ಅಖಂಡ ಭಾರತದ ನಕಾಶೆ ಮತ್ತು ಸದ್ಯದ ಭಾರತದ ನಕಾಶೆ ಇವುಗಳಿಂದ ವಾತಾವರಣದ ಮೇಲಾದ ಪರಿಣಾಮದ ಅಧ್ಯಯನ ಮಾಡಲು ‘ಪಿಪ್ ತಂತ್ರಜ್ಞಾನದ ಸಹಾಯದಿಂದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡಿದ ವೈಜ್ಞಾನಿಕ ಪ್ರಯೋಗ !

ನಾವೀನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆಗಳನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಜನವರಿ ೨೬ ರಂದು ಇರುವ ಗಣರಾಜ್ಯೋತ್ಸವದ ನಿಮಿತ್ತ ವಿಶೇಷ ಲೇಖನ…

೧. ಪ್ರಸ್ತಾವನೆ ಮತ್ತು ಉದ್ದೇಶ

‘ವ್ಯಕ್ತಿಯ ಛಾಯಾಚಿತ್ರದಿಂದ ಪ್ರಕ್ಷೇಪಿಸುವ ಸ್ಪಂದನಗಳಿಂದ ಅವನ ಆಧ್ಯಾತ್ಮಿಕ ಸ್ಥಿತಿ ತಿಳಿಯುತ್ತದೆ. ಯಾವುದಾದರೊಬ್ಬನ ಸಾಧನೆಯನ್ನು ಆರಂಭಿಸುವ ಮೊದಲಿನ ಮತ್ತು ಅಧ್ಯಾತ್ಮದಲ್ಲಿ ಚೆನ್ನಾಗಿ ಪ್ರಗತಿ ಮಾಡಿದ ನಂತರದ (ಸತ್ತ್ವಗುಣ ಹೆಚ್ಚಾದ ನಂತರದ) ಎರಡು ಛಾಯಾಚಿತ್ರಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ತುಲನಾತ್ಮಕ ಅಧ್ಯಯನ (ಅಭ್ಯಾಸ) ಮಾಡಿದರೆ ಆ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ಆದ ಬದಲಾವಣೆಯು ಗಮನಕ್ಕೆ ಬರುತ್ತದೆ. ಈ ಬದಲಾವಣೆಯನ್ನು ತಿಳಿದುಕೊಳ್ಳಲು ಸೂಕ್ಷ್ಮದಲ್ಲಿ ವಿಷಯಗಳು ತಿಳಿಯುವುದು ಆವಶ್ಯಕವಾಗಿರುತ್ತದೆ. ಉನ್ನತ ಮಟ್ಟದ ಸಂತರು ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವುದರಿಂದ ಅವರು ಪ್ರತಿಯೊಂದು ಘಟಕದಲ್ಲಿ ಸ್ಪಂದನಗಳನ್ನು ನಿಖರವಾಗಿ ಗುರುತಿಸಬಲ್ಲರು.

ಇಲ್ಲಿ ಗಮನದಲ್ಲಿಡಬೇಕಾದ ವಿಷಯವೆಂದರೆ ವ್ಯಕ್ತಿಯ ಸೌಂದರ್ಯ ಮತ್ತು ಸಾತ್ತ್ವಿಕತೆ ಇವುಗಳಲ್ಲಿ ಯಾವುದೇ ಸಂಬಂಧ ಇರುವುದಿಲ್ಲ. ಕಾಣಲು ಸುಂದರವಲ್ಲದ; ಆದರೆ ಸಾತ್ತ್ವಿಕವಾಗಿರುವ ವ್ಯಕ್ತಿಯಲ್ಲಿ ಸುಂದರ ಕಾಣಿಸುವ; ಆದರೆ ಅಸಾತ್ತ್ವಿಕ ವ್ಯಕ್ತಿಯ ತುಲನೆಯಲ್ಲಿ ಒಳ್ಳೆಯ ಸ್ಪಂದನಗಳ ಅರಿವಾಗುತ್ತದೆ.

ವ್ಯಕ್ತಿಯ ಸಂದರ್ಭದಲ್ಲಿ ಛಾಯಾಚಿತ್ರದಿಂದ ಏನು ತಿಳಿಯುತ್ತದೆಯೋ, ಅದು ರಾಷ್ಟ್ರದ ಸಂದರ್ಭದಲ್ಲಿ ಅದರ ನಕಾಶೆಯಿಂದ ತಿಳಿಯುತ್ತದೆ. ಕಳೆದ ೧೦೦ ವರ್ಷಗಳಲ್ಲಿ ಭಾರತದಲ್ಲಿ ಅನೇಕ ರಾಜಕೀಯ ಘಟನಾವಳಿಗಳಾದವು. ಇದರಿಂದ ಭಾರತದ ನಕಾಶೆಯಲ್ಲಿ ಅನೇಕ ಬದಲಾವಣೆಗಳಾದವು; ಆದರೆ ‘ಆಧ್ಯಾತ್ಮಿಕ ಸ್ತರದಲ್ಲಿ ಭಾರತದ ಸ್ಥಿತಿಯಲ್ಲಿ ಏನಾದರೂ ಪರಿವರ್ತನೆಯಾಗಿದೆಯೇ ?’, ಎಂಬುದನ್ನು ತಿಳಿದುಕೊಳ್ಳಲು ‘ಅಖಂಡ ಭಾರತದ ನಕಾಶೆ ಮತ್ತು ‘ಸದ್ಯದ ಭಾರತದ ನಕಾಶೆ’ ಇವುಗಳಿಂದ ವಾತಾವರಣದ ಮೇಲಾಗುವ ಪರಿಣಾಮದ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು. ಇದಕ್ಕಾಗಿ ೨೧.೧೦.೨೦೧೬ ರಂದು ಗೋವಾದ ಸನಾತನ ಆಶ್ರಮದಲ್ಲಿ ಮಾಡಲಾದ ಪ್ರಯೋಗದಲ್ಲಿ ವಸ್ತು ಮತ್ತು ವ್ಯಕ್ತಿಗಳ ಊರ್ಜಾ ಕ್ಷೇತ್ರದ (ಪ್ರಭಾವಲಯದ) ಅಭ್ಯಾಸವನ್ನು ಮಾಡಲು ಉಪಯುಕ್ತವಾಗಿರುವ ‘ಪಿಪ್(ಪಾಲಿಕಾಂಟ್ರಾಸ್ಟ್ ಇಂಟರಫೆರನ್ಸ್ ಫೋಟೋಗ್ರಾಫಿ)’ ಎಂಬ ತಂತ್ರಜ್ಞಾನವನ್ನು ಬಳಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳು ಮತ್ತು ಅವುಗಳ ವಿವರಣೆಯನ್ನು ಮುಂದೆ ಕೊಡಲಾಗಿದೆ.

೨. ಪ್ರಯೋಗದ ಸ್ವರೂಪ

ಈ ಪ್ರಯೋಗದಲ್ಲಿ ಮೇಜಿನ ಮೇಲೆ ಯಾವುದೇ ಛಾಯಾಚಿತ್ರವನ್ನು ಇಡುವ ಮೊದಲು ‘ಪಿಪ್’ ತಂತ್ರಜ್ಞಾನದ ಮೂಲಕ ವಾತಾವರಣದ ಛಾಯಾಚಿತ್ರವನ್ನು ತೆಗೆದುಕೊಳ್ಳಲಾಯಿತು. ಇದು ಮೂಲ ನೋಂದಣಿಯಾಗಿದೆ. ಅನಂತರ ಅನುಕ್ರಮವಾಗಿ ಅಖಂಡ ಭಾರತದ ನಕಾಶೆ ಮತ್ತು ಸದ್ಯದ ಭಾರತದ ನಕಾಶೆಯನ್ನು ಮೇಜಿನ ಮೇಲಿಟ್ಟು ‘ಪಿಪ್’ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಯಿತು. ಈ ‘ಪಿಪ್’ ಛಾಯಾಚಿತ್ರಗಳ ತುಲನಾತ್ಮಕ ಅಧ್ಯಯನ ಮಾಡಿದ ನಂತರ, ವಾತಾವರಣದ ಮೇಲೆ ಈ ‘ಎರಡೂ ನಕಾಶೆಗಳಿಂದ ಪ್ರಕ್ಷೇಪಿಸುವ ಸ್ಪಂದನಗಳಿಂದ ಏನು ಪರಿಣಾಮವಾಗುತ್ತದೆ ?’, ಎಂಬುದು ತಿಳಿಯಿತು.

೩. ವೈಜ್ಞಾನಿಕ ಪ್ರಯೋಗದಲ್ಲಿ ಘಟಕಗಳ ಮಾಹಿತಿ

೩ ಅ. ಅಖಂಡ ಭಾರತದ ನಕಾಶೆ : ಭಾರತದ (೧೯೨೦ ನೇ ಇಸವಿಯ ಮೊದಲಿನ) ಅವಿಭಿಜಿತ ಸ್ವರೂಪಕ್ಕೆ ‘ಅಖಂಡ ಭಾರತ’ವೆಂದು ಹೇಳಲಾಗುತ್ತದೆ. ಟಿಬೇಟ್, ನೇಪಾಳ, ಭೂತಾನ, ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನ ಇವೆಲ್ಲ ದೇಶಗಳು ಅಖಂಡ ಭಾರತದ ಅವಿಭಾಜ್ಯ ಅಂಗಳಾಗಿದ್ದವು. ಈ ನಕಾಶೆ ಆಗಿನ ಅಖಂಡ ಭಾರತದ್ದಾಗಿದೆ.

೩ ಆ. ಸದ್ಯದ ಭಾರತದ ನಕಾಶೆ : ೧೯೨೦ ನೇ ಇಸವಿಯ ನಂತರ ಅಖಂಡ ಭಾರತವು ಅನೇಕ ಬಾರಿ ವಿಭಜನೆ ಅಂದರೆ ಇಬ್ಭಾಗವಾಯಿತು. ಅದರ ಪರಿಣಾಮದಿಂದ ಟಿಬೇಟ್, ನೇಪಾಳ, ಭೂತಾನ, ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನ ಇವು ಭಾರತದಿಂದ ಬೇರ್ಪಟ್ಟವು. ಈ ನಕಾಶೆಯು ಸದ್ಯದ ಭಾರತದ್ದಾಗಿದೆ.

೪. ‘ಪಿಪ್ (ಪಾಲಿಕಾಂಟ್ರಾಸ್ಟ್ ಇಂಟರಫೆರೆನ್ಸ್ ಫೋಟೋಗ್ರಾಫಿ)’ ತಂತ್ರಜ್ಞಾನದ ಪರಿಚಯ !

ಈ ತಂತ್ರಜ್ಞಾನದ ಮೂಲಕ ನಾವು ಯಾವುದಾದರೊಂದು ವಸ್ತುವಿನ ನಮ್ಮ ಕಣ್ಣುಗಳಿಗೆ ಕಾಣಿಸದಿರುವ ಬಣ್ಣದ ಪ್ರಭಾವಲಯವನ್ನು ನೋಡಬಹುದು. ‘ಪಿಪ್’ ಈ ಗಣಕೀಯ  ಪ್ರಣಾಲಿಗೆ ವಿಡಿಯೋ ಕ್ಯಾಮೆರಾವನ್ನು ಜೋಡಿಸಿ ಅದರ ಮೂಲಕ ವಸ್ತು, ವಾಸ್ತು ಅಥವಾ ವ್ಯಕ್ತಿಗಳ ಊರ್ಜಾಕ್ಷೇತ್ರವನ್ನು ವಿವಿಧ ಬಣ್ಣಗಳಲ್ಲಿ ನೋಡಲು ಸಾಧ್ಯವಾಗುತ್ತದೆ. ಇದರಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳು ಬಣ್ಣಗಳ ಮಾಧ್ಯಮದಿಂದ ನೋಡುವ ಸೌಲಭ್ಯವಿದೆ. ಈ ಬಣ್ಣಗಳು ಯಾವುದರ ಪ್ರತೀಕವಾಗಿವೆ, ಎಂಬುದನ್ನು ಅಂಶ ‘೭ ಅ’ ಈ ಕೋಷ್ಟಕದ ಎರಡನೇಯ ಉದ್ದ ಸ್ತಂಭದಲ್ಲಿ ಕೊಡಲಾಗಿದೆ.

೫. ಪ್ರಯೋಗದ ಬಗ್ಗೆ ವಹಿಸಿದ ಕಾಳಜಿ

ಅ. ಈ ಪ್ರಯೋಗದಲ್ಲಿ ‘ಪಿಪ್’ ಛಾಯಾಚಿತ್ರಗಳನ್ನು ತೆಗೆಯಲು ವಿಶಿಷ್ಟ ಕೋಣೆಯನ್ನು ಉಪಯೋಗಿಸಲಾಯಿತು. ಈ ಕೋಣೆಯ ಗೋಡೆಗಳು, ಮೇಲ್ಛಾವಣಿ ಮುಂತಾದವುಗಳ ಬಣ್ಣಗಳ ಪರಿಣಾಮವು ಪ್ರಯೋಗದ ಘಟಕಗಳ ಪ್ರಭಾವಳಿಯ ಬಣ್ಣಗಳ ಮೇಲೆ ಆಗಬಾರದೆಂದು, ಗೋಡೆ, ಮೇಲ್ಛಾವಣಿ ಮುಂತಾದವುಗಳಿಗೆ ಬಿಳಿ ಬಣ್ಣ ವನ್ನು ಹಚ್ಚಲಾಗಿತ್ತು.

ಆ. ಸಂಪೂರ್ಣ ಪ್ರಯೋಗದ ಸಮಯದಲ್ಲಿ ಕೋಣೆಯಲ್ಲಿ ಪ್ರಕಾಶದ ವ್ಯವಸ್ಥೆಯನ್ನು ಒಂದೇ ಸಮಾನ ಇಡಲಾಗಿತ್ತು, ಹಾಗೆಯೇ ಕೋಣೆಯ ಹೊರಗಿನ ಗಾಳಿ, ಬೆಳಕು, ಉಷ್ಣತೆ ಇವುಗಳ ಪರಿಣಾಮವು ಕೋಣೆಯಲ್ಲಿನ ಪ್ರಯೋಗದ ಮೇಲೆ ಆಗಬಾರದೆಂದು, ಪ್ರಯೋಗದ ಸಮಯದಲ್ಲಿ ಕೋಣೆಯನ್ನು ಮುಚ್ಚಲಾಗಿತ್ತು.

೬. ಪ್ರಯೋಗದ ನಿರೀಕ್ಷಣೆಗಳನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಉಪಯುಕ್ತ ಅಂಶಗಳು

೬. ಅ. ಮೂಲ ನೋಂದಣಿ (ವಾತಾವರಣದ ಮೂಲಭೂತ ಪ್ರಭಾವಳಿ) : ಪ್ರಯೋಗದಲ್ಲಿ ಯಾವುದಾದರೊಂದು ಘಟಕದಿಂದ (ಉದಾ. ಈ ಪ್ರಯೋಗದಲ್ಲಿ ನಕಾಶೆಯ ಪ್ರತಿಯನ್ನು ಇಡುವುದರಿಂದ) ವಾತಾವರಣದ ಮೇಲಾಗಿರುವ ಪರಿವರ್ತನೆಯ ಬಗ್ಗೆ ಅಭ್ಯಾಸ ಮಾಡಲು ಆ ಘಟಕದ ‘ಪಿಪ್’ ಛಾಯಾಚಿತ್ರವನ್ನು ತೆಗೆದು ಕೊಳ್ಳುತ್ತಾರೆ; ಆದರೆ ವಾತಾವರಣದಲ್ಲಿ ಸತತವಾಗಿ ಪರಿವರ್ತನೆಯಾಗುತ್ತಿರುತ್ತದೆ, ಆದುದರಿಂದ ಘಟಕದ ಪ್ರಯೋಗ ಮಾಡುವ ಮೊದಲು ಘಟಕವನ್ನು ಇಡಲಿರುವ ವಾತಾವರಣದ ‘ಪಿಪ್’ ಛಾಯಾಚಿತ್ರವನ್ನು ಮೊದಲು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಮೂಲ ನೋಂದಣಿ’ ಎನ್ನುತ್ತಾರೆ. ಘಟಕದ ‘ಪಿಪ್’ ಛಾಯಾಚಿತ್ರವನ್ನು ಮೂಲ ನೋಂದಣಿಯ ಜೊತೆಗೆ, ಅಂದರೆ ವಾತಾವರಣದ ಮೂಲಭೂತ ಪ್ರಭಾವಳಿಯನ್ನು ದರ್ಶಿಸುವ ‘ಪಿಪ್’ ಛಾಯಾಚಿತ್ರ ದೊಂದಿಗೆ ತುಲನೆ ಮಾಡಿದ ನಂತರ ಆ ಘಟಕದಿಂದ ವಾತಾವರಣದಲ್ಲಿ ಆಗಿರುವ ಪರಿವರ್ತನೆಯು ಗಮನಕ್ಕೆ ಬರುತ್ತದೆ.

೬ ಆ. ಮೂಲ ನೋಂದಣಿಯ (ವಾತಾವರಣದ ಮೂಲಭೂತ ಪ್ರಭಾವಳಿಯ) ತುಲನೆಯಲ್ಲಿ ವಸ್ತುವಿನ ಪ್ರಭಾವಲಯವನ್ನು ದರ್ಶಿಸುವ ‘ಪಿಪ್’ ಛಾಯಾಚಿತ್ರದಲ್ಲಿ ಬಣ್ಣಗಳ ಪ್ರಮಾಣದಲ್ಲಿ ಹೆಚ್ಚಳ ಅಥವಾ ಕಡಿಮೆಯಾಗುವುದರ ಹಿಂದಿನ ತತ್ತ್ವ: ಪ್ರಯೋಗಕ್ಕಾಗಿ ವಸ್ತುವನ್ನು (ಉದಾ. ಈ ಪ್ರಯೋಗದಲ್ಲಿ ನಕಾಶೆಯ ಪ್ರತಿ) ಇಡುವ ಮೊದಲಿನ (ಮೂಲ ನೋಂದಣಿಯ) ತುಲನೆಯಲ್ಲಿ ವಸ್ತುವನ್ನು ಇಟ್ಟ ನಂತರದ ಪ್ರಭಾವಳಿಯಲ್ಲಿ ಬಣ್ಣಗಳ ಪ್ರಮಾಣದಲ್ಲಿ ಹೆಚ್ಚು ಅಥವಾ ಕಡಿಮೆಯಾಗುತ್ತದೆ. ಈ ಹೆಚ್ಚಳ ಅಥವಾ ಕುಸಿತವು ಆ ವಸ್ತುವಿನಿಂದ ಪ್ರಕ್ಷೇಪಿತವಾಗುವ ಆ ಬಣ್ಣಗಳಿಗೆ ಸಂಬಂಧಿಸಿದ ಸ್ಪಂದನಗಳ ಪ್ರಮಾಣಕ್ಕನುಸಾರ ಇರುತ್ತದೆ. ಉದಾ. ಪ್ರಯೋಗಕ್ಕಾಗಿ ವಸ್ತುವನ್ನು ಇಟ್ಟ ನಂತರ ಅದರಿಂದ ಚೈತನ್ಯದ ಸ್ಪಂದನಗಳ ಪ್ರಕ್ಷೇಪಣೆಯು ತುಂಬಾ ಪ್ರಮಾಣದಲ್ಲಾದರೆ ಪ್ರಭಾವಳಿಯಲ್ಲಿ ಹಳದಿ ಬಣ್ಣದ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಚೈತನ್ಯದ ಸ್ಪಂದನಗಳ ಪ್ರಕ್ಷೇಪಣೆಯಾಗದಿದ್ದರೆ ಅಥವಾ ಇತರ ಸ್ಪಂದನಗಳ ತುಲನೆಯಲ್ಲಿ ಅಲ್ಪ ಪ್ರಮಾಣದಲ್ಲಾದರೆ ಪ್ರಭಾವಳಿಯಲ್ಲಿ ಹಳದಿ ಬಣ್ಣದ ಪ್ರಮಾಣವು ಕಡಿಮೆಯಾಗುತ್ತದೆ. (ಇದನ್ನು ಗಮನದಲ್ಲಿಟ್ಟು ಕೊಂಡು ‘೭ ಅ’ ಮತ್ತು ‘೭ ಆ’ ಈ ಕೋಷ್ಟಕಗಳನ್ನು ಓದಬೇಕು.)

೬ ಇ. ಪ್ರಭಾವಳಿಯಲ್ಲಿ ಕಾಣಿಸುವ ಬಣ್ಣಗಳ ಮಾಹಿತಿ : ಪ್ರಯೋಗದಲ್ಲಿನ ವಸ್ತುವಿನ (ಅಥವಾ ವ್ಯಕ್ತಿಯ) ‘ಪಿಪ್’ ಛಾಯಾಚಿತ್ರದಲ್ಲಿ ಕಾಣಿಸುವ ಪ್ರಭಾವಳಿಯ ಬಣ್ಣಗಳು ಆ ವಸ್ತುವಿನ ಊರ್ಜಾಕ್ಷೇತ್ರದಲ್ಲಿ ವಿಶಿಷ್ಟ ಸ್ಪಂದನಗಳನ್ನು ದರ್ಶಿಸುತ್ತವೆ. ಪ್ರಭಾವಳಿಯಲ್ಲಿನ ಪ್ರತಿಯೊಂದು ಬಣ್ಣದ ಬಗ್ಗೆ ‘ಪಿಪ್’ ಗಣಕೀಯ ತಂತ್ರಾಂಶದ ನಿರ್ಮಾಪಕರು ಲಭ್ಯ ಮಾಡಿಕೊಟ್ಟ ಮಾಹಿತಿಪುಸ್ತಕದಲ್ಲಿ (‘ಮ್ಯಾನುವಲ್’ದಲ್ಲಿನ) ಮಾಹಿತಿ ಮತ್ತು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಮಾಡಿದ ನೂರಾರು ಪ್ರಯೋಗಗಳ ನಿರೀಕ್ಷಣೆಗಳ ಅನುಭವ ಇವುಗಳ ಆಧಾರದಲ್ಲಿ ‘ಪ್ರತಿಯೊಂದು ಬಣ್ಣವು ಯಾವ ಸ್ಪಂದನಗಳ ದರ್ಶಕವಾಗಿದೆ ?’, ಎಂಬುದನ್ನು ನಿಶ್ಚಯಿಸಲಾಗಿದೆ. ಈ ಅಂಶವು ‘೭ ಅ’ ಈ ಕೋಷ್ಟಕದಲ್ಲಿನ ಎರಡನೇಯ ಉದ್ದನೆಯ ಸ್ತಂಭದಲ್ಲಿ ಕೊಡಲಾಗಿದೆ.

೬ ಈ. ಸಕಾರಾತ್ಮಕ ಸ್ಪಂದನಗಳು : ‘ಪಿಪ್’ ಛಾಯಾಚಿತ್ರದಲ್ಲಿ ತಿಳಿಗುಲಾಬಿ, ಗಿಳಿಹಸಿರು, ಬಿಳಿ (ಬೆಳ್ಳಿಯ ಬಣ್ಣ), ಹಳದಿ, ಗಾಢಹಸಿರು, ಹಸಿರು, ನೀಲಿ ಮತ್ತು ನೇರಳೆ ಈ ಬಣ್ಣಗಳು ಅನುಕ್ರಮವಾಗಿ ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ಲಾಭದಾಯಕದಿಂದ ಕಡಿಮೆ ಲಾಭದಾಯಕ ಸ್ಪಂದನಗಳನ್ನು ದರ್ಶಿಸುತ್ತವೆ.

ಈ ಎಲ್ಲ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿರುವ ಸ್ಪಂದನಗಳಿಗೆ (ಬಣ್ಣಗಳಿಗೆ) ಬರವಣಿಗೆಯಲ್ಲಿ ‘ಸಕಾರಾತ್ಮಕ ಸ್ಪಂದನಗಳು, ಎಂದು ಹೇಳಲಾಗಿದೆ.

೬ ಉ. ನಕಾರಾತ್ಮಕ ಸ್ಪಂದನಗಳು : ‘ಪಿಪ್ ಛಾಯಾಚಿತ್ರದಲ್ಲಿ ಬೂದುಬಣ್ಣ, ಗುಲಾಬಿ, ಕಿತ್ತಳೆ ಮತ್ತು ಕೇಸರಿ ಈ ಬಣ್ಣಗಳು ಅನುಕ್ರಮವಾಗಿ ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ತೊಂದರೆದಾಯಕದಿಂದ ಕಡಿಮೆ ತೊಂದರೆದಾಯಕ ಸ್ಪಂದನಗಳನ್ನು ದರ್ಶಿಸುತ್ತವೆ. ಈ ಎಲ್ಲ ಆಧ್ಯಾತ್ಮಿಕ ದೃಷ್ಟಿಯಿಂದ ತೊಂದರೆದಾಯಕವಾಗಿರುವ ಸ್ಪಂದನಗಳಿಗೆ (ಬಣ್ಣಗಳಿಗೆ) ಬರವಣಿಗೆಯಲ್ಲಿ ‘ನಕಾರಾತ್ಮಕ ಸ್ಪಂದನಗಳು, ಎಂದು ಹೇಳಲಾಗಿದೆ.

೬ ಊ. ‘ಪಿಪ್ ಛಾಯಾಚಿತ್ರದಲ್ಲಿ ಸಾಮಾನ್ಯಕ್ಕಿಂತ ಉಚ್ಚ ಸಕಾರಾತ್ಮಕ ಸ್ಪಂದನಗಳ ದರ್ಶಕವಾಗಿರುವ ಬಣ್ಣಗಳು ಕಾಣಿಸುವುದು ಹೆಚ್ಚು ಉತ್ತಮ ! : ‘ಪಿಪ್ ಛಾಯಾಚಿತ್ರದಲ್ಲಿ ಗಿಳಿಹಸಿರು ಅಥವಾ ಬಿಳಿ (ಬೆಳ್ಳಿಯ ಬಣ್ಣ) ಈ ಉಚ್ಚ ಸಕಾರಾತ್ಮಕ ಸ್ಪಂದನಗಳ ದರ್ಶಕವಾಗಿರುವ ಬಣ್ಣಗಳು ಕಾಣಿಸತೊಡಗಿದರೆ, ಕೆಲವೊಮ್ಮೆ ಹಳದಿ, ಗಾಢಹಸಿರು ಅಥವಾ ಹಸಿರು ಈ ಸಾಮಾನ್ಯ ಸಕಾರಾತ್ಮಕ ಸ್ಪಂದನಗಳ ದರ್ಶಕ ಬಣ್ಣಗಳ ಪ್ರಮಾಣವು ಕಡಿಮೆಯಾಗುತ್ತದೆ. ಇದನ್ನು ಉತ್ತಮ ಪರಿವರ್ತನೆ ಎಂದು ತಿಳಿಯಲಾಗುತ್ತದೆ; ಏಕೆಂದರೆ ಆ ಸಮಯದಲ್ಲಿ ಸಾಮಾನ್ಯ ಸಕಾರಾತ್ಮಕ ಸ್ಪಂದನಗಳ ಜಾಗವನ್ನು ಅದಕ್ಕಿಂತಲೂ ಉಚ್ಚ ಸಕಾರಾತ್ಮಕ ಸ್ಪಂದನಗಳು ತೆಗೆದುಕೊಂಡಿರುತ್ತವೆ.

೬ ಎ. ‘ಪಿಪ್ ಛಾಯಾಚಿತ್ರದಲ್ಲಿ ವೈಶಿಷ್ಟ್ಯಪೂರ್ಣ ಬಣ್ಣಗಳಿಗೆ ಮತ್ತು ಪ್ರತ್ಯಕ್ಷದಲ್ಲಿ ಆಧ್ಯಾತ್ಮಿಕ ಬಣ್ಣಗಳಿಗೆ ಯಾವುದೇ ಸಂಬಂಧ ಇಲ್ಲ : ‘ಪಿಪ್ ಗಣಕೀಯ ತಂತ್ರಾಂಶದ ನಿರ್ಮಾಪಕರು ‘ಪಿಪ್ ಛಾಯಾಚಿತ್ರದಲ್ಲಿ ನಕಾರಾತ್ಮಕ ಸ್ಪಂದನಗಳಿಗಾಗಿ ಕೇಸರಿ ಮತ್ತು ನೇರಳೆ ಈ ಬಣ್ಣಗಳನ್ನು ನಿರ್ಧರಿಸಿದ್ದಾರೆ. ಅವುಗಳ ಮತ್ತು ಪ್ರತ್ಯಕ್ಷ ಆಧ್ಯಾತ್ಮಿಕ ಬಣ್ಣಗಳಿಗೆ (ಉದಾ. ಕೇಸರಿ ಬಣ್ಣವು ತ್ಯಾಗ ಮತ್ತು ವೈರಾಗ್ಯದ ಪ್ರತೀಕವಾಗಿದೆ.) ಯಾವುದೇ ಸಂಬಂಧವಿಲ್ಲ.

೭. ನಿರೀಕ್ಷಣೆಗಳು

೭ ಅ. ನಿರೀಕ್ಷಣೆ ೧ – ‘ಪಿಪ್ ಛಾಯಾಚಿತ್ರಗಳಲ್ಲಿ ಕಾಣಿಸುವ ಪ್ರಭಾವಲಯಗಳ ಬಣ್ಣ, ಅವು ಯಾವುದರ ದರ್ಶಕವಾಗಿವೆ ಮತ್ತು ಅವುಗಳ ಪ್ರಮಾಣದಲ್ಲಾದ ಹೆಚ್ಚಳ ಅಥವಾ ಕಡಿಮೆ : ಅಖಂಡ ಭಾರತದ ನಕಾಶೆ ಮತ್ತು ಸದ್ಯದ ಭಾರತದ ನಕಾಶೆ ಇವುಗಳ ಪ್ರಭಾವಲಯಗಳ ತುಲನೆಯನ್ನು ಮೂಲ ನೋಂದಣಿಯ ಜೊತೆಗೆ ಮಾಡಲಾಗಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕೋಷ್ಟಕವನ್ನು ನೋಡಬೇಕು.

ಟಿಪ್ಪಣಿ ೧ : ಘಟಕದ ಅಂತರ್ಬಾಹ್ಯ ಸ್ತರದಲ್ಲಿ ನಕಾರಾತ್ಮಕ ಸ್ಪಂದನಗಳನ್ನು ನಾಶ ಮಾಡುವ ಮತ್ತು ಸಕಾರಾತ್ಮಕ ಸ್ಪಂದನಗಳನ್ನು ವೃದ್ಧಿಸುವ ಕ್ಷಮತೆ

ಟಿಪ್ಪಣಿ ೨. : ಪಿಪ್ ಛಾಯಾಚಿತ್ರದ ಬಿಳಿ ಬಣ್ಣವು ಪೂರ್ತಿ ಬಿಳಿ ಕಾಣಿಸುವುದಿಲ್ಲ, ಹಾಗೆಯೇ ‘ಪಿಪ್ ಮಾಹಿತಿಪುಸ್ತಕದಲ್ಲಿ (ಮ್ಯಾನುವಲ್‌ನಲ್ಲಿ) ‘ಬಿಳಿ/ ಸಿಲ್ವರ್ ಎಂಬ ಉಲ್ಲೇಖವು ಕಂಡು ಬಂದುದರಿಂದ ‘ಬಿಳಿ / ಬೆಳ್ಳಿಬಣ್ಣ  ಈ ಶಬ್ದಗಳನ್ನು ಉಪಯೋಗಿಸಲಾಗಿದೆ.

ಟಿಪ್ಪಣಿ ೩ : ಘಟಕದ ಕೇವಲ ಬಾಹ್ಯ ಸ್ತರದಲ್ಲಿನ ನಕಾರಾತ್ಮಕ ಸ್ಪಂದನಗಳನ್ನು ನಾಶ ಮಾಡುವ ಮತ್ತು ಸಕಾರಾತ್ಮಕ ಸ್ಪಂದನಗಳನ್ನು ವೃದ್ಧಿಸುವ ಕ್ಷಮತೆ ವಿಭಜನೆಯ ಮೊದಲು ನಕಾಶೆಯಲ್ಲಿನ ಸಕಾರಾತ್ಮಕ ಸ್ಪಂದನಗಳ ಪ್ರಮಾಣ ಶೇ. ೮೦ ರಷ್ಟಿದೆ ಮತ್ತು ವಿಭಜನೆಯ ನಂತರದ ನಕಾಶೆಯಲ್ಲಿ ಅದು ಕಡಿಮೆ, ಅಂದರೆ ಶೇ. ೬೪ ರಷ್ಟೇ ಇದೆ. ಇದು ಮೇಲಿನ ಕೋಷ್ಟಕದಿಂದ ಸ್ಪಷ್ಟವಾಗುತ್ತದೆ.

೭ ಆ. ನಿರೀಕ್ಷಣೆ ೩ – ‘ಪಿಪ್ ಛಾಯಾಚಿತ್ರಗಳಲ್ಲಿ ಪ್ರತಿಯೊಂದು ಸ್ಪಂದನಗಳ (ಬಣ್ಣಗಳ) ಪ್ರಮಾಣ (ಶೇ.)

೮. ನಿರೀಕ್ಷಣೆಗಳ ವಿವರಣೆ ಮತ್ತು ನಿಷ್ಕರ್ಷ

೮ ಅ. ಮೂಲ ನೋಂದಣಿ – ಸನಾತನಆಶ್ರಮ ದಲ್ಲಿನ ಸಾತ್ತ್ವಿಕ ವಾತಾವರಣದಿಂದ ಸಕಾರಾತ್ಮಕ ಸ್ಪಂದನಗಳ ಪ್ರಮಾಣವು ಹೆಚ್ಚಿರುವುದು : ಕಲಿಯುಗದಲ್ಲಿ ಸರ್ವಸಾಧಾರಣ ವಾಸ್ತುಗಳಲ್ಲಿ ಸಕಾರಾತ್ಮಕ ಸ್ಪಂದನಗಳಿಗಿಂತ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವ ಪ್ರಮಾಣವು ಹೆಚ್ಚಿರುತ್ತದೆ. ಈ ಪ್ರಯೋಗವನ್ನು ಅತ್ಯಂತ ಸಾತ್ತ್ವಿಕ ವಾದ ಸನಾತನ ಆಶ್ರಮದಲ್ಲಿ ಮಾಡಿದುದರಿಂದ ವಾತಾವರಣದ ಮೂಲಭೂತ ಪ್ರಭಾವಳಿಯಲ್ಲಿ ಸಕಾರಾತ್ಮಕ ಸ್ಪಂದನಗಳ ಒಟ್ಟು ಪ್ರಮಾಣವು ನಕಾರಾತ್ಮಕ ಸ್ಪಂದನಗಳಿಗಿಂತ ಹೆಚ್ಚಿದೆ.

೮ ಆ. ಅಖಂಡ ಭಾರತದ ನಕಾಶೆಯ ಪ್ರಭಾವಳಿಯಲ್ಲಿ ಪಾವಿತ್ರ್ಯದ ಬಿಳಿ (ಬೆಳ್ಳಿಯ) ಬಣ್ಣವು ಬಹಳಷ್ಟು ಪ್ರಮಾಣದಲ್ಲಿ ಕಾಣಿಸುವುದು : ಸದ್ಯದ ಭಾರತದ ನಕಾಶೆಯ ತುಲನೆಯಲ್ಲಿ ಅಖಂಡ ಭಾರತದ ನಕಾಶೆಯ ಪ್ರಭಾವಲಯದಲ್ಲಿ ಸಕಾರಾತ್ಮಕ ಬಣ್ಣಗಳ ಪೈಕಿ ಚೈತನ್ಯದ ಹಳದಿ, ಉಚ್ಚ ಮಟ್ಟದ ಪಾವಿತ್ರ್ಯದ  ಬಿಳಿ (ಬೆಳ್ಳಿಯ) ಬಣ್ಣ ಮತ್ತು ಸ್ವಲ್ಪ ಪ್ರಮಾಣದಲ್ಲಿ ಸೂಕ್ಷ್ಮ ಸ್ತರದಲ್ಲಿನ ಆಧ್ಯಾತ್ಮಿಕ ಉಪಾಯಕ್ಷಮತೆಯಿರುವ ಗಿಳಿಹಸಿರು ಬಣ್ಣವೂ ಕಾಣಿಸತೊಡಗಿತು ಮತ್ತು ನಕಾರಾತ್ಮಕ ಬಣ್ಣಗಳ ಪೈಕಿ ಕೇಸರಿ ಮತ್ತು ಭಾವನಾತ್ಮಕ ಒತ್ತಡದ ಕಿತ್ತಳೆ ಬಣ್ಣವು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ, ಅಂದರೆ ಈ ನಕಾಶೆಯಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ ಸ್ಪಂದನಗಳ ಪ್ರಮಾಣವು ಹೆಚ್ಚಿದೆ. ಇದರ ಕಾರಣವು ಸದ್ಯದ ತುಲನೆಯಲ್ಲಿ ಮೊದಲು ಸಮಾಜವು ಹೆಚ್ಚು ಪ್ರಮಾಣದಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುತ್ತಿದ್ದುದರಿಂದ ಸಾತ್ತ್ವಿಕತೆಯ ಪ್ರಮಾಣವು ಈಗಿನ ತುಲನೆಯಲ್ಲಿ ಆಗ ಹೆಚ್ಚಿತ್ತು. ಆಗ ರಾಜಕೀಯ ದೃಷ್ಟಿಯಲ್ಲಿ ಭಾರತವು ಪಾರತಂತ್ರ್ಯದಲ್ಲಿತ್ತು; ಆದರೆ ಆ ಕಾಲದಲ್ಲಿ ಹೆಚ್ಚಿನ ಜನರಲ್ಲಿ ಪ್ರಖರ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವಿತ್ತು. ಅವರಲ್ಲಿ ತಮ್ಮ ಸುಖವನ್ನು ತ್ಯಾಗ ಮಾಡಿ ಸ್ವಾತಂತ್ರ್ಯಕ್ಕಾಗಿ ಸರ್ವಸ್ವದ ಬಲಿದಾನವನ್ನು ನೀಡುವ ಸಿದ್ಧತೆ ಇತ್ತು. ಆಗ ಸಮಾಜದಲ್ಲಿ ಅಪರಾಧ, ಭ್ರಷ್ಟಾಚಾರ, ಹಾಗೆಯೇ ಜಲ-ವಾಯು ಮುಂತಾದ ನೈಸರ್ಗಿಕ ಘಟಕಗಳ ಪ್ರದೂಷಣೆಯು ಸಾಂಪ್ರತ ಕಾಲದ ತುಲನೆಯಲ್ಲಿ ಕಡಿಮೆಯಿತ್ತು.

೮ ಇ. ಅಖಂಡ ಭಾರತದ ನಕಾಶೆಯ ತುಲನೆಯಲ್ಲಿ ಈಗಿನ ಭಾರತದ ನಕಾಶೆಯಿಂದ ಆಧ್ಯಾತ್ಮಿಕ ದೃಷ್ಟಿಯಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ : ಅಖಂಡ ಭಾರತದ ನಕಾಶೆಯ ತುಲನೆಯಲ್ಲಿ ಸದ್ಯದ ಭಾರತದ ನಕಾಶೆಯ ಪ್ರಭಾವಲಯದಲ್ಲಿ ಚೈತನ್ಯದ ಹಳದಿ ಬಣ್ಣವು ತುಂಬಾ ಕಡಿಮೆಯಾಯಿತು, ಮತ್ತು ನಕಾರಾತ್ಮಕತೆಯ ಕೇಸರಿ ಮತ್ತು ಕಿತ್ತಳೆ ಬಣ್ಣವು ಹೆಚ್ಚಾಗಿದೆ, ಅಂದರೆ ಈ ನಕಾಶೆಯಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕ ಸ್ಪಂದನಗಳ ಪ್ರಮಾಣವು ಕಡಿಮೆ ಇದೆ. ಇದರ ಕಾರಣವೆಂದರೆ ಹಿಂದಿನ ತುಲನೆಯಲ್ಲಿ ಸದ್ಯದ ಭಾರತದಲ್ಲಿ ಸಾತ್ತ್ವಿಕತೆಯ ಪ್ರಮಾಣವು ತುಂಬಾ ಕಡಿಮೆ ಇದೆ. ಸದ್ಯದ ಭಾರತವು ರಾಜಕೀಯ ದೃಷ್ಟಿಯಿಂದ ಸ್ವತಂತ್ರವಾಗಿದೆ; ಆದರೆ ಹೆಚ್ಚಿನ ಜನರಲ್ಲಿ ತಮ್ಮ ಸುಖಕ್ಕೆ ಸರ್ವೋಚ್ಚ ಆದ್ಯತೆಯನ್ನು ನೀಡುವ ಆತ್ಮಕೇಂದ್ರಿತ ವೃತ್ತಿಯು ಹೆಚ್ಚು ಪ್ರಮಾಣದಲ್ಲಿ ಕಂಡು ಬರುತ್ತದೆ. ರಾಜಕಾರಣಿಗಳು ಭಾರತವನ್ನು ‘ಜಾತ್ಯತೀತ ರಾಷ್ಟ್ರವೆಂದು ಘೋಷಿಸಿದರು. ಅದರಿಂದಾಗಿ ಈ ದೇಶದಲ್ಲಿ ಧರ್ಮದ ಅಧಿಷ್ಠಾನ ಉಳಿಯಲಿಲ್ಲ. ಸ್ವಾತಂತ್ರ್ಯದ ನಂತರ ಸಮಾಜಕ್ಕೆ ಸಾಧನೆಯನ್ನು ಕಲಿಸದಿರುವುದರಿಂದ ಸಮಾಜದ ಆಧ್ಯಾತ್ಮಿಕ, ಹಾಗೆಯೇ ನೈತಿಕದೃಷ್ಟಿಯಲ್ಲಿಯೂ ಅಧಃಪತನವಾಯಿತು. ಅಪರಾಧ, ಭ್ರಷ್ಟಾಚಾರಗಳು ಪರಾಕಾಷ್ಠೆಗೆ ತಲುಪಿವೆ. ನಗರಗಳು ಹೆಚ್ಚಾಗಿರುವುದರಿಂದ ಜಲ-ವಾಯು ಮುಂತಾದ ನೈಸರ್ಗಿಕ ಘಟಕಗಳ ಪ್ರದೂಷಣೆ ತುಂಬಾ ಹೆಚ್ಚಾಗಿದೆ. ದೇಶದಲ್ಲಿರುವ ವ್ಯಕ್ತಿಗಳಿಂದ ಬರುವ ಸ್ಪಂದನಗಳು ಆ ದೇಶದ ನಕಾಶೆಯಲ್ಲಿಯೂ ಆಕರ್ಷಿಸುತ್ತವೆ. ಕೇವಲ ಆರ್ಥಿಕ ದೃಷ್ಟಿಯಿಂದ ಬಲಿಷ್ಠ ರಾಷ್ಟ್ರವಾಗುವುದರಿಂದಲ್ಲ, ಭಾgತೀಯರು ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಂಡರೆ ಭಾರತೀಯರ ಜೀವನವು ಆನಂದದಾಯಕವಾಗು ವುದು ಇದು ಈ ವೈಜ್ಞಾನಿಕ ಪ್ರಯೋಗದಿಂದ ಗಮನಕ್ಕೆ ಬಂದಿತು.

– ಶ್ರೀ. ರೂಪೇಶ ಲಕ್ಷ್ಮಣ ರೆಡಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ (೧೫.೧೧.೨೦೧೬)

ಈ-ಮೆಲ್ : [email protected]

ಯಾವುದಾದರೊಂದು ಘಟಕದ ಆಧ್ಯಾತ್ಮಿಕ ಸ್ತರದ ವೈಶಿಷ್ಟ್ಯಗಳನ್ನು ವೈಜ್ಞಾನಿಕ ಉಪಕರಣಗಳ ಮೂಲಕ ಅಧ್ಯಯನ ಮಾಡುವುದರ ಉದ್ದೇಶ !

‘ಯಾವುದಾದರೊಂದು ಘಟಕದಲ್ಲಿ (ವಸ್ತು, ವಾಸ್ತು, ಪ್ರಾಣಿ ಮತ್ತು ವ್ಯಕ್ತಿ ಇವರಲ್ಲಿ) ಶೇಕಡಾ ಎಷ್ಟು ಸಕಾರಾತ್ಮಕ ಸ್ಪಂದನಗಳಿವೆ ? ಆ ಘಟಕವು ಸಾತ್ತ್ವಿಕವಾಗಿದೆಯೇ ಅಥವಾ ಇಲ್ಲವೋ ಅಥವಾ ಆ ಘಟಕವು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆಯೋ ಅಥವಾ ಇಲ್ಲವೋ ?, ಎಂಬುದನ್ನು ಹೇಳಲು ಸೂಕ್ಷ್ಮದಲ್ಲಿ ವಿಷಯಗಳು  ತಿಳಿಯುವುದು ಆವಶ್ಯಕವಾಗಿದೆ. ಉನ್ನತ ಮಟ್ಟದ ಸಂತರಲ್ಲಿ ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವ ಶಕ್ತಿ ಇರುತ್ತದೆ ಆದುದರಿಂದ ಅವರು ಪ್ರತಿಯೊಂದು ಘಟಕದಲ್ಲಿ ಸ್ಪಂದನಗಳನ್ನು ನಿಖರವಾಗಿ ಗುರುತಿಸುತ್ತಾರೆ. ಭಕ್ತರು ಮತ್ತು ಸಾಧಕರು, ಸಂತರು ಹೇಳಿದ ಶಬ್ದಗಳನ್ನು ‘ಪ್ರಮಾಣವೆಂದು ತಿಳಿದು ಅದರ ಮೇಲೆ ಶ್ರದ್ಧೆಯನ್ನಿಡುತ್ತಾರೆ; ಆದರೆ ಬುದ್ಧಿಜೀವಿಗಳಿಗೆ ಮಾತ್ರ ‘ಶಬ್ದಪ್ರಮಾಣವಲ್ಲ, ‘ಪ್ರತ್ಯಕ್ಷ ಪ್ರಮಾಣ ಬೇಕಾಗುತ್ತದೆ. ಅವರಿಗೆ ಪ್ರತಿಯೊಂದು ವಿಷಯವನ್ನು ವೈಜ್ಞಾನಿಕ ಪರೀಕ್ಷಣೆಯ ಮೂಲಕ, ಅಂದರೆ ಯಂತ್ರದಿಂದ ಸಿದ್ಧ ಮಾಡಿ ತೋರಿಸಿದರೆ ಮಾತ್ರ, ಅದು ನಿಜವೆನಿಸುತ್ತದೆ.

ಟಿಪ್ಪಣಿ : ಛಾಯಾಚಿತ್ರಗಳಲ್ಲಿ ಕಾಣಿಸುವ ವಿವಿಧ ಬಣ್ಣಗಳ ಪ್ರಮಾಣವನ್ನು ನಿರ್ಧರಿಸಲು ‘ಪಿಪ್ ಛಾಯಾಚಿತ್ರದ ಮೇಲೆ ಆ ಲೇಖದ ಕಾಗದದ ಮೇಲೆ ಇರುವಂತಹ, ಅನೇಕ ಚೌಕಟ್ಟುಗಳನ್ನು ಗಣಕೀಯ ತಂತ್ರಾಂಶದ ಮೂಲಕ ಮಾಡಲಾಯಿತು. ಅದರ ನಂತರ ಛಾಯಾಚಿತ್ರದಲ್ಲಿ ಒಟ್ಟು ಚೌಕಟ್ಟುಗಳು ಮತ್ತು ಅವುಗಳ ತುಲನೆಯಲ್ಲಿ ಪ್ರಭಾವಳಿಯಲ್ಲಿನ ಪ್ರತಿಯೊಂದು ಬಣ್ಣದಿಂದ ವ್ಯಾಪಿಸಿದ ಚೌಕಟ್ಟುಗಳ ಸಂಖ್ಯೆಯನ್ನು ಅಳೆದೆವು. ಅವುಗಳನ್ನು ಶೇಕಡಾವಾರುಗಳಲ್ಲಿ ರೂಪಾಂತರಿಸಿ ಪ್ರಭಾವಳಿಯಲ್ಲಿನ ಪ್ರತಿಯೊಂದು ಬಣ್ಣದ ಪ್ರಮಾಣವನ್ನು (ಶೇ.) ಸರ್ವಸಾಧಾರಣ ನಿರ್ಧರಿಸಿದೆವು.