ಕರೋನಾ ಸಾಂಕ್ರಾಮಿಕ ರೋಗವು ಕಳೆದ ಒಂದು ವರ್ಷದಿಂದ ವಿಶ್ವದಾದ್ಯಂತ ಉಲ್ಬಣಗೊಂಡಿದೆ. ಈ ವೈರಸ್ ಚೀನಾದ ವ್ಯೂಹಾನ್ ಪ್ರಾಂತ್ಯದಲ್ಲಿ ಹುಟ್ಟಿಕೊಂಡಿತು ಮತ್ತು ಇದು ಚೀನಾದ ವೈರಸ್ ಎಂದು ಅನೇಕ ತಜ್ಞರು ಹೇಳಿದ್ದಾರೆ. ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಈ ಮಾನವೀಯ ಬಿಕ್ಕಟ್ಟನ್ನು ನಿಭಾಯಿಸುವುದು ನಮ್ಮ ಮುಂದಿರುವ ಏಕೈಕ ಆಯ್ಕೆಯಾಗಿದೆ. ಈ ಸಂಬಂಧ, ಕೆಲವು ದೇಶಗಳು ಕರೋನಾವನ್ನು ಸೋಲಿಸಲು ಕರೋನಾ ಲಸಿಕೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಕೈಗೊಂಡವು ಮತ್ತು ಈಗ ಲಸಿಕೆ ಜಾಗತಿಕವಾಗಿ ಲಕ್ಷಾಂತರ ಜನರವರೆಗೆ ತಲುಪಿದೆ ! ಲಸಿಕೆ ಪಡೆಯಲು ಅನೇಕ ದೇಶಗಳು ಇತರ ದೇಶಗಳಿಗೆ ಸಹಾಯ ಕೇಳಿವೆ. ಸಮರ್ಥ ರಾಷ್ಟ್ರಗಳು ಸಹ ಇಂತಹ ಸಹಾಯವನ್ನು ನೀಡಲು ಪ್ರಾರಂಭಿಸಿವೆ. ಇಡೀ ಜಗತ್ತಿಗೆ ಸಹಾಯ ಮಾಡುವಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂಬುದು ಹೆಮ್ಮೆಯ ವಿಷಯ.
ವಸುಧೈವ ಕುಟುಂಬಕಮ್
ಈ ಲಸಿಕೆಯನ್ನು ದೇಶದ ೫೪ ಲಕ್ಷಕ್ಕೂ ಹೆಚ್ಚು ಜನರಿಗೆ ನೀಡಲಾಗಿದ್ದು, ಭಾರತವು ಅಂದಾಜು ಒಂದೂವರೆ ಕೋಟಿ ಡೋಸ್ ಲಸಿಕೆಯನ್ನು ವಿವಿಧ ದೇಶಗಳಿಗೆ ಪೂರೈಸಿದೆ. ಈವರೆಗೆ ೫೬ ಲಕ್ಷ ಲಸಿಕೆಗಳನ್ನು ಉಡುಗೊರೆಯಾಗಿ ಕಳುಹಿಸಲಾಗಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ ಶ್ರೀವಾಸ್ತವ ಅವರ ಇತ್ತೀಚಿನ ವರದಿಯ ಪ್ರಕಾರ, ಭಾರತವು ಈ ಲಸಿಕೆಯನ್ನು ಭೂತಾನ್, ಮಾಲ್ದೀವ್ಸ್, ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಸೆಶೆಲ್ಸ್, ಶ್ರೀಲಂಕಾ, ಮಾರಿಶಸ್ ಈ ನೆರೆಯ ಮತ್ತು ಹತ್ತಿರದ ರಾಷ್ಟ್ರಗಳ ಜೊತೆಗೆ ನಿಕಾರಾಗುವಾ, ಮಂಗೋಲಿಯಾಗಳಿಗೂ ಲಸಿಕೆಯನ್ನು ಉಡುಗೊರೆಯಾಗಿ ಕಳುಹಿಸುತ್ತಿದೆ. ಇದು ಮಧ್ಯ ಅಮೆರಿಕ ಕ್ಷೇತ್ರದಲ್ಲಿರುವ ಬಾರ್ಬಾಡಾಸ್, ಬಹಾಮಾಸ್, ಗಯಾನಾ ಇತ್ಯಾದಿ ೨೦ ಕೆರಿಬಿಯನ್ ದೇಶಗಳು ಅದೇ ರೀತಿ ನ್ಯೂಸಿಲೆಂಡ್, ಫಿಜಿ, ಫ್ರೆಂಚ್ ಪಾಲಿನೇಷ್ಯಾ ಮತ್ತು ದ ಮಾರ್ಶಲ್ ಐಲ್ಯಾಂಡ್ಸ್ ಸೇರಿದಂತೆ ೧೫ ಪೆಸಿಫಿಕ್ ಮಹಾಸಾಗರದಲ್ಲಿರುವ ದ್ವೀಪ ರಾಷ್ಟ್ರಗಳು ಸೇರಿವೆ. ಇದಲ್ಲದೆ, ಲಸಿಕೆಯ ೧ ಕೋಟಿಗೂ ಹೆಚ್ಚಿನ ಪ್ರಮಾಣವನ್ನು ಭಾರತದಿಂದ ಬ್ರಾಜಿಲ್, ಮೊರಕ್ಕೋ, ಸಂಯುಕ್ತ ಅರಬ್ ಎಮಿರೇಟ್ಸ್, ಓಮಾನ್, ಈಜಿಪ್ಟ್, ಅಲ್ಜೀರಿಯಾ, ಕುವೈತ್ ಮತ್ತು ದಕ್ಷಿಣ ಆಫ್ರಿಕಾಗಳಿಗೆ ವಾಣಿಜ್ಯಿಕವಾಗಿ ರಫ್ತು ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಭಾರತವು ಉದಾರಹಸ್ತದಿಂದ ಮಾಡಿದ ಈ ಸಹಾಯಕ್ಕಾಗಿ ಅನೇಕ ದೇಶಗಳ ರಾಷ್ಟ್ರಾಧ್ಯಕ್ಷರು ಸ್ವಾಗತಿಸಿದ್ದಾರೆ. ಇದಕ್ಕಾಗಿ ಬ್ರಾಜಿಲ್ ರಾಷ್ಟ್ರಪತಿ ಜೈರ್ ಬೋಲಸೊನಾರೋ ಅವರು ಭಾರತಕ್ಕೆ ಧನ್ಯವಾದ ಅರ್ಪಿಸುವಾಗ ಶ್ರೀ ಹನುಮಂತನು ಕೈಯಲ್ಲಿ ಸಂಜೀವಿನಿ ಇರುವ ಬೆಟ್ಟ ಹಿಡಿದುಕೊಂಡು ಭಾರತದಿಂದ ಬ್ರಾಜಿಲ್‌ಗೆ ಬರುತ್ತಿದೆ ಎಂದು ತೋರಿಸಿದ್ದಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಲ್ಲಿರುವ ಬುದ್ಧಿಜೀವಿಗಳು ಭಾರತವು ಔಷಧೀಯ ನಿರ್ಮಿತಿ ವಿಷಯದಲ್ಲಿ ಮುಂಚೂಣಿಯಲ್ಲಿರುವ ದೇಶವಾಗಿದೆ. ಆದ್ದರಿಂದ ಎಲ್ಲರಿಗೂ ಲಸಿಕೆಗಳನ್ನು ನೀಡುವಲ್ಲಿ ಏನು ವಿಶೇಷವಿದೆ ! ಎಂದು ಹೇಳಬಹುದು. ಇಲ್ಲಿ ಒಂದು ವಿಷಯವನ್ನು ನೀವು ಮರೆಯಬಾರದು. ಆರೋಗ್ಯ ಸೌಲಭ್ಯಗಳ ವಿಷಯದಲ್ಲಿ ವಿಷಾಣುಗಳಿಂದ ಜಗತ್ತಿನಲ್ಲಿ ಅತ್ಯಧಿಕ ತೊಂದರೆಗೀಡಾದ ದೇಶಗಳ ಪೈಕಿ ನಮ್ಮ ದೇಶವೂ ಒಂದಾಗಿದೆ. ತನ್ನ ನಾಗರಿಕರಿಗೆ ಸುರಕ್ಷಿತ ಜೀವನವನ್ನು ಒದಗಿಸುವ ಭಾರತದ ಸಾಮರ್ಥ್ಯವು ಅನೇಕ ಪಾಶ್ಚಿಮಾತ್ಯ ದೇಶಗಳಿಗಿಂತ ತೀರಾ ಕಡಿಮೆ ಇದೆ. ಅಲ್ಲದೆ ೧೩೫ ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೃಹತ್ ರಾಷ್ಟ್ರವಾಗಿದ್ದರೂ, ಇದು ಇತರ ರಾಷ್ಟ್ರಗಳಿಗೆ ಸಹಾಯ ಮಾಡುತ್ತದೆ, ಇದರಲ್ಲಿಯೇ ಎಲ್ಲವೂ ಇದೆ. ಅದಕ್ಕಾಗಿಯೇ ಭಾರತವು ಈ ಮಾಧ್ಯಮದಿಂದ ಹಿಂದೂ ಧರ್ಮದ ಬೋಧನೆಯನ್ನು ಜಗತ್ತಿನೆದುರು ಕೃತಿಯಿಂದ ತೋರಿಸಿ ಆದರ್ಶವನ್ನು ಸ್ಥಾಪಿಸಿದೆ. ವಸುಧೈವ ಕುಟುಂಬಕಮ್. ಅಂದರೆ, ಇಡೀ ಪೃಥ್ವಿಯು ಒಂದೇ ಕುಟುಂಬ, ಪ್ರತಿಯೊಬ್ಬ ಹಿಂದೂ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಅಂತಹ ಮಾನವೀಯತೆಯನ್ನು ಮುಂದಕ್ಕೆ ಸಾಗಿಸುವ ಅವರ ಬೋಧನೆಗಳ ಬಗ್ಗೆ ಹೆಮ್ಮೆ ಪಡಬೇಕು.
ಮಾನವ ಹಕ್ಕುಗಳ ಉಲ್ಲಂಘನೆ !
ಮತ್ತೊಂದೆಡೆ, ಎಲ್ಲಾ ಮನುಕುಲದ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಯತ್ನಿಸುವ ಭಾರತವನ್ನು ವಿಕೃತ ರೀತಿಯಲ್ಲಿ ವಿರೂಪಗೊಳಿಸಲಾಗುತ್ತಿದೆ. ಇಂದು, ಪಾಶ್ಚಾತ್ಯದ ಅನೇಕ ಗಣ್ಯ ವ್ಯಕ್ತಿಗಳು ಮಾನವ ಹಕ್ಕುಗಳ ಹೆಸರು ಹೇಳಿ ಭಾರತವನ್ನು ಆರೋಪಿಗಳ ಪಂಜರದಲ್ಲಿ ಇರಿಸಲು ಪ್ರಯತ್ನಿಸುತ್ತಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನಗಳಿಗೆ ಜಾಗತಿಕ ಬೆಂಬಲ ಸಿಗುತ್ತಿದೆ. ತಮಾಷೆಯೆಂದರೆ, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಕಳಂಕಿತಗೊಳಿಸುವ ಕುತಂತ್ರವಾಗಿದೆ. ಇದು ವ್ಯಾಪಕ ವಾದ ಪಿತೂರಿಯಾಗಿದೆ ಎಂಬುದೂ ಈಗ ಬಯಲಾಗಿದೆ. ಸ್ವೀಡನ್‌ನ ತಥಾಕಥಿತ ಪ್ರಕೃತಿಪ್ರೇಮಿ ಎಂದು ಕರೆಯಲ್ಪಡುವ ಗ್ರೇಟಾ ಥನ್‌ಬರ್ಗ್ ದೆಹಲಿಯಲ್ಲಿ ಚಳವಳಿಯನ್ನು ಬೆಂಬಲಿಸಿ ಟ್ವಿಟರ್‌ನಲ್ಲಿ ಟೂಲ್‌ಕಿಟ್ ಹಂಚಿಕೊಂಡಿದ್ದಾರೆ. ಇದು ಇಡೀ ಭಾರತವಿರೋಧಿ ಪಿತೂರಿಯನ್ನು ಮುನ್ನೆಲೆಗೆ ತಂದಿತು. ಪಿತೂರಿಯ ಮಾಸ್ಟರ್ ಮೈಂಡ್ ಖಲಿಸ್ತಾನಿವಾದಿಗಳಾಗಿದ್ದು, ವಿಶ್ವಪ್ರಸಿದ್ಧ ಪಾಪ್ ಗಾಯಕಿ ಮತ್ತು ನಟಿ ರಿಹಾನಾ ಇವರಿಬ್ಬರು ಅವರು ಹೇಳಿದ್ದಕ್ಕೆ ಭಾರತವಿರೋಧಿ ವಿಷಕಾರಿದರು. ಭಾರತವಿರೋಧಿ ಟ್ವೀಟ್‌ಗಾಗಿ ರಿಹಾನ್ನಾ ಅವರಿಗೆ ೨೫ ಲಕ್ಷ ಅಮೇರಿಕಾ ಡಾಲರ್ ಅಂದರೆ ೧೮ ಕೋಟಿ ಭಾರತೀಯ ರೂಪಾಯಿಗಳನ್ನು ನೀಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ. ರೈತರ ಆಂದೋಲನಕ್ಕೆ ಬೆಂಬಲ ನೀಡುವುದಾಗಿ ರಿಹಾನ್ನಾ ಟ್ವೀಟ್ ಮಾಡಿದ್ದಾರೆ. ಬಾರ್ಬಾಡಾಸ್‌ನ ರಿಹಾನ್ನಾ ಭಾರತವಿರೋಧಿ ಹೇಳಿಕೆಗಳನ್ನು ನೀಡಿದ ಸ್ಥಳದಲ್ಲಿ, ಅದೇ ದೇಶದ ಪ್ರಧಾನಿ ಮಿಯಾನ್ ಅಮೋರ್ ಮೊಟಲರ ಅವರು ಮಾತ್ರ ಭಾರತದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ೧೦ ಲಕ್ಷ ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, “ನಮಗೆ ಅತ್ಯಂತ ಉದಾರವಾಗಿ ಲಸಿಕೆ ಒದಗಿಸಿದ್ದಕ್ಕಾಗಿ ನನ್ನ ಜನರ ಪರವಾಗಿ, ನಿಮ್ಮ ಸರ್ಕಾರ ಮತ್ತು ಜನರಿಗೆ ಧನ್ಯವಾದಗಳು, ಹೇಳಿದ್ದಾರೆ.
ಕೃಷ್ಣನೀತಿಯನ್ನು ಅನುಸರಿಸುವುದು ಆವಶ್ಯಕ !
ಇವೆಲ್ಲಾ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಇನ್ನೊಬ್ಬರ ಹಿತ ಕಾಪಾಡುವವರ ಬೆನ್ನಿಗೆ ಅದೇ ಜನರು ಕತ್ತಿ ಮಸಿಯುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ಇದಕ್ಕಾಗಿ ಭಾರತವು ಇಬ್ಬಗೆಯ ಶಸ್ತ್ರವನ್ನು ಬಳಸುವುದು ಆವಶ್ಯಕವಾಗಿದೆ. ಭಾರತದ ಘನತೆಯನ್ನು ಕುಂದಿಸಲು ಏನಾದರೂ ಪ್ರಕರಣವನ್ನು ಮೇಲೆ ತರುವುದರ ವಿರುದ್ಧ ಭಾರತವು ಕಠಿಣ ನಿಲುವನ್ನು ತಾಳಬೇಕು.
ಭಾರತವಿರೋಧಿ ಅಜೆಂಡಾವನ್ನು ಮುಂದೆ ತರುವವರೊಂದಿಗೆ ಎರಡು ಕೈ ಮಾಡಬೇಕಾಗುವುದು. ಅದಕ್ಕಾಗಿ ಕೃಷ್ಣನೀತಿ ಅವಲಂಬಿಸುವುದು ಆವಶ್ಯಕವಾಗಿದೆ. ಭವಿಷ್ಯದಲ್ಲಿ ಭಾರತ ಯಶಸ್ವಿಯಾಗಲು ಭಾರತಕ್ಕೆ ಸಹಾಯ ಮಾಡುವ ಅದರ ಪಾತ್ರದ ಜೊತೆಗೆ, ಅದು ಕೃಷ್ಣನೀತಿಯ ಶಸ್ತ್ರವನ್ನೂ ಬಳಸಬೇಕಾಗುತ್ತದೆ. ಇದರಿಂದ ಭಾರತವು ಅದರಿಂದ ಹೊರಬಂದು ಹಿಂದೂ ರಾಷ್ಟ್ರದ ಪ್ರಕಾಶಮಾನವಾದ ಮುಂಜಾವನ್ನು ನೋಡಬಹುದು, ಎಂಬುದನ್ನು ಗಮನದಲ್ಲಿಡಿ !