ಏಕಮುಖಿ ಮತ್ತು ತ್ರಿಮುಖಿ ದತ್ತಾತ್ರೇಯರ ಮೂರ್ತಿಗಳು !

೧. ಉಪನಿಷತ್ತುಗಳು, ಪುರಾಣ, ಮಹಾಭಾರತ ಮತ್ತು ಪ್ರಾಚೀನ ಮೂರ್ತಿವಿಜ್ಞಾನ ಇವುಗಳಲ್ಲಿರುವ ಏಕಮುಖಿ ದತ್ತಾತ್ರೇಯರ ವರ್ಣನೆ : ‘ಇಂದು ಎಲ್ಲೆಡೆ ತ್ರಿಮುಖಿ ದತ್ತರ ಮೂರ್ತಿಗಳು ಕಂಡು ಬರುತ್ತವೆ. ಉಪ ನಿಷತ್ತುಗಳಲ್ಲಿ, ಪುರಾಣಗಳಲ್ಲಿ ಮತ್ತು ಮಹಾಭಾರತದಲ್ಲಿ ಏಕಮುಖಿ ದತಾತ್ರೇಯರನ್ನು ವರ್ಣಿಸಲಾಗಿದೆ. ಇಷ್ಟೇ ಅಲ್ಲದೇ, ಪ್ರಾಚೀನ ಮೂರ್ತಿವಿಜ್ಞಾನದಲ್ಲಿಯೂ ಏಕಮುಖಿ ದತ್ತಾತ್ರೇಯರನ್ನೇ ವರ್ಣಿಸಲಾಗಿದೆ. ಭಾಗವತದಲ್ಲಿ ದೇವತ್ರಯಿಗಳು (ದತ್ತರು) ಅತ್ರಿಋಷಿಗಳಿಗೆ ‘ಯದ್‌ ವೈ ಧ್ಯಾಯತಿ ತೆ ವಯಮ್‌ |’ ‘ನೀನು ಯಾವ ಒಂದು ತತ್ತ್ವದ ಧ್ಯಾನವನ್ನು ಮಾಡುತ್ತಿರುವಿಯೋ, ಅದರಲ್ಲಿಯೇ ನಾವು ಮೂವರು ಅಂಶರೂಪದಲ್ಲಿ ಇದ್ದೇವೆ’, ಎಂದು ಹೇಳಿದರು. ಮುಂದೆ ಹದಿಮೂರನೇ ಶತಮಾನದಿಂದ ‘ತ್ರಿಗುಣಾತ್ಮಕ ತ್ರೈಮೂರ್ತಿ’ ಹೀಗೆ ದತ್ತಾತ್ರೇಯರ ಸ್ವರೂಪವಿದೆ.

೨. ಅನೇಕ ಸಾಕ್ಷಾತ್ಕಾರಿ ದತ್ತಭಕ್ತರಿಗೆ ಘಟಿಸಿದ ಏಕಮುಖಿ ದತ್ತಾತ್ರೇಯರ ದರ್ಶನ

೨ ಅ. ಅನೇಕ ಸಾಕ್ಷಾತ್ಕಾರಿ ದತ್ತಭಕ್ತರಿಗೆ ಏಕಮುಖಿ ದತ್ತಾತ್ರೇಯರ ದರ್ಶನವಾಗಿದೆ : ‘ಗುರುಚರಿತ್ರೆ’ಯಲ್ಲಿನ ಪರಂಪರೆಯನ್ನು ಆದರಣೀಯ ಎಂದು ನಂಬುವ ಮತ್ತು ನೃಸಿಂಹ ವಾಡಿಯಿಂದ (ನರಸೋಬಾನ ವಾಡಿಯಿಂದ) ದತ್ತಭಕ್ತಿಯ ಪ್ರೇರಣೆಯನ್ನು ಪಡೆಯುವ’ ಸತ್ಪರುಷರೂ ಏಕಮುಖಿ ದತ್ತಾತ್ರೇಯನ ಪ್ರತಿಪಾದಕರಾಗಿದ್ದರು.

೨ ಆ. ದಾಸೋಪಂತರ ಆರಾಧ್ಯ ದೇವತೆಯಾದ ‘ಏಕಮುಖಿ, ಷಡ್‌ಭುಜ ದತ್ತಾತ್ರೇಯರ’ ಮೂರ್ತಿ ವಿಜ್ಞಾನ ! : ಮಹಾನ ದತ್ತಾತ್ರೇಯರ ಆರಾಧಕ ರಾದ (ದತ್ತೋಪಾಸಕರಾದ) ದಾಸೋಪಂತರ ಆರಾಧ್ಯದೇವತೆ ‘ಏಕಮುಖಿ ಮತ್ತು ಷಡ್‌ಭುಜ (ಆರು ಕೈಗಳು) ದತ್ತಾತ್ರೇಯ’ರಾಗಿದ್ದಾರೆ. ಈ ಮೂರ್ತಿಯ ಆರು ಕೈಗಳಲ್ಲಿ ಶಂಖ, ಚಕ್ರ, ತ್ರಿಶೂಲ, ಡಮರು, ಕಮಂಡಲು ಮತ್ತು ರುದ್ರಾಕ್ಷಿ ಮಾಲೆಯಿದೆ. ಮೂರ್ತಿಯ ತಲೆಯ ಮೇಲೆ ಜಟೆ, ಕಿರೀಟ ಮತ್ತು ಪೀತಾಂಬರಧಾರಿ ಯಾಗಿದೆ. ಈ ಮೂರ್ತಿಯು ತಾಮ್ರದ್ದಾಗಿದ್ದು ದಾಸೋ ಪಂತರು ತಮ್ಮ ಹೊದಿಕೆಯ ಮೇಲೆ ಇದನ್ನೇ ಚಿತ್ರಿಸಿದ್ದಾರೆ.

೨ ಇ. ರಘುನಾಥಸ್ವಾಮಿ ಮತ್ತು ಅವರ ಶಿಷ್ಯಪರಿವಾರದವರಿಗಾದ ಏಕಮುಖಿ ದತ್ತಾತ್ರೇಯನ ಸಾಕ್ಷಾತ್ಕಾರ ! : ನಿರಂಜನ ರಘುನಾಥ ಮತ್ತು ಅವರ ಗುರುಗಳಾದ ರಘುನಾಥಸ್ವಾಮಿಯವರಿಗೆ ಏಕ ಮುಖಿಷಡ್‌ಭುಜ ದತ್ತಾತ್ರೇಯನ ಸಾಕ್ಷಾತ್ಕಾರವಾಯಿತು. ಇದೇ ನಿರಂಜನ ರಘುನಾಥರ ಶಿಷ್ಯರಾದ ಝಾನ್ಸಿಯ ನಾರಾಯಣ ಮಹಾರಾಜರಿಗೆ ಗಿರಿನಾರ ಪರ್ವತದ ಮೇಲೆ ಏಕಮುಖಿ, ಷಡ್‌ಭುಜ ದತ್ತಾತ್ರೇಯರ ಸಾಕ್ಷಾತ್ಕಾರವಾಯಿತು.

೨ ಈ. ಶ್ರೀವಾಸುದೇವಾನಂದ ಸರಸ್ವತಿ ಠೇಂಬೆಸ್ವಾಮಿಯವರು ಏಕಮುಖಿ ಮತ್ತು ದ್ವಿಭುಜಗಳಿರುವ ದತ್ತಮೂರ್ತಿಯನ್ನು ಪುರಸ್ಕರಿಸಿದ್ದಾರೆ.

೩. ನಾಥ ಸಂಪ್ರದಾಯದಲ್ಲಿ ದತ್ತಾತ್ರೇಯರಿಗೆ ‘ತಂತ್ರವಿದ್ಯೆಯ ಪ್ರವರ್ತಕ’ರೆಂದು ನಂಬಲಾಗಿದೆ : ಇತ್ತೀಚಿನ ದತ್ತಾತ್ರೇಯರ ಧ್ಯಾನವು (ಆರಾಧನೆ) ನಾಥ ಸಂಪ್ರದಾಯದ ಪ್ರಭಾವದಿಂದ ಜನರಲ್ಲಿ ಬೇರೂರಿದೆ. ಭಗವಾನ ದತ್ತಾತ್ರೇಯರು ಅನಾದಿ ಶಕ್ತಿಯ ರಹಸ್ಯವನ್ನು ತಿಳಿದುಕೊಳ್ಳುವ ಮತ್ತು ಆಧ್ಯರಾಗಿದ್ದಾರೆ. ನಾಥ ಸಂಪ್ರದಾಯದಲ್ಲಿ ದತ್ತಾತ್ರೇಯರಿಗೆ ‘ತಂತ್ರವಿದ್ಯೆಯ ಪ್ರವರ್ತಕ’ ಎಂದು ನಂಬಲಾಗಿದೆ. ನಾಥ ಸಂಪ್ರದಾಯವು ನವನಾಥರಿಂದ ಪ್ರಸಿದ್ಧವಾಗಿದ್ದರೂ ಮತ್ತು ಅನೇಕರ ಗುರುಪರಂಪರೆ ಆದಿನಾಥ ಅಂದರೆ ಶಂಕರನವರೆಗೆ ತಲುಪಿದ್ದರೂ, ಕೆಲವು ನಾಥರಿಗೆ ಶಂಕರನ ಅಪ್ಪಣೆ ಪಡೆದು ದತ್ತಾತ್ರೇಯನು ಉಪದೇಶಿಸಿದ ಕಥೆಗಳಿವೆ.

೪. ಹದಿನೈದನೇ ಶತಮಾನದಲ್ಲಿ ಸರಸ್ವತಿ ಗಂಗಾಧರರು ಬರೆದ ಗುರುಚರಿತ್ರೆಯಲ್ಲಿರುವ ದತ್ತಾತ್ರೇಯರ ತ್ರಿಮೂರ್ತಿ ಸ್ವರೂಪ : ‘ಈ ಮೂರ್ತಿಯ ಮತ್ತು ದತ್ತಾತ್ರೇಯರ ಏಕೀಕರಣ ಹೇಗೆ ಆಯಿತು ಮತ್ತು ಯಾವಾಗ ಆಯಿತು ?’, ಎಂಬ ಪ್ರಶ್ನೆ ವಾಚಕರ ಮನಸ್ಸಿನಲ್ಲಿ ಬರುವುದು ಸಹಜವಾಗಿದೆ. ಕ್ರಿ.ಶ. ೧೨೦೦ ರ ವರೆಗೆ ದತ್ತಾತ್ರೇಯರ ಸ್ವರೂಪವು ಏಕಮುಖಿಯಾಗಿತ್ತು; ಆದರೆ ಮುಂದೆ ಹದಿನೈದನೇ ಶತಮಾನ ದಲ್ಲಿ ಸರಸ್ವತಿ ಗಂಗಾಧರರು ಬರೆದ ಗುರುಚರಿತ್ರೆಯಲ್ಲಿ ದತ್ತಾತ್ರೇಯರ ಸ್ವರೂಪವು ತ್ರಿಮೂರ್ತಿಯಾಗಿದೆ. ಈ ಬದಲಾವಣೆಗೆ ದತ್ತಜನ್ಮದ ಕಥೆಯಲ್ಲಿ ತುಂಬಾ ಅವಕಾಶ ಇತ್ತು. ತ್ರಿಮೂರ್ತಿಯಲ್ಲಿ ಸಮಾವೇಶಗೊಂಡಿರುವ ಮೂರು ದೇವತೆಗಳ ಆಶೀರ್ವಾದವೇ ದತ್ತಜನ್ಮಕ್ಕೆ ಕಾರಣವಾಗಿದೆ.’

(‘ಭಕ್ತರು ದತ್ತಾತ್ರೇಯರ ಆರಾಧನೆಯನ್ನು (ಉಪಾಸನೆಯನ್ನು) ಹೇಗೆ ಮಾಡಿದ್ದರೋ, ಅದೇ ರೀತಿ ಭಕ್ತರಿಗೆ ಅವರ ರೂಪದ ದರ್ಶನವಾಗಿದೆ. ಇತ್ತೀಚಿನ ಕಾಲದಲ್ಲಿನ ಸಂತರಾದ ಪ.ಪೂ. ಟೇಂಬೆಸ್ವಾಮಿ ಮಹಾರಾಜರು ಮತ್ತು ಪ.ಪೂ. ಗಗನಗಿರಿ ಮಹಾರಾಜರಿಗೆ ತ್ರಿಮೂರ್ತಿ ದತ್ತಾತ್ರೇಯನ ದರ್ಶನವಾಗಿತ್ತು. ಅವರ ಚರಿತ್ರೆಯಲ್ಲಿ ಅದರ ಉಲ್ಲೇಖವಿದೆ.’ – ಸಂಕಲನಕಾರರು)

(ಆಧಾರ : ‘ಫೇಸಬುಕ್’ ಪೋಸ್ಟ್‌)