ನಿರಪರಾಧಿ ಯುವಕನನ್ನು ಬಂಧಿಸಿದ ಪೋಲೀಸರನ್ನು ಕಾರಾಗೃಹಕ್ಕೆ ತಳ್ಳಿ !

೨೦೧೩ ರಲ್ಲಿ ಸಹೋದ್ಯೋಗಿ ಯುವತಿಯ ಮೇಲೆ ಬಲಾತ್ಕಾರ ಮಾಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತ ತೌದಮ ಜಿಬಲ ಸಿಂಹ ಎಂಬ ಯುವಕನನ್ನು ೮ ವರ್ಷಗಳ ನಂತರ ನಿರಪರಾಧಿಯೆಂದು ಬಿಡುಗಡೆ ಮಾಡಲಾಯಿತು. ಸ್ಥಳೀಯ ನ್ಯಾಯಾಲಯದಲ್ಲಿ ನ್ಯಾಯ ಸಿಗಲು ತಡವಾದುದರಿಂದ ಈ ಯುವಕನಿಗೆ ಕೇವಲ ಆರೋಪಕ್ಕೆ ೮ ವರ್ಷ ಕಾರಾಗೃಹದಲ್ಲಿ ಕಳೆಯಬೇಕಾಯಿತು. ಅದುದರಿಂದ ಈಗ ಮಣಿಪುರದ ಮುಖ್ಯಮಂತ್ರಿ ಎನ್.ಬಿರೆನ್ ಸಿಂಹರು ಈ ಯುವಕನಿಗೆ ಸರಕಾರಿ ಕೆಲಸ ಮತ್ತು ಮನೆ ನೀಡುವುದಾಗಿ ಘೋಷಿಸಿದ್ದಾರೆ.