ಪೂರ್ಣವೇಳೆ ಸಾಧನೆಯನ್ನು ಮಾಡಲು ಇಚ್ಛಿಸುವವರಿಗೆ ಮಹತ್ವದ ಸೂಚನೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಸಾಧನೆಯ ಅಡಚಣೆಗಳನ್ನು ಬುದ್ಧಿನಿಶ್ಚಯದ ಮೂಲಕ ಎದುರಿಸಲು ಸ್ವಯಂಸೂಚನೆ ನೀಡಿ ಮತ್ತು ಶೀಘ್ರವಾಗಿ ಪೂರ್ಣವೇಳೆ ಸಾಧನೆಯ ಜೀವನೋದ್ಧಾರಕ ಹೆಜ್ಜೆಯನ್ನಿಡಿ !

‘ಶೇ. ೫೬ ರಷ್ಟು ಆಧ್ಯಾತ್ಮಿಕ ಮಟ್ಟಕ್ಕಿಂತ ಮುಂದೆ ಹೋದಾಗ ಪೂರ್ಣವೇಳೆ ಸಾಧಕರಾಗುವ ಸಂದರ್ಭದಲ್ಲಿ ಮನಸ್ಸಿನಲ್ಲಿ ವಿಕಲ್ಪ ನಿರ್ಮಾಣವಾಗುವುದಿಲ್ಲ. ಅದಕ್ಕಿಂತ ಕಡಿಮೆ ಮಟ್ಟವಿರುವ ಸಾಧಕರಿಗೆ ನಿರ್ಣಯವನ್ನು ತೆಗೆದುಕೊಳ್ಳಲು ಕಠಿಣವಾಗುತ್ತದೆ. ಅವರಿಗೆ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತೆ ಏನು ಮಾಡಬೇಕು ?, ಎಂಬ ಕುರಿತು ಮಾರ್ಗದರ್ಶನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

೧, ಪೂರ್ಣವೇಳೆ ಸಾಧನೆಯನ್ನು ಮಾಡಲು ಇಚ್ಛೆ ಇರುವ ಸಾಧಕರು ಬುದ್ಧಿಯ ದೃಢ ನಿರ್ಧಾರವನ್ನು ಮಾಡುವುದು ಆವಶ್ಯಕ !

ಅನೇಕ ಸಾಧಕರು ತಮ್ಮ ಶಿಕ್ಷಣ, ನೌಕರಿ ಅಥವಾ ಉದ್ಯೋಗವನ್ನು ಬಿಟ್ಟು ಪೂರ್ಣವೇಳೆ ಸಾಧನೆಯನ್ನು ಮಾಡಲು ಆಸಕ್ತರಾಗಿರುತ್ತಾರೆ. ಆ ರೀತಿ ಅವರು ಜವಾಬ್ದಾರ ಸಾಧಕರಲ್ಲಿ ತಮ್ಮ ಇಚ್ಛೆಯನ್ನು ಕೂಡ ವ್ಯಕ್ತಪಡಿಸಿರುತ್ತಾರೆ. ಆಂತರಿಕ ಇಚ್ಛೆಯಿರುವಾಗಲೂ ಕೌಟುಂಬಿಕ ತೊಂದರೆಗಳು ಹಾಗೆಯೇ ಮನಸ್ಸಿನ ಸ್ತರದಲ್ಲಿ ತೊಂದರೆಗಳಿಂದಾಗಿ ಅವರು ಪೂರ್ಣ ವೇಳೆ ಸಾಧನೆಯನ್ನು ಮಾಡುವ ದೃಢ ನಿರ್ಧಾರವನ್ನು ಬೇಗನೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಸಾಧಕರು ಬುದ್ಧಿಯಿಂದ ದೃಢ ನಿರ್ಧಾರವನ್ನು ಮಾಡಿದರೆ ಆ  ತೊಂದರೆಗಳು ಈಶ್ವರನ ಕೃಪೆಯಿಂದ ಸಹಜವಾಗಿಯೇ ನಿವಾರಣೆಯಾಗುವುದು.

೨. ಮುಂದಿನ  ಸ್ವಯಂಸೂಚನೆಯನ್ನು ತೆಗೆದುಕೊಂಡು ಸಾಧನೆಯನ್ನು ಮಾಡುವ ನಿರ್ಧಾರವನ್ನು ಮಾಡಿರಿ !

ಮನಸ್ಸಿನ ದ್ವಂದ್ವ ದೂರವಾಗಿ ಸಾಧನೆಗಾಗಿ ಬುದ್ಧಿಯ ದೃಢನಿಶ್ಚಯವಾಗಲು ಸಾಧಕರು ಮುಂದಿನಂತೆ ಸ್ವಯಂಸೂಚನೆಯನ್ನು ನೀಡಬೇಕು, ‘ಇಲ್ಲಿಯವರೆಗೆ ನಾನು ತೆಗೆದುಕೊಂಡ / ಅನುಭವಿಸಿದ ಶೈಕ್ಷಣಿಕ ಜೀವನದಲ್ಲಿ / ಕೌಟುಂಬಿಕ ಜೀವನದಲ್ಲಿ / ಉದ್ಯೋಗ ಜೀವನದಲ್ಲಿ ಸಮಾಧಾನಕ್ಕೆ ಮಿತಿ ಇರುತ್ತದೆ. ಗುರುಕೃಪೆಯಿಂದ ಸಾಧನೆಯ ಪ್ರಯತ್ನ ಮಾಡುವುದರಿಂದ ನನಗೆ ಎಲ್ಲಕ್ಕಿಂತ ಹೆಚ್ಚು ಆನಂದ ದೊರೆಯುತ್ತಿದೆ. ‘ಪೂರ್ಣವೇಳೆ ಸಾಧಕರಾಗುವುದರಲ್ಲಿ ಬರುವ ತೊಂದರೆಗಳನ್ನು ನಿವಾರಿಸಲು ನಾನು ಹೇಗೆ ಪ್ರಯತ್ನಿಸಬೇಕು ?, ಇದರ ಬಗ್ಗೆ ಜವಾಬ್ದಾರ ಸಾಧಕರು ಮಾಡಿರುವ ಮಾರ್ಗದರ್ಶನಕ್ಕನುಸಾರ ಹಂತಹಂತವಾಗಿ ಪ್ರಯತ್ನಿಸಿದಾಗ ಕೊನೆಯಲ್ಲಿ ದೇವರೇ ನನ್ನನ್ನು ಅದಕ್ಕಾಗಿ ಸಿದ್ಧಪಡಿಸುವನು ಮತ್ತು ಪೂರ್ಣ ವೇಳೆ ಸಾಧನೆಗಾಗಿ ಆತ್ಮಬಲವನ್ನು ನೀಡುವನು.

೩. ಇತರ ಅಂಶಗಳು

ಅ. ‘ಪೂರ್ಣವೇಳೆ ಸಾಧನೆ ಪ್ರಾರಂಭಿಸಿದ ಮೇಲೆ ಕೌಟುಂಬಿಕ ತೊಂದರೆಗಳು ಬರುವುದು, ಎಂದು ಅನಿಸುತ್ತಿದ್ದರೆ, ಆ ಕುರಿತು ಜವಾಬ್ದಾರ ಸಾಧಕರೊಂದಿಗೆ ಮನಮುಕ್ತವಾಗಿ ಮಾತನಾಡಬೇಕು ಅವರು ತಿಳಿಸುವ ಪರಿಹಾರಾತ್ಮಕ ದೃಷ್ಟಿಕೋನವನ್ನು ಅಳವಡಿಸಿಕೊಂಡು ಸ್ವಯಂ ಸೂಚನೆಯನ್ನು ಕೊಡಬಹುದು.

ಆ. ‘ತಮ್ಮ ಪ್ರಕೃತಿ ಮತ್ತು ಪರಿಸ್ಥಿತಿಯೊಂದಿಗೆ ಹೋಲಿಕೆಯಿರುವ ಪೂರ್ಣವೇಳೆ ಸಾಧಕರು ‘ಈ ನಿರ್ಣಯವನ್ನು ತೆಗೆದುಕೊಳ್ಳಲು ಮನಸ್ಸಿನ ನಿರ್ಧಾರವನ್ನು ಹೇಗೆ ಮಾಡಿದ್ದಾರೆ ? ಎಂಬ ಕುರಿತು ಅವರನ್ನು ಕೇಳಿ ತಿಳಿದುಕೊಳ್ಳಬಹುದು.

ಇ. ಆಧ್ಯಾತ್ಮಿಕ ತೊಂದರೆಯಿಂದ ‘ಪೂರ್ಣ ವೇಳೆ ಸಾಧನೆಯ ನಿರ್ಣಯವನ್ನು ತೆಗೆದುಕೊಳ್ಳಬಾರದು, ಎಂದು ಅನಿಸುತ್ತಿದ್ದರೆ, ಆಧ್ಯಾತ್ಮಿಕ ಉಪಾಯವನ್ನು ಹೆಚ್ಚಿಸಬೇಕು. ಹಾಗೆಯೇ ಜವಾಬ್ದಾರ ಸಾಧಕರೊಂದಿಗೆ ಚರ್ಚಿಸಬೇಕು.

ಈ. ಆಶ್ರಮದಲ್ಲಿ ವಾಸ್ತವ್ಯವಿದ್ದು ಪೂರ್ಣ ವೇಳೆ ಸಾಧನೆಯನ್ನು ಮಾಡುವುದು ಕಠಿಣವೆನಿಸಿದರೆ ಸ್ವಲ್ಪಕಾಲಾವಧಿಗಾಗಿ ಆಶ್ರಮದಲ್ಲಿದ್ದು ಆಶ್ರಮ ಜೀವನದ ಅನುಭವವನ್ನು ಪಡೆಯಬೇಕು. ಕೆಲವು ಸಾಧಕರು ಈ ಪ್ರಯತ್ನವನ್ನು ಮಾಡಿದ ಬಳಿಕ ನಿರ್ಣಯವನ್ನು ತೆಗೆದುಕೊಳ್ಳಲು ಅವರ ಆತ್ಮವಿಶ್ವಾಸ ಹೆಚ್ಚಾಯಿತು ಮತ್ತು ಅವರು ಪೂರ್ಣವೇಳೆ ಸಾಧನೆಯನ್ನು ಆರಂಭಿಸಿದರು.

ಆಪತ್ಕಾಲದ ತೀವ್ರತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದುದರಿಂದ ಮಹಾಭಾಗ್ಯದಿಂದ ದೊರಕಿರುವ ಮನುಷ್ಯಜನ್ಮದ ಉದ್ಧಾರ ಮಾಡಲು ಸಮಯವನ್ನು ವ್ಯರ್ಥಗೊಳಿಸದೇ ಪೂರ್ಣವೇಳೆ ಸಾಧನೆಗೆ ಶೀಘ್ರಗತಿಯಿಂದ ಹೆಜ್ಜೆಯನ್ನಿಡಿರಿ !

– ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ (೨೮.೧.೨೦೧೯)