ್), ಹಾಗೆಯೇ ಆಧಾರಕಾರ್ಡವನ್ನು ತಪ್ಪದೇ ತರಬೇಕು. ಅದರ ಒಂದು ಝೆರಾಕ್ಸ ಪ್ರತಿಯನ್ನು ಮನೆಯಲ್ಲಿ ಇಡಬೇಕು ಮತ್ತು ಇನ್ನೊಂದು ಝೆರಾಕ್ಸ ಪ್ರತಿಯನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು.

ಆ.ಮಾರ್ಚ ತಿಂಗಳ ಮೊದಲ ೨೦ ದಿನಗಳಲ್ಲಿ ತುಂಬಾ ಥಂಡಿ (ಚಳಿ) ಇರುತ್ತದೆ. ಆದುದರಿಂದ ಥಂಡಿಗಾಗಿ ಆವಶ್ಯಕವಿರುವ ಬಟ್ಟೆಗಳನ್ನು, ಉದಾ. ಸ್ವೆಟರ, ಜಾಕೆಟ್, ‘ಸ್ವೆಟ್ ಟಿ-ಶರ್ಟ, ‘ಇನರ, ‘ಹ್ಯಾಂಡ್ ಗ್ಲೌಸ್, ಹತ್ತಿಯ ಕಾಲುಚೀಲ, ಕಿವಿಮುಚ್ಚುವ ಟೊಪ್ಪಿಗೆ ಮುಂತಾದವುಗಳನ್ನು ತರಬೇಕು.

. ನಿಮಗೆ ಬೇಕಾಗುವ ಔಷಧಿಗಳನ್ನು ನಿಮ್ಮ ಜೊತೆಗೆ ತೆಗೆದು ಕೊಂಡು ಬರಬೇಕು. ಪ್ರವಾಸದ ದಿನವನ್ನು ಹಿಡಿದು ಎಷ್ಟು ದಿನಗಳವರೆಗೆ ಸೇವೆಯ ನಿಯೋಜನೆಯಾಗಿದೆಯೋ, ಆ ಕಾಲಾವಧಿ ಯನ್ನು ಹೊರತುಪಡಿಸಿ ಹೆಚ್ಚುವರಿ ೪-೫ ದಿನಗಳ ಹೆಚ್ಚು ಔಷಧಿಗಳನ್ನು ತೆಗೆದುಕೊಂಡು ಬರಬೇಕು.

. ತಮ್ಮೊಂದಿಗೆ ಬೆಲೆಬಾಳುವ ವಸ್ತುಗಳನ್ನು, ಉದಾ. ಬಂಗಾರದ ಆಭರಣ, ಅವಶ್ಯಕತೆಗಿಂತ ಹೆಚ್ಚು ಹಣವನ್ನು ತರಬಾರದು.

೪. ನಿವಾಸದ ಸಂದರ್ಭದಲ್ಲಿ ಸೂಚನೆ

ಅ.ಕುಂಭಪರ್ವಕ್ಕಾಗಿ ಸಾಧಕರ ನಿವಾಸ ವ್ಯವಸ್ಥೆಯನ್ನು ಗಂಗಾ ನದಿಯ ದಡದ ಮರಳಿನಲ್ಲಿ ತಾತ್ಕಾಲಿಕ ಸ್ವರೂಪದ ಬಟ್ಟೆಯ ಡೇರೆಗಳಲ್ಲಿ ಮಾಡಲಾಗುವುದು.

ಆ.ಮಲಗಲು ಮಂಚದ ಬದಲು ‘ಏರ್ ಬ್ಯಾಗ್ ಅಥವಾ ಬ್ಲಾಂಕೆಟ್ ವ್ಯವಸ್ಥೆ ಇರಲಿದೆ.

ಇ. ಪಾಶ್ಚಿಮಾತ್ಯ ಪದ್ಧತಿಯ ಶೌಚಾಲಯಗಳು ಇರುವುದಿಲ್ಲ, ಇದನ್ನು ಗಮನಿಸಬೇಕು.

ಮೇಲಿನ ಸೂಚನೆಗಳ ಬಗ್ಗೆ ಏನಾದರೂ ಸಂಶಯಗಳಿದ್ದರೆ, ಜಿಲ್ಲಾ ಸೇವಕರ ಮಾಧ್ಯಮದಿಂದ ಶ್ರೀ. ಶ್ರೀರಾಮ ಲುಕತುಕೆ ಇವರನ್ನು 7012085184 ಈ ಕ್ರಮಾಂಕದಲ್ಲಿ ಸಂಪರ್ಕಿಸಬೇಕು.

ಕುಂಭಮೇಳದ ಅವಧಿಯಲ್ಲಿ ಧನ ಅಥವಾ ವಸ್ತುಗಳ ಸ್ವರೂಪದಲ್ಲಿ ಅರ್ಪಣೆ ನೀಡುವ ಅಮೂಲ್ಯ ಅವಕಾಶ !

ಈ ಕುಂಭಮೇಳದ ಅವಧಿಯಲ್ಲಿ ‘ಸತ್ಪಾತ್ರೆ ದಾನಮ್ ನಂತೆ ದಾನ ಧರ್ಮವನ್ನು ಮಾಡಿದರೆ ಸಾಧನೆಗಾಗಿ ೧ ಸಾವಿರ ಪಟ್ಟು ಲಾಭವಾಗುತ್ತದೆ. ಈ ಧರ್ಮಪ್ರಸಾರ ಸೇವೆಯಲ್ಲಿ ಭಾರತದಾದ್ಯಂತದ ೧೦೦ ಕ್ಕಿಂತ ಹೆಚ್ಚು ಸಾಧಕರು ಪಾಲ್ಗೊಳ್ಳಲಿದ್ದಾರೆ. ಇವರೆಲ್ಲರ ವಾಸ್ತವ್ಯ, ಭೋಜನ ಮುಂತಾದವುಗಳೊಂದಿಗೆ ಇತರ ಅನೇಕ ವಿಷಯಗಳ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಧನ ಮತ್ತು ವಸ್ತುಗಳ ಆವಶ್ಯಕತೆ ಇದೆ. ಇದಕ್ಕಾಗಿ ಸನಾತನ ಪ್ರಭಾತದ ಅವಾಚಕರು, ಹಿತಚಿಂತಕರು, ಧರ್ಮ ಪ್ರೇಮಿಗಳು, ಹಿಂದುತ್ವ ನಿಷ್ಠರು ಮತ್ತು ಅರ್ಪಣೆದಾರರು ಈ ಧರ್ಮ ಪ್ರಸಾರದ ಕಾರ್ಯದಲ್ಲಿ ಯಥಾಶಕ್ತಿ ದಾನ (ಅರ್ಪಣೆ) ಮಾಡಬೇಕೆಂದು ಕರೆಯನ್ನು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ. ಇದಕ್ಕಾಗಿ ತಾವು ಸನಾತನ ಸಂಸ್ಥೆಯ ಸಾಧಕರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರು, ಹಾಗೆಯೇ ವಾಚಕರು ಸನಾತನ ಪ್ರಭಾತದ ವಿತರಕರೊಂದಿಗೆ ಸಂಪರ್ಕಿಸಬೇಕು. ಕುಂಭಮೇಳದಲ್ಲಿ ಯಾವ ವಸ್ತುಗಳ ಆವಶ್ಯಕತೆ ಇದೆ, ಎಂಬ ಪಟ್ಟಿಯು ಸಂಬಂಧಿತ ಸಾಧಕರಿಂದ ತಮಗೆ ದೊರಕಬಹುದು.

ಜಿಲ್ಲಾ ಸೇವಕರಿಗೆ ಸೂಚನೆ

೧. ಕುಂಭಕ್ಷೇತ್ರದಲ್ಲಿ ಧೂಳಿನ ಪ್ರಮಾಣ ಹೆಚ್ಚಿರುವುದರಿಂದ ಈ ಸೇವೆಗಾಗಿ ಥಂಡಿಯಿಂದ (ಚಳಿಯಿಂದ) ಹೆಚ್ಚಾಗುವ ರೋಗಗಳು (ಉದಾ. ಹಳೆಯ ನೆಗಡಿ, ದಮ್ಮು) ಇರುವ ಸಾಧಕರ ನಿಯೋಜನೆಯನ್ನು ಮಾಡಬಾರದು.

೨. ತೀವ್ರ ಆಧ್ಯಾತ್ಮಿಕ ತೊಂದರೆಯಿದ್ದು, ತೊಂದರೆಯ ಪ್ರಕಟೀಕರಣವಾಗುವ, ಹಾಗೆಯೇ ತೀವ್ರ ಶಾರೀರಿಕ ತೊಂದರೆಗಳಿರುವ ಸಾಧಕರನ್ನು ಕುಂಭಸೇವೆಗೆ ಕಳುಹಿಸುವ ನಿಯೋಜನೆಯನ್ನು ಮಾಡಬಾರದು.