ಗಣರಾಜ್ಯ, ರಾಷ್ಟ್ರ ಹಾಗೂ ಸಂವಿಧಾನ
ಭಾರತದಲ್ಲಿ ೧೯೫೦ ರಿಂದ ಪ್ರಜಾಪ್ರಭುತ್ವದ ರಾಜ್ಯ ಪ್ರಾರಂಭವಾಗಿದ್ದರೂ ಇಲ್ಲಿ ಬಹಳ ಹಿಂದಿನಿಂದಲೂ ಗಣರಾಜ್ಯ ಪದ್ಧತಿ ಅಸ್ತಿತ್ವದಲ್ಲಿತ್ತು. ದೇಶ, ರಾಜ್ಯ ಮತ್ತು ರಾಷ್ಟ್ರ ಇವುಗಳಲ್ಲಿ ವ್ಯತ್ಯಾಸ ಮತ್ತು ಸಂವಿಧಾನದಲ್ಲಿ ‘ಸೆಕ್ಯುಲರಿಸಮ್ ಪದವನ್ನು ನೀಡುವುದರಲ್ಲಿ ಟೊಳ್ಳುತನ ವನ್ನು ಇಲ್ಲಿ ನೀಡಲಾಗಿದೆ. ಸಂಕಲನಕಾರರು – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ದೇಶ, ರಾಜ್ಯ ಮತ್ತು ರಾಷ್ಟ್ರ
ದೇಶ, ರಾಜ್ಯ ಮತ್ತು ರಾಷ್ಟ್ರ ಇವು ಮೂರು ಬೇರೆ ಬೇರೆ ವಿಚಾರಗಳಾಗಿವೆ. ದೇಶವು ‘ದಿಕ್ ಈ ಪದದಿಂದ ಬಂದಿದೆ. ಅದರ ಅರ್ಥ ದಿಕ್ಕು ಎಂದಾಗುತ್ತದೆ. ಭಾರತದ ಉತ್ತರ ದಿಕ್ಕಿಗೆ ಹಿಮಾಲಯ, ದಕ್ಷಿಣಕ್ಕೆ ಹಿಂದೂ ಮಹಾಸಾಗರ ಇದೆ. ಅದರ ನಡುವೆ ಇರುವ ಭೂಮಿಗೆ ಭಾರತ ವೆಂದು ಹೇಳುತ್ತಾರೆ. ರಾಜ್ಯವೆಂದರೆ, ರಾಜ್ಯವ್ಯವಸ್ಥೆ ಅಥವಾ ಪದ್ಧತಿ, ಉದಾ. ಭಾರತದಲ್ಲಿರುವ ನ್ಯಾಯಾಂಗ ವ್ಯವಸ್ಥೆ, ಭಾರತೀಯ ಆಡಳಿತ ಸೇವೆ, ಪ್ರಜಾಪ್ರಭುತ್ವದ ೪ ಸ್ತಂಭಗಳಾಗಿವೆ. ರಾಮರಾಜ್ಯದ ಉಲ್ಲೇಖವು ‘ಅಲ್ಲಿನ ವ್ಯವಸ್ಥೆ ಆದರ್ಶವಾಗಿತ್ತು, ಎಂಬ ಅರ್ಥದಲ್ಲಿದೆ.ರಾಷ್ಟ್ರವು ಸಹಜವಾಗಿ ರೂಪುಗೊಳ್ಳುವುದಿಲ್ಲ. ರಾಷ್ಟ್ರವು ಗಡಿಯಲ್ಲಿರುವುದಿಲ್ಲ, ಅದು ಯಾವುದೇ ವ್ಯಕ್ತಿಯ ಒಳಗೆ ಜೀವಂತವಾಗಿರಲು ಸಾಧ್ಯ. ಆದ್ದರಿಂದ ಇಸ್ರೇಲ್ ಇದು ರಾಷ್ಟ್ರವಾಗಿದೆ. ೨೩ ಜುಲೈ ೨೦೧೮ ರಂದು ಅವರ ಸಂಸತ್ತು ಇಸ್ರೇಲ್ ಜ್ಯೂ ರಾಷ್ಟ್ರವಾಗಿದೆ ಎಂಬ ಪ್ರಸ್ತಾವನೆ ಅನುಮೋದಿಸಿತು. ರಾಷ್ಟ್ರವನ್ನು ರೂಪಿಸಲು ಕೆಲವು ವಿಷಯಗಳು ಬೇಕಾಗುತ್ತವೆ. ಅದರಲ್ಲಿ ಭೂಮಿ, ಜನಸಮೂಹ, ಸಂಸ್ಕೃತಿ, ಸಭ್ಯತೆ, ಇತಿಹಾಸ, ಧರ್ಮ, ಸಾಹಿತ್ಯ, ಕಲೆ, ರಾಜನೀತಿ, ರಾಜಜೀವನ ದರ್ಶನ ಈ ಹತ್ತು ವಿಷಯಗಳಿರುವಲ್ಲಿಗೆ ‘ರಾಷ್ಟ್ರವೆನ್ನುತ್ತಾರೆ. ಇಸ್ರೇಲ್ ಬಳಿ ೨ ಸಾವಿರ ವರ್ಷಗಳ ವರೆಗೆ ಭೂಮಿಯೇ ಇರಲಿಲ್ಲ. ಆದರೂ ಅವರ ಮನಸ್ಸಿನಲ್ಲಿ ರಾಷ್ಟ್ರವು ಮಾಸಿರಲಿಲ್ಲ. ಅವರು ತಮ್ಮ ಸಂಸ್ಕೃತಿ, ಸಭ್ಯತೆಯನ್ನು ಜೀವಂತವಾಗಿಟ್ಟಿದ್ದರು ಹಾಗೂ ರಾಷ್ಟ್ರವನ್ನು ರೂಪಿಸಿದರು. ತದ್ವಿರುದ್ಧ ಸ್ವಾತಂತ್ರ್ಯ ಸಿಕ್ಕಿದ ನಂತರವೂ ನಮ್ಮಲ್ಲಿ ಇದುವರೆಗೆ ಆಂಗ್ಲ ಭಾಷೆಯೇ ಇದೆ. ಗ್ರೇಗರಿಯನ್ ಕಾಲಗಣನೆ ಸ್ವೀಕರಿಸಿದ್ದೇವೆ. ಹಿಂದೂ ಪಂಚಾಂಗವನ್ನು ಸ್ವೀಕರಿಸಲಿಲ್ಲ. ಭಾರತದಲ್ಲಿ ಮೂರು ಋತುಗಳಿವೆ. ಜಗತ್ತಿನಲ್ಲಿ ಅನೇಕ ದೇಶಗಳಲ್ಲಿ ಕೇವಲ ಎರಡೇ ಋತುಗಳಿರುತ್ತವೆ. ಅವರ ಕಾಲಗಣನೆಗನುಸಾರ ನಾವೇಕೆ ಜೀವಿಸುತ್ತೇವೆ ?, ಎಂಬುದು ನಮ್ಮ ನಿಜವಾದ ಪ್ರಶ್ನೆಯಾಗಿದೆ. ಹಿಂದೂ ರಾಷ್ಟ್ರಕ್ಕೆ ಸಂಬಂಧಿಸಿ ಕೆಲವು ಮೂಲಭೂತ ಬದಲಾವಣೆ ಆಗಬೇಕಾಗಿದೆ. ಅದೆಂದರೆ ಮಾತೃಭಾಷೆ ಹಾಗೂ ಶಿಕ್ಷಣಪದ್ಧತಿ. ಇವೆರಡನ್ನು ಮೊದಲು ನಿರ್ಧರಿಸಬೇಕು.
ಸಂವಿಧಾನ ಮತ್ತು ‘ಸೆಕ್ಯುಲರ್ ಪದ
ಭಾರತದ ಸಂವಿಧಾನದಲ್ಲಿ ಧರ್ಮನಿರಪೇಕ್ಷತೆ (ಜಾತ್ಯತೀತತೆ) ಇಲ್ಲ. ಸಂವಿಧಾನದಲ್ಲಿ ಪಂಥನಿರಪೇಕ್ಷ ಈ ಪದವಿದೆ. ಆಕ್ಸ್‌ಫರ್ಡ್ ಪದಕೋಶಕ್ಕನುಸಾರ ಹಿಂದೂ ಧರ್ಮದ ವ್ಯಾಖ್ಯೆಯು ಧರ್ಮವೆಂದರೆ ‘ಕಾಸ್ಮಿಕ್ ಲಾ ಅಂದರೆ ಎಲ್ಲ ಜಗತ್ತಿಗೆ ಅನ್ವಯವಾಗುವ ನಿಯಮವೆಂಬ ಅರ್ಥದಲ್ಲಿದೆ. ಹಿಂದೂ ಧರ್ಮವು ಇಷ್ಟು ವ್ಯಾಪಕ ಅರ್ಥವನ್ನು ನೀಡುತ್ತದೆ. ಪಂಥಗಳ ವ್ಯಾಖ್ಯೆಯು ‘ಯಾವುದೇ ಶ್ರದ್ಧೆ ಅಥವಾ ವಿಶ್ವಾಸದ ಪದ್ಧತಿ, ಒಬ್ಬರ ಆಜ್ಞೆಯಂತೆ ಎಲ್ಲವೂ ನಡೆಯುತ್ತದೆಯೋ, ಅದು ಪಂಥ. ‘ಸೆಕ್ಯುಲರ್ನ ಅರ್ಥ ಪಂಥನಿರಪೇಕ್ಷವಾಗಿದೆ.
ವಿದೇಶದಲ್ಲಿ ‘ಸೆಕ್ಯುಲರ್ ಪದದ ಅರ್ಥ ನಾಸ್ತಿಕವೆಂದಾಗುತ್ತದೆ. ಭಾರತವನ್ನು ‘ಸೆಕ್ಯುಲರ್ ಅಂದರೆ ನಾಸ್ತಿಕವನ್ನಾಗಿ ಮಾಡಲಿಕ್ಕಿಲ್ಲ, ಎಂದು ಡಾ. ಅಂಬೇಡ್ಕರ್ ಮತ್ತು ಜವಾಹರಲಾಲ ನೆಹರು ಇವರ ಅಭಿಪ್ರಾಯವಾಗಿತ್ತು. ಆದ್ದರಿಂದ ‘ಸೆಕ್ಯುಲರ್ ಪದಕ್ಕೆ ಅವರಿಂದ ವಿರೋಧವಿತ್ತು. ಡಾ. ಅಂಬೇಡ್ಕರ್ ಇವರು ಸಂವಿಧಾನದಲ್ಲಿ ೩೬೮
‘ಆರ್ಟಿಕಲ್ ನೀಡಿದ್ದಾರೆ. ಕಾಲಕ್ಕನುಸಾರ ಯೋಗ್ಯವಾದ ತಿದ್ದುಪಡಿಗಳನ್ನು ಸಂಸತ್ತಿನ ಪದ್ಧತಿಯಲ್ಲಿ ಮಾಡಬೇಕು, ಅದಕ್ಕಾಗಿ ಈ ಅವಕಾಶವಿದೆ. ಆದ್ದರಿಂದ ೧೯೭೬ ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ೪೨ ನೇ ತಿದ್ದುಪಡಿಯೆಂದು ಸಂವಿಧಾನದಲ್ಲಿ ಎಲ್ಲ ಸಂಸತ್ತಿನ ನಿಯಮಗಳನ್ನು ಬದಿಗೊತ್ತಿ ಮಾಡಿದ ಬದಲಾವಣೆ ಮಾಡುವುದು ಸಂವಿಧಾನಾತ್ಮಕ ಹೇಗಾಗುತ್ತದೆ ? ಅದು ತಪ್ಪಾಗುತ್ತದೆ. ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈ ಪದದ ವ್ಯಾಖ್ಯೆಯನ್ನೆ ಮಾಡಿಲ್ಲ. ಈ ಪದವನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಹಾಕಲಾಗಿದೆ. ಪ್ರಸ್ತಾವನೆಯೆಂದರೆ ಜನರ ವಚನವಾಗಿದೆ. ಅದರಲ್ಲಿ ‘ನಾವು ಭಾರತದ ನಾಗರಿಕರು (ವಿ ದ ಪೀಪಲ್) ಎಂದು ಹೇಳುತ್ತಾ ಜನರು ವಚನ ನೀಡುತ್ತಾರೆ. ಆದ್ದರಿಂದ ಅಡಳಿತದವರು ಅದನ್ನು ನೇರವಾಗಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ೧೯೭೩ ರಲ್ಲಿ “ಕೇಶವಾನಂದ ಭಾರತಿ ವಿರುದ್ಧ ಕೇರಳ ರಾಜ್ಯ ಖಟ್ಲೆಯಲ್ಲಿ ೧೩ ನ್ಯಾಯಾಧೀಶರ ವಿಭಾಗೀಯ ಪೀಠ ನೀಡಿದ ತೀರ್ಪಿನಲ್ಲಿ ಯಾವುದೇ ಸರಕಾರಕ್ಕೆ ಸಂವಿಧಾನ ದಲ್ಲಿ ತಿದ್ದುಪಡಿ ಮಾಡುವ ಅಧಿಕಾರವಿದ್ದರೂ, ಸಂವಿಧಾನದ ಮೂಲಭೂತ ವ್ಯವಸ್ಥೆಗೆ ಧಕ್ಕೆ ತರುವಂತೆ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ, ಎಂದಿತ್ತು; ಆದರೆ ೧೯೭೬ರಲ್ಲಿ ಸಂವಿಧಾನದ ಪ್ರಸ್ತಾವನೆಯಲ್ಲೇ ಬದಲಾವಣೆ ಮಾಡಲಾಯಿತು. ಇದು ಸಂವಿಧಾನದ ಅವಮಾನವೆಂದು ಏಕೆ ಹೇಳುವುದಿಲ್ಲ ?
ಭಾರತದ ಪ್ರಾಚೀನ ಪ್ರಜಾಪ್ರಭುತ್ವ
ವೇದಗಳಲ್ಲಿ ಗಣತಂತ್ರದ ಸಂಕಲ್ಪನೆಯಿದೆ. ಮಹಾಭಾರತದ ಸಭಾಪರ್ವದಲ್ಲಿ ಅರ್ಜುನ ಅನೇಕ ಗಣರಾಜ್ಯಗಳನ್ನು ಗೆಲ್ಲುತ್ತಾನೆ, ಎಂಬ ಉಲ್ಲೇಖವಿದೆ. ಅವನು ರಾಜಸೂಯ ಯಜ್ಞದ ಸಮಯದಲ್ಲಿ ಈ ಗಣರಾಜ್ಯಗಳನ್ನು ಗೆಲ್ಲುತ್ತಾನೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಕೆಲವು ಗಣರಾಜ್ಯಗಳ ಹೆಸರುಗಳ ಸಹಿತ ಉಲ್ಲೇಖವಿದೆ. ಲಿಚವೀ, ಕಂಬೋಜ ಇವು ಕೆಲವು ಗಣರಾಜ್ಯಗಳ ಹೆಸರಾಗಿವೆ. ಪಾಶ್ಚಾತ್ಯ ಮೆಗಾಸ್ಥೇನಿಸ್ ಇವನು ಭಾರತವನ್ನು ವರ್ಣಿಸುವಾಗ ಮುಂದಿನಂತೆ ಹೇಳುತ್ತಾನೆ, ‘ಎರಡು ಗಣರಾಜ್ಯಗಳಲ್ಲಿ ನಾನು ಪ್ರಯಾಣ ಮಾಡಿದ್ದೇನೆ. ಅವನು ಪ್ರವಾಸ ಮಾಡಿದ ಗಣರಾಜ್ಯಗಳಲ್ಲಿ ಒಂದೆಂದರೆ ಮಾಲವ ಮತ್ತು ಇನ್ನೊಂದು ಶಿಬಿ. ಆದ್ದರಿಂದ ಭಾರತಕ್ಕೆ ಗಣರಾಜ್ಯದ ಸಂಕಲ್ಪನೆ ಹೊಸತೇನಲ್ಲ ಅಥವಾ ಅದು ಆಂಗ್ಲರಿಂದ ಬಂದಿರುವುದೂ ಅಲ್ಲ. ಆದ್ದರಿಂದ ಹಿಂದೂ ರಾಷ್ಟ್ರ ಬರುತ್ತದೆಯೆಂದರೆ, ಬೇರೆಯೇ ಏನೋ ಬರುತ್ತದೆ ಎಂದು ಅರ್ಥ ಮಾಡಿಕೊಳ್ಳಬಾರದು. ಈ ಸಂಕಲ್ಪನೆಯು ಪ್ರಾಚೀನವಾಗಿದೆ. ಭಾರತದಲ್ಲಿ ಮೊಗಲರು ಅಥವಾ ಆಂಗ್ಲರ ರಾಜ್ಯವಿದ್ದರೂ ಅನೇಕ ಹಿಂದೂ ರಾಜ್ಯಗಳು ಯಥಾಸ್ಥಿತಿಯಲ್ಲಿದ್ದವು. ಕೆಲವು ರಾಜರನ್ನು ಮಾಂಡಲಿಕರನ್ನಾಗಿ ಮಾಡಿದ್ದರೂ ಕಾನೂನು ಮತ್ತು ರಾಜ್ಯವನ್ನು ರಾಜರೆ ನಿರ್ಧರಿಸುತ್ತಿದ್ದರು. ೫೬೫ ಹಿಂದೂ ರಾಜ್ಯಗಳು ಭಾರತದ ಸ್ವಾತಂತ್ರ್ಯದ ಸಮಯದಲ್ಲಿದ್ದವು. ಹಿಂದೂ ರಾಜರು ಹಿಂದುಸ್ಥಾನವೆಂದು ತಮ್ಮ ಸ್ವಂತದ ರಾಜ್ಯಗಳನ್ನು ವಿಲೀನಗೊಳಿಸಿದರು.
೧೯೪೭ ರಲ್ಲಿ ಭಾರತವನ್ನು ಧರ್ಮದ ಆಧಾರದಲ್ಲಿ ವಿಭಜಿಸಲಾಗಿತ್ತು. ಪಾಕಿಸ್ತಾನಕ್ಕೆ ‘ಇಸ್ಲಾಮಿಕ್ ರಿಪಬ್ಲಿಕ್ (ಇಸ್ಲಾಮೀ ದೇಶ) ಎಂದು ಮನ್ನಣೆ ಸಿಕ್ಕಿತು. ಭಾರತ ಮಾತ್ರ ಧರ್ಮನಿರಪೇಕ್ಷ (ಜಾತ್ಯತೀತ) ಎಂದು ಉಳಿಯಿತು. ಹಾಗಾದರೆ ಇಲ್ಲಿನ ಹಿಂದೂಗಳಿಗೇನಿದೆ ?