ದತ್ತಾತ್ರೇಯ ಅವತಾರ

೧. ದತ್ತಾತ್ರೇಯರ ಪ್ರಗಟೀಕರಣ : ‘ಸೃಷ್ಟಿ ನಿರ್ಮಿತಿಯನ್ನು ಮಾಡುವ ರಜೋಗುಣಿ ಬ್ರಹ್ಮದೇವರು, ಸೃಷ್ಟಿಯ ಪಾಲನೆಯನ್ನು ಮಾಡುವ ಸತ್ವಗುಣಿ ವಿಷ್ಣು ಮತ್ತು ಸೃಷ್ಟಿಯ ವಿನಾಶವನ್ನು ಮಾಡುವ ತಮೋಗುಣಿ ರುದ್ರ, ಈ ಮೂರು ದೇವರು ಅತಿಥಿಯಾಗಿ ಅನಸೂಯಾರ ಸತ್ವಪರೀಕ್ಷೆಗಾಗಿ ಭಿಕ್ಷೆ ಬೇಡುವ ನೆಪದಲ್ಲಿ ಬಂದರು; ಆದರೆ ಅನಸೂಯಾಳ ಪಾತಿವ್ರತ್ಯದ ಪ್ರಭಾವದಿಂದ ಮೂರು ದೇವರು ಮಗುವಾದರು. ಅತ್ರಿ ಮತ್ತು ಅನಸೂಯಾ ಇವರು ಈ ಮೂರು ದೇವರನ್ನು ‘ಅವರು ತಮ್ಮ ಪುತ್ರರೆಂದು ಇಲ್ಲೇ ಇರಬೇಕೆಂದು’ ವರ ಕೇಳಿದರು. ಆಗ ದೇವರು ಹೇಳಿದರು, ‘ದತ್ತ’ ಎಂದರೆ ‘ನೀಡಿದೆ’ ಎಂದರ್ಥ. ಅತ್ರಿಪುತ್ರ ಎಂದು ಆತ್ರೇಯ, ಈ ರೀತಿಯಾಗಿ ‘ದತ್ತಾತ್ರೇಯ’ ಎಂದು ಹೆಸರು ಅವರಿಗೆ ದೊರೆಯಿತು.

೨. ಯಾವ ಸ್ಥಳದಲ್ಲಿ ತ್ರಿಗುಣದ ಪ್ರಭಾವ ಇರುವುದಿಲ್ಲವೋ, ಅದು ಅತ್ರಿ, ದ್ವೇಷ ಮತ್ತು ಮತ್ಸರ ಮುಂತಾದ ದುಷ್ಟ ಭಾವನೆ ಯಾರಲ್ಲಿ ಇರುವುದಿಲ್ಲವೋ, ಆಕೆ ಅನುಸೂಯಾ, ದತ್ತಾತ್ರೇಯ ಅಂದರೆ ಜ್ಞಾನ.

(ಆಧಾರ : ಶ್ರೀ. ವಿ.ಗೊ. ದೇಸಾಯಿ, ‘ಗೀತಾ ಮಂದಿರ ಪತ್ರಿಕಾ’, ಡಿಸೆಂಬರ್‌ ೧೯೯೮)