ಹಿಂದೂಜಾಗೃತಿಯ ಕಾರ್ಯವನ್ನು ಮಾಡುತ್ತಿರುವಾಗ ಹಿಂದೂ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಅಥವಾ ವಾದ ವಿವಾದಗಳಾದಂತೆ ಕಾಳಜಿಯನ್ನು ವಹಿಸಿರಿ !
ಹಿಂದೂ ಜನಜಾಗೃತಿ ಸಮಿತಿಯು ಭಾರತದಲ್ಲಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತವಾಗಿದ್ದು ಆ ದೃಷ್ಟಿಯಿಂದ ಹಿಂದೂ ಸಂಘಟನೆಗಳ ಸಂಘಟನೆಗಾಗಿ ವಿವಿಧ ಮಾಧ್ಯಮಗಳಿಂದ ಪ್ರಯತ್ನಿಸುತ್ತಿದೆ. ಸಮಿತಿಯು ಪ್ರಸಾರಕಾರ್ಯವನ್ನು ಮಾಡಲು ಸಾಮಾಜಿಕ ಜಾಲತಾಣದ ಮೂಲಕ (ಸೋಶಿಯಲ್ ಮೀಡಿಯಾದ) ಹಿಂದೂಗಳನ್ನು ಜಾಗೃತಗೊಳಿಸುವ ವಿವಿಧ ‘ಪೋಸ್ಟ್’ ಮತ್ತು ‘ವಿಡಿಯೋ’ ಗಳನ್ನು ಪ್ರಸಾರ ಮಾಡುತ್ತಿದೆ.
ಹಿಂದೂ ಸಂಘಟನೆಗಳ ಸಂಘಟನೆಗಾಗಿ ಒಟ್ಟಿಗೆ ಸೇರಿ ವಿಚಾರಗಳ ಕೊಡುಕೊಳ್ಳುವಿಕೆ ಮಾಡಲು ಹಾಗೆಯೇ ಕೃತಿ ಕಾರ್ಯಕ್ರಮವನ್ನು ಖಚಿತಪಡಿಸಲು ಸಮಿತಿಯ ವತಿಯಿಂದ ಸಭೆ, ಹಿಂದೂ ರಾಷ್ಟ್ರಜಾಗೃತಿ ಸಭೆಗಳು, ಹಿಂದೂ ರಾಷ್ಟ್ರ ಅಧಿವೇಶನ ಮುಂತಾದವುಗಳ ಆಯೋಜನೆಯನ್ನು ಮಾಡಲಾಗುತ್ತದೆ. ಈ ಕಾರ್ಯವನ್ನು ಮಾಡುತ್ತಿರುವಾಗ ಕೆಲವು ಕಟು ಅನುಭವಗಳು ಬರುತ್ತಿವೆ. ಕೆಲವು ಸಂಘಟನೆಗಳ ಕಾರ್ಯಕರ್ತರು ಇತರ ಸಂಘಟನೆಗಳ ಪ್ರಸಾರಸಾಹಿತ್ಯಗಳ ಮೇಲೆ (ವಿಡಿಯೋ, ಪೋಸ್ಟ್, ಪತ್ರಿಕೆಗಳು, ಇವುಗಳ ಮೇಲೆ) ಕೇವಲ ಸಂಘಟನೆಯ ಹೆಸರನ್ನು ಬದಲಾಯಿಸಿ ಆ ಸಾಹಿತ್ಯಗಳನ್ನು ತಮ್ಮ ಹೆಸರಿನಲ್ಲಿ ಪ್ರಸಾರ ಮಾಡುವುದು ಗಮನಕ್ಕೆ ಬರುತ್ತಿದೆ. ನಿಜವಾಗಿ ಹಿಂದೂ ಜಾಗೃತಿಗಾಗಿ ಸಂಘಟನೆಗಳು ಪರಸ್ಪರರ ಪ್ರಸಾರಸಾಹಿತ್ಯಗಳನ್ನು ಪರಸ್ಪರರಲ್ಲಿ ವಿಶ್ವಾಸವನ್ನುಗಳಿಸಿ ಕೊಡುಕೊಳ್ಳುವುದನ್ನು ಮಾಡುತ್ತ ಉತ್ತಮ ರೀತಿಯಿಂದ ಅದರ ಉಪಯೋಗವನ್ನು ಮಾಡಬೇಕು. ಸಂಘಟನೆಗಳು ಪರಸ್ಪರರಲ್ಲಿ ಚರ್ಚೆ ಮಾಡಬೇಕು; ಆದರೆ ಹೀಗೆ ಆಗದಿರುವುದರಿಂದ ೨ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯವು ಉಂಟಾಗುವ, ವಿಶ್ವಾಸವು ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗೆಯೇ ತಿಳಿದು-ತಿಳಿಯದೇ ಮಾಡಿದ ಇಂತಹ ಕೃತಿಯಿಂದ ಹಿಂದುತ್ವದ ಕಾರ್ಯಕ್ಕೆ ಹಾನಿಯಾಗುವುದು.
ಈ ರೀತಿ ಹಿಂದೂಗಳಲ್ಲಿ ಜಾಗೃತಿಯಾಗಲು ಪರಸ್ಪರರ ಪ್ರಸಾರಸಾಹಿತ್ಯಗಳನ್ನು ಅವಶ್ಯವಾಗಿ ಬಳಸಬಹುದು; ಆದರೆ ಯಾವ ಸಂಘಟನೆಯು ಅದನ್ನು ತಯಾರಿಸಿದೆಯೋ, ಅವರ ಹೆಸರು ಅದರ ಮೇಲಿಂದ ತೆಗೆಯಬಾರದು. ಅದರಲ್ಲಿನ ಆಧಾರವನ್ನು ಹಾಗೆಯೇ ಇಡಬೇಕು. ಯಾರು ತಯಾರಿಸಿರುವರೋ, ಅವರ ಹೆಸರನ್ನು ತೆಗೆದು ತಮ್ಮ ಅಥವಾ ತಮ್ಮ ಸಂಘಟನೆಯ ಹೆಸರನ್ನು ಹಾಕಿರುವುದರಿಂದ ಒಂದೇ ಪೋಸ್ಟ್ ೨ ಬೇರೆಬೇರೆ ಸಂಘಟನೆಗಳ ಹೆಸರಿನಿಂದ ಪ್ರಸಾರವಾಗುತ್ತವೆ. ಅದನ್ನು ನೋಡಿ ‘ಧರ್ಮಪ್ರೇಮಿ ಹಿಂದೂಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತಿವೆ’, ಎಂಬುದನ್ನು ಗಮನದಲ್ಲಿಡಬೇಕು. ಆದುದರಿಂದ ಹಿಂದುತ್ವನಿಷ್ಠ ಸಂಘಟನೆಗಳ ಜವಾಬ್ದಾರ ಪದಾಧಿಕಾರಿಗಳು ‘ತಮ್ಮ ಸಂಘಟನೆಯ ಕಾರ್ಯಕರ್ತರಿಂದ ಇಂತಹ ಕೃತಿಯಾಗದಂತೆ ಕಾಳಜಿ ವಹಿಸುವುದು ಅವಶ್ಯಕವಿದೆ. ಇದು ಹಿಂದೂ ಸಂಘಟನೆಗಳಿಗೂ ಅನುಕೂಲಕರವಾಗುವುದು. – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.