ಕೊರೋನಾ ಮೇಲಿನ ಉಪಚಾರಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ?
ನವೆಂಬರ್ ೨೦೨೦ ರಲ್ಲಿ ಮುಂಬಯಿಯಲ್ಲಿ ‘Guillain Barre Syndrome (GBS)ನ ೨೪ ಪ್ರಕರಣಗಳು ‘ಕೋವಿಡ್ ಬಂದು ಹೋಗಿರುವ ರೋಗಿಗಳಲ್ಲಿ ಕಂಡು ಬಂದವು. ಈ ರೋಗದಲ್ಲಿ ನಮ್ಮ ಶರೀರದ ರೋಗನಿರೋಧಕ ಶಕ್ತಿಯೇ ನಮ್ಮ ಶರೀರದ ಮೇಲೆಯೇ ಆಘಾತ ಮಾಡಿ ರೋಗಿಯನ್ನು ಪಾರ್ಶ್ವವಾಯುವಿನ ಕಡೆಗೆ ಒಯ್ಯುತ್ತದೆ. ಈ ಅವಸ್ಥೆಗೆ ಹೆಚ್ಚಾಗಿ ಶ್ವಸನಾಂಗವ್ಯೂಹ ಅಥವಾ ಜೀರ್ಣಾಂಗವ್ಯೂಹಕ್ಕೆ ವಿಷಾಣುಗಳ ಸಾಂಕ್ರಾಮಿಕತೆಯು ಕಾರಣವಾಗಿರುತ್ತದೆ. ಇಂತಹ ಅವಸ್ಥೆ ಗಮನಕ್ಕೆ ಬಂದ ತಕ್ಷಣವೇ ಉಪಚಾರ ಮಾಡಿದರೆ ಗುಣಮುಖರಾಗುವ ಪ್ರಮಾಣ ಹೆಚ್ಚುತ್ತದೆ. ಈ ಸುದ್ದಿಯನ್ನು ಓದಿದ ಬಳಿಕ ಸ್ವಾಭಾವಿಕವಾಗಿಯೇ ನಮ್ಮ ಮನಸ್ಸಿನಲ್ಲಿ ಈ ಅವಸ್ಥೆಯು ಕೋವಿಡ್‌ನಿಂದ ಗುಣಮುಖರಾಗಿರುವ ರೋಗಿಗಳಲ್ಲಿ ಕೊರೋನಾ ಸಾಂಕ್ರಾಮಿಕತೆಯಿಂದ ಉದ್ಭವಿಸಿದೆಯೋ ಅಥವಾ ಪರಿಣಾಮಕಾರಿ ಮತ್ತು ಸಮಾಧಾನಕಾರಿ ಇಲ್ಲದ ಉಪಚಾರದಿಂದ ಉದ್ಭವಿಸಿದೆಯೇ ? ಎನ್ನುವ ಪ್ರಶ್ನೆ ಮೂಡುತ್ತದೆ. ಇದರ ಕಾರಣವೆಂದರೆ ಕೋವಿಡ್ ಜನ್ಮಕ್ಕೆ ಬಂದು ಒಂದು ವರ್ಷವಾಯಿತು, ಆದರೆ ಇಂದಿಗೂ ಶೇ. ೧೦೦ ರಷ್ಟು ಸಮರ್ಪಕವಾಗಿ ರೋಗವನ್ನು ಗುರುತಿಸುವ ಪರೀಕ್ಷಣೆ ಅಥವಾ ಉಪಚಾರ ಆಧುನಿಕ ವೈದ್ಯರ ಬಳಿ ಲಭ್ಯವಿಲ್ಲ. ಇನ್ನೊಂದೆಡೆ ‘ಹೈಡ್ರೊಕ್ಸಿಕ್ಲೊರೊಕ್ವಿನ್, ‘ಟೊಸಿಲಿಝುಮಾಬ್, ‘ರೆಮ್‌ಡೆಸೆವಿರ್ ಹಾಗೂ ಸಾರಾಸಗಟು ಉಪಯೋಗಿಸಲಾಗು ತ್ತಿರುವ ವೆಂಟಿಲೇಟರ್‌ಗಳಿಂದ ರೋಗಿಗಳಿಗೆ ಲಾಭವಾಗುವುದಕ್ಕಿಂತ ಹಾನಿಯೇ ಅಧಿಕವಾಗಿರುವ ದಾಖಲೆಗಳ ವಿವರಗಳು ಮೂಟೆ ಗಳಷ್ಟಿವೆ. ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನು ಒಪ್ಪಿಕೊಂಡಿದೆ.
ಒಂದು ಲಸಿಕೆಯ ಸಂದರ್ಭದಲ್ಲಿ ಬಂದ ಕಟು ಅನುಭವ
ನಾವು ಗೋವಾದಲ್ಲಿ ಬಿ.ಎ.ಎಮ್.ಎಸ್. ಕಲಿಯುತ್ತಿರುವಾಗ ಆಗಿನ ಗೋವಾದ ರಾಜ್ಯ ಸರಕಾರವು ಎಲ್ಲ ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ‘ಎಮ್.ಎಮ್.ಆರ್. (MMR) ಲಸಿಕೆಯನ್ನು ಕಡ್ಡಾಯಗೊಳಿಸಿತ್ತು. ಈ ಲಸಿಕೀಕರಣಕ್ಕೆ ಯಾವುದೇ ಆಧಾರ ಇಲ್ಲದೇ ಇರುವುದರಿಂದ ನಮ್ಮಂತಹ ಕೆಲವರು ಇದನ್ನು ವಿರೋಧಿಸಿದ್ದರು; ಆದರೆ ಇದಕ್ಕೆ ಮಣಿಯದೇ ಈ ಲಸಿಕೀಕರಣವನ್ನು ನಮ್ಮ ವಿಶ್ವವಿದ್ಯಾಲಯದ ಸುಮಾರು ೧೦೦ ಹುಡುಗಿಯರಿಗೆ ಕೊಡಲಾಯಿತು. ಅವರಲ್ಲಿ ಶೇ. ೧೦ ರಷ್ಟು ಹುಡುಗಿಯರಲ್ಲಿ ತೀವ್ರ ಜ್ವರ ಮತ್ತು ಶೇ. ೫ ರಷ್ಟು ಹುಡುಗಿಯರಿಗೆ ‘ಮಂಗನ ಬಾವು (ಮಂಪ್ಸ) ವಿನ ಲಕ್ಷಣಗಳಂತಹ ಲಕ್ಷಣಗಳು ಕಂಡುಬಂದವು. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ‘ಮಂಗನ ಬಾವುಬರಬಾರದೆಂದು ನೀಡಲಾದ ಲಸಿಕೆಯಿಂದ ‘ಮಂಗನ ಬಾವಿನ (ಮಂಪ್ಸ) ಲಕ್ಷಣಗಳಂತಹ ಲಕ್ಷಣಗಳು ಉದ್ಭವಿಸಿದ್ದವು. ಇದರಲ್ಲಿ ದೊಡ್ಡ ಆಘಾತಕಾರಿ ವಿಷಯವೆಂದರೆ ನನ್ನ ವರ್ಗ ಸ್ನೇಹಿತೆಯ ಜೀವನವೇ ಇದರಿಂದ ಬದಲಾಯಿತು, ಅವಳು ತನ್ನ ಈ ಕಟು ಅನುಭವವನ್ನು, ತನ್ನ ಹೆಸರನ್ನು ಬಹಿರಂಗಗೊಳಿಸಬಾರದೆನ್ನುವ ಷರತ್ತಿನೊಂದಿಗೆ ಬಹಿರಂಗಪಡಿಸಲು ಒಪ್ಪಿಕೊಂಡಿದ್ದಾಳೆ; ಈ ಲಸಿಕೆ ನೀಡಿದ ರಾತ್ರಿ ಅವಳ ಸೊಂಟದ ಕೆಳಗಿನ ಭಾಗ ಸಂಪೂರ್ಣ ಶಕ್ತಿಹೀನವಾಗಿತ್ತು (ಪ್ಯಾರಾಲಿಸಿಸ್). ತದನಂತರ ಅವಳಿಗಾದ ತೊಂದರೆಗಳನ್ನು ಮತ್ತು ವೇದನೆಗಳನ್ನು ನಾವು ಸ್ವತಃ ನೋಡಿದ್ದೇವೆ. ಇಂದಿಗೂ ಅವಳ ಶಬ್ದಗಳಲ್ಲಿಯೇ ಹೇಳುವುದಾದರೆ ‘ಈ ಘಟನೆಯು ನನ್ನ ಸಂಪೂರ್ಣ ಜೀವನವನ್ನು ಬದಲಾಯಿಸಿತು. ಈ ಸ್ಥಿತಿ ಉದ್ಭವಿಸುವ ಮೊದಲು ಅವಳಿಗೆ ಯಾವುದೇ ರೀತಿಯ ರೋಗಗಳಿರಲಿಲ್ಲ. ಅವಳು ಶಾರೀರಿಕವಾಗಿ ಸಂಪೂರ್ಣ ಆರೋಗ್ಯವಂತಳಾಗಿದ್ದಳು. ಅವಳಿಗೆ ನೀಡಲಾದ ‘ಎಂ.ಎಂ.ಆರ್. ಲಸಿಕೆಯನ್ನು ಕಳೆದ ಕೆಲವು ದಶಕಗಳಿಂದ ‘ಸುರಕ್ಷಿತ ಲಸಿಕೆ ಎಂದೇ ಹೇಳಲಾಗುತ್ತಿದೆ. ಇಷ್ಟೇ ಅಲ್ಲ, ಈ ಲಸಿಕೆಯ ‘ಜಿ.ಬಿ.ಎಸ್. ನೊಂದಿಗೆ ಯಾವುದೇ ಸಂಬಂಧವಿಲ್ಲ, ಎಂದು ವಿವರಿಸುವ ‘ರಿಸರ್ಚ್ ಪೇಪರಗಳು ನೋಡಲು ಸಿಗುತ್ತವೆ; ಆದರೆ ಮೊದಲು ನಮೂದಿಸಿದಂತೆ ‘ಜಿ.ಬಿ.ಎಸ್. ಈ ವಿಷಾಣುಜನ್ಯ ಸಾಂಕ್ರಮಿಕತೆಯಿಂದ ಆಗುತ್ತಿರುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಯಾವ ವಿಷಾಣುಗಳನ್ನು ‘ನಿರ್ಜೀವಗೊಳಿಸಿ ತಯಾರಿಸಲಾಗುತ್ತದೆಯೋ ಆ ಲಸಿಕೆಯಿಂದ ಹೀಗೆ ಆಗಿರ ಬಹುದೆನ್ನುವ ಸಂಶಯವನ್ನು ನಾವು ಹೇಗೆ ತಳ್ಳಿ ಹಾಕಬಹುದು ?
ಕೋವಿಡ್ ಲಸಿಕೆ ವಿಶ್ವಾಸಾರ್ಹವಾಗಿದೆಯೇ ?
ಭಾರತದಲ್ಲಿ ಕೋವಿಡ್ ಲಸಿಕೆಯ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಉತ್ಪಾದಕರು ಸಿದ್ಧಪಡಿಸಿರುವ ಲಸಿಕೆ ‘ಅಡಿನೊವೈರಸ್ನು ಚಿಂಪಾಂಝಿ ಎಂಬ ಹೆಸರಿನ ಕೋತಿಯಲ್ಲಿ ಶೀತವನ್ನು (ನೆಗಡಿಯನ್ನು) ನಿರ್ಮಾಣ ಮಾಡುವ ವಿಷಾಣುಗಳ ಗುಣ ಸೂತ್ರಗಳಲ್ಲಿ (ಜೀನ್ಸಗಳಲ್ಲಿ) ಕೆಲವು ಬದಲಾವಣೆಗಳನ್ನು ಮಾಡಿ ಸಿದ್ಧಪಡಿಸಲಾಗಿದೆ. ಲಸಿಕೆಯನ್ನು ಚುಚ್ಚಿಕೊಂಡ ಬಳಿಕ ಮಾನವನ ಶರೀರದಲ್ಲಿ ಕೊರೋನಾ ವಿಷಾಣುಗಳ ಸಾಮ್ಯತೆಯಿರುವ ಈ ವಿಷಾಣುಗಳಿಂದ ರೋಗನಿರೋಧಕ ಶಕ್ತಿ ನಿರ್ಮಾಣವಾಗುವುದು ಮತ್ತು ಮುಂದೆ ಕೊರೋನಾ ಸಾಂಕ್ರಾಮಿಕ ರೋಗ ಬಂದರೆ ಹೋರಾಡಲು ಶಕ್ತಿ ಸಿಗುವುದು ಎನ್ನುವ ತತ್ತ್ವ ಇದರ ಹಿಂದಿದೆ; ಆದರೆ ಈ ಉತ್ಪಾದನೆಯ ಮಾತೃಸಂಸ್ಥೆಯು ಲಸಿಕೆಗೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಘೋಷಿಸುವಾಗ ಮಾಡಿದ ಗದ್ದಲ ಜಗತ್ತಿನ ಮುಂದಿದೆ. ಅದಲ್ಲದೇ ‘ಟ್ರಾಯಲ್ಸ್ಗಳ (ಪರೀಕ್ಷಣೆಗಳ) ಪ್ರಕ್ರಿಯೆಯನ್ನು ಪೂರ್ಣಗೊಳಿಸದಿರುವ ಯಾವುದೇ ಆಧುನಿಕ ಔಷಧಿ ಗಳ ಮೇಲೆ ವಿಶ್ವಾಸವಿಡುವುದು, ಬುದ್ಧಿವಂತಿಕೆ ಅನಿಸುವುದಿಲ್ಲ.
ಕೋವಿಡ್ ಮೇಲಿನ ಲಸಿಕೆಯ ಸಂದರ್ಭದಲ್ಲಿ ವೈದ್ಯರು ಮತ್ತು ಔಷಧ ನಿರ್ಮಾಪಕರಲ್ಲಿ ಒಮ್ಮತದ ಅಭಾವ
ಆಧುನಿಕ ವೈದ್ಯರು ಮತ್ತು ಔಷಧಿಗಳ ನಿರ್ಮಾಪಕರಲ್ಲಿ ಲಸಿಕೆಯ ಸಂದರ್ಭದಲ್ಲಿ ಒಮ್ಮತವಿಲ್ಲ. ‘ಫೈಜರ್ ಫಾರ್ಮಾ ಕಂಪನಿಯ ಮಾಜಿ ಉಪಾಧ್ಯಕ್ಷರು ಮತ್ತು ಪ್ರಸಿದ್ಧ ಶ್ವಸನಾಂಗವ್ಯೂಹದ ತಜ್ಞರಾದ ಡಾ. ಮೈಕಲ್ ಇಡನ್ ಇವರು “ಜಾಗತಿಕ ಸಾಂಕ್ರಾಮಿಕತೆಯನ್ನು ತಡೆಯಲು ‘ವ್ಯಾಕ್ಸಿನ್ನ (ಲಸಿಕೆಯ) ಯಾವುದೇ ಆವಶ್ಯಕತೆಯಿಲ್ಲ, ವ್ಯಾಕ್ಸಿನ್ ಸಂದರ್ಭದಲ್ಲಿ ಇಂತಹ ಮೂರ್ಖತನವನ್ನು ನಾನು ಇಂದಿನವರೆಗೆ ಯಾವತ್ತೂ ನೋಡಿಲ್ಲ. ರೋಗದಿಂದ ಅಪಾಯವಿಲ್ಲದಿರುವ ಜನರಿಗೆ ‘ವ್ಯಾಕ್ಸಿನ್ ಕೊಡಬಾರದು. ಯಾವ ‘ವ್ಯಾಕ್ಸಿನ್ ವು ಸಂಪೂರ್ಣವಾಗಿ ಪರೀಕ್ಷಣೆಗೆ ಒಳಪಟ್ಟಿಲ್ಲವೋ, ಅಂತಹ ‘ವ್ಯಾಕ್ಸಿನ್ ನನ್ನು ಕೋಟ್ಯವಧಿ ಆರೋಗ್ಯವಂತ ಜನರಿಗೆ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಕೂಡ ತಪ್ಪೇ ! ಇಡನ್ ಇವರ ಹೇಳಿಕೆಯ ಬಗ್ಗೆ ಎರಡು ಮಾತಿಲ್ಲ. ಎಷ್ಟೋ ಡಾಕ್ಟರರೂ ಸಹ ಲಸಿಕೆಯನ್ನು ತೆಗೆದುಕೊಳ್ಳುವ ಸಂದರ್ಭಧಲ್ಲಿ ಸಕಾರಾತ್ಮಕವಾಗಿಲ್ಲ ‘ತಮ್ಮ ಸುರಕ್ಷತೆಗಾಗಿ ಅಲ್ಲ, ಸಮಾಜದ ಸುರಕ್ಷತೆಗಾಗಿ ಲಸಿಕೀಕರಣವನ್ನು ಮಾಡಿರಿ, ಎಂದೂ ಕೆಲವು ಜನರು ರಾಗ ತೆಗೆದಿದ್ದಾರೆ. ಅವರ ಮಾಹಿತಿಗಾಗಿ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ‘ಫೈಜರ್ ಫಾರ್ಮಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿ.ಇ.ಒ) ಅಲ್ಬರ್ಟ ಬೋರಲಾ ಇವರು “ಲಸಿಕೆ ತೆಗೆದುಕೊಂಡಿರುವ ವ್ಯಕ್ತಿಯಿಂದ ಇತರ ವ್ಯಕ್ತಿಗಳಿಗೆ ವಿಷಾಣುಗಳು ಹರಡಲಾರವು ಎನ್ನುವ ಯಾವುದೇ ಭರವಸೆಯನ್ನು ನಮಗೆ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಆಯುರ್ವೇದವನ್ನು ನಿರ್ಲಕ್ಷಿಸುವುದು ಷಡ್ಯಂತ್ರವಲ್ಲವೇ ?
ಇದರಿಂದ ಲಸಿಕೀಕರಣವೊಂದೇ ಕೊನೆಯ ಉಪಾಯ ಮತ್ತು ಕೊರೋನಾದ ರಕ್ಷಣಕರ್ತವಾಗಿದೆ ಎಂದು ಹೇಳುವುದು ಎಷ್ಟರಮಟ್ಟಗೆ ಸೂಕ್ತವಾಗಿದೆ ? ಹಾಗೆಯೇ ಇನ್ನೊಂದೆಡೆ ಆಯುರ್ವೇದಕ್ಕೆ ಮೊದಲಿನಿಂದಲೂ ನಿರಂತರವಾಗಿ ಅವಕಾಶವನ್ನು ನಿರಾಕರಿಸಿದ್ದರೂ ಅವಕಾಶ ಸಿಗುತ್ತಲೇ ಈ ಮಹಾಮಾರಿಯ ಸಮಯದಲ್ಲಿ ಅದು ಅತ್ಯಂತ ಪ್ರಭಾವಯುತವಾಗಿ ಕಾರ್ಯವನ್ನು ಮಾಡುತ್ತಿದೆ. ಅದರೆಡೆಗೆ ಇಂದಿಗೂ ಮಾಡುತ್ತಿರುವ ನಿರ್ಲಕ್ಷ್ಯವು ಲಸಿಕೆಯ ಷಡ್ಯಂತ್ರ್ಯದ ಒಂದು ಭಾಗವಾಗಿರಬಹುದೇ ? ಎಂದು ಸಂಶಯ ಪಡಲು ಆಸ್ಪದವಿದೆ !
– ವೈದ್ಯ ಪರೀಕ್ಷಿತ ಶೇವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಿಲಿ, ಜಿಲ್ಲೆ ಠಾಣೆ, ಮಹಾರಾಷ್ಟ್ರ.