ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ಸನಾತನವು ಹಲವು ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಇಂದು ಜಗತ್ತಿನ ಹೊಸ್ತಿಲಿಗೆ ಬಂದು ನಿಂತಿದೆ. ಅದು ಯಾವುದೇ ಕ್ಷಣದಲ್ಲಿ ಕದತಟ್ಟಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿರುವ ಕೊರೋನಾ ಮಹಾಮಾರಿಯು ಆಪತ್ಕಾಲದಒಂದು ಚಿಕ್ಕ ತುಣುಕಾಗಿದೆಯಷ್ಟೇ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಮಾನವನಿರ್ಮಿತ ಇರಬಹುದು, ನೈಸರ್ಗಿಕ ವಿಪತ್ತುಗಳ ರೂಪದಲ್ಲಿರಬಹುದು, ವಿಭಿನ್ನ ರೂಪಗಳಲ್ಲಿ ಆಪತ್ಕಾಲವು ಬಂದೆರಗಲಿದೆ. ಇವುಗಳಲ್ಲಿ ಕೆಲವನ್ನು ನಾವು ಈ ಲೇಖನಮಾಲೆಯಲ್ಲಿ ನೋಡಲಿದ್ದೇವೆ.ಆಪತ್ಕಾಲದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂಬುದರ ಕುರಿತು ಮಾಹಿತಿಯನ್ನು ನೀಡಲು ಈ ಲೇಖನವು ಪ್ರಯತ್ನಿಸುತ್ತದೆ. ಓದುಗರಿಗೆ ಈ ಮಾಹಿತಿಯ ಲಾಭವಾಗಬೇಕೆಂಬುವುದೇ ಈ ಲೇಖನಮಾಲೆಯನ್ನು ಪ್ರಕಟಿಸುವ ಉದ್ದೇಶವಾಗಿದೆ. ನಿಸ್ಸಂದೇಹವಾಗಿ ಮೂರನೇ ಮಹಾಯುದ್ಧದಲ್ಲಿ ಪರಮಾಣು ಬಾಂಬ್‌ಗಳ ಬಳಕೆಯಾಗಲಿದೆ. ಪರಮಾಣು ಬಾಂಬ್ ಎಂದರೇನು? ಅದರ ತೀವ್ರತೆ ಏನು? ಅದರ ಪರಿಣಾಮಗಳೇನು ಮತ್ತು ಅದರಿಂದ ತಪ್ಪಿಸಿಕೊಳ್ಳಲು ಏನು ಮಾಡಬಹುದು ? ಎಂಬುದರ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.

೧. ಮೂರನೇ ಮಹಾಯುದ್ಧದ ಸ್ವರೂಪ ಮತ್ತು ಅದನ್ನು ಎದುರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು

೧ ಅ. ಬಾಂಬ್ ದಾಳಿ

೧. ಪರಮಾಣು ಬಾಂಬುಗಳು : ಕೋಟ್ಯಂತರ ಯುರೇನಿಯಂ ಅಥವಾ ಪ್ಲುಟೋನಿಯಮ್ ನ್ಯೂಕ್ಲಿಯಸ್‌ಗಳ ಅನಿಯಂತ್ರಿತವಿದಳನದಿಂದ ಕ್ಷಣಾರ್ಧದಲ್ಲಿ ಅಪಾರವಾದ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ‘ಬೈಜಿಕ ವಿದಳನ (ನ್ಯೂಕ್ಲಿಯರ್ ಫಿಷನ್) ಎಂದು ಕರೆಯಲಾಗುತ್ತದೆ. ಪರಮಾಣು ಬಾಂಬ್‌ಅನ್ನು ವಿಮಾನದಿಂದ ಅಥವಾ ಕ್ಷಿಪಣಿಗೆ ಅಳವಡಿಸಿ ಸಿಡಿಸಲಾಗುತ್ತದೆ. (ಆಧಾರ: ಮೈ ಕರಿಯರ್ ಜಾಲತಾಣ)

೧ ಅ ೧. ಪರಮಾಣು ಬಾಂಬ್ ಸ್ಫೋಟದ ಸ್ವರೂಪ

ಅ. ಪರಮಾಣು ಬಾಂಬ್ ಬಿದ್ದಾಗ ಏನಾಗುತ್ತದೆ ?

೧. ಪರಮಾಣು ಬಾಂಬ್ ನೆಲಕ್ಕೆ ಬಹಳ ಹತ್ತಿರದಲ್ಲಿ ಸ್ಫೋಟಗೊಂಡಾಗ, ಪ್ರತ್ಯಕ್ಷ ಸ್ಫೋಟದ ಸಮಯ೦.೧ ಮಿಲಿಸೆಕೆಂಡುಗಳಿಗಿಂತ ಕಡಿಮೆ ಇರುತ್ತದೆ (೧೦೦೦ ಮಿಲಿಸೆಕೆಂಡು ಅಂದರೆ ೧ ಸೆಕೆಂಡ್). ನಂತರ ಅಲ್ಲಿ ೩೦ ಮೀಟರ್ ವ್ಯಾಸ ಮತ್ತು ೩ ಲಕ್ಷ ಡಿಗ್ರಿ ಸೆಲ್ಸಿಯಸ್ ಉಷ್ಣತೆಯ ಬೆಂಕಿಯುಂಡೆ ನಿರ್ಮಾಣವಾಗುತ್ತದೆ. ಇದು ಸೂರ್ಯನ ಶಾಖಕ್ಕಿಂತ ೫೦ ಪಟ್ಟು ಹೆಚ್ಚು ಬಿಸಿಯಾಗಿರುತ್ತದೆ. ಬೆಂಕಿಯುಂಡೆಯು ಕಣ್ಣು ಕುಕ್ಕುವ ಬೆಳಕಿನೊಂದಿಗೆ ವೇಗವಾದ ವಾಯುವಿನೊಂದಿಗೆ ಹರಡುತ್ತದೆ. ಇದನ್ನು ‘ಫೈರ್‌ಬಾಲ್ ಎಂದು ಕರೆಯಲಾಗುತ್ತದೆ. ಇದು ವಿನಾಶಕಾರಿ ವಿಕಿರಣಗಳನ್ನು ಹೊರಸೂಸುತ್ತದೆ.

. ಈ ಫೈರ್‌ಬಾಲ್‌ನ ಗಾತ್ರವು ಕೇವಲ ೨ ಸೆಕೆಂಡುಗಳಲ್ಲಿ ೨ ಕಿಲೋಮೀಟರ್ ಕ್ರಮಿಸುವ ವೇಗದಲ್ಲಿ ಬೆಳೆಯುತ್ತದೆ. ಈ ಸಮಯದಲ್ಲಿ, ನೆಲದ ಮೇಲೆ ವೇಗವಾಗಿ ಚಲಿಸುವ ಗಾಳಿಯಿಂದ ಪ್ರಚಂಡ ಪ್ರಮಾಣದ ವಾಯು ಒತ್ತಡದ ತರಂಗಗಳು(‘ಶಾಕ್ ವೇವ್ಸ್)ನಿರ್ಮಾಣವಾಗುತ್ತವೆ.

೩. ಈ ತರಂಗಗಳ ವೇಗವು ಶಬ್ದದ ವೇಗಕ್ಕಿಂತ ಹೆಚ್ಚಾಗಿದೆ. ಇದರಿಂದಾಗಿ ಸ್ಫೋಟವಾದ ಸ್ಥಳದಿಂದ ಗಂಟೆಗೆ ೧,೬೦೦ ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತದೆ.

೪. ಕಂಪನ ತರಂಗಗಳಿಂದ ಎಸೆಯಲ್ಪಟ್ಟ ‘ಫೈರ್‌ಬಾಲ್ ೩೦ ರಿಂದ ೩೫ ಸೆಕೆಂಡುಗಳಲ್ಲಿ ಅಣಬೆಯ ಆಕಾರವನ್ನು ಪಡೆಯುತ್ತದೆ. ಇದನ್ನು ‘ಮಶ್ರೂಮ್ ಕ್ಲೌಡ್ ಎಂದು ಕರೆಯಲಾಗುತ್ತದೆ. ಫೈರ್‌ಬಾಲ್‌ನೊಂದಿಗೆ ಮೇಲೆ ಹಾರುವ ಸ್ಥಳ ದಲ್ಲಿದ್ದ ವಸ್ತುಗಳು, ಮಣ್ಣು, ಧೂಳು ಇತ್ಯಾದಿ ವಿಕಿರಣದಿಂದ ಕಲುಷಿತಗೊಂಡು ಕೆಳಗೆ ಬೀಳಲು ಪ್ರಾರಂಭಿಸುತ್ತವೆ. ಈ ವಿಕಿರಣ ಸೂಸುವ ಧೂಳನ್ನು ‘ಫಾಲ್ ಔಟ್ ಎಂದು ಕರೆಯಲಾಗುತ್ತದೆ. ಈ ಧೂಳು ಗಾಳಿಯೊಂದಿಗೆಸಾಗಿ ಹಲವಾರು ಚದರ ಕಿಲೋಮೀಟರ್ ಪ್ರದೇಶದಲ್ಲಿ ಬೀಳಬಹುದು. ಈ ಫಾಲ್ ಔಟ್ ಭೂಮಿಗೆ ಬೀಳಲು ೨ ನಿಮಿಷದಿಂದ ೨೪ ಗಂಟೆಗಳವರೆಗೆ ತಗಲಬಹುದು. ಈ ‘ವಿಕಿರಣದ ಅವಧಿಯನ್ನು ಆತ್ಮರಕ್ಷಣೆಗಾಗಿ ಬಳಸಬಹುದು.

೨. ಪರಮಾಣು ಬಾಂಬ್‌ನ ವಿಧ್ವಂಸಕ ಶಕ್ತಿಯನ್ನು ನಿರ್ಧರಿಸುವ ಅಂಶಗಳು

ಪರಮಾಣು ಬಾಂಬ್‌ನ ಗಾತ್ರ, ಸ್ಫೋಟಿಸಿದ ಎತ್ತರ, ಸ್ಫೋಟದ ಸಮಯ, ಸ್ಫೋಟದ ಸಮಯದಲ್ಲಿನ ವಾತಾವರಣ ಮುಂತಾದವುಗಳ ಮೇಲೆ ಅದರ ವಿಧ್ವಂಸಕ ಶಕ್ತಿಅವಲಂಬಿಸಿರುತ್ತದೆ. ಉದಾ. ೧ ಮೆಗಾಟನ್ ಬಾಂಬ್ ಸ್ಫೋಟಗೊಂಡಾಗ ಬೆಂಕಿಯುಂಡೆಯು ೨.೨ ಕಿಲೋಮೀಟರ್ ವ್ಯಾಸವನ್ನು ಹೊಂದಿರುತ್ತದೆ (೧೦ ಮೆಗಾಟನ್ – ೫.೫ ಕಿಲೋಮೀಟರ್ ವ್ಯಾಸ, ೨೦ ಮೆಗಾಟನ್ – ೭.೪ ಕಿಲೋಮೀಟರ್).

೩. ಪರಮಾಣು ಬಾಂಬ್ ಸ್ಫೋಟಿಸುವ ವಿಧಗಳು

ಪರಮಾಣು ಬಾಂಬುಗಳನ್ನು ಈ ಕೆಳಗಿನ ೪ ರೀತಿಯಲ್ಲಿ ಸ್ಫೋಟಿಸಲಾಗುತ್ತದೆ.

. ಭೂಮಿಯಿಂದ೧ ಲಕ್ಷ ಅಡಿವರೆಗೆ ಎತ್ತರದಲ್ಲಿ (ಇದನ್ನು ಏರ್-ಬ್ಲಾಸ್ಟ್ ಎಂದು ಕರೆಯಲಾಗುತ್ತದೆ)

. ಭೂಮಿಯ ಮೇಲೆ ಅಥವಾ ತೀರ ಹತ್ತಿರದಲ್ಲಿ (ಇದನ್ನು ಸರ್ಫೇಸ್-ಬ್ಲಾಸ್ಟ್ ಎಂದು ಕರೆಯಲಾಗುತ್ತದೆ)

೩. ಭೂಗತ

. ನೀರೊಳಗೆ

೪. ಪರಮಾಣು ಬಾಂಬ್ ಸ್ಫೋಟದ ದುಷ್ಪರಿಣಾಮಗಳು

ಅ. ಪರಿಸರದ ಮೇಲಾಗುವ ಪ್ರತಿಕೂಲ ಪರಿಣಾಮಗಳು

೧. ಪರಮಾಣು ಬಾಂಬ್ ಬಿದ್ದ ಸ್ಥಳದಲ್ಲಿ ೦.೮ ಚದರ ಕಿ.ಮೀ ಪ್ರದೇಶದಲ್ಲಿ ಎಲ್ಲವೂ ಆವಿಯಾಗುವುದು : ೧೦ ಕಿಲೋಟನ್‌ಗಳ ಪರಮಾಣು ಬಾಂಬ್ ಬೀಳುವ ಸ್ಥಳದಲ್ಲಿ, ಸುಮಾರು ೦.೮ ಚದರ ಕಿ.ಮೀ ವಿಸ್ತೀರ್ಣ ದಲ್ಲಿರುವ ಎಲ್ಲವೂ ಕ್ಷಣಾರ್ಧದಲ್ಲಿ ಸುಟ್ಟು ಆವಿಯಾಗುತ್ತದೆ. ಈ ಭಾಗವನ್ನು ‘ಹೈಪೋಸೆಂಟರ್ ಎಂದು ಕರೆಯಲಾಗುತ್ತದೆ.

೨. ಭೂಕಂಪಗಳು, ಜೀವಹಾನಿ ಮತ್ತು ಆರ್ಥಿಕ ನಷ್ಟ ಆಗುವುದು : ಪರಮಾಣು ಬಾಂಬ್ ಸ್ಫೋಟದಿಂದ (೧.೭೬ ಕಿಲೋ ಪ್ರತಿ ಚದರ ಸೆಂ.ಮೀ) ರೂಪುಗೊಳ್ಳುತ್ತದೆ ಮತ್ತು ಗಂಟೆಗೆ ೫೧೦ ಕಿಮೀ. ವೇಗಕ್ಕಿಂತ ಹೆಚ್ಚು ವೇಗದ ಬಿರುಗಾಳಿ ಉದ್ಭವಿಸುತ್ತದೆ. ಇದರಿಂದ ಭೂಮಿಯ ಮೇಲ್ಮೈ ಮೇಲೆ ಭೂಕಂಪದ ತರಂಗಗಳು ನಿರ್ಮಾಣವಾಗಿ ೩ ಚದರ ಕಿ.ಮೀ. ವರೆಗೆ ಪ್ರದೇಶ ನಾಶವಾಗಬಹುದು, ೩೦ ಚದರ ಕಿ.ಮೀ. ವರೆಗಿನ ಪ್ರದೇಶದಲ್ಲಿ ಜೀವ ಮತ್ತು ಆಸ್ತಿಪಾಸ್ತಿಗಳು ಹಾನಿಗೊಳಗಾಗಬಹುದು. ಪರಮಾಣು ಬಾಂಬ್‌ನ ಕ್ಷಮತೆಗನುಗುಣವಾಗಿ ವಿಧ್ವಂಸದ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುತ್ತದೆ.

. ಪರಮಾಣು ಬಾಂಬ್ ಬಿದ್ದ ಸ್ಥಳದಲ್ಲಿ ಹಲವಾರುವರ್ಷಗಳ ಕಾಲ ಹುಲ್ಲುಕಡ್ಡಿಯೂ ಬೆಳೆಯುವುದಿಲ್ಲ.

೫. ಮಾನವ ಜೀವನದ ಮೇಲಾಗುವ ಪ್ರತಿಕೂಲ ಪರಿಣಾಮಗಳು

೧. ಅತಿಯಾದ ಉಷ್ಣತೆಯಿಂದ ಬೆಂಕಿ ಉತ್ಪನ್ನವಾಗಿ, ಬೆಂಕಿಯ ಹೊಗೆಯಿಂದ ಆಮ್ಲಜನಕದ ಕೊರತೆಯಾಗುತ್ತದೆ : ‘ಪರಮಾಣು ಬಾಂಬ್ ಸ್ಫೋಟದಿಂದ ೩ ಕಿ.ಮೀ.ಗಿಂತಲೂ ಹೆಚ್ಚು ಪ್ರದೇಶದಲ್ಲಿ ಎಲ್ಲ ದಹ್ಯ ವಸ್ತುಗಳು ಹೊತ್ತಿಕೊಳ್ಳುವುದರಿಂದ ಉತ್ಪನ್ನವಾಗುವ ಭಾರಿ ಪ್ರಮಾಣ ಹೊಗೆಯಿಂದ ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಸಮಯದಲ್ಲಿ ಆಮ್ಲಜನಕದ ಕೊರತೆಯಾಗುತ್ತದೆ ಮತ್ತು ಉಸಿರಾಟ ಕಠಿಣವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಶೇ. ೫೦ ಜನರು ಸಂಪೂರ್ಣವಾಗಿ ಗಾಯಗೊಳ್ಳುತ್ತಾರೆ ಮತ್ತು ಶೇ. ೧೫ ಜನರು ಸಾಯುತ್ತಾರೆ.

೨. ಪರಮಾಣು ಬಾಂಬ್ ಸ್ಫೋಟಗೊಳ್ಳುವುದನ್ನು ನೋಡುವುದರಿಂದ ಕುರುಡಾಗುವುದು : ಪರಮಾಣು ಬಾಂಬ್ ಸ್ಫೋಟಗೊಳ್ಳುವಾಗ ಕಾಣಿಸುವ ತೀಕ್ಷ್ಣ ಪ್ರಕಾಶವನ್ನು ನೋಡುವುದರಿಂದ ಕೆಲವರು ತಾತ್ಕಾಲಿಕ ಅಂಧತೆ ಅನುಭವಿಸಬಹುದು ಮತ್ತು ಕೆಲವರು ಶಾಶ್ವತವಾಗಿ ಕುರುಡರಾಗಬಹುದು.

೩. ವಿಕಿರಣವು ದೇಹದ ಜೀವಕೋಶಗಳನ್ನು ನಾಶಪಡಿಸಬಹುದು, ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ದೈಹಿಕವಾಗಿ ಅಂಗವಿಕಲ ಮಕ್ಕಳು ಜನಿಸುವುದು : ಪರಮಾಣು ಬಾಂಬ್ ಸ್ಫೋಟದಿಂದ ಮತ್ತು ಸ್ಫೋಟದ ನಂತರ ವಿಕಿರಣ ಹೊರಸೂಸುವ ಧೂಳು ಕೆಳಗಿಳಿದಾಗ ಆ ವಿಕಿರಣವು ದೇಹದ ಜೀವಕೋಶಗಳನ್ನು ನಾಶಪಡಿಸುತ್ತದೆ. ವಾಕರಿಕೆ, ವಾಂತಿ, ಅತಿಸಾರದೊಂದಿಗೆ ಕ್ಯಾನ್ಸರ್‌ನಂತಹ ರೋಗಗಳು ಬರಬಹುದು. ಸ್ಫೋಟಗೊಂಡ ಕೆಲವು ನಿಮಿಷಗಳು ಅಥವಾ ಕೆಲವು ಗಂಟೆಗಳು ಅಥವಾ ಕೆಲವು ದಿನಗಳವರೆಗೆ ವಿಕಿರಣವು ಅತ್ಯಧಿಕವಾಗಿರುತ್ತದೆ ಮತ್ತು ಕ್ರಮೇಣ ಕಡಿಮೆಯಾಗಿ ಅದು ಕ್ಷೀಣವಾಗುತ್ತದೆ. ಆದರೂ ಈ ವಿಕಿರಣದ ಪರಿಣಾಮಗಳು ಬೇರೆ ಬೇರೆ ರೂಪದಲ್ಲಿ ಕಾಣಸಿಗುತ್ತವೆ.

ಹಿರೋಷಿಮಾ ಮತ್ತು ನಾಗಾಸಾಕಿಯ ಪರಮಾಣು ಬಾಂಬ್ ಸ್ಫೋಟಗಳ ನಂತರದ ಪರಿಣಾಮಗಳು ಮುಂದಿನ ಹಲವು ವರ್ಷಗಳವರೆಗೆ ಮುಂದುವರಿದವು. ಅನೇಕ ಪೀಳಿಗೆಗಳವರೆಗೆ ಅಲ್ಲಿ ಜನಿಸಿದ ಮಕ್ಕಳು ದೈಹಿಕವಾಗಿ ಅಂಗವಿಕಲರು ಅಥವಾ ರೋಗಪೀಡಿತರಾಗಿದ್ದರು.

ಈ. ಪರಮಾಣು ಬಾಂಬ್ ಸ್ಫೋಟವಾದ ಸ್ಥಳದಲ್ಲಿ ಹಲವು ದಶಕಗಳ ಕಾಲ ಜನಜೀವನ ನಷ್ಟವಾಗುತ್ತದೆ.

ಉ. ಇತರ ದುಷ್ಪರಿಣಾಮಗಳು : ಪರಮಾಣು ಬಾಂಬ್‌ನ ಸಾಮರ್ಥ್ಯಕ್ಕೆ ಅನುಗುಣವಾಗಿ, ಅದು ಸ್ಫೋಟಗೊಂಡ ಸ್ಥಳದಿಂದ ಹಲವಾರು ಕಿಲೋಮೀಟರ್ ದೂರದಲ್ಲಿರುವ ವಿದ್ಯುತ್ ಉಪಕರಣ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯುಂಟು ಮಾಡುತ್ತದೆ. ಇದರಿಂದ ಸಂಪರ್ಕ ಕೊಂಡಿಗಳಲ್ಲಿ ತಾತ್ಕಾಲಿಕ ವ್ಯತ್ಯಯ ಅಥವಾ ಅಡಚಣೆಗಳು ಉಂಟಾಗಬಹುದು.

ಊ. ಎರಡನೇ ಮಹಾಯುದ್ಧದ ಸಮಯದಲ್ಲಿ ಪರಮಾಣು ಬಾಂಬ್ ಸ್ಫೋಟದಿಂದಾದ ಅಪಾರ ಹಾನಿ

೧. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್‌ನ ಹಿರೋಷಿಮಾದಲ್ಲಿ ಅಮೇರಿಕಾ ನಡೆಸಿದ ಪರಮಾಣು ಬಾಂಬ್ ದಾಳಿಯಲ್ಲಿ ಕನಿಷ್ಠ ೧೪೦,೦೦೦ ಜನರು ಮೃತರಾದರೆ, ನಾಗಾಸಾಕಿಯಲ್ಲಿ ೭೪,೦೦೦ ಜನರು ಮೃತಪಟ್ಟರು.

. ಇಲ್ಲಿ ಶೇ. ೭೦ ರಷ್ಟು ಕಟ್ಟಡಗಳು ನಾಶವಾದವು. ಇದರಿಂದ ೨ ತಿಂಗಳ ನಂತರ ಹಿರೋಷಿಮಾದಲ್ಲಿ ಚಂಡಮಾರುತ ಅಪ್ಪಳಿಸಿ ೨,೦೦೦ ಜನರು ಸಾವನ್ನಪ್ಪಿದರು.

ಮೊದಲನೇ ಮತ್ತು ಕೊನೆಯ ಬಾರಿಗೆ ಪರಮಾಣು ಬಾಂಬುಗಳನ್ನು ಬಳಸಿರುವ ಕುಖ್ಯಾತಿ ಅಮೇರಿಕಾಗೆ ಸೇರುತ್ತದೆ. ಇಂದು, ಅನೇಕ ದೇಶಗಳು ಅಂದಿನ ಪರಮಾಣು ಬಾಂಬುಗಳಿಗಿಂತ ಹೆಚ್ಚು ಮಾರಕ ಪರಮಾಣುಬಾಂಬ್ಗಳನ್ನು ಮತ್ತು ಜಲಜನಕ (ಹೈಡ್ರೋಜನ್) ಬಾಂಬ್‌ಗಳನ್ನು ಹೊಂದಿವೆ ಮತ್ತು ಕೆಲವು ದೇಶಗಳು ಪರಮಾಣು ಬಾಂಬ್‌ಗಳನ್ನು ಬಳಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿವೆ. ಈ ಹಿನ್ನೆಲೆಯಲ್ಲಿ, ಪರಮಾಣು ಬಾಂಬ್‌ನ ಬಗ್ಗೆ ಮಾಹಿತಿಯನ್ನು ಪಡೆಯುವ ಮಹತ್ವ ಸ್ಪಷ್ಟವಾಗುತ್ತದೆ.

(ಮುಂದುವರಿಯುವುದು)

ಆಧಾರ : remm.nlm.gov/RemmMockup_files/nuke_timeline.png